logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Onam 2024: ಓಣಂ ಸಡಗರಕ್ಕೆ ಸಿದ್ಧತೆ ಆರಂಭ; ಈ ಹಬ್ಬದ ದಿನಾಂಕ, ಆಚರಣೆಯ ಮಹತ್ವ, ಹಿನ್ನೆಲೆ ತಿಳಿಯಿರಿ

Onam 2024: ಓಣಂ ಸಡಗರಕ್ಕೆ ಸಿದ್ಧತೆ ಆರಂಭ; ಈ ಹಬ್ಬದ ದಿನಾಂಕ, ಆಚರಣೆಯ ಮಹತ್ವ, ಹಿನ್ನೆಲೆ ತಿಳಿಯಿರಿ

Reshma HT Kannada

Sep 10, 2024 03:11 PM IST

google News

ಓಣಂ 2024

    • Onam 2024: ಕೇರಳದಲ್ಲಿ ಆಚರಿಸುವ ಪ್ರಮುಖ ಹಬ್ಬ ಓಣಂ. ಕರ್ನಾಟಕದಲ್ಲೂ ಬಹುತೇಕ ಕಡೆ ಕೇರಳಿಗರು ಇರುವ ಕಾರಣ ಈ ಹಬ್ಬ ಇಲ್ಲೂ ಬಲು ಜೋರು. ಸುಗ್ಗಿ ಹಬ್ಬ ಎಂದೂ ಇದನ್ನು ಕರೆಯುತ್ತಾರೆ. 10 ದಿನಗಳ ಕಾಲ ನಡೆಯುವ ಈ ಹಬ್ಬದ ಸಮಯದಲ್ಲಿ ಬಲಿ ಚಕ್ರವರ್ತಿಯು ಪಾತಾಳದಿಂದ ಭೂಮಿಗೆ ಬಂದು ಜನರಿಗೆ ಆಶೀರ್ವಾದ ನೀಡುತ್ತಾನೆ ಎಂಬ ನಂಬಿಕೆ ಇದೆ. ಈ ವರ್ಷ ಓಣಂ ಯಾವಾಗ ಎಂಬ ವಿವರ ಇಲ್ಲಿದೆ
ಓಣಂ 2024
ಓಣಂ 2024 (PC: Canva)

Onam 2024: ಕೇರಳದಲ್ಲಿ ಆಚರಿಸುವ ಸುಗ್ಗಿ ಓಣಂ. ಹಿಂದೂಗಳಲ್ಲಿ ಈ ಹಬ್ಬಕ್ಕೆ ಬಹಳ ಪ್ರಾಮುಖ್ಯವಿದೆ. ಭಾವೈಕ್ಯತೆಯನ್ನು ಸಾರುವ ಹಬ್ಬ ಎಂದು ಕೂಡ ಇದನ್ನು ಕರೆಯಲಾಗುತ್ತದೆ. 10 ದಿನಗಳ ಕಾಲ ನಡೆಯುವ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಇರುವ ಕೇರಳಿಗರು ಓಣಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಓಣಂ ಹಬ್ಬದ ಕೊನೆಯ ದಿನವನ್ನು ತಿರುಓಣಂ ಎಂದು ಕರೆಯಲಾಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಈ ಹಬ್ಬದಂದು ಬಲಿ ಚಕ್ರವರ್ತಿಯು ಭೂಮಿಗೆ ಬಂದು ಜನರನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆ. ಮಲಯಾಳಂ ಪಂಚಾಂಗದ ಪ್ರಕಾರ ಓಣಂ ಹಬ್ಬವನ್ನು ಚಿಂಗಂ ಮಾಸದ ತಿರುವೋಣಂ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ. ಓಣಂ ಹಬ್ಬದಲ್ಲಿ ಪೂಕಳಂ (ಹೂವಿನ ರಂಗೋಲಿ), ಸದ್ಯ (ವಿವಿಧ ಭಕ್ಷ್ಯಗಳ ಊಟ) ಈ ಎಲ್ಲವೂ ವಿಶೇಷ. ಮಾನವರು ಮತ್ತು ದೈವಶಕ್ತಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ ಎಂದೂ ಇದನ್ನು ಕರೆಯಲಾಗುತ್ತದೆ.

ಈ ವರ್ಷ ಓಣಂ ಯಾವಾಗ, ಈ ಹಬ್ಬದ ಹಿನ್ನೆಲೆ ಏನು, ಆಚರಣೆಯ ಮಹತ್ವವೇನು ಎಂಬಿತ್ಯಾದಿ ವಿವರ ಇಲ್ಲಿದೆ.

2024ರಲ್ಲಿ ಓಣಂ ಯಾವಾಗ?

