Sunny Leone: ನನ್ನ ನೆಚ್ಚಿನ ದೇಶ ಭಾರತ, ಕ್ರಿಕೆಟರ್ ಎಂಎಸ್ ಧೋನಿ; ಹಾಟ್ ಬ್ಯೂಟಿ ಸನ್ನಿ ಲಿಯೋನ್ ಮನಸ್ಸಿನ ಮಾತಿಗೆ ಅಭಿಮಾನಿಗಳು ಫಿದಾ
ಕನ್ನಡ ಸುದ್ದಿ  /  ಕ್ರೀಡೆ  /  Sunny Leone: ನನ್ನ ನೆಚ್ಚಿನ ದೇಶ ಭಾರತ, ಕ್ರಿಕೆಟರ್ ಎಂಎಸ್ ಧೋನಿ; ಹಾಟ್ ಬ್ಯೂಟಿ ಸನ್ನಿ ಲಿಯೋನ್ ಮನಸ್ಸಿನ ಮಾತಿಗೆ ಅಭಿಮಾನಿಗಳು ಫಿದಾ

Sunny Leone: ನನ್ನ ನೆಚ್ಚಿನ ದೇಶ ಭಾರತ, ಕ್ರಿಕೆಟರ್ ಎಂಎಸ್ ಧೋನಿ; ಹಾಟ್ ಬ್ಯೂಟಿ ಸನ್ನಿ ಲಿಯೋನ್ ಮನಸ್ಸಿನ ಮಾತಿಗೆ ಅಭಿಮಾನಿಗಳು ಫಿದಾ

Sunny Leone: ಇನ್​ಸ್ಟಾಗ್ರಾಂನಲ್ಲಿ ನಡೆಸಿದ ಪ್ರಶ್ನೋತ್ತರ ಅವಧಿಯಲ್ಲಿ ತನ್ನ ಫೇವರಿಟ್​ ಕ್ರಿಕೆಟರ್​ ಯಾರು ಎಂಬುದಕ್ಕೆ ಬಾಲಿವುಡ್​ ನಟಿ ಸನ್ನಿ ಲಿಯೋನ್ ಬಹಿರಂಗಪಡಿಸಿದ್ದಾರೆ. ತನ್ನ ನೆಚ್ಚಿನ ಕ್ರಿಕೆಟಿಗ ಎಂಎಸ್​ ಧೋನಿ ಎಂದು ಹೇಳಿದ್ದಾರೆ.

ನ್ನ ನೆಚ್ಚಿನ ದೇಶ ಭಾರತ, ಕ್ರಿಕೆಟರ್ ಎಂಎಸ್ ಧೋನಿ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.
ನ್ನ ನೆಚ್ಚಿನ ದೇಶ ಭಾರತ, ಕ್ರಿಕೆಟರ್ ಎಂಎಸ್ ಧೋನಿ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಮಾಲ್ಡೀವ್ಸ್​​​ನಲ್ಲಿ ವೆಕೇಷನ್​ ಎಂಜಾಯ್​ ಮಾಡುತ್ತಿರುವ ಬಾಲಿವುಡ್​ ಹಾಟ್​ ಬ್ಯೂಟಿ ಸನ್ನಿ ಲಿಯೋನ್ (Sunny Leone), ತನ್ನ ಫೇವರಿಟ್​ ಕ್ರಿಕೆಟರ್​ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಮಾಲ್ಡೀವ್ಸ್​​ನಲ್ಲೇ ಇನ್​ಸ್ಟಾಗ್ರಾಂನಲ್ಲಿ ಆ್ಯಸ್ಕ್​ ಮಿ (Ask Me) ಪ್ರಶ್ನೋತ್ತರ ಅವಧಿ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ವಿಭಿನ್ನವಾಗಿ ಉತ್ತರಿಸಿ, ಭಾರತೀಯ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಹೀಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಲ್ಲಿ ನೆಚ್ಚಿನ ಕ್ರಿಕೆಟರ್​ ಯಾರು ಎಂಬುದು. ಇದರ ಜೊತೆಗೆ ನಿಮ್ಮ ನೆಚ್ಚಿನ ದೇಶ ಯಾವುದು ಎಂಬ ಪ್ರಶ್ನೆಗೆ ಮಾಜಿ ನೀಲಿ ತಾರೆಯ ವಿಭಿನ್ನ ಉತ್ತರಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇರುವುದೊಂದು ಹೃದಯ ಎಷ್ಟು ಸಲ ಗೆಲ್ತೀರಾ ಎನ್ನುತ್ತಿದ್ದಾರೆ. ವೃತ್ತಿ ಬದುಕನ್ನು ತ್ಯಜಿಸಿ ಬಾಲಿವುಡ್​ಗೆ ಪ್ರವೇಶಿಸಿದ ಸನ್ನಿ, ಸಾಮಾಜಿಕ ಸೇವೆಗಳ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಧೋನಿ ನನ್ನ ಫೇವರಿಟ್ ಕ್ರಿಕೆಟರ್​

ಪ್ರಶ್ನೋತ್ತರ ವೇಳೆ ಅಭಿಮಾನಿಯೋರ್ವ ತಮ್ಮ ನೆಚ್ಚಿನ ಕ್ರಿಕೆಟರ್​ ಯಾರು ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಸನ್ನಿ ಲಿಯೋನ್, ಭಾರತದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ (Mahendra Singh Dhoni) ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಲಾ ಎಂದು ಚಿತ್ರದ ಮೇಲೆ ಬರೆದುಕೊಂಡಿದ್ದಾರೆ. ಆ ಮೂಲಕ ಧೋನಿ ನನ್ನ ಫೇವರಿಟ್​ ಎಂದು ತಿಳಿಸಿದ್ದಾರೆ.

