Team India: ಭಾರತೀಯ ಆಟಗಾರರು ಇನ್ಮುಂದೆ ಫುಲ್ ಬ್ಯುಸಿ; ತವರಿನಂಗಳದ ಮುಂಬರುವ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ
ಕನ್ನಡ ಸುದ್ದಿ  /  ಕ್ರೀಡೆ  /  Team India: ಭಾರತೀಯ ಆಟಗಾರರು ಇನ್ಮುಂದೆ ಫುಲ್ ಬ್ಯುಸಿ; ತವರಿನಂಗಳದ ಮುಂಬರುವ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

Team India: ಭಾರತೀಯ ಆಟಗಾರರು ಇನ್ಮುಂದೆ ಫುಲ್ ಬ್ಯುಸಿ; ತವರಿನಂಗಳದ ಮುಂಬರುವ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

Team India: ತವರಿನಂಗಳದಲ್ಲಿ ನಡೆಯಲಿರುವ ಟೀಮ್ ಇಂಡಿಯಾದ ಮುಂಬರುವ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿಯನ್ನು (Indian Cricket Team 2023-24 Schedule) ಬಿಸಿಸಿಐ ಬಿಡುಗಡೆ ಮಾಡಿದೆ.

ಟೀಮ್ ಇಂಡಿಯಾದ ಮುಂಬರುವ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ
ಟೀಮ್ ಇಂಡಿಯಾದ ಮುಂಬರುವ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ವೆಸ್ಟ್​ ಇಂಡೀಸ್​ ಸರಣಿ ಮುಗಿದ ಬೆನ್ನಲ್ಲೇ ಟೀಮ್​ ಇಂಡಿಯಾ (Team India), ಕ್ರಿಕೆಟ್​ ಪಂದ್ಯಗಳಲ್ಲಿ ಫುಲ್​ ಬ್ಯುಸಿಯಾಗಿರಲಿದೆ. ತವರಿನಲ್ಲಿ ನಡೆಯಲಿರುವ ಮುಂಬರುವ ಟೀಮ್​ ಇಂಡಿಯಾ, ಸರಣಿಗಳ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಏಕದಿನ ವಿಶ್ವಕಪ್​ಗೂ (ODI World Cup 2023) ಮುನ್ನ ಈ ಸರಣಿಗಳು ಶುರುವಾಗಲಿದ್ದು, 2024ರ ಮಾರ್ಚ್​​​​ವರೆಗೂ ನಡೆಯಲಿವೆ. ಆಟಗಾರರು ನಿರಂತರ ಕ್ರಿಕೆಟ್​​ನಲ್ಲಿ ಬ್ಯುಸಿ ಆಗಿರಲಿದ್ದಾರೆ.

ಭಾರತದಲ್ಲಿ ಸೆಪ್ಟೆಂಬರ್​​ನಿಂದ ಶುರುವಾಗುವ ಈ ಸರಣಿಗಳಲ್ಲಿ ಟೀಮ್‌ ಇಂಡಿಯಾ 5 ಟೆಸ್ಟ್, 3 ಏಕದಿನ ಮತ್ತು 8 ಟಿ20 ಒಳಗೊಂಡಂತೆ ಒಟ್ಟು 16 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಆಸ್ಟ್ರೇಲಿಯಾ (Australia), ಅಫ್ಘಾನಿಸ್ತಾನ (Afghanistan), ಇಂಗ್ಲೆಂಡ್ (England)​ ಎದುರು ಜರುಗುವ ಸರಣಿಗಳು ಇವಾಗಿವೆ. ವಿಶ್ವಕಪ್​ಗೆ ಪೂರ್ವ ತಯಾರಿಗಾಗಿ ಆಸ್ಟ್ರೇಲಿಯಾ ತಂಡವನ್ನು ಭಾರತ ಮೊದಲು ಏಕದಿನ ಸರಣಿಯ ಮೂಲಕ ಎದುರಿಸಲಿದೆ. ಉಳಿದ ಸರಣಿಗಳು ವಿಶ್ವಕಪ್ ನಂತರ ನಡೆಯಲಿವೆ.

ಏಕದಿನ ವಿಶ್ವಕಪ್‌ಗೂ ಮೊದಲು, ಸೆಪ್ಟೆಂಬರ್ 22 ರಿಂದ 27ರವರೆಗೆ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಪ್ರಯಾಣ ಬೆಳೆಸಲಿದ್ದು, ಟೀಮ್ ಇಂಡಿಯಾ ಎದುರು 3 ಪಂದ್ಯಗಳ ಓಡಿಐ ಸರಣಿಯನ್ನು ಆಡಲಿದೆ. ವಿಶ್ವಕಪ್ ಮುಗಿದ 4 ದಿನಗಳಲ್ಲೇ ಆಸ್ಟ್ರೇಲಿಯಾ ವಿರುದ್ಧವೇ 5 ಟಿ20 ಪಂದ್ಯಗಳನ್ನಾಡಲಿದೆ ಭಾರತ. ಈ ಬ್ಲಾಕ್​ ಬಸ್ಟರ್​ ಚುಟುಕು ಸರಣಿಯು ನವೆಂಬರ್ 23ರಿಂದ ಪ್ರಾರಂಭವಾಗಲಿದೆ.

