ಕನ್ನಡ ಸುದ್ದಿ  /  Sports  /  Cricket News Yashasvi Jaiswal Turned Into A Superstar Overnight Says Ricky Ponting After Debut Century Prithvi Shaw Prs

Ricky Ponting: ಯಶಸ್ವಿ ಜೈಸ್ವಾಲ್​ ರಾತ್ರೋರಾತ್ರಿ ಸೂಪರ್​ಸ್ಟಾರ್ ಆದರು; ಮೊದಲು ಪೃಥ್ವಿ ಶಾ ಹೀಗೆ ಇದ್ದರು ಎಂದ ದಿಗ್ಗಜ ರಿಕಿ ಪಾಂಟಿಂಗ್

Ricky Ponting: ಐಪಿಎಲ್​ ನಂತರ ಉತ್ತಮ ಹೆಸರು ಸಂಪಾದಿಸಿದ ಯಶಸ್ವಿ ಜೈಸ್ವಾಲ್ (Yashasvi Jaiswal)​ ಈಗ, ರಾತ್ರೋರಾತ್ರಿ ಸೂಪರ್​ ಸ್ಟಾರ್​ ಆಗಿ ಹೊರಹೊಮ್ಮಿದ್ದಾರೆ ಎಂದು ದಿಗ್ಗಜ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಯಶಸ್ವಿ ಜೈಸ್ವಾಲ್ ಕುರಿತು ರಿಕಿ ಪಾಂಟಿಂಗ್​ ಹೇಳಿಕೆ
ಯಶಸ್ವಿ ಜೈಸ್ವಾಲ್ ಕುರಿತು ರಿಕಿ ಪಾಂಟಿಂಗ್​ ಹೇಳಿಕೆ

ವೆಸ್ಟ್​ ಇಂಡೀಸ್ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ (West Indies vs India) ಭರ್ಜರಿ ಗೆಲುವು ದಾಖಲಿಸಿದೆ. ಕೇವಲ 3ನೇ ದಿನಕ್ಕೆ ಮುಕ್ತಾಯವಾದ ಈ ಪಂದ್ಯದಲ್ಲಿ ಇನ್ನಿಂಗ್ಸ್​ ಮತ್ತು 141 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್​ (Yashasvi Jaiswal), ಭರ್ಜರಿ ಬ್ಯಾಟಿಂಗ್​ ನಡೆಸಿದರು. ಮೊದಲ ಪಂದ್ಯದಲ್ಲೇ ಶತಕ (171) ಸಿಡಿಸಿ ದಾಖಲೆ ಬರೆದರು.

ಟ್ರೆಂಡಿಂಗ್​ ಸುದ್ದಿ

ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಕುರಿತು ಆಸ್ಟ್ರೇಲಿಯಾದ ಲೆಜೆಂಡರಿ ನಾಯಕ ರಿಕಿ ಪಾಂಟಿಂಗ್ (Ricky Ponting) ಆಸಕ್ತಿದಾಯಕ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್​ ನಂತರ ಉತ್ತಮ ಹೆಸರು ಸಂಪಾದಿಸಿದ ಜೈಸ್ವಾಲ್ ಈಗ, ರಾತ್ರೋರಾತ್ರಿ ಸೂಪರ್​ ಸ್ಟಾರ್​ ಆಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದ್ದಾರೆ.

‘ಪರಿಣಾಮಕಾರಿ ಟೆಸ್ಟ್​ ಆಟಗಾರ’

ನನ್ನ ಪ್ರಕಾರ ಜೈಸ್ವಾಲ್ ಅವರ ಐಪಿಎಲ್ (IPL 2023) ವಿಶೇಷವಾಗಿತ್ತು. ಅವರು ಪ್ರತಿಭಾವಂತ ಯುವಕ ಎಂದು ಎಲ್ಲರಿಗೂ ತಿಳಿದಿತ್ತು, ಆದರೆ ಈ ವರ್ಷದ ಐಪಿಎಲ್‌ನಲ್ಲಿ ನಾನು ನೋಡಿದ್ದು, ಅವರು ಎಲ್ಲಾ ಮಾದರಿಯ ಕ್ರಿಕೆಟ್​​​ನಲ್ಲೂ ಅದ್ಭುತ ಪ್ರತಿಭೆಯನ್ನು ಹೊಂದಿದ್ದಾರೆ ಎಂಬುದನ್ನು. ಋತುರಾಜ್ ಗಾಯಕ್ವಾಡ್ (Ruturaj Gaikwag) ಅವರೊಂದಿಗೆ ಜೈಸ್ವಾಲ್ ಭಾರತಕ್ಕೆ ಅತ್ಯಂತ ಗಂಭೀರವಾದ ಟೆಸ್ಟ್ ಆಟಗಾರನಾಗಬಹುದು ಎಂದರು.

