logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಸರಾ ವಿಶೇಷ: ನವರಾತ್ರಿಯಲ್ಲೇ ಆಯುಧ ಪೂಜೆ ಯಾಕೆ ಮಾಡುತ್ತಾರೆ? ಮಹತ್ವ ಮತ್ತು ಪೂಜಾ ವಿಧಾನವನ್ನು ತಿಳಿಯಿರಿ

ದಸರಾ ವಿಶೇಷ: ನವರಾತ್ರಿಯಲ್ಲೇ ಆಯುಧ ಪೂಜೆ ಯಾಕೆ ಮಾಡುತ್ತಾರೆ? ಮಹತ್ವ ಮತ್ತು ಪೂಜಾ ವಿಧಾನವನ್ನು ತಿಳಿಯಿರಿ

Raghavendra M Y HT Kannada

Sep 20, 2024 10:01 AM IST

google News

ಮೈಸೂರಿನ ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆಯಲ್ಲಿ ಭಾಗವಹಿಸಿರುವುದು. ಫೋಟೋ (ಸಂಗ್ರಹ)

    • ದಸರಾ ಹಬ್ಬಕ್ಕೆ ಎಲ್ಲೆಡೆ ಸಿದ್ಧತೆಗಳು ನಡೆಯುತ್ತಿವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಜ ಪಡೆಯಿಂದ ಅಂಬಾರಿ ಹೊರುವ ತಾಲೀಮು ಕೂಡ ಆರಂಭವಾಗಿದೆ. ಇದರ ನಡುವೆ ನವರಾತ್ರಿಯಲ್ಲಿ ಆಯುಧ ಪೂಜೆ ಯಾಕೆ ಮಾಡುತ್ತಾರೆ. ಇದರ ಮಹತ್ವ ಹಾಗೂ ಪೂಜಾ ಮಾಡುವ ವಿಧಾನದ ಬಗ್ಗೆ ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ಬರೆದಿದ್ದಾರೆ.
ಮೈಸೂರಿನ ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆಯಲ್ಲಿ ಭಾಗವಹಿಸಿರುವುದು. ಫೋಟೋ (ಸಂಗ್ರಹ)
ಮೈಸೂರಿನ ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆಯಲ್ಲಿ ಭಾಗವಹಿಸಿರುವುದು. ಫೋಟೋ (ಸಂಗ್ರಹ)

ನಾಡಹಬ್ಬ ದಸರಾಗೆ ದಿನ ಗಣನೆ ಆರಂಭವಾಗಿದ್ದು, ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಅದರಲ್ಲೂ ವಿಶ್ವವಿಖ್ಯಾತ ಮೈಸೂರು ದಸರಾ ಪ್ರತಿ ವರ್ಷ ದೇಶದ ಗಮನ ಸೆಳೆಯುತ್ತೆ. ಇಲ್ಲಿನ ಅಂಬಾರಿ ಉತ್ಸವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ನೂರಾರು ಮಂದಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ನವರಾತ್ರಿ ಹಾಗೂ ವಿಜಯದಶಮಿಗಾಗಿ ಮೈಸೂರು ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುತ್ತೆ. ನವರಾತ್ರಿಯಲ್ಲಿ ಆಯುಧ ಪೂಜೆಯನ್ನು ಯಾಕೆ ಮಾಡುತ್ತಾರೆ, ಇದರ ಮಹತ್ವವೇನು? ಪೂಜಾ ವಿಧಿ ವಿಧಾನಗಳು ಹೇಗಿರುತ್ತವೆ ಎಂಬುದನ್ನು ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24 ಜನವರಿ 2025ಕ್ಕೆ ಸೂರ್ಯ ಬುಧ ಸಂಯೋಜನೆ; ಬುಧಾದಿತ್ಯ ರಾಜಯೋಗದಿಂದ 3 ರಾಶಿಯವರ ಜೀವನ, ಪಾವನ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ನವರಾತ್ರಿ ಹಬ್ಬದಲ್ಲಿ ಆಯುಧಪೂಜೆ ಒಂದು ಪ್ರಮುಖ ಆಚರಣೆಯಾಗಿದೆ. ಇದು ದಸರಾ (ವಿಜಯದಶಮಿ) ದಿನದಂದು ನಡೆಯುತ್ತದೆ. ಇದನ್ನು "ಆಯುಧ ಪೂಜೆ" ಅಂತಲೂ ಕರೆಯಲಾಗುತ್ತದೆ. ಈ ಪೂಜಾ ಉತ್ಸವದ ಸಮಯದಲ್ಲಿ, ಭಕ್ತರು ತಮ್ಮ ಆಯುಧಗಳು, ಯಂತ್ರಗಳು, ವಾಹನಗಳು ಮತ್ತು ಕೆಲಸದ ಸಾಧನಗಳಿಗೆ ಪವಿತ್ರ ಪೂಜೆಯನ್ನು ಸಲ್ಲಿಸುತ್ತಾರೆ. ಆದರೆ ಆಯುಧ ಪೂಜೆಯ ವಿಧಾನ ಇಲ್ಲಿದೆ.