16ನೇ ಆವೃತ್ತಿಯ ಐಪಿಎಲ್​​ನಲ್ಲಿ (IPL 2023) ಎಂಎಸ್​ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಚಾಂಪಿಯನ್ಸ್ (Chennai Super Kings)​ ಪಟ್ಟ ಅಲಂಕರಿಸಿದೆ. ಚೆನ್ನೈ 5 ನೇ ಬಾರಿ ಟ್ರೋಫಿ ಗೆಲ್ಲುವ ಮೂಲಕ ದಾಖಲೆ ಬರೆದಿತ್ತು. 41ನೇ ವಯಸ್ಸಿನಲ್ಲೂ ತಂಡವನ್ನು ಮುನ್ನಡೆಸಿ ಕಪ್​ ಗೆದ್ದ ಕೊಟ್ಟ ಧೋನಿ ಅವರ ನಿವೃತ್ತಿ ಚರ್ಚೆಗಳಾಗುತ್ತಿವೆ. ಆದರೆ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ. ಧೋನಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇನ್ನೂ 8-9 ತಿಂಗಳ ಬಳಿಕ ಯೋಚಿಸುತ್ತೇನೆ ಎಂದಿದ್ದಾರೆ.

ಭಾರತ ನನ್ನ ನೆಚ್ಚಿನ ದೇಶ

ಇನ್ನು ಮತ್ತೊಬ್ಬ ಅಭಿಮಾನಿಯೊಬ್ಬ ಮತ್ತೊಂದು ಪ್ರಶ್ನೆ ಕೇಳಿದ್ದು, ನಿಮ್ಮ ನೆಚ್ಚಿನ ದೇಶ ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸನ್ನಿ ಲಿಯೋನ್, ನನ್ನ ನೆಚ್ಚಿನ ದೇಶ ಭಾರತ ಎಂದು ಹೇಳುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಉತ್ತರಗಳಿಗೆ ಫಿದಾ ಆಗಿರುವ ಅಭಿಮಾನಿಗಳು, ಕೆನಡಾ ಮೂಲದ ಭಾರತೀಯ-ಅಮೇರಿಕನ್ ನಟಿಯನ್ನು ಮೆಚ್ಚಿದ್ದಾರೆ.

ಮೆಸ್ಸಿ-ರೊನಾಲ್ಡೊ ಅಲ್ಲ…

ಮತ್ತೊಂದು ಪ್ರಶ್ನೆಯಲ್ಲಿ ಲಿಯೊನೆಲ್​ ಮೆಸ್ಸಿ ಅಥವಾ ಕ್ರಿಸ್ಟಿಯಾನೋ ರೊನಾಲ್ಡೊ ಯಾರು ಶ್ರೇಷ್ಠ ಎಂಬ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆ ಜಮಾನದಿಂದಲೂ ಹೆಚ್ಚು ಚರ್ಚೆಯಾಗುತ್ತಲೇ ಇದೆ. ಕೆಲವರು ತನಗೆ ಇಷ್ಟವಾದರನ್ನ ಹೆಸರಿಸಿದರೆ, ಕೆಲವರು ಇಬ್ಬರ ಹೆಸರನ್ನೂ ಸೂಚಿಸುತ್ತಾರೆ. ಇದಕ್ಕಾಗಿ ದೊಡ್ಡ ಜಗಳಗಳೂ ನಡೆದಿವೆ. ಆದರೆ ಸನ್ನಿ ಮಾತ್ರ ಮೆಸ್ಸಿ-ರೊನಾಲ್ಡೊ ಇಬ್ಬರು ಫೇವರಿಟ್ ಅಲ್ಲ ಎಂದಿದ್ದಾರೆ. ಭಾರತದ ಫುಟ್ಬಾಲ್​ ತಂಡದ ನಾಯಕ ಸುನಿಲ್ ಛೆಟ್ರಿ ಅವರು ನನ್ನ ಫೇವರಿಟ್ ಎಂದು ಹೇಳಿದ್ದಾರೆ.

ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ರೆಸ್ಟೋರೆಂಟ್ (Suresh Raina started a Restaurant)​ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಅದ್ಭುತ ಆಟ ಮತ್ತು ಫೀಲ್ಡಿಂಗ್​ ಮೂಲಕ ಎಲ್ಲರ ಮನ ಗೆದ್ದಿದ್ದ ರೈನಾ ಇದೀಗ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಡುಗೆ ಮಾಡುತ್ತಿದ್ದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ರೈನಾ, ದೂರದ ದೇಶ ನೆದರ್ಲೆಂಡ್​ನ ರಾಜಧಾನಿ ಆಮ್‌ಸ್ಟರ್‌ಡಮ್‌ನಲ್ಲಿ ಹೊಸ ರೆಸ್ಟೋರೆಂಟನ್ನೇ ಪ್ರಾರಂಭಿಸಿದ್ದಾರೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.