ಕನ್ನಡ ಸುದ್ದಿ  /  Sports  /  Ex Pakistan Player Says They Only Care About 2 3 Games Against India

Asia Cup: 'ಏಷ್ಯಾಕಪ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಭಾರತದ ವಿರುದ್ಧದ ಪಂದ್ಯಗಳ ಬಗ್ಗೆ ಮಾತ್ರ ಯೋಚನೆ'

ಆದರೆ ನಾವು ನಿಜವಾಗಿಯೂ ಏಷ್ಯಾ ಕಪ್ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನಾವು ಭಾರತದ ವಿರುದ್ಧದ ಆ 2-3 ಪಂದ್ಯಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇವೆ. ಇವುಗಳನ್ನು ಗೆದ್ದರೆ ಸಾಕು, ಅದೇ ಗೆಲುವು ಎಂಬುದು ನಮ್ಮಲ್ಲಿದೆ. ಆದರೆ ಅದು ಸರಿಯಲ್ಲ. ಅದಕ್ಕೆ ಸೂಕ್ತ ಯೋಜನೆ ಬೇಕು ಎಂದು ಮಾಜಿ ಆಟಗಾರ ಅಹ್ಮದ್ ಹೇಳಿದ್ದಾರೆ.

ಬಾಬರ್‌ ಅಜಾಮ್
ಬಾಬರ್‌ ಅಜಾಮ್

ಮುಂಬರುವ ಏಷ್ಯಾ ಕಪ್‌ಗಾಗಿ ಪಾಕಿಸ್ತಾನ ತಂಡದಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಹಸನ್ ಅಲಿ ಅವರನ್ನು ತಂಡದಿಂದ ಕೈಬಿಟ್ಟಿರುವುದು ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೂ ಕಾರಣವಾಗಿದೆ. ಇದರೊಂದಿಗೆ ಶೋಯೆಬ್ ಮಲಿಕ್ ಅವರನ್ನು ಕೂಡಾ ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ಪಾಕಿಸ್ತಾನದ ಮಧ್ಯಮ ಕ್ರಮಾಂಕದಲ್ಲಿ ಪವರ್‌ ಹಿಟ್ಟರ್‌ಗಳ ಕೊರತೆಯಾಗಲಿದೆ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಈ ವಿಚಾರದ ಬಗ್ಗೆ ಮಾತನಾಡಿರುವ ದೇಶದ ಸ್ಟಾರ್ ಮಾಜಿ ಬೌಲರ್ ತೌಸೀಫ್ ಅಹ್ಮದ್, ಪಿಸಿಬಿಯು ಒಂದು ತಂಡವನ್ನು ನೆಲೆಗೊಳಿಸಲು ವಿಫಲವಾಗಿದೆ ಎಂದು ಹೇಳಿದ್ದಾರೆ.

ಇದು ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಪಿಸಿಬಿಯು ಒಂದು ತಂಡವನ್ನು ನಿರ್ದಿಷ್ವಾಗಿ ಕಟ್ಟಲು ಪ್ರಯತ್ನಿಸಿಲ್ಲ. ಕೆಲವು ವರ್ಷಗಳ ಹಿಂದೆ ಇದ್ದ ಅದೇ ಆಟಗಾರರು ಯಾವುದೋ ರೀತಿಯಲ್ಲಿ ಮತ್ತೆ ಬರುತ್ತಿದ್ದಾರೆ. ನೀವು ಒಮ್ಮೆ ಕ್ರಿಕೆಟ್ ತೊರೆಯಬೇಕು ಎಂದು ಹೇಳಿದ ಆಟಗಾರರ ಬಳಿಗೆ ಮತ್ತೆ ಹೋದ ಹಾಗೆ ಆಗುತ್ತಿದೆ. ಇದರರ್ಥ ನೀವು ಬ್ಯಾಕ್-ಅಪ್ ಯೋಜನೆಯನ್ನು ಹೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಪಾಕಿಸ್ತಾನವನ್ನು ಪ್ರತಿನಿಧಿಸಿರುವ ಮಾಜಿ ಆಟಗಾರ ಅಹ್ಮದ್, ಅವರ ದೇಶದ ವಾಹಿನಿಯೊಂದಕ್ಕೆ ಹೇಳಿದ್ದಾರೆ.

ಈ ಸಮಯದಲ್ಲಿ ಪಾಕಿಸ್ತಾನವು ಒಟ್ಟಾರೆಯಾಗಿ ಏಷ್ಯಾಕಪ್‌ಗಿಂತ, ಭಾರತದ ವಿರುದ್ಧದ ಪಂದ್ಯಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

“ನಮ್ಮ ತಂಡ ಉತ್ತಮವಾಗಿರಬೇಕು ಎಂದು ನಾವು ಬಯಸುತ್ತೇವೆ. ಹೀಗಾಗಿ ಪಿಸಿಬಿಯು ಶೋಯೆಬ್ ಮಲಿಕ್ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ನಾವು ಭಾವಿಸಿದ್ದೇವೆ. ಏಕೆಂದರೆ ನೀವು ಇಂತಹ ಸಮಯದಲ್ಲಿ ಮಾತ್ರ ಇಂತಹ ಆಟಗಾರರನ್ನು ನೆನಪಿಸಿಕೊಳ್ಳುತ್ತೀರಿ. ಆದರೆ ನಾವು ನಿಜವಾಗಿಯೂ ಏಷ್ಯಾ ಕಪ್ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನಾವು ಭಾರತದ ವಿರುದ್ಧದ ಆ 2-3 ಪಂದ್ಯಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇವೆ. ಇವುಗಳನ್ನು ಗೆದ್ದರೆ ಸಾಕು, ಅದೇ ಗೆಲುವು ಎಂಬುದು ನಮ್ಮಲ್ಲಿದೆ. ಆದರೆ ಅದು ಸರಿಯಲ್ಲ. ಅದಕ್ಕೆ ಸೂಕ್ತ ಯೋಜನೆ ಬೇಕು” ಎಂದು ಅಹ್ಮದ್ ಹೇಳಿದ್ದಾರೆ.

ಆಗಸ್ಟ್ 27ರಿಂದ ಏಷ್ಯಾ ಕಪ್ ಪ್ರಾರಂಭಗೊಳ್ಳುತ್ತದೆ. ಉದ್ಘಾಟನಾ ಪಂದ್ಯದ ಮರುದಿನ ಪಾಕಿಸ್ತಾನವು ಸಾಂಪ್ರದಾಯಿಕ ಎದುರಾಳಿಯಾದ ಭಾರತದ ವಿರುದ್ಧ ತನ್ನ ಅಭಿಯಾನ ಆರಂಭಿಸುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಎರಡು ತಂಡಗಳು ಎರಡು ಬಾರಿ ಅಥವಾ ಮೂರು ಬಾರಿ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಏಷ್ಯಾ ಕಪ್ 2022ಗೆ ಭಾರತ ತಂಡ :ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಯಾಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (ವಿ.ಕೀ), ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಆರ್ ಜಡೇಜಾ, ಆರ್ ಅಶ್ವಿನ್, ವೈ ಚಾಹಲ್ , ಆರ್ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ವಿಭಾಗ