ಕನ್ನಡ ಸುದ್ದಿ  /  Sports  /  Cricket News Riyan Parag Says Dont Care Attacks Faceless Trolls Deodhar Trophy 2023 Ipl Rajasthan Royals Asia Cup Prs

Riyan Parag: ಕ್ರಿಕೆಟರ್ ಹೀಗೆಯೇ ಇರಬೇಕೆಂಬ ನಿಯಮ ಇಲ್ಲ, ನಾನು ಮೋಜಿಗೆ ಕ್ರಿಕೆಟ್ ಆಡುತ್ತಿದ್ದೇನೆ; ಟ್ರೋಲರ್ಸ್​ಗೆ ರಿಯಾನ್ ಪರಾಗ್ ತಿರುಗೇಟು

Riyan Parag: ಜನರು ನನ್ನನ್ನು ಏಕೆ ಇಷ್ಟು ದ್ವೇಷಿಸುತ್ತಾರೆಂದು ನನಗೆ ಅರ್ಥವೇ ಆಗುತ್ತಿಲ್ಲ. ನಾನು ಚ್ಯೂಯಿಂಗ್ ಗಮ್ ಹಾಕಿದರೂ ಅವರಿಗೆ ತೊಂದರೇನೇ.. ನನ್ನ ಕಾಲರ್ ಎಗಿರಸಿದರೂ ಅವರಿಗೆ ತೊಂದರೇನೇ.. ಅದು ಯಾಕೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ರಿಯಾಗ್ ಪರಾಗ್ ಬೇಸರ ವ್ಯಕ್ತಪಡಿಸಿದ್ದಾರೆ.

ರಿಯಾನ್ ಪರಾಗ್.
ರಿಯಾನ್ ಪರಾಗ್. (BCCI)

ಐಪಿಎಲ್​​ನಲ್ಲಿ ಅಟ್ಟರ್​​ ಫ್ಲಾಪ್ ಆಗಿದ್ದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ರಿಯಾನ್ ಪರಾಗ್ (Riyan Parag), ಸಾಕಷ್ಟು ಟೀಕೆ, ಟ್ರೋಲ್​ಗೆ ಗುರಿಯಾಗಿದ್ದರು. ಸದ್ಯ ಮುಗಿದ ದೇವದರ್​ ಟ್ರೋಫಿಯಲ್ಲಿ ಜಬರ್​ದಸ್ತ್ ಫರ್ಪಾಮೆನ್ಸ್​ ನೀಡಿದ ಪರಾಗ್, ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ಮೂಲಕ ತನ್ನನ್ನು ಟ್ರೋಲ್ ಮಾಡುವ ನೆಟ್ಟಿಗರಿಗೆ ಸರಿಯಾದ ತಿರುಗೇಟು ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಯಾಟ್​ನಿಂದ ಮಾತ್ರವಲ್ಲದೆ, ಮಾತಿನ ಮೂಲಕವೂ ತಿರುಗೇಟು ಕೊಟ್ಟಿದ್ದಾರೆ. 21 ವರ್ಷ ವಯಸ್ಸಿನ ಪರಾಗ್, ಉದಯೋನ್ಮುಖ ಏಷ್ಯಾ ಕಪ್, ನಂತರ ದೇವಧರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಕ್ರಿಕೆಟ್ ವಿಮರ್ಶಕರ ಮೆಚ್ಚುಗೆಗೆ ಕಾರಣರಾದರು. 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಗೆದ್ದು ಆಯ್ಕೆಗಾರರ ​​ಗಮನ ಸೆಳೆದಿದ್ದಾರೆ. ಇದೀಗ ತನ್ನ ಬಗ್ಗೆ ಆಗುವ ಟ್ರೋಲ್​​ ಕುರಿತು ಪರಾಗ್, ಮಾತನಾಡಿದ್ದಾರೆ.

‘ಕಾರಣ ಗೊತ್ತಾಗುತ್ತಿಲ್ಲ’

ಜನರು ನನ್ನನ್ನು ಏಕೆ ಇಷ್ಟು ದ್ವೇಷಿಸುತ್ತಾರೆಂದು ನನಗೆ ಅರ್ಥವೇ ಆಗುತ್ತಿಲ್ಲ. ನಾನು ಚ್ಯೂಯಿಂಗ್ ಗಮ್ ಹಾಕಿದರೂ ಅವರಿಗೆ ತೊಂದರೇನೇ.. ನನ್ನ ಕಾಲರ್ ಎಗಿರಸಿದರೂ ಅವರಿಗೆ ತೊಂದರೇನೇ... ಕ್ಯಾಚ್ ಹಿಡಿದ ನಂತರ ಸಂಭ್ರಮಿಸಿದರೂ ಟ್ರೋಲ್​ ಮಾಡುತ್ತಾರೆ. ಅದು ಯಾಕೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೊನೆಗೆ ಬಿಡುವಿನ ಸಮಯದಲ್ಲಿ ಗಾಲ್ಫ್​ ಆಡುತ್ತಿದ್ದರೂ, ಅದನ್ನು ಕೂಡ ಟ್ರೋಲ್ ಮಾಡುತ್ತಾರೆ. ಜನರು ಇಷ್ಟರಮಟ್ಟಿಗೆ ಟ್ರೋಲ್​ ಮಾಡಲು ಕಾರಣ ಏನೆಂಬುದೇ ತಿಳಿಯುತ್ತಿಲ್ಲ. ಹೀಗೆಯೇ ಆಡಬೇಕು ಎಂಬ ನಿಯಮ ಇದೆ. ಆದರೆ ಕ್ರಿಕೆಟರ್​​ಗಳು ಹೀಗೆಯೇ ಇರಬೇಕು ಎಂದು ಯಾವುದೇ ನಿಯಮಗಳ ಪುಸ್ತಕ ಇಲ್ಲ. ಅಂತಹ ಪುಸ್ತಕ ಇದ್ದರೆ ಒಳ್ಳೆಯದೇನೋ ಎಂದು ಪ್ರಶ್ನಿಸಿದ್ದಾರೆ.

