logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪರಿಶುದ್ಧ ಭಕ್ತರು ಭಗವಂತನ ಗುಣಗಳ ಬಗ್ಗೆ ಹೇಳುವುದರಲ್ಲಿ ನಿರತರಾಗಿರುತ್ತಾರೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಪರಿಶುದ್ಧ ಭಕ್ತರು ಭಗವಂತನ ಗುಣಗಳ ಬಗ್ಗೆ ಹೇಳುವುದರಲ್ಲಿ ನಿರತರಾಗಿರುತ್ತಾರೆ; ಗೀತೆಯ ಸಾರಾಂಶ ಹೀಗಿದೆ

Raghavendra M Y HT Kannada

May 30, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

    • Bhagavad Gita Updesh: ಪರಿಶುದ್ಧ ಭಕ್ತರು ಭಗವಂತನ ಗುಣಗಳ ಬಗ್ಗೆ ಹೇಳುವುದರಲ್ಲಿ ನಿರತರಾಗಿರುತ್ತಾರೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 9ನೇ ಶ್ಲೋಕದಲ್ಲಿ ತಿಳಿಯಿರಿ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

10ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 9

ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯನ್ತಃ ಪರಸ್ಪರಮ್ |

ಕಥಯಂತಶ್ಚ ಮಾಂ ನಿತ್ಯಂ ತ್ಯುಷ್ಯನ್ತಿ ಚ ರಮನ್ತಿ ಚ ||9||

ಅನುವಾದ: ನನ್ನ ಪರಿಶುದ್ಧ ಭಕ್ತರ ಯೋಚನೆಗಳು ನನ್ನಲ್ಲಿ ನೆಲೆಸಿರುತ್ತವೆ. ಅವರ ಬದುಕುಗಳು ಸಂಪೂರ್ಣವಾಗಿ ನನಗೆ ಅರ್ಪಿತವಾಗುತ್ತವೆ ಮತ್ತು ಪರಸ್ಪರವಾಗಿ ನನ್ನ ವಿಷಯವನ್ನು ತಿಳಿಸಿಕೊಡುತ್ತ ನನ್ನ ಬಗೆಗೆ ಮಾತನಾಡುತ್ತ ಅವರು ಬಹುತೃಪ್ತಿಯನ್ನೂಆನಂದವನ್ನೂ ಪಡೆಯುತ್ತಾರೆ.

ತಾಜಾ ಫೋಟೊಗಳು

2025 ಮೇ ತಿಂಗಳಲ್ಲಿ ಸಿಂಹ ರಾಶಿಗೆ ಕೇತು ಸಂಚಾರ; ಧನಸ್ಸು ಸೇರಿ 3 ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆ

Dec 22, 2024 05:50 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನ ಪ್ರಮುಖ ಸವಾಲುಗಳು ಇಲ್ಲದೆ ಮುಂದುವರಿಯುತ್ತೆ, ಸಾಮಾನ್ಯಕ್ಕಿಂತ ಖರ್ಚು ಹೆಚ್ಚಿರಲಿದೆ

Dec 22, 2024 03:49 PM

2025ರ ಹೊಸ ವರ್ಷದ ಮೊದಲ ವಾರದಿಂದಲೇ ಈ ರಾಶಿಯವರಿಗೆ ಬಂಪರ್; ಧನ ಯೋಗ, ಇತರರಿಂದ ಬೆಂಬಲ ಸೇರಿ ಹಲವು ಪ್ರಯೋಜನ

Dec 22, 2024 08:14 AM

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಭಾವಾರ್ಥ: ಇಲ್ಲಿ ಪರಿಶುದ್ಧ ಲಕ್ಷಣಗಳನ್ನು ಹೇಳಿದೆ. ಇಂತಹವರು ಪರಮ ಪ್ರಭುವಿನ ಪ್ರೇಮಪೂರ್ವಕ ದಿವ್ಯಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಅವರ ಮನಸ್ಸುಗಳನ್ನು ಕೃಷ್ಣನ ಪಾದಕಮಲಗಳಿಂದ ವಿಚಲಿತಗೊಳಿಸಲು ಸಾಧ್ಯವಿಲ್ಲ. ಅವರ ಮಾತು ಅಧ್ಯಾತ್ಮಿಕ ವಸ್ತುಗಳನ್ನೇ ಕುರಿತದ್ದಾಗಿರುತ್ತದೆ. ಈ ಶ್ಲೋಕದಲ್ಲಿ ಪರಿಶುದ್ಧ ಭಕ್ತರ ಲಕ್ಷಣಗಳನ್ನು ಖಚಿತವಾಗಿ ಹೇಳಿದೆ. ಪರಮ ಪ್ರಭುವಿನ ಭಕ್ತರು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಪರಮ ಪ್ರಭುವಿನ ಗುಣಗಳ ಮತ್ತು ಲೀಲೆಗಳ ಮಹಿಮೆಯನ್ನು ಹೇಳುವುದರಲ್ಲಿಯೇ ನಿರತರಾಗಿರುತ್ತಾರೆ. ಅವರ ಹೃದಯಗಳೂ ಆತ್ಮಗಳೂ ಸದಾ ಕೃಷ್ಣನಲ್ಲಿಲ ಮುಳುಗಿರುತ್ತವೆ, ಮತ್ತು ಇತರ ಭಕ್ತರೊಡನೆ ಅವನ ವಿಷಯವನ್ನು ಚರ್ಚಿಸುವುದೇ ಅವರಿಗೊಂದು ಸಂತೋಷ (Bhagavad Gita Updesh in Kannada).

