Saurav Ganguly-Nagma: ಡೋನಾರನ್ನು ಮದುವೆಯಾದ ನಂತರ ನಟಿ ನಗ್ಮಾ ಜೊತೆ ಗಂಗೂಲಿ ಡೇಟಿಂಗ್; ಪತ್ನಿ ಎಂಟ್ರಿಗೆ ಮುರಿದು ಬಿತ್ತು ಭಗ್ನ ಪ್ರೇಮಕಥೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Saurav Ganguly-nagma: ಡೋನಾರನ್ನು ಮದುವೆಯಾದ ನಂತರ ನಟಿ ನಗ್ಮಾ ಜೊತೆ ಗಂಗೂಲಿ ಡೇಟಿಂಗ್; ಪತ್ನಿ ಎಂಟ್ರಿಗೆ ಮುರಿದು ಬಿತ್ತು ಭಗ್ನ ಪ್ರೇಮಕಥೆ

Saurav Ganguly-Nagma: ಡೋನಾರನ್ನು ಮದುವೆಯಾದ ನಂತರ ನಟಿ ನಗ್ಮಾ ಜೊತೆ ಗಂಗೂಲಿ ಡೇಟಿಂಗ್; ಪತ್ನಿ ಎಂಟ್ರಿಗೆ ಮುರಿದು ಬಿತ್ತು ಭಗ್ನ ಪ್ರೇಮಕಥೆ

  • ಜುಲೈ 8ರಂದು 51ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಸೌರವ್​ ಗಂಗೂಲಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇದೇ ವೇಳೆ ನಟಿ ನಗ್ಮಾ (Nagma) ಜೊತೆಗಿನ ಬ್ರೇಕಪ್ ಸ್ಟೋರಿಯನ್ನೂ ನೆನಪಿಸಿಕೊಂಡಿದ್ದಾರೆ. ಬನ್ನಿ ಹಾಗಿದ್ದರೆ, ಸೌರವ್ ಗಂಗೂಲಿ ಮತ್ತು ಪ್ರಸಿದ್ಧ ನಟಿ ನಾಗ್ಮಾ ನಡುವಿನ ಪ್ರೇಮಕಥೆಯನ್ನು ಮೆಲುಕು ಹಾಕೋಣ.

ಭಾರತೀಯ ಕ್ರಿಕೆಟ್​ನ ದಾದಾ, ಬಂಗಾಳದ ಹುಲಿ ಎಂದೇ ಪ್ರಸಿದ್ದಿ ಪಡೆದಿರುವ ಅಗ್ರೆಸ್ಸಿವ್ ಕ್ಯಾಪ್ಟನ್ ಸೌರವ್ ಗಂಗೂಲಿ (Saurav Ganguly Birthday) ಇಂದು (ಜೂನ್ 8ರಂದು) ತಮ್ಮ 51ನೇ ವಸಂತಕ್ಕೆ ಕಾಲಿಟಿದ್ದಾರೆ.
icon

(1 / 13)

ತನ್ನ ನಾಯಕತ್ವದಲ್ಲಿ ವಿದೇಶಗಳಲ್ಲೂ ಭಾರತ ತಂಡವನ್ನು ಗೆಲ್ಲುವಂತೆ  ಶ್ರೇಯ ಗಂಗೂಲಿಗೆ ಸಲ್ಲಬೇಕು. ಅನೇಕ ಯುವ ಕ್ರಿಕೆಟಿಗರಿಗೆ ಮಾದರಿಯಾದ ಗಂಗೂಲಿಗೆ, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಬಾಲಿವುಡ್ ನಟಿ ನಗ್ಮಾ (Nagma) ಜೊತೆಗಿನ ಬ್ರೇಕಪ್ ಸ್ಟೋರಿಯನ್ನೂ ನೆನಪಿಸಿಕೊಂಡಿದ್ದಾರೆ.
icon

(2 / 13)

ಮೈದಾನದಲ್ಲಷ್ಟೇ ಅಲ್ಲದೆ, ಪ್ರೇಮಕಥೆಯಿಂದಲೂ ಗಂಗೂಲಿ ಸುದ್ದಿಯಾಗಿದ್ದರು. ಅಂದರೆ ಗಂಗೂಲಿ ಮತ್ತು ಪ್ರಸಿದ್ಧ ನಟಿ ನಗ್ಮಾ ಪ್ರೇಮಕಥೆ ಹೀಗಿದೆ. ಇದು 1990ರಿಂದ ಆರಂಭವಾಗುತ್ತದೆ. 1990ರಲ್ಲಿ ಸಲ್ಮಾನ್ ಖಾನ್ ಜೊತೆ ‘ಬಾಘಿ’ ಚಿತ್ರದೊಂದಿಗೆ ನಗ್ಮಾ ಸಿನಿ ಕೆರಿಯರ್ ಪ್ರಾರಂಭಿಸಿದರು. ಈ ಚಿತ್ರವು ಭಾರಿ ಯಶಸ್ಸು ಕಂಡಿತು.
icon