‘ಮೋಜಿಗೆ ಕ್ರಿಕೆಟ್ ಆಡುತ್ತಿದ್ದೇನೆ’

ಟಿ ಶರ್ಟ್ ಅನ್ನು ಟಕ್​ ಮಾಡಬೇಕು. ಕಾಲರ್ ಕೆಳಿಗಿಳಿಸಬೇಕು. ಎಲ್ಲರನ್ನೂ ಗೌರವಿಸಬೇಕು. ಯಾರನ್ನೂ ಸ್ಲೆಡ್ಜ್ ಮಾಡಬಾರದು ಎಂದು ನಿಯಮ ಇದ್ದರೆ, ಇವರಿಗೆ (ಟ್ರೋಲ್​ ಮಾಡುವವರಿಗೆ) ನೆಮ್ಮದಿ ಎನಿಸುತ್ತದೆ. ಆದರೆ ಇವೆಲ್ಲವನ್ನೂ ನಾನು ನಂಬುವುದಿಲ್ಲ. ಮೋಜಿಗಾಗಿಯೇ ಕ್ರಿಕೆಟ್​ ಆಡುವುದನ್ನು ಪ್ರಾರಂಭಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈಗಲೂ ನಾನು ಕೇವಲ ಮೋಜಿಗಾಗಿ ಕ್ರಿಕೆಟ್ ಆಡುತ್ತಿದ್ದೇನೆ. ನಾನು ಈ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿರುವುದುಕ್ಕೆ ಅನೇಕ ಜನರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಈ ಮಟ್ಟದಲ್ಲಿ ಆಡುವಷ್ಟು ಉತ್ತಮ ಆಟಗಾರನಲ್ಲ ಎಂದು ಅವರು ಭಾವಿಸುತ್ತಿದ್ದಾರೆ. ನನ್ನ ಹೇಟರ್​​ಗಳನ್ನು ನೋಡಿ ನನ್ನ ತಾಯಿ ಆಘಾತಕ್ಕೊಳಗಾಗಿದ್ದಾರೆ ಎಂದು ಪರಾಗ್​ ಹೇಳಿದ್ದಾರೆ.

‘ನಾನು ತಲೆ ಕೆಡಿಸಿಕೊಳ್ಳಲ್ಲ’

ನನ್ನ ತಾಯಿಗೆ ಒಂದೇ ಮಾತನ್ನು ಹೇಳಿದೆ. ಇನ್​ಸ್ಟಾಗ್ರಾಂ, ಫೇಸ್​ಬುಕ್​ನಂತಹ ಸೋಷಿಯಲ್ ಮೀಡಿಯಾದಲ್ಲಿ ದೂರ ಇರುವಂತೆ ತಿಳಿಸಿದೆ. ಸಾಮಾಜಿಕ ಮಾಧ್ಯಮಗಳಿಂದ ದೂರ ಇರುವವರಿಗೆ ಈ ಕೆಟ್ಟ ಕತೆಗಳ ಬಗ್ಗೆ ಅರಿವು ಇರುವುದಿಲ್ಲ. ನಾನು ಕೂಡ ಈ ವಿಯಷಗಳ ಕುರಿತು ತಲೆ ಕೆಡಿಸಿಕೊಳ್ಳುವುದನ್ನು ಕೈಬಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಅದ್ಭುತ ಪ್ರದರ್ಶನ

ರಿಯಾನ್ ಪರಾಗ್ ಇತ್ತೀಚೆಗೆ ಮುಗಿದ ದೇವಧರ್ ಟ್ರೋಫಿಯಲ್ಲಿ 5 ಪಂದ್ಯಗಳಲ್ಲಿ 88.50 ಸರಾಸರಿಯಲ್ಲಿ 354 ರನ್ ಗಳಿಸಿದರು. ಉತ್ತರ ವಲಯ ವಿರುದ್ಧದ ಪಂದ್ಯದಲ್ಲಿ 131 ಮತ್ತು ಪಶ್ಚಿಮ ವಲಯ ವಿರುದ್ಧದ ಪಂದ್ಯದಲ್ಲಿ 102 ರನ್ ಗಳಿಸಿದ್ದ ರಿಯಾನ್ ಪರಾಗ್, ದಕ್ಷಿಣ ವಲಯ ವಿರುದ್ಧದ ಫೈನಲ್‌ನಲ್ಲಿ 95 ರನ್ ಗಳಿಸಿ ಔಟಾದರು.

ತೀವ್ರ ವೈಫಲ್ಯ

ಆದರೆ, ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ರಿಯಾನ್ ಪರಾಗ್ ಐಪಿಎಲ್-2023ರ ಆವೃತ್ತಿಯಲ್ಲಿ ಹೆಚ್ಚು ಪ್ರಭಾವ ಬೀರಿಲ್ಲ. ಏಳು ಪಂದ್ಯಗಳಲ್ಲಿ 78 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಆಡದಿದ್ದರೂ, ಅವರ ಆ್ಯಟಿಟ್ಯೂಡ್​, ಬಿಲ್ಡಪ್ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

ಸಂಬಂಧಿತ ಲೇಖನ