ಟಿ20 ವಿಶ್ವಕಪ್ ಪಂದ್ಯ ನಡೆಯುವ ನ್ಯೂಯಾರ್ಕ್ ನಸ್ಸೌ ಕೌಂಟಿ ಸ್ಟೇಡಿಯಂ ಈಗ ಹೇಗಿದೆ; ನಿರ್ಮಾಣಕ್ಕೆ ಆದ ಖರ್ಚು ಎಷ್ಟು?
- ಟಿ20 ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲು ಅಮೆರಿಕ ಸಜ್ಜಾಗಿದೆ. ನ್ಯೂಯಾರ್ಕ್ ನಗರದಲ್ಲಿ ಸುಂದರ ಸ್ಟೇಡಿಯಂ ಎದ್ದು ನಿಂತಿದೆ. ಈಸ್ಟರ್ನ್ ನ್ಯೂಯಾರ್ಕ್ ಸಿಟಿಯ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲು ಸಜ್ಜಾಗಿದೆ. ಇದೇ ಮೈದಾನದಲ್ಲಿ ಭಾರತ-ಪಾಕಿಸ್ತಾನ ಪಂದ್ಯಗಳು ನಡೆಯುತ್ತಿದ್ದು, ದಿನಗಣನೆ ಆರಂಭವಾಗಿದೆ.

(1 / 8)
ಕೇವಲ 2 ತಿಂಗಳಲ್ಲಿ ಅತಿ ವೇಗವಾಗಿ ನಿರ್ಮಾಣಗೊಂದ ಕ್ರೀಡಾಂಗಣವನ್ನು ಒಲಿಂಪಿಕ್ ದಂತಕಥೆ ಹಾಗೂ ಪಂದ್ಯಾವಳಿಯ ರಾಯಭಾರಿ ಉಸೇನ್ ಬೋಲ್ಟ್ ಇತ್ತೀಚೆಗೆ ಉದ್ಘಾಟಿಸಿದರು.(AFP)
(3 / 8)
ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ 34,000 ಆಸನ ಸಾಮರ್ಥ್ಯ ಹೊಂದಿದ್ದು, ದೊಡ್ಡ ಸಂಖ್ಯೆಯಲ್ಲಿ ಹಾಜರಾಗಿ ಅಭಿಮಾನಿಗಳು ಪಂದ್ಯ ವೀಕ್ಷಿಸಬಹುದಾಗಿದೆ.(AFP)
(4 / 8)
2024ರ ಟಿ20 ವಿಶ್ವಕಪ್ ಪಂದ್ಯಾವಳಿ ಆಯೋಜನೆಗೆಂದೇ ನಿರ್ದಿಷ್ಟವಾಗಿ ನಿರ್ಮಿಸಲಾದ ಕ್ರೀಡಾಂಗಣದಲ್ಲಿ ಅತಿರೋಚಕ ಪಂದ್ಯ ನಡೆಯುತ್ತಿದೆ. ಅದುವೇ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ.(Getty Images via AFP)
(5 / 8)
ಫೋರ್ಬ್ಸ್ ವರದಿಯ ಪ್ರಕಾರ, ನ್ಯೂಯಾರ್ಕ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸುಮಾರು 30 ಮಿಲಿಯನ್ ಡಾಲರ್ ವೆಚ್ಚವಾಗಿದೆ. ಅಂದರೆ ಬರೋಬ್ಬರಿ 250 ಕೋಟಿ ರೂಪಾಯಿ. ಇಷ್ಟೊಂದು ಮೊತ್ತವನ್ನು ಒಂದು ತಾತ್ಕಾಲಿಕ ಸ್ಟೇಡಿಯಂ ನಿರ್ಮಾಣಕ್ಕೆ ಹೂಡಿಕೆ ಮಾಡಿದ್ದರೂ, ಇದರಿಂದ ಗಣನೀಯ ಆದಾಯ ಬರುವ ನಿರೀಕ್ಷೆ ಇದೆ.(AFP)
(6 / 8)
ನ್ಯೂಯಾರ್ಕ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಈ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಂಪು ಹಂತದಲ್ಲಿ ಒಟ್ಟು ಎಂಟು ಪಂದ್ಯಗಳು ನಡೆಯಲಿವೆ. ಜೂನ್ 3ರಂದು ಈ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.(Getty Images via AFP)
(7 / 8)
ಈ ಮೈದಾನದಲ್ಲಿ ಭಾರತವು 2 ಪಂದ್ಯಗಳಲ್ಲಿ ಆಡಲಿದೆ. ಜೂನ್ 5ರಂದು ಐರ್ಲೆಂಡ್ ವಿರುದ್ಧ ಸೆಣಸಿದರೆ, ಜೂನ್ 9ರಂದು ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.(AFP)
ಇತರ ಗ್ಯಾಲರಿಗಳು