ಭಕ್ತಿಸೇವೆಯ ಮೊದಲನೆಯ ಹಂತದಲ್ಲಿ ಅವರು ಸೇವೆಯಿಂದಲೇ ದಿವ್ಯ ಆನಂದವನ್ನು ಅನುಭವಿಸುತ್ತಾರೆ. ಪಕ್ವವಾದ ಹಂತದಲ್ಲಿ ಅವರು ವಾಸ್ತವವಾಗಿ ಭಗವಂತನ ಪ್ರೇಮದಲ್ಲಿ ನೆಲೆಸಿರುತ್ತಾರೆ. ಆ ದಿವ್ಯಸ್ಥಿತಿಯಲ್ಲಿ ಒಮ್ಮೆ ನೆಲೆಸಿದ ಮೇಲೆ ಅವರು ಪ್ರಭುವು ತನ್ನ ನಿವಾಸದಲ್ಲಿ ಮೆರೆಯುವ ಅತ್ಯುನ್ನತ ಪರಿಪೂರ್ಣತೆಯನ್ನು ಸವಿಯಬಹುದು. ಅಧ್ಯಾತ್ಮಿಕ ಭಕ್ತಿಪೂರ್ವಕ ಸೇವೆಯನ್ನು ಚೈತನ್ಯ ಮಹಾಪ್ರಭುಗಳು ಜೀವಿಯ ಹೃದಯದಲ್ಲಿ ಒಂದು ಬೀಜವನ್ನು ಬಿತ್ತುವುದಕ್ಕೆ ಹೋಲಿಸುತ್ತಾರೆ. ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಅಸಂಖ್ಯಾತ ಜೀವಿಗಳು ಪ್ರಯಾಣ ಮಾಡುತ್ತಿರುತ್ತಾರೆ. ಅವರಲ್ಲಿ ಕೆಲವರಿಗೆ ಪರಿಶುದ್ಧ ಭಕ್ತನನ್ನು ಕಂಡು ಭಕ್ತಿಸೇವೆಯನ್ನು ಅರ್ಥಮಾಡಿಕೊಳ್ಳುವ ಸುಯೋಗ ಲಭ್ಯವಾಗುತ್ತದೆ. ಈ ಭಕ್ತಿಸೇವೆಯು ಒಂದು ಬೀಜದಂತೆ.

ಒಂದು ಮರದ ಬೀಜಕ್ಕೆ ತಪ್ಪದೆ ನೀರೆರೆದರೆ ಅದು ಫಲಿಸುತ್ತದೆ. ಹಾಗೆಯೇ ಜೀವಿಯೊಬ್ಬನ ಹೃದಯದಲ್ಲಿ ಇದನ್ನು ಬಿತ್ತಿದರೆ, ಅವನು ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಎಂದು ಜಪ ಮಾಡುತ್ತಿದ್ದರೆ, ಬೀಜವು ಫಲಿಸುತ್ತದೆ. ಭಕ್ತಿಸೇವೆಯ ದಿವ್ಯತರುವು ಬೆಳೆಯುತ್ತಲೇ ಹೋಗುತ್ತದೆ. ಭೌತಿಕ ಜಗತ್ತಿನ ಆವರಣವನ್ನು ಭೇದಿಸಿಕೊಂಡು ಹೋಗಿ ಅಧ್ಯಾತ್ಮಿಕ ಆಕಾಶದ ಬ್ರಹ್ಮಜ್ಯೋತಿಯ ಪ್ರಭೆಯನ್ನು ಪ್ರವೇಶಿಸುವವರೆಗೆ ಅದು ಬೆಳೆಯುತ್ತದೆ. ಅಧ್ಯಾತ್ಮಿಕ ಜಗತ್ತಿನಲ್ಲಿ ಸಹ ಆ ಗಿಡವು ಅತ್ಯುನ್ನತ ಲೋಕವನ್ನು ಮುಟ್ಟುವವರೆಗೆ ಬೆಳೆಯುತ್ತದೆ. ಆ ಲೋಕವು ಕೃಷ್ಣನ ಪರಮ ಲೋಕ. ಅದಕ್ಕೆ ಗೋಲೋಕ ವೃಂದಾವನ ಎಂದು ಹೆಸರು. ಕಡೆಗೆ ಗಿಡವು ಕೃಷ್ಣನ ಪಾದಾರವಿಂದಗಳಲ್ಲಿ ಆಶ್ರಯವನ್ನು ಪಡೆದು ಅಲ್ಲಿ ವಿಶ್ರಮಿಸುತ್ತದೆ.