(3 / 13)

ಅದೇ ವರ್ಷ, ನಗ್ಮಾ ತೆಲುಗು ಚಿತ್ರಗಳತ್ತ ಬಂದು ಸಕ್ಸಸ್ ಕಂಡರು. ಮತ್ತೊಂದೆಡೆ 1990ರಿಂದ 1991ರವರೆಗೆ ರಣಜಿ ಆಡಿದ ಗಂಗೂಲಿ, 1992ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟರು. ಈ ಸಮಯದಲ್ಲಿ ನಗ್ಮಾ-ಗಂಗೂಲಿ ನಡುವಿನ ಸಂಬಂಧ ಚರ್ಚಾ ವಿಷಯವಾಗಿತ್ತು. 
icon

(4 / 13)

2000ರ ದಶಕದ ಆರಂಭದಲ್ಲಿ ನಗ್ಮಾ-ಗಂಗೂಲಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ದೊಡ್ಡಮಟ್ಟದಲ್ಲಿ ಹರಡಿದ್ದವು. ಆದರೆ, ಅದಾಗಲೇ ಗಂಗೂಲಿ ಬಾಲ್ಯದ ಸ್ನೇಹಿತೆ ಡೊನ್ನಾರನ್ನು ಪ್ರೀತಿಸಿ ವಿವಾಹವಾಗಿದ್ದರು (ಫೆಬ್ರವರಿ 21, 1997). ಆದರೆ ಇದು ಗಂಗೂಲಿ-ನಗ್ಮಾ ಪ್ರೀತಿಗೆ ಅಡ್ಡಿಪಡಿಸಿತು ಎಂದು ಸುದ್ದಿಯಾಗಿತ್ತು.
icon

(5 / 13)

90ರ ದಶಕದಲ್ಲೇ ನಗ್ಮಾ ಸೂಪರ್​ ಸ್ಟಾರ್ ಆಗಿ ಬೆಳೆದರು. ಬಾಲಿವುಡ್​​ನಿಂದ ಹಿಡಿದು ಎಲ್ಲಾ ಚಿತ್ರರಂಗಗಳಲ್ಲೂ ಮಿಂಚಿದರು. ಇದೇ ವೇಳೆ ಗಂಗೂಲಿ ಕೆರಿಯರ್ ಸಹ ಉತ್ತುಂಗಕೇರುತ್ತಿತ್ತು. ಆದರೆ ಗಂಗೂಲಿ ವಿವಾಹವಾದ ಎರಡು ವರ್ಷಗಳ ಬಳಿಕ 1999ರಲ್ಲಿ ಗಂಗೂಲಿ ಹೆಸರು ನಗ್ಮಾ ಜೊತೆ ತಳುಕು ಹಾಕಿಕೊಂಡಿತು.
icon

(6 / 13)

1999ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಭಾರತವು ಸೂಪರ್​-8ರಲ್ಲಿ ನಿರ್ಗಮಿಸಿತು. ಈ ಸಮಯದಲ್ಲಿ ನಗ್ಮಾ, ಸೌರವ್ ಗಂಗೂಲಿಯನ್ನು ಭೇಟಿಯಾಗಿದ್ರು. ಬಳಿಕ ಇಬ್ಬರ ನಿಕಟತೆ ಹೆಚ್ಚಾಯಿತು ಎನ್ನಲಾಗಿತ್ತು. 2000ರಲ್ಲಿ ಭಾರತ ತಂಡದ ಆಟಗಾರರು, ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತ ಪರಿಣಾಮ, ಗಂಗೂಲಿಗೆ ಕ್ಯಾಪ್ಟನ್ಸಿ ಪಟ್ಟ ದೊರೆಯಿತು.
icon

(7 / 13)

ನಾಯಕತ್ವ ವಹಿಸಿದ ಸಂದರ್ಭದಲ್ಲೇ ನಗ್ಮಾ ಮತ್ತು ಗಂಗೂಲಿ ಕುರಿತು ಮಾಧ್ಯಮಗಳಲ್ಲಿ ಸಂಚಲನ ಸುದ್ದಿಯಾಗಿತ್ತು. ವರದಿಗಳ ಪ್ರಕಾರ, ಚೆನ್ನೈ ಬಳಿಯ ದೇವಾಲಯವೊಂದರಲ್ಲಿ ನಗ್ಮಾರನ್ನು ಗಂಗೂಲಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ಗುಸು ಗುಸು ಸುದ್ದಿ ಸೌರವ್ ಮನೆಯ ಅಂಗಳಕ್ಕೆ ಬಂದು ಬಿತ್ತು.
icon

(8 / 13)

ಡಿಎನ್‌ಎ ವರದಿಯ ಪ್ರಕಾರ, ಡೊನ್ನಾ ಅವರು ತನ್ನ ಪತಿ ಮತ್ತು ನಗ್ಮಾ ನಡುವಿನ ಸಂಬಂಧದ ಬಗ್ಗೆ ತಿಳಿದಾಗ, ಸೌರವ್‌ಗೆ ವಿಚ್ಚೇದನ ನೀಡಲು ಮುಂದಾಗಿದ್ದರು. ಬಳಿಕ ಡೊನ್ನಾ ತನ್ನ ವೈವಾಹಿಕ ಜೀವನ ನಿಭಾಯಿಸಿದರು. ಈ ಸಂಬಂಧದ ಸುದ್ದಿ ವದಂತಿ ಎನ್ನಲಾಯಿತು. ಆ ಬಳಿಕ ಸೌರವ್ ಮತ್ತು ನಗ್ಮಾ ಸಂಬಂಧ ಮುರಿದುಬಿತ್ತು ಎನ್ನಲಾಗಿದೆ.  2003ರಲ್ಲಿ ಇಬ್ಬರು ಬೇರ್ಪಟ್ಟರು ಎಂದು ವರದಿಯಾಗಿತ್ತು.
icon

(9 / 13)

ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ 2009ರಲ್ಲಿ ದಿ ಟೆಲಿಗ್ರಾಫ್ ಜೊತೆಗಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದ ನಟಿ ನಗ್ಮಾ, ತಮ್ಮಿಬ್ಬರ ಮೇಲೆ ಕೇಳಿ ಬಂದ ಆರೋಪಗಳಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದರು.
icon

(10 / 13)

ತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯರಾದ ಇಬ್ಬರು ಭೇಟಿಯಾದಾಗ ಇಂತಹ ರೂಮರ್ಸ್ ಹುಟ್ಟಿಕೊಳ್ಳುವುದು ಸಹಜ. ಯಾವಾಗಲೂ ಸ್ನೇಹಿತರು ಸ್ನೇಹಿತರಾಗಿಯೇ ಇರುತ್ತಾರೆ. ನನ್ನ ಪ್ರಕಾರ ಸಂಬಂಧ ನಿಜವಾಗಿದ್ದರೆ, ಅದು ಮುರಿಯುವುದಿಲ್ಲ ಎನ್ನುವ ಮೂಲಕ ಗಂಗೂಲಿ ಜೊತೆಗಿನ ಸಂಬಂಧದ ಕುರಿತು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದರು.
icon

(11 / 13)

ನಗ್ಮಾ ಜೊತೆಗಿನ ಸಂಬಂಧದ ಬಗ್ಗೆ ಎಂದಿಗೂ ಗಂಗೂಲಿ ಬಹಿರಂಗವಾಗಿ ಮಾತಾಡಿಲ್ಲ. 2020ರಲ್ಲಿ ಗಂಗೂಲಿ ಜನ್ಮದಿನದಂದು ನಗ್ಮಾ ಟ್ವಿಟರ್​ನಲ್ಲಿ ಶುಭ ಹಾರೈಸಿದ್ದರು. ಬಳಿಕ ನೆಟಿಜನ್​ಗಳು ಇಬ್ಬರ ಸಂಬಂಧದ ಬಗ್ಗೆ ಮತ್ತೆ ಪ್ರತಿಕ್ರಿಯಿಸಿ ಗದ್ದಲ ಎಬ್ಬಿಸಿದ್ದರು. ಇದೀಗ ಅದೇ ವಿಷಯ ಮುನ್ನಲೆಗೆ ಬಂದಿದೆ.
icon

(12 / 13)

1997ರ ಫೆಬ್ರವರಿ 21ರಂದು ಬಾಲ್ಯ ಸ್ನೇಹಿತೆ ಡೋನಾ ಅವರನ್ನು ಸೌರವ್​ ಗಂಗೂಲಿ ಪ್ರೀತಿಸಿ ಮದುವೆಯಾಗಿದ್ದರು. ಅದರಲ್ಲೂ ಮನೆಯವರ ವಿರೋಧದ ನಡುವೆಯೂ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 
icon

(13 / 13)

ಇತರ ಗ್ಯಾಲರಿಗಳು