1. ಪೂಜಾ ಕೊಠಡಿ ಹೇಗಿರಬೇಕು: ಆಯುಧ ಪೂಜೆ ಮಾಡಲು ಮೊದಲು ಸ್ವಚ್ಛವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ಮತ್ತು ಅರಿಶಿನ, ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಿ.

2. ಶಸ್ತ್ರಾಸ್ತ್ರಗಳನ್ನು ಶುಚಿಗೊಳಿಸಿ: ನೀವು ಪೂಜೆ ಮಾಡಲು ಉದ್ದೇಶಿಸಿರುವ ಆಯುಧಗಳು, ಯಂತ್ರೋಪಕರಣಗಳು ಹಾಗೂ ಉಪಕರಣಗಳನ್ನು ಸ್ವಚ್ಛವಾಗಿ ತೊಳೆದು ಪ್ರತ್ಯೇಕವಾಗಿ ಇಡಿ. ಇವು ನಿಮ್ಮ ದೈನಂದಿನ ಕೆಲಸದಲ್ಲಿ ಬಳಸುವ ಉಪಕರಣಗಳು, ವಾಹನಗಳು, ಪುಸ್ತಕಗಳು ಅಥವಾ ಇತರ ಪ್ರಮುಖ ವಸ್ತುಗಳು ಆಗಿರಬಹುದು.

3. ಪೂಜಾ ವಿಧಾನಗಳು

ದೀಪ: ಪೂಜೆಯನ್ನು ಪ್ರಾರಂಭಿಸುವ ಮೊದಲು, ಪಾತ್ರೆಗಳನ್ನು ಸ್ವಚ್ಛಗೊಳಿಸಿ ಮತ್ತು ಅದರ ಸುತ್ತಲೂ ದೀಪವನ್ನು ಬೆಳಗಿಸಿ.

ಅರ್ಪಣೆ: ಆಯುಧಗಳನ್ನು ಪೂಜಿಸಿ ಮತ್ತು ಹಣ್ಣುಗಳು ಮತ್ತು ಪಂಚಾಮೃತಗಳೊಂದಿಗೆ ಅರ್ಪಿಸಿ

ಎಲೆ: ಪೂಜೆಯ ಇತರ ಎಲ್ಲಾ ವಸ್ತುಗಳನ್ನು ಇಟ್ಟಿರಬೇಕು, ಪೂಜಾ ವೇದಿಕೆಯನ್ನು ಅಲಂಕರಿಸಬೇಕು. ಪವಿತ್ರ ನೀರಿನಿಂದ ಆಯುಧಗಳನ್ನು ತೊಳೆಯಬೇಕು.

ಹೂವುಗಳು: ಆಯುಧಗಳಿಗೆ ಹೂವಿನ ಮಾಲೆ ಮಾಡಿ ಹಾಕಿ ಅವುಗಳಿಗೆ ನೈವೇದ್ಯಗಳನ್ನು ಅರ್ಪಿಸಬೇಕು.

ಮಂತ್ರಗಳು: ಪವಿತ್ರ ಮಂತ್ರಗಳು, ಸ್ತೋತ್ರಗಳನ್ನು ಪಠಿಸಿ. ಉದಾಹರಣೆಗೆ, "ಓಂ ಶ್ರೀ ವಿಷ್ಣುವೇ ನಮಃ" ಎಂದು ಪಠಿಸಬಹುದು.

4. ವೈಭೋಗ: ಪೂಜೆಯ ನಂತರ ವಿಶೇಷ ವೈಭೋಗವನ್ನು ಮಾಡಬೇಕು. ಇದರಿಂದ ಶಾಂತಿ, ಸಂತೋಷ ಹಾಗೂ ಮಾಡುವ ಪ್ರತಿ ಕೆಲಸಕ್ಕೂ ಶಕ್ತಿ ಹೆಚ್ಚಾಗುತ್ತೆ.