‘ದೇಶೀ ಕ್ರಿಕೆಟ್​​ನಲ್ಲಿ ಮಿಂಚಿದರೂ ಅವಕಾಶ ಸಿಗಲ್ಲ’

ಜೈಸ್ವಾಲ್ ಐಪಿಎಲ್ 2023ರಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. 14 ಪಂದ್ಯಗಳಲ್ಲಿ 48.08 ಸರಾಸರಿ, 163.61ರ ಬ್ಯಾಟಿಂಗ್​ ಸ್ಟ್ರೈಕ್​ರೇಟ್​ನಲ್ಲಿ 625 ರನ್ ಗಳಿಸಿದರು. ಭಾರತೀಯ ಕ್ರಿಕೆಟ್​​ನಲ್ಲಿ ಪ್ರತಿಭಾವಂತರ ದಂಡೇ ಇದೆ. ನಾನು ಕೂಡ ಅಂತಹ ಆಟಗಾರರ ಟೆಸ್ಟ್​ ಕ್ರಿಕೆಟ್ ವೀಕ್ಷಿಸಲು ಕಾಯುತ್ತಿದ್ದೇನೆ. ಆದರೆ, ದೇಶೀ ಕ್ರಿಕೆಟ್​​ನಲ್ಲಿ ಎಷ್ಟೇ ಯಶಸ್ಸು ಕಂಡರೂ ಕೆಲವೊಮ್ಮೆ ಏನೂ ಮಾಡೋಕೆ ಸಾಧ್ಯವಿಲ್ಲ ಎಂದಿದ್ದಾರೆ.

ಗಾಯಕ್ವಾಡ್​ ಕೂಡ ಅದ್ಭುತ ಆಟಗಾರ

ದಾಖಲೆಯಲ್ಲಿ ಜೈಸ್ವಾಲ್​ನಂತೆಯೇ ಋತುರಾಜ್ ಗಾಯಕ್ವಾಡ್ ಕೂಡ ಪ್ರತಿಭಾವಂತ ಕ್ರಿಕೆಟಿಗ. ಋತುರಾಜ್ ಗಾಯಕ್ವಾಡ್ ಭವಿಷ್ಯದಲ್ಲಿ ಉತ್ತಮ ಟೆಸ್ಟ್ ಆಟಗಾರನಾಗಲಿದ್ದಾರೆ. ಅಥವಾ ಮೂರು ಫಾರ್ಮೆಟ್​ ಪ್ಲೇಯರ್ ಆಗಲಿದ್ದಾರೆ ಎಂದು ಭಾವಿಸಿದ್ದೇನೆ. ಜೈಸ್ವಾಲ್ ಮತ್ತು ಗಾಯಕ್ವಾಡ್ 3 ಮಾದರಿಯ ಆಟಗಾರನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಪೃಥ್ವಿ ಶಾ ಹೀಗೆ ಇದ್ದರು’

ಕೆಲ ವರ್ಷಗಳ ಹಿಂದಕ್ಕೆ ಹೋದರೆ, ಪೃಥ್ವಿ ಶಾ (Prithvi Shaw) ಅವರಲ್ಲಿ ಅಂತಹ ಪ್ರತಿಭೆಯನ್ನು ನಾನು ನೋಡಿದೆ. ಅವರು ಕೂಡ ಅದ್ಭುತ ಪ್ರದರ್ಶನ ನೀಡಿದ್ದರು. ರಾತ್ರೋ ರಾತ್ರಿ ಸೂಪರ್​ ಸ್ಟಾರ್ ಪಟ್ಟ ದಕ್ಕಿಸಿಕೊಂಡರು. ಅವರು ಆಟದ ಮೇಲೆ ಸರಿಯಾಗಿ ಗಮನಹರಿಸಿದರೆ 3 ಸ್ವರೂಪಗಳಲ್ಲಿ ಮಿಂಚಬಹುದು ಎಂದು ನಂಬಿಕೆ ನನಗಿದೆ. ಆದರೆ, ಪೃಥ್ವಿ ಶಾ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಪಡಬೇಕಾದ ಕಷ್ಟವನ್ನು ಪಡುತ್ತಿಲ್ಲ. ಪ್ರತಿಭೆಯಲ್ಲಿ ಯಾವುದೇ ಲೋಪ ಇಲ್ಲ ಎಂದು ರಿಕಿ ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ. 2018ರಲ್ಲಿ ರಾಜ್‌ಕೋಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು.