Ishan Kishan: ನಾನು ದೇಶೀಯ ಕ್ರಿಕೆಟ್ ಆಡಲ್ಲ; ಬಿಸಿಸಿಐ ಆದೇಶವನ್ನು ಧಿಕ್ಕರಿಸಿದ ಈಗಷ್ಟೇ ಕ್ರಿಕೆಟ್ನಲ್ಲಿ ಬೇರೂರುತ್ತಿರುವ ಇಶಾನ್ ಕಿಶನ್
ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ದೇಶೀಯ ಟೂರ್ನಿ ದುಲೀಪ್ ಟ್ರೋಫಿ ಆಡುವಂತೆ ಆಡುವಂತೆ ಹಾಗಾಗಿ ಪೂರ್ವ ವಲಯದ ಆಯ್ಕೆ ಸಮಿತಿ ಸಂಚಾಲಕ ದೇಬಶಿವ್ ಚಕ್ರವರ್ತಿ, ಅವರು ಇಶಾನ್ ಕಿಶನ್ ಅವರನ್ನು ಕೇಳಿದ್ದಾರೆ. ಆದರೆ, ಇಶಾನ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಅಂಡರ್-19 ತಂಡದಲ್ಲಿ ಅಬ್ಬರ, ಐಪಿಎಲ್ನಲ್ಲಿ (IPL) ಮಿಂಚಿನ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾಗೆ (Team India) ಪ್ರವೇಶ ಕೊಟ್ಟಿರುವ ಯುವ ಆರಂಭಿಕ ಆಟಗಾರ ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan), ಈಗೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಲೆಯೂರುತ್ತಿದ್ದಾರೆ. ಇದೀಗ ಈತ ಬಿಸಿಸಿಐ ಆದೇಶವನ್ನು ಧಿಕ್ಕರಿಸಿ, ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ತುದಿಗಾಲಲ್ಲಿ ನಿಂತಿರುವ ಇಶಾನ್ ಆ ಸುವರ್ಣಾವಕಾಶವನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ.
ಫೆಬ್ರವರಿ ಮಾರ್ಚ್ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿ (Border Gavaskar Trophy) ಭಾಗವಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಇಶಾನ್ ಕಿಶನ್, ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದರು. ಬದಲಿಗೆ ಆಂಧ್ರ ಪ್ರದೇಶ ವಿಕೆಟ್ ಕೀಪರ್ ಕೆಎಲ್ ಭರತ್ (KS Bharat) ನಾಲ್ಕು ಟೆಸ್ಟ್ ಪಂದ್ಯಗಳಲ್ಲೂ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ (WTC Final) ಇಶಾನ್ ಆಯ್ಕೆಯಾಗಿದ್ದರು. ಆದರೆ ಅವಕಾಶ ಸಿಗಲಿಲ್ಲ.
ಅವಕಾಶದ ನಿರೀಕ್ಷೆಯಲ್ಲಿದ್ದ ಕೆಎಸ್ ಭರತ್, ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಬಾರ್ಡರ್-ಗವಾಸ್ಕರ್ ಟ್ರೋಫಿ ಜೊತೆಗೆ ಡಬ್ಲ್ಯುಟಿಸಿ ಫೈನಲ್ನಲ್ಲೂ ಕೆಎಸ್ ಭರತ್ ದಯನೀಯ ವಿಫಲ ಕಂಡರು. ಹಾಗಾಗಿ ಮುಂದಿನ ಭರತ್ರನ್ನು ಪಕ್ಕಟ್ಟಿಟ್ಟು ಮುಂದಿನ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಇಶಾನ್ ಕಿಶನ್ಗೆ ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿತ್ತು. ಆದರೆ, ವಿಂಡೀಸ್ ಪ್ರವಾಸಕ್ಕೆ ತಿಂಗಳು ಕಾಲ ಅವಕಾಶ ಇದೆ.
ದುಲೀಪ್ ಟ್ರೋಫಿ ಆಡಲ್ಲ
ಈ ಪ್ರವಾಸಕ್ಕೂ ಮುನ್ನ ದೇಶೀಯ ಟೂರ್ನಿ ದುಲೀಪ್ ಟ್ರೋಫಿ ಆರಂಭವಾಗಲಿದೆ. ಹಾಗಾಗಿ ಪೂರ್ವ ವಲಯದ ಪರ ದುಲೀಪ್ ಟ್ರೋಫಿ ಆಡುವಂತೆ ಆ ವಲಯದ ಆಯ್ಕೆ ಸಮಿತಿ ಸಂಚಾಲಕ ದೇಬಶಿವ್ ಚಕ್ರವರ್ತಿ ಅವರು ಇಶಾನ್ ಕಿಶನ್ ಅವರನ್ನು ಕೇಳಿದ್ದಾರೆ. ಆದರೆ, ಇಶಾನ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಳಾದ ಆರಂಭಿಕ ಆಟಗಾರ ಈಶ್ವರನ್ ಈಸ್ಟ್ ಝೋನ್ ತಂಡದ ನಾಯಕನಾಗಿದ್ದಾರೆ.
