ಕಷ್ಟಗಳಿಂದ ಪಾರಾಗಲು ಹಾಸನಾಂಬೆ ದೇವಿಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ
ಹಾಸನದ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆದಿದೆ. ಅಕ್ಟೋಬರ್ 24 ರಿಂದ ನವೆಂಬರ್ 3 ರವರೆಗೆ ದೇವಾಲಯದ ಬಾಗಿಲು ಭಕ್ತರಿಗೆ ತೆಗೆದಿರುತ್ತದೆ. ದೀಪಾವಳಿ ಹಬ್ಬದ ಬಲಿಪಾಡ್ಯಮಿ ಮಾರನೇ ದಿನ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಕೂಡಾ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ದೇವಸ್ಥಾನದಲ್ಲಿ ತಮ್ಮ ಬೆಂಬಲಿಗರೊಂದಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಖಡ್ಗಮಾಲಾ ಸ್ತೋತ್ರದ ಮೂಲಕ ಸಿಎಂ ಅರ್ಚನೆ ಮಾಡಿಸಿದ್ದಾರೆ. ಖಡ್ಗಮಾಲಾ ಸ್ತೋತ್ರವು ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಮಂತ್ರವಾಗಿದೆ. ಖಡ್ಗಮಾಲಾ ಸ್ತೋತ್ರದ ಅರ್ಚನೆ ಮಾಡಿಸಿದರೆ ಅತೀಂದ್ರಿಯ ಆಯುಧಗಳ ರಕ್ಷಣಾತ್ಮಕ ಮಾಲೆ ಸಿಗುತ್ತದೆ ಎಂಬ ನಂಬಿಕೆ ಇದೆ. ಸಿಎಂ ಸಿದ್ದರಾಮಯ್ಯ ಈಗ ಮುಡಾ ಹಗರಣದ ತನಿಖೆ ಎದುರಿಸುತ್ತಿದ್ದು ಈ ಸಮಸ್ಯೆಯಿಂದ ಹೊರ ಬರಲು ಈ ಅರ್ಚನೆ ಮಾಡಿಸಿದ್ದಾರೆ ಎನ್ನಲಾಗಿದೆ.