12 ಗಂಟೆ ಕೊಲ್ಕತ್ತಾ ಬಂದ್‌ಗೆ ಬಿಜೆಪಿ ಕರೆ; ಹೆಲ್ಮೆಟ್ ಧರಿಸಿ ಡ್ಯೂಟಿಗೆ ಹಾಜರಾದ ಸರ್ಕಾರಿ ಬಸ್ ಚಾಲಕರು
- ಮೆಡಿಕಲ್ ಕಾಲೇಜಿನ ಘಟನೆ ಖಂಡಿಸಿ ಇಂದು ಬಿಜೆಪಿ 12 ಗಂಟೆಗಳ ಕಾಲ ಕೊಲ್ಕತ್ತಾ ಬಂದ್‌ಗೆ ಕರೆ ನೀಡಿದೆ. ಆದರೆ ಬಿಜೆಪಿ ಬಂದ್‌ಗೆ ಠಕ್ಕರ್ ನೀಡಿರುವ ಪಶ್ಚಿಮ ಬಂಗಾಳ ಸರ್ಕಾರ ಎಂದಿನಂತೆ ಕರ್ತವ್ಯ ನಿರ್ವಹಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಬಸ್ ಚಾಲಕರು ಹೆಲ್ಮೆಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.