Nitin Menon: ತಮ್ಮ ಪರ ನಿರ್ಧಾರ ಪಡೆಯಲು ಒತ್ತಡ ಹಾಕುತ್ತಾರೆ; ಭಾರತದ ಅನುಭವಿ ಆಟಗಾರರ ಕುರಿತು ಅಚ್ಚರಿ ಹೇಳಿಕೆ ನೀಡಿದ ಅಂಪೈರ್ ನಿತಿನ್ ಮೆನನ್
ಕನ್ನಡ ಸುದ್ದಿ  /  ಕ್ರೀಡೆ  /  Nitin Menon: ತಮ್ಮ ಪರ ನಿರ್ಧಾರ ಪಡೆಯಲು ಒತ್ತಡ ಹಾಕುತ್ತಾರೆ; ಭಾರತದ ಅನುಭವಿ ಆಟಗಾರರ ಕುರಿತು ಅಚ್ಚರಿ ಹೇಳಿಕೆ ನೀಡಿದ ಅಂಪೈರ್ ನಿತಿನ್ ಮೆನನ್

Nitin Menon: ತಮ್ಮ ಪರ ನಿರ್ಧಾರ ಪಡೆಯಲು ಒತ್ತಡ ಹಾಕುತ್ತಾರೆ; ಭಾರತದ ಅನುಭವಿ ಆಟಗಾರರ ಕುರಿತು ಅಚ್ಚರಿ ಹೇಳಿಕೆ ನೀಡಿದ ಅಂಪೈರ್ ನಿತಿನ್ ಮೆನನ್

ನಿತಿನ್​ ಮೆನನ್​ ಅವರು ಭಾರತದ ಆಟಗಾರರ ಕುರಿತು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಭಾರತ ತಂಡವು ತವರಿನಲ್ಲಿ ನಮಗೆ ಸಾಕಷ್ಟು ಒತ್ತಡ ಇರುತ್ತದೆ. ಅದರಲ್ಲೂ ಟೀಮ್​ ಇಂಡಿಯಾದ ಹಿರಿಯ ಆಟಗಾರರು, ಪ್ರತಿ ಕ್ಷಣವೂ ಒತ್ತಡ ಹಾಕುತ್ತಾರೆ ಎಂದು ಹೇಳಿದ್ದಾರೆ.

ಭಾರತದ ಅನುಭವಿ ಆಟಗಾರರ ಕುರಿತು ಅಚ್ಚರಿ ಹೇಳಿಕೆ ನೀಡಿದ ಅಂಪೈರ್ ನಿತಿನ್ ಮೆನನ್
ಭಾರತದ ಅನುಭವಿ ಆಟಗಾರರ ಕುರಿತು ಅಚ್ಚರಿ ಹೇಳಿಕೆ ನೀಡಿದ ಅಂಪೈರ್ ನಿತಿನ್ ಮೆನನ್ (ESPNcricinfo/Twitter)

ಕ್ರಿಕೆಟ್​ ಲೋಕದಲ್ಲಿ ಅಂಪೈರ್​​ಗೆ ಮೈಯೆಲ್ಲಾ ಕಣ್ಣಾಗಿರಬೇಕು. ಸ್ವಲ್ಪ ಎಡವಟ್ಟಾದರೂ, ಪಂದ್ಯದ ಚಿತ್ರಣವೇ ಬದಲಾಗುತ್ತದೆ. ಅದರಲ್ಲೂ ಅಂಪೈರ್​​ಗಳು ತೆಗೆದುಕೊಳ್ಳುವ ನಿರ್ಧಾರಗಳು, ಸೂಕ್ಷ್ಮವಾಗಿರಬೇಕು. ಒಂದು ತಪ್ಪಾದರೂ, ಸಾಕಷ್ಟು ಟೀಕೆಗೂ ಗುರಿಯಾಗುತ್ತಾರೆ. ಐಸಿಸಿ ಟೂರ್ನಿ, ದ್ವಿಪಕ್ಷೀಯ ಸರಣಿ ಯಾವುದಾದರೂ ಸರಿ ಎಚ್ಚರಿಕೆಯಿಂದ ಇರಬೇಕು. ಅಂಪೈರಿಂಗ್ ಮಾಡಲು ಸಾಕಷ್ಟು ಅನುಭವವಿರಬೇಕು.

ಸದ್ಯ ಭಾರತದ ಅನುಭವಿ ಅಂಪೈರಿಂಗ್​ ನಿತಿನ್ ಮೆನನ್, ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ-ಇಂಗ್ಲೆಂಡ್​​ ನಡುವಿನ ಆ್ಯಷಸ್​​ (Ashes series) ಸಿರೀಸ್​​​​ನ ಕೊನೆಯ 3 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಸೇವೆ ಸಲ್ಲಿಸಲು ಆಯ್ಕೆಯಾದ ನಿತಿನ್, ತಮ್ಮ ಅಂಪೈರಿಂಗ್​ ಕರಿಯರ್​​ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಜೊತೆಗೆ ಭಾರತದ ಆಟಗಾರರ ಕುರಿತು, ಅಚ್ಚರಿಯ ಹೇಳಿಕೆ ಸಂಚಲನ ಸೃಷ್ಟಿಸಿದ್ದಾರೆ.

ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರಿಂಗ್​​ ಮಾಡಲು ಕಳೆದ ಮೂರು ವರ್ಷಗಳ ಒತ್ತಡದ ಸನ್ನಿವೇಶವನ್ನು ಎದುರಿಸಿದ್ದೇ ಇದಕ್ಕೆ ಕಾರಣ. ಆ್ಯಷಸ್​ ಸರಣಿಯ ಕೊನೆಯ ಮೂರು ಪಂದ್ಯಗಳಿಗೆ ಅಂಪೈರಿಂಗ್​ ಸಿದ್ಧರಾಗಿರುವ ನಿತಿನ್​ ಮೆನನ್, ಮಹತ್ವದ ಪಂದ್ಯಗಳಲ್ಲಿ ತನ್ನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಇದೆ. ಈ ಹಿಂದೆಯೂ ಹಲವು ಸರಣಿಗಳಲ್ಲಿ ಅಂಪೈರಿಂಗ್​ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಭಾರತ ಆಟಗಾರರು ಒತ್ತಡ ಹಾಕುತ್ತಾರೆ!

ನಿತಿನ್​ ಮೆನನ್​ ಅವರು ಭಾರತದ ಆಟಗಾರರ ಕುರಿತು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಭಾರತ ತಂಡವು ತವರಿನಲ್ಲಿ ನಮಗೆ ಸಾಕಷ್ಟು ಒತ್ತಡ ಇರುತ್ತದೆ. ಅದರಲ್ಲೂ ಟೀಮ್​ ಇಂಡಿಯಾದ ಹಿರಿಯ ಆಟಗಾರರು, ಪ್ರತಿ ಕ್ಷಣವೂ ಒತ್ತಡ ಹಾಕುತ್ತಾರೆ. ನಿಮ್ಮ ನಿರ್ಧಾರಗಳು ಶೇ 50ರಷ್ಟು ನಮ್ಮ ಪರ ಇರಬೇಕು ಎಂದು ಒತ್ತಡ ಹಾಕುತ್ತಾರೆ. ಆದರೆ ಇದ್ಯಾವುದಕ್ಕೂ ನಾವು ಜಗ್ಗುವುದಿಲ್ಲ. ಇಂತಹ ಒತ್ತಡ ಸನ್ನಿವೇಶವನ್ನು ಎದುರಿಸಿದ ಬಳಿಕ ವಿದೇಶಿ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡುವುದು ಸುಲಭ ಎನಿಸಿದೆ ಎಂದು ನಿತಿನ್ ಮೆನನ್​ ಹೇಳಿದ್ದಾರೆ.

ಸಂದರ್ಭ ಯಾವುದೇ ಆಗಲಿ, ನಾನು ಅದನ್ನು ಎದುರಿಸುತ್ತೇನೆ. ನನ್ನಲ್ಲಿ ಆತ್ಮ ವಿಶ್ವಾಸ ದುಪ್ಪಟ್ಟಾಗಿದೆ. ಆಟಗಾರರು ಮಾತ್ರವಲ್ಲ, ಅಂಪೈರ್​ಗಳು ಸಹ ಮಾನಸಿಕ ಮತ್ತು ದೈಹಿಕವಾಗಿ ಗಟ್ಟಿಮುಟ್ಟಾಗಿರಬೇಕು. ನಾವು ಮೈದಾನದಲ್ಲಿ ಗಂಟೆಗಟ್ಟಲೇ ನಿಲ್ಲಬೇಕು. 7ರಿಂದ ಗಂಟೆಗಳ ಕಾಲ ಮೈದಾನದಲ್ಲೇ ಇರಬೇಕು. ಹಾಗಾಗಿ ವಾರದಲ್ಲಿ 6 ದಿನ 75 ನಿಮಿಷಗಳ ಕಾಲ ಜಿಮ್‌ ಕಸರತ್ತು ನಡೆಸುತ್ತೇನೆ ಎಂದು ಮೆನನ್ ಹೇಳಿದ್ದಾರೆ.

ನಿತಿನ್ ಮೆನನ್ ಜೂನ್ 2020 ರಿಂದ ಈವರೆಗೆ 15 ಟೆಸ್ಟ್, 24 ಏಕದಿನ ಮತ್ತು 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಐಪಿಎಲ್​​ನಲ್ಲೂ ಅವರು ಕೆಲಸ ಮಾಡಿದ್ದಾರೆ. 2021ರಲ್ಲಿ ನಡೆದ ಟಿ20 ವಿಶ್ವಕಪ್​, 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ನಿತಿನ್ ಮೆನನ್ ಅಂಪೈರಿಂಗ್ ಮಾಡಿದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.