ಅಫ್ಘಾನಿಸ್ತಾನ ವಿರುದ್ಧ ಇದೇ ಮೊದಲ ಬಾರಿಗೆ

2024ರ ಆರಂಭದಲ್ಲೇ ಅಫ್ಘಾನಿಸ್ತಾನ ತಂಡವು ಸೀಮಿತ ಓವರ್​​ಗಳ ದ್ವಿಪಕ್ಷೀಯ ಸರಣಿಗಾಗಿ ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ರಯಾಣ ಬೆಳೆಸಲು ಸಿದ್ಧವಾಗಿದೆ. ಈ ಟಿ20 ಸರಣಿಯು ಜನವರಿ 11ರಿಂದ 17ರವರೆಗೆ ಈ ಸರಣಿ ಜರುಗಲಿದೆ. ಈ ಸರಣಿಯ ಬೆನ್ನಲ್ಲೇ ಭಾರತ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಇಂಗ್ಲೆಂಡ್​-ಭಾರತ ತಂಡಗಳ ನಡುವೆ ಐದು ಟೆಸ್ಟ್​​ ಪಂದ್ಯಗಳು ನಡೆಯಲಿವೆ.

ಆಸ್ಟ್ರೇಲಿಯಾ ಎದುರಿನ ಟಿ20 ಸರಣಿ ಬಳಿಕ ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಟೆಸ್ಟ್​ ಸರಣಿಯಲ್ಲಿ ಕಾದಾಟ ನಡೆಸಲಿದೆ. ಕಳೆದ ಬಾರಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್​ ಸರಣಿ ಸೋಲು ಕಂಡಿತ್ತು. ಇದೀಗ ಆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಭಾರತೀಯ ಆಟಗಾರರಿಗೆ ಬಿಡುವಿಲ್ಲದ ವೇಳಾಪಟ್ಟಿ ಇದಾಗಿದ್ದು, ಪ್ರಮುಖ ಆಟಗಾರರು ಹೆಚ್ಚು ಇಂಜುರಿಗೆ ಒಳಗಾದರೂ ಅಚ್ಚರಿ ಇಲ್ಲ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ

  • ಮೊದಲ ಏಕದಿನ ಪಂದ್ಯ - ಸೆಪ್ಟೆಂಬರ್ 22, ಮೊಹಾಲಿ
  • ಎರಡನೇ ಏಕದಿನ ಪಂದ್ಯ - ಸೆಪ್ಟೆಂಬರ್ 24, ಇಂದೋರ್
  • ಮೂರನೇ ಏಕದಿನ ಪಂದ್ಯ - ಸೆಪ್ಟೆಂಬರ್ 27, ರಾಜ್‌ಕೋಟ್‌

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ

  • ಮೊದಲನೇ ಟಿ20 ಪಂದ್ಯ - 23 ನವೆಂಬರ್, ವಿಶಾಖಪಟ್ಟಣ
  • ಎರಡನೇ ಟಿ20 ಪಂದ್ಯ - 26 ನವೆಂಬರ್, ತಿರುವನಂತಪುರ
  • ಮೂರನೇ ಟಿ20 ಪಂದ್ಯ - 28 ನವೆಂಬರ್, ಗುವಾಹಟಿ
  • ನಾಲ್ಕನೇ ಟಿ20 ಪಂದ್ಯ - 1 ಡಿಸೆಂಬರ್, ನಾಗ್ಪುರ
  • ಐದನೇ ಟಿ20 ಪಂದ್ಯ - 3 ಡಿಸೆಂಬರ್, ಹೈದರಾಬಾದ್

ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ

  • ಮೊದಲ ಟಿ20 ಪಂದ್ಯ - 11 ಜನವರಿ 2024, ಮೊಹಾಲಿ
  • ಎರಡನೇ ಟಿ20 ಪಂದ್ಯ - 14 ಜನವರಿ 2024, ಇಂದೋರ್
  • ಮೂರನೇ ಟಿ20 ಪಂದ್ಯ - 17 ಜನವರಿ 2024, ಬೆಂಗಳೂರು

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ

  • ಮೊದಲನೇ ಟೆಸ್ಟ್ ಪಂದ್ಯ - 25-29 ಜನವರಿ 2024, ಹೈದರಾಬಾದ್
  • ಎರಡನೇ ಟೆಸ್ಟ್ ಪಂದ್ಯ - 2-6 ಫೆಬ್ರವರಿ 2024, ವಿಶಾಖಪಟ್ಟಣ
  • ಮೂರನೇ ಟೆಸ್ಟ್ ಪಂದ್ಯ - 15-19 ಫೆಬ್ರವರಿ 2024, ರಾಜ್‌ಕೋಟ್
  • ನಾಲ್ಕನೇ ಟೆಸ್ಟ್ ಪಂದ್ಯ - 23-27 ಫೆಬ್ರವರಿ 2024, ರಾಂಚಿ
  • ಐದನೇ ಟೆಸ್ಟ್ ಪಂದ್ಯ - 7-11 ಮಾರ್ಚ್ 2024, ಧರ್ಮಶಾಲಾ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.