ಆಯುಧ ಪೂಜೆಯ ಮಹತ್ವ

ಪುರಾಣಗಳ ಪ್ರಕಾರ, ಆಯುಧ ಪೂಜೆಯ ಅಭ್ಯಾಸವು ಹಿಂದೂ ಧರ್ಮದ ಅನೇಕ ಅಂಶಗಳಲ್ಲಿ ಕೇಂದ್ರವಾಗಿದೆ. ಇದು ವಿಜಯದಶಮಿ (ದಸರಾ) ದಿನದಂದು ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ದಶಮಹಾವಿದ್ಯಾ ದೇವತೆಗಳನ್ನು ಪೂಜಿಸುವುದರಿಂದ ಮತ್ತು ಆಯುಧಗಳನ್ನು ಮಂಗಳಕರವಾಗಿ ಪೂಜಿಸುವುದರಿಂದ ಶಕ್ತಿ, ಧೈರ್ಯ ಮತ್ತು ಯಶಸ್ಸು ಪ್ರಾಪ್ತಿಯಾಗುತ್ತದೆ.

ವಿಜಯದಶಮಿಯಂದು ಶ್ರೀರಾಮಚಂದ್ರನು ರಾವಣನನ್ನು ಸೋಲಿಸಿ ಧರ್ಮವನ್ನು ಸ್ಥಾಪಿಸಿದನು. ಆದ್ದರಿಂದ ಆಯುಧಗಳನ್ನು ಪೂಜಿಸುವ ಮತ್ತು ಅವುಗಳ ಸಾಧನೆಗಳನ್ನು ಅರಿತುಕೊಳ್ಳುವ ಉದ್ದೇಶ ಇದಾಗಿರುತ್ತೆ.

ಪೂಜೆಯ ದಿನ ಏನೆಲ್ಲಾ ಮಾಡಬೇಕು

1. ಪೂಜೆಯ ದಿನ ಆಯುಧಗಳನ್ನು ಸ್ವಚ್ಛಗೊಳಿಸುವ ಮೂಲಕ ಅವುಗಳ ಪ್ರಾಮುಖ್ಯವನ್ನು ತಿಳಿಸುವುದು

2. ಪೂಜೆಯ ಸಮಯದಲ್ಲಿ ಧೂಪ ಮತ್ತು ದೀಪವನ್ನು ಬೆಳಗಿಸುವುದರಿಂದ, ಪೂಜೆಯ ಸ್ಥಳವು ಪವಿತ್ರತೆಯಿಂದ ತುಂಬಿರುತ್ತದೆ. ಇದರಿಂದ ದೇವತೆಗಳ ಅನುಗ್ರಹವನ್ನು ಪಡೆಯಬಹುದು.

3. ಪೂಜೆಯ ದಿನದಂದು ಉಪವಾಸ ಮಾಡುವುದು ಅಥವಾ ಶುದ್ಧೀಕರಣ ಪ್ರಕ್ರಿಯೆಯಲ್ಲಿ ತೊಡಗುವುದು ಸಹ ಒಳ್ಳೆಯದು.

4. ಆಯುಧ ಪೂಜೆಯ ನಂತರ ಭಕ್ತರು ತಮ್ಮ ಕಾರ್ಯಗಳಲ್ಲಿ ಯಶಸ್ಸನ್ನು ನಿರೀಕ್ಷಿಸುವ ವಿಶೇಷ ಸಂಕಲ್ಪವನ್ನು ಮಾಡಬೇಕು.

ಆಯುಧ ಪೂಜೆಯ ದಿನ ಚಾಮುಂಡಿ, ಲಕ್ಷ್ಮಿ, ಸರಸ್ವತಿ, ಪಾರ್ವತಿ ಹಾಗೂ ಶಕ್ತಿ ದೇವತೆಗಳಿಗೆ ವಿಶೇಷ ಪೂಜಿಸಲಾಗುತ್ತದೆ. ಜೀವನದಲ್ಲಿನ ಪ್ರತಿ ಹಂತದಲ್ಲೂ ಗೆಲುವು ಸಿಗಲೆಂದು ಪ್ರಾರ್ಥಿಸಲಾಗುತ್ತದೆ.

ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ -94949 81000
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