ಕ್ಯಾಪ್ಟನ್ಸಿ ಬೇಕಿತ್ತಂತೆ
ಇದರ ಬೆನ್ನಲ್ಲೇ ಇಶಾನ್‌ಗೆ ಕ್ಯಾಪ್ಟನ್ಸಿ ನೀಡಿಲ್ಲ ಎಂಬ ಕಾರಣಕ್ಕೂ ದುಲೀಪ್ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ ಎಂಬ ಚರ್ಚೆಯೂ ನಡೀತಿದೆ. ಈ ಕುರಿತು ಪೂರ್ವ ವಲಯದ ಸೆಲೆಕ್ಷನ್ ಕಮಿಟಿ ಸದಸ್ಯರೊಬ್ಬರು ಮಾತನಾಡಿ, ಇಶಾನ್ ಈಗ ಟೀಮ್ ಇಂಡಿಯಾದ ಕಾಯಂ ಸದಸ್ಯರಾಗಿದ್ದಾರೆ. ಆತ ತಂಡದ ನಾಯಕತ್ವ ವಹಿಸಲು ಬಯಸಿದ್ದರು. ಆದರೆ ಅಭಿಮನ್ಯು ಈಶ್ವರನ್ ನಮ್ಮ ಆಯ್ಕೆಯಾಗಿದ್ದಾರೆ ಎಂದು ವಿವರಿಸಿದ್ದಾರೆ.
ದೇಶೀಯ ಕ್ರಿಕೆಟ್ ಆಡಲ್ಲ
ಈ ನಿಟ್ಟಿನಲ್ಲಿ ಅಭಿಮನ್ಯು ಕೂಡ ಇಶಾನ್‌ಗೆ ಕರೆ ಮಾಡಿ ದುಲೀಪ್ ಟ್ರೋಫಿ ಆಡುವಂತೆ ಸೂಚಿಸಿದ್ದರು. ಆದರೆ, ಇಶಾನ್ ಅದಕ್ಕೆ ಒಪ್ಪಲಿಲ್ಲ. ದುಲೀಪ್ ಟ್ರೋಫಿಯಂತಹ ಟೂರ್ನಿಗಳನ್ನು ಆಡಲು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರಂತೆ. ಇಶಾನ್ ಗಾಯವಾಗಿದೆಯೆಂದೋ ಅಥವಾ ಬೇರೋಂದು ಕಾರಣ ಹೇಳುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ದುಲೀಪ್ ಟ್ರೋಫಿಯನ್ನು ಆಡಲು ಇಷ್ಟ ಇಲ್ಲ ಎಂದು ಹೇಳಿದ್ದಾರೆ.
ಸಾಹ ಕೂಡ ದೂರ
ಇಶಾನ್ ಕಿಶನ್ ಹೊರತಾಗಿ ಬಂಗಾಗದ ಮತ್ತೊಬ್ಬ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಅವರನ್ನು ಸಂಪರ್ಕಿಸಿದೆವು. ಅವರು ಕೂಡ ಆಡಲ್ಲ ಎಂದು ಹೇಳಿದರು. ದುಲೀಪ್ ಟ್ರೋಫಿ, ಇತರ ಡೊಮೆಸ್ಟಿಕ್ ಕ್ರಿಕೆಟ್ ಎಲ್ಲವೂ ಭಾರತ ತಂಡದಲ್ಲಿ ಅವಕಾಶ ಪಡೆಯಲು ಕನಸು ಕಂಡವರಿಗೆ ಮಾತ್ರ. ನನಗೆ ಭಾರತ ತಂಡಕ್ಕೆ ಅವಕಾಶವೇ ಇಲ್ಲ. ಹಾಗಾಗಿ ಈ ಟ್ರೋಫಿ ಆಡುವುದರಿಂದ ಅರ್ಥ ಇಲ್ಲ ಎಂದು ಹೇಳಿಬಿಟ್ಟರು. ಹಾಗಾಗಿ ಬೆಂಗಾಳದ ಯುವ ವಿಕೆಟ್ ಕೀಪರ್, ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಭಿಷೇಕ್ ಪೊರೆಲ್ ಅವಕಾಶ ಕೊಟ್ಟಿರುವುದಾಗಿ ಹೇಳಿದ್ದಾರೆ.
ಅಲೆಸ್ಟರ್ ಕುಕ್ ನೋಡಿ ಕಲಿಯಿರಿ
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರವಿರುವ ಇಂಗ್ಲೆಂಡ್ ಮಾಜಿ ನಾಯಕ, 38 ವರ್ಷದ ಅಲೆಸ್ಟರ್ ಕುಕ್ ಈಗಲೂ ಕೌಂಟಿ ಆಡುತ್ತಿದ್ದಾರೆ. ಡಿಸ್ಟ್ರಿಕ್ ಕ್ರಿಕೆಟ್ ಟೂರ್ನಿಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಐಪಿಎಲ್ ಮಾತ್ರ ದೇಶೀಯ ಕ್ರಿಕೆಟ್ ಅಂದರೆ ಹಿಂದೆ ಮುಂದೆ ನೋಡುತ್ತಿರುವುದು ಬೇಸರದ ಸಂಗತಿ. ಗಾಯದಿಂದ ಚೇತರಿಸಿಕೊಂಡು ಭಾರತ ತಂಡಕ್ಕೆ ಮರಳುವ ಯುವ ಆಟಗಾರ ಅಥವಾ ಆಟಗಾರ ಟೆಸ್ಟ್ ಕ್ರಿಕೆಟ್ ಆಡಲು ರಾಷ್ಟ್ರೀಯ ತಂಡಕ್ಕೆ ಮರಳಬೇಕೆಂದರೆ, ದೇಶೀಯ ಟೂರ್ನಿ ಆಡಬೇಕು ಎಂಬ ನಿಯಮವನ್ನು ಬಿಸಿಸಿಐ ವಿಧಿಸಿದೆ, ಆದರೆ ಇಶಾನ್ ಇದನ್ನು ನಿರ್ಲಕ್ಷಿಸಿದ್ದಾರೆ.