ಕ್ರಮೇಣ ಗಿಡದಲ್ಲಿ ಹೂ ಹಣ್ಣುಗಳು ಬಿಡುವಂತೆ, ಭಕ್ತಿಸೇವೆಯು ಸಹ ಫಲಗಳನ್ನು ನೀಡುತ್ತವೆ. ಕೀರ್ತನೆ - ಶ್ರವಣಗಳ ರೂಪದಲ್ಲಿ ನೀರರೆಯುವ ಪ್ರಕ್ರಿಯೆಯು ಮುಂದುವರಿಯುತ್ತದೆ. ಭಕ್ತಿಸೇವೆಯ ಈ ಗಿಡವನ್ನು ಚೈತನ್ಯ ಚರಿತಾಮೃತದಲ್ಲಿ (ಮಧ್ಯಲೀಲಾ, 19ನೆಯ ಅಧ್ಯಾಯ) ಸಂಪೂರ್ಣವಾಗಿ ವರ್ಣಿಸಿದೆ. ಸಂಪೂರ್ಣ ಗಿಡವು ಪರಮ ಪ್ರಭುವಿನ ಚರಣಕಮಲಗಳಲ್ಲಿ ಆಶ್ರಯ ಪಡೆದಾಗ ಮನುಷ್ಯನು ಪೂರ್ಣವಾಗಿ ಭಗವತ್ಪ್ರೇಮದಲ್ಲಿ ತನ್ಮಯನಾಗುತ್ತಾನೆ. ಆಗ ಹೇಗೆ ಮೀನು ನೀರನ್ನು ಬಿಟ್ಟು ಇರಲಾರದೋ ಹಾಗೆ ಪರಮ ಪ್ರಭುವಿನೊಡನೆ ಸಂಪರ್ಕವಿಲ್ಲದೆ ಅವನು ಒಂದು ಕ್ಷಣವೂ ಇರಲಾರ ಎಂದು ಆ ಕೃತಿಯಲ್ಲಿ ವಿವರಿಸಿದೆ. ಇಂತಹ ಸ್ಥಿತಿಯಲ್ಲಿ ಪರಮ ಪ್ರಭವಿನೊಡನೆ ಸಂಪರ್ಕಪಡೆದು ಭಕ್ತನು ದಿವ್ಯ ಗುಣಗಳನ್ನು ಹೊಂದುತ್ತಾನೆ.

ಪರಮ ಪ್ರಭು ಮತ್ತು ಆತನ ಭಕ್ತರ ಸಂಬಂಧದ ಇಂತಹ ವೃತ್ತಾಂತಗಳಿಂದ ಶ್ರೀಮದ್ಭಾಗವತವು ತುಂಬಿಹೋಗಿದೆ. ಆದುದರರಿಂದ ಭಾಗವತದಲ್ಲಿಯೇ ಹೇಲಿದಂತೆ (12.13.18) ಶ್ರೀಮದ್ಭಾಗವತವು ಭಕ್ತರಿಗೆ ತುಂಬ ಪ್ರಿಯವಾಗಿದೆ. ಶ್ರೀಮದ್ಭಾಗವತಂ ಪುರಾಣಮ್ ಅಮಲಂ ಯದ್ ವೈಷ್ಣವಾನಾಂ ಪ್ರಿಯಮ್. ಈ ವೃತ್ತಾಂದಲ್ಲಿ ಭೌತಿಕ ಚಟುವಟಿಕೆಗಳು, ಆರ್ಥಿಕ ಅಭಿವೃದ್ಧಿ, ಇಂದ್ರಿಯತೃಪ್ತಿ ಅಥವಾ ಮುಕ್ತಿಯನ್ನು ಕುರಿತು ಏನೂ ಇಲ್ಲ. ಪರಮ ಪ್ರಭುವಿನ ಮತ್ತು ಅವನ ಭಕ್ತರ ಅಧ್ಯಾತ್ಮಿಕ ಸ್ವಭಾವವನ್ನು ಸಂಪೂರ್ಣವಾಗಿ ವರ್ಣಿಸುವ ಒಂದೇ ಒಂದು ವೃತ್ತಾಂತ ಶ್ರೀಮದ್ಭಾಗವತ. ತರುಣ ತರುಣಿಯರು ಪರಸ್ಪರ ಸಹವಾಸದಲ್ಲಿ ಸಂತೋಷಪಡುವಂತೆ ಕೃಷ್ಣಪ್ರಜ್ಞೆಯಲ್ಲಿರುವ ಸಾಕ್ಷಾತ್ಕಾರ ಪಡೆದ ಚೇತನರು ಇಂತಹ ಅಧ್ಯಾತ್ಮಿಕ ಸಾಹಿತ್ಯಗಳಲ್ಲಿ ಕೇಳುವುದರಲ್ಲಿ ಸದಾ ಸಂತೋಷಪಡುತ್ತಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