Sunny Leone: ಮೆಸ್ಸಿ-ರೊನಾಲ್ಡೊ ಅಲ್ಲ, ಭಾರತದ ಈ ಆಟಗಾರ ನನ್ನ ಫೇವರಿಟ್ ಎಂದ ಸನ್ನಿ; ಇರೋದೊಂದು ಹೃದಯ ಎಷ್ಟು ಸಲ ಗೆಲ್ತೀರಾ ಎಂದ ಫ್ಯಾನ್ಸ್
Sunny Leone: ಇನ್ಸ್ಟಾಗ್ರಾಂ ಪ್ರಶ್ನೋತ್ತರ ವೇಳೆ ಅಭಿಮಾನಿಯೊಬ್ಬ ನಿಮ್ಮ ನೆಚ್ಚಿನ ದೇಶ ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಬಾಲಿವುಡ್ ಸುಂದರಿ ಸನ್ನಿ ಲಿಯೋನ್, ಭಾರತ ಎಂದು ಹೇಳುವ ಮೂಲಕ ಗ್ರೇಟ್ ಎನಿಸಿಕೊಂಡಿದ್ದಾರೆ.
ಲಿಯೊನೆಲ್ ಮೆಸ್ಸಿ (Lionel Messi) ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo)- ಈ ಫುಟ್ಬಾಲ್ ಲೋಕದ ದಿಗ್ಗಜರಲ್ಲಿ ಯಾರು ಶ್ರೇಷ್ಠ? ಈ ಪ್ರಶ್ನೆಯ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಬಹುತೇಕರು ಈ ಇಬ್ಬರೂ ಇಷ್ಟ ಎಂದೇ ಹೇಳುತ್ತಾರೆ. ಕೆಲವರು ತಮಗೆ ಇಷ್ಟದವರಿಗೆ ವೋಟು ಹಾಕುತ್ತಾರೆ. ಅಪರೂಪಕ್ಕೆ ಅಪರೂಪ ಈ ದಿಗ್ಗಜರ ಹೊರತಾಗಿ ಹೆಸರು ಹೇಳುತ್ತಾರೆ. ಈಗ ಅಂತಹದ್ದೇ ಉತ್ತರ ಕೊಡುವ ಮೂಲಕ ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny leone) ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ.
ನಿಜ, ಈ ಮೇಲೆ ಕೇಳಿರುವ ಪ್ರಶ್ನೆಗೆ ಅದ್ಭುತ ಉತ್ತರ ನೀಡುವ ಮೂಲಕ ಸನ್ನಿ ಲಿಯೋನ್ ಭಾರತೀಯರ ಮನ ಗೆದ್ದಿದ್ದಾರೆ. ಬಾಲಿವುಡ್, ಸೌತ್ ಇಂಡಿಯನ್ ಸಿನಿಮಾಗಳ ಅದ್ಭುತ ಹಾಡುಗಳಿಗೆ ಸೊಂಟ ಬಳುಕಿಸಿರುವ ಸನ್ನಿ, ತಮ್ಮ ಇನ್ಸ್ಟಾಗ್ರಾಂನಲ್ಲಿ ನಡೆಸಿದ ಆ್ಯಸ್ಕ್ ಮಿ (Ask Me) ಎಂಬ ಪ್ರಶ್ನಾವಳಿ ಸಮಯದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಭಿನ್ನ ವಿಭಿನ್ನ ಉತ್ತರದ ಮೂಲಕ ಕೋಟ್ಯಂತರ ಭಾರತೀಯರ ಹೃದಯವನ್ನು ಮತ್ತೊಮ್ಮೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಅವರು ಮಾಲ್ಡೀವ್ಸ್ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.