ಓಣಂ ಸೆಪ್ಟೆಂಬರ್ 6 ರಿಂದ ಆರಂಭವಾಗಿ ಸೆಪ್ಟೆಂಬರ್ 15ರವರೆಗೆ ಇರುತ್ತದೆ.

ಓಣಂ ಹಬ್ಬಕ್ಕೆ ಸಂಬಂಧಿಸಿದ ಆಚರಣೆಗಳು

ಕೇರಳದ ಸುಗ್ಗಿಯ ಹಬ್ಬವಾದ ಓಣಂ ಸಮೃದ್ಧಿ, ಏಕತೆ ಮತ್ತು ಭಕ್ತಿಯ ಆಚರಣೆಯಾಗಿದೆ. ಓಣಂಗೆ ಸಂಬಂಧಿಸಿದ ಆಚರಣೆಗಳು ಸಂಪ್ರದಾಯ ಮತ್ತು ಸಂಕೇತಗಳಲ್ಲಿ ಮುಳುಗಿದ್ದು, ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಮನೆಗಳು, ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳ ಪ್ರವೇಶದ್ವಾರಗಳಲ್ಲಿ ಹೂವಿನ ರಂಗೋಲಿ ಬಿಡಿಸುವ ಮೂಲಕ ಬಲಿರಾಜನನ್ನು ಸ್ವಾಗತಿಸಲಾಗುತ್ತದೆ. ಈ ಹೂವಿನ ರಂಗೋಲಿಯನ್ನು ಪೂಕಳಂ ಎಂದು ಕರೆಯಲಾಗುತ್ತದೆ.

ಓಣಂ ಹಬ್ಬದ ಮತ್ತೊಂದು ಪ್ರಮುಖ ಆಚರಣೆ ಎಂದರೆ ಸದ್ಯ. ಈ ಹಬ್ಬದಂದು ಬಾಳೆ ಎಲೆಯ ಮೇಲೆ ಹಲವಾರು ಭ್ಯಕ್ಷ್ಯಗಳನ್ನು ತಯಾರಿಸಿ ಬಡಿಸಲಾಗುತ್ತದೆ. ಸದ್ಯ ಅನ್ನ, ಕೋಸಂಬರಿ, ಬಗೆ ಬಗೆ ಪಲ್ಯಗಳು, ಸಿಹಿ ತಿನಿಸುಗಳು ಮತ್ತು ಉಪ್ಪಿನಕಾಯಿ ಸೇರಿದಂತೆ 26 ಭಕ್ಷ್ಯಗಳನ್ನು ಒಳಗೊಂಡಿರುತ್ತದೆ ಸದ್ಯ. ಇದು ಸಮೃದ್ಧಿಯ ಸಂಕೇತವಾಗಿದೆ. ಸದ್ಯ ಊಟ ಬಡಿಸಲು ನಿರ್ದಿಷ್ಟ ಕ್ರಮವಿದೆ. ಪ್ರತಿ ಭಕ್ಷ್ಯವನ್ನು ಎಲೆಯ ಮೇಲೆ ನಿರ್ದಿಷ್ಟ ಸ್ಥಾನದಲ್ಲಿ ಇರಿಸಲಾಗುತ್ತದೆ, ಇದು ಸಾಮರಸ್ಯ ಮತ್ತು ಸಮತೋಲನವನ್ನು ಪ್ರತಿಬಿಂಬಿಸುತ್ತದೆ. ಇದು ಕುಟುಂಬದವರು ಮತ್ತು ಸ್ನೇಹಿತರು ಒಟ್ಟಿಗೆ ಸೇರಲು, ಕಥೆಗಳು ಮತ್ತು ನಗುವನ್ನು ಹಂಚಿಕೊಳ್ಳಲು ಮತ್ತು ಬಂಧಗಳನ್ನು ಬಲಪಡಿಸಲು ಉತ್ತಮ ಸಮಯವಾಗಿದೆ.

ಓಣಂ ಆಚರಣೆಯು ಸಾಂಪ್ರದಾಯಿಕ ನೃತ್ಯಗಳು, ಸಂಗೀತ ಮತ್ತು ಆಟಗಳನ್ನು ಒಳಗೊಂಡಿರುತ್ತವೆ. ಇದು ಹಬ್ಬದ ಖುಷಿಯನ್ನು ಹೆಚ್ಚಿಸುತ್ತದೆ. ಮಹಿಳೆಯರು ಪ್ರದರ್ಶಿಸುವ ಸಾಂಪ್ರದಾಯಿಕ ನೃತ್ಯವಾದ ತಿರುವಾತೀರ ಕಲಿ ಆಚರಣೆಯ ಪ್ರಮುಖ ಅಂಶವಾಗಿದೆ, ಇದು ಕೆಟ್ಟದ್ದರ ವಿರುದ್ಧ ಒಳ್ಳೆಯದ ವಿಜಯವನ್ನು ಸಂಕೇತಿಸುತ್ತದೆ. ಪುಲಿಕಲಿ, ಪುರುಷರು ಪ್ರದರ್ಶಿಸುವ ಹುಲಿ ನೃತ್ಯವು ಮತ್ತೊಂದು ಜನಪ್ರಿಯ ಆಚರಣೆಯಾಗಿದೆ, ಇದು ಜನರ ಶೌರ್ಯ ಮತ್ತು ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಒಣಂ ಇತಿಹಾಸ

ಮೊದಲೇ ಹೇಳಿದಂತೆ ಓಣಂ ಬಲಿ ಚಕ್ರವರ್ತಿಗೆ ಸಂಬಂಧಿಸಿದ ಹಬ್ಬ. ಪುರಾತನ ಕಾಲದಲ್ಲಿ ಮಹಾಬಲಿಯು ಭೂಲೋಕವನ್ನು ಆಳುತ್ತಿದ್ದ. ಆತ ಅಸುರರ ವಂಶಕ್ಕೆ ಸೇರಿದ್ದರೂ ತನ್ನ ಜನರ ಮೇಲೆ ಬಹಳ ಪ್ರೀತಿ, ದಯೆ ಹೊಂದಿದ್ದ. ಅವನ ಕಾಲದಲ್ಲಿ ಭೂಲೋಕ ಸುಭಿಕ್ಷವಾಗಿತ್ತು. ಭೂಲೋಕದಲ್ಲಿ ರಾಜ್ಯ ಆಳುತ್ತಿದ್ದ ಬಲಿ ಚಕ್ರವರ್ತಿಯು ತನ್ನ ಪರಾಕ್ರಮದಿಂದ ಮೂರು ಲೋಕವನ್ನ ವಶಕ್ಕೆ ಪಡೆಯುತ್ತಾನೆ. ಇದರಿಂದ ಇಂದ್ರನಿಗೆ ತನಗೆ ದೇವಲೋಕ ನಿಯಂತ್ರಣ ತಪ್ಪುತ್ತದೆ ಎಂದೆನಿಸಿ ವಿಷ್ಣುವಿನ ಸಹಾಯ ಕೇಳುತ್ತಾನೆ. ಆಗ ವಿಷ್ಣು ಇಂದ್ರನಿಗೆ ಸಹಾಯ ಮಾಡಲು ಒಪ್ಪುತ್ತಾನೆ. ಆಗ ವಿಷ್ಣು ಕುಬ್ಜ ವ್ಯಕ್ತಿಯ ಅವತಾರ ತಾಳಿ ಬಲಿರಾಜನ ಬಳಿಗೆ ಹೋಗಿ ತನ್ನ ಪಾದದಷ್ಟು ಜಾಗದ ಮಾಲಿಕತ್ವ ಕೇಳುತ್ತಾನೆ. ಅದಕ್ಕೆ ಬಲಿ ಒಪ್ಪುತ್ತಾನೆ. ಆಗ ಬಲಿ ಚಕ್ರವರ್ತಿ ವಶಪಡಿಸಿಕೊಂಡ ಸಂಪೂರ್ಣ ಜಾಗದಷ್ಟು ವಿಷ್ಣುವಿನ ಪಾದ ಬೆಳೆಯುತ್ತಾ ಹೋಗುತ್ತದೆ. ಎರಡೂ ಹೆಜ್ಜೆ ಸಂಪೂರ್ಣ ಆವರಿಸಿದಾಗ ಮೂರನೇ ಹೆಜ್ಜೆ ಎಲ್ಲಿ ಇಡುವುದು ಎಂದು ವಿಷ್ಣು ಕೇಳಿದಾಗ ಬಲಿ ಚಕ್ರವರ್ತಿ ವಿಧೇಯನಾಗಿ ತನ್ನ ತಲೆ ಪಾದವನ್ನು ಇಡುವಂತೆ ಕೇಳುತ್ತಾನೆ. ಇದರಿಂದ ಅವನು ನೇರವಾಗಿ ಪಾತಾಳಕ್ಕೆ ಹೋಗುತ್ತಾನೆ. ಆದರೆ ಬಲಿ ಚಕ್ರವರ್ತಿಗೆ ನಿಷ್ಠೆಗೆ ಮೆಚ್ಚಿದ ಮಹಾವಿಷ್ಣು ಅವನಿಗೆ ವರ್ಷಕ್ಕೊಮ್ಮೆ ಭೂಮಿಗೆ ಬರುವ ಅವಕಾಶ ನೀಡುತ್ತಾನೆ. ಹೀಗೆ ಕೇರಳಿಗರು ಬಲಿ ಚಕ್ರವರ್ತಿ ಭೂಮಿಗೆ ಬರುವ ದಿನವನ್ನು ಓಣಂ ಎಂದು ಆಚರಿಸುತ್ತಾರೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