ಮೆಸ್ಸಿ-ರೊನಾಲ್ಡೊ ಇಬ್ಬರೂ ಅಲ್ಲ
ಸಾಮಾಜಿಕ ಕಾರ್ಯಗಳಿಂದಲೂ ಹೆಚ್ಚು ಪ್ರಸಿದ್ಧಿ ಪಡೆದಿರುವ ಮಾಜಿ ನೀಲಿ ತಾರೆ, ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗಗಳ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟನೆಯ ಮೂಲಕ ಮೆಚ್ಚುಗೆಗೆ ಪಾತ್ರರಾಗಿರುವ ಸನ್ನಿ ಲಿಯೋನ್ ಅವರಿಗೆ ರೊನಾಲ್ಡೊ ಮತ್ತು ಮೆಸ್ಸಿ ಇಬ್ಬರು ತನ್ನ ನೆಚ್ಚಿನ ಆಟಗಾರ ಎಂದು ಹೇಳಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಅಭಿಮಾನಿಯೋರ್ವ ಮೆಸ್ಸಿ ಅಥವಾ ರೊನಾಲ್ಡೊ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ವಿಭಿನ್ನ ಉತ್ತರ ಕೊಟ್ಟಿರುವ ಹಾಟ್ ಬ್ಯೂಟಿ ಸನ್ನಿ ಲಿಯೋನ್, ಇಬ್ಬರೂ ಅಲ್ಲ, ಭಾರತ ತಂಡದ ನಾಯಕ ಸುನಿಲ್ ಛೆಟ್ರಿ (Sunil Chhetri) ನನ್ನ ನೆಚ್ಚಿನ ಆಟಗಾರ ಎಂದು ಉತ್ತರ ಕೊಟ್ಟಿದ್ದಾರೆ.
ಪ್ರಸ್ತುತ ಕ್ರಿಸ್ಟಿಯಾನೋ ರೊನಾಲ್ಡೊ 1168 ಪಂದ್ಯಗಳಲ್ಲಿ 838 ಗೋಲು ಗಳಿಸಿದ್ದರೆ, ಮೆಸ್ಸಿ, 1028 ಪಂದ್ಯಗಳಲ್ಲಿ 807 ಗೋಲು ಗಳಿಸಿ, ಅತಿ ಹೆಚ್ಚು ಗೋಲು ಸಿಡಿಸಿದವರ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಅಲಂಕರಿಸಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲೂ ರೊನಾಲ್ಡೊ 123 ಗೋಲು, ಮೆಸ್ಸಿ 103 ಗೋಲು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಗೋಲುಗಳ ಸಾರ್ವಕಾಲಿಕ ಟಾಪ್ ಸ್ಕೋರರ್ ಆಗಿದ್ದಾರೆ.
ನನ್ನ ನೆಚ್ಚಿನ ದೇಶ..?
ಆದರೆ ನಾನು ಎಲ್ಲರಂತೆ ಮೆಸ್ಸಿ ಅಥವಾ ರೊನಾಲ್ಡೊರನ್ನು ಇಷ್ಟಪಡುತ್ತೇನೆ ಎಂದು ಹೇಳದೆ ಸನ್ನಿ ಅಚ್ಚರಿ ಉತ್ತರ ನೀಡಿದ್ದಾರೆ. ಸನ್ನಿ ಲಿಯೋನ್ ಪ್ರಶ್ನೆಯ ಕುರಿತು ಸುನಿಲ್ ಛೆಟ್ರಿಯ ಫೋಟೋವನ್ನು ಪೋಸ್ಟ್ ಮಾಡಿದ್ದು, 'ನಮ್ಮ ಮಗ ಸುನಿಲ್ ಛೆಟ್ರಿ ಇದ್ದಾನೆ' ಎಂದು ಬರೆದಿದ್ದಾರೆ. ಈ ಪೋಸ್ಟ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದಿದ್ದಾರೆ. ಮತ್ತೊಬ್ಬ ಅಭಿಮಾನಿ ನಿಮ್ಮ ನೆಚ್ಚಿನ ದೇಶ ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಬಾಲಿವುಡ್ ಸುಂದರಿ, ಭಾರತ ಎಂದು ಹೇಳುವ ಮೂಲಕ ಗ್ರೇಟ್ ಎನಿಸಿಕೊಂಡಿದ್ದಾರೆ.
ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (SAFF) ಚಾಂಪಿಯನ್‌ಶಿಪ್ ಟೂರ್ನಿಯ ಉದ್ಘಾಟನಾ ದಿನದ 2ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಸಿದ ಭಾರತೀಯ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಸಾರ್ವಕಾಲಿಕ ಅತ್ಯಧಿಕ ಅಂತಾರಾಷ್ಟ್ರೀಯ ಗೋಲುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದರು. ಸದ್ಯ 90 ಗೋಲು ಗಳಿಸಿರುವ ಛೆಟ್ರಿ, ರೊನಾಲ್ಡೊ (123), ಅಲಿ ದಾಹಿ (109) ಮೆಸ್ಸಿ (103) ನಂತರದ ಸ್ಥಾನದಲ್ಲಿದ್ದಾರೆ.