logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜನಾಕರ್ಷಕ ಸ್ವಭಾವ, ನಾಯಕತ್ವ ಗುಣ, ತುಟಿಯ ಬಣ್ಣದ ಮೂಲಕವೇ ತಿಳಿಯಬಹುದು ವ್ಯಕ್ತಿತ್ವ; ನಿಮ್ಮ ತುಟಿ ಬಣ್ಣ ಹೇಗಿದೆ ಗಮನಿಸಿ

ಜನಾಕರ್ಷಕ ಸ್ವಭಾವ, ನಾಯಕತ್ವ ಗುಣ, ತುಟಿಯ ಬಣ್ಣದ ಮೂಲಕವೇ ತಿಳಿಯಬಹುದು ವ್ಯಕ್ತಿತ್ವ; ನಿಮ್ಮ ತುಟಿ ಬಣ್ಣ ಹೇಗಿದೆ ಗಮನಿಸಿ

Reshma HT Kannada

Sep 22, 2024 05:08 PM IST

google News

ತುಟಿಯ ಬಣ್ಣದ ಮೂಲಕ ತಿಳಿಯಬಹುದು ವ್ಯಕ್ತಿತ್ವ

    • ಮನುಷ್ಯನ ದೇಹದ ವಿವಿಧ ಭಾಗಗಳು ವ್ಯಕ್ತಿತ್ವವನ್ನು ತಿಳಿಸುತ್ತವೆ. ಕಣ್ಣು, ಕಿವಿ, ಮೂಗು ಹೀಗೆ ದೇಹದ ಅಂಗಾಂಗಗಳ ಆಕಾರದ ಮೇಲೆ ನಿಮ್ಮ ಗುಣ, ಸ್ವಭಾವ ಹೇಗೆ ಎಂದು ಹೇಳಬಹುದು. ಇಂದು ತುಟಿಯ ಬಣ್ಣ ಹೇಗಿದ್ದರೆ ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಯಿರಿ. (ಬರಹ: ಎಚ್‌. ಸತೀಶ್‌, ಜ್ಯೋತಿಷಿ)
ತುಟಿಯ ಬಣ್ಣದ ಮೂಲಕ ತಿಳಿಯಬಹುದು ವ್ಯಕ್ತಿತ್ವ
ತುಟಿಯ ಬಣ್ಣದ ಮೂಲಕ ತಿಳಿಯಬಹುದು ವ್ಯಕ್ತಿತ್ವ (PC: Canva)

ಮನುಷ್ಯನ ವ್ಯಕ್ತಿತ್ವ ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿರುತ್ತದೆ. ನಾವು ಹೇಗಿರುತ್ತೇವೋ ಹಾಗೆ ಇನ್ನೊಬ್ಬರು ಇರಬೇಕು ಎಂದುಕೊಳ್ಳಲು ಆಗುವುದಿಲ್ಲ. ನಮ್ಮ ವ್ಯಕ್ತಿತ್ವವನ್ನು ದೇಹದ ಅಂಗಾಂಗಗಳ ಮೂಲಕವೂ ತಿಳಿದುಕೊಳ್ಳಬಹುದು. ಕಣ್ಣಿನ ಬಣ್ಣ, ಮೂಗಿನ ಆಕಾರ, ಕಿವಿ ಆಕಾರ, ಕೂದಲಿನ ಬಣ್ಣ ಇವುಗಳ ಮೂಲಕ ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಯಬಹುದು. ಹಾಗಾದರೆ ತುಟಿಯ ಬಣ್ಣದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗೆ ತಿಳಿಯಿರಿ. ನಿಮ್ಮ ತುಟಿಯ ಬಣ್ಣ ಕೆಂಪಗಿದ್ದರೆ ಹೇಗೆ, ಕಿತ್ತಳೆ ಬಣ್ಣದ ತುಟಿ ನಿಮ್ಮದಾಗಿದ್ದರೆ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿಯಿರಿ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24 ಜನವರಿ 2025ಕ್ಕೆ ಸೂರ್ಯ ಬುಧ ಸಂಯೋಜನೆ; ಬುಧಾದಿತ್ಯ ರಾಜಯೋಗದಿಂದ 3 ರಾಶಿಯವರ ಜೀವನ, ಪಾವನ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ತುಟಿ ನೈಸರ್ಗಿಕ ಕೆಂಪು ಬಣ್ಣ ಹೊಂದಿರುವವರ ವ್ಯಕ್ತಿತ್ವ 

ಕೆಲವರ ತುಟಿಗಳು ಬಣ್ಣ ಹಚ್ಚಿದಂತೆ ಕೆಂಪಾಗಿರುತ್ತದೆ. ಈ ರೀತಿ ನೈಸರ್ಗಿಕ ಕೆಂಪು ತುಟಿ ಹೊಂದಿರುವವರಲ್ಲಿ ವಿಶೇಷವಾದಂತಹ ಜನಾಕರ್ಷಕ ಇರುತ್ತದೆ. ಇವರು ಜೀವನದಲ್ಲಿ ಎದುರಾಗುವ ಯಾವುದೇ ಅಡೆತಡೆಗಳು ಮತ್ತು ಸವಾಲುಗಳನ್ನು ಎದುರಿಸಿ ಮುಂದೆ ಸಾಗುತ್ತಾರೆ. ಜೀವನದಲ್ಲಿ ಮಹತ್ವದ ಸಾಧನೆಯನ್ನು ಮಾಡುವ ಗುರಿ ಇವಗಿರುತ್ತದೆ. ಚಿಕ್ಕ ವಯಸ್ಸಿನಿಂದಲೇ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಆರಂಭಿಸಿದ ಕೆಲಸ ಕಾರ್ಯಗಳು ಕಷ್ಟವೆನಿಸಿದಾಗ ಉಪಾಯದಿಂದ ತಮ್ಮ ಗುರಿಯನ್ನು ತಲುಪುತ್ತಾರೆ. ಹಣಕಾಸಿನ ವಿಚಾರದಲ್ಲಿ ಮತ್ತು ಕುಟುಂಬದ ವಿಚಾರದಲ್ಲಿ ಆತಂಕದ ಮನೋಭಾವನೆ ಕಂಡುಬರುತ್ತದೆ.

ಸತತ ಪ್ರಯತ್ನದಿಂದ ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಸದಾಕಾಲ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಾರೆ. ಎಲ್ಲರಿಗೂ ಆದರ್ಶಪ್ರಾಯರಾಗಿ ಜೀವನ ನಡೆಸುತ್ತಾರೆ. ಇವರ ಮನಸ್ಸಿಗೆ ಒಪ್ಪುವಂತಹ ವ್ಯಕ್ತಿಯು ಇವರ ಜೊತೆ ವಿವಾಹವಾಗುತ್ತದೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯವಿರುತ್ತದೆ. ಭಾವನಜೀವಿಗಳು. ಸಣ್ಣಪುಟ್ಟ ವಿಚಾರಕ್ಕೂ ಬೇಗ ಕೋಪ ಮಾಡಿಕೊಳ್ಳುತ್ತಾರೆ. ಉದ್ಯೋಗದಲ್ಲಿ ತೊಂದರೆ ಆದಲ್ಲಿ ಸಹನೆ ಕಳೆದುಕೊಳ್ಳುತ್ತಾರೆ. ಸದಾಕಾಲ ಉತ್ಸಾಹದಿಂದ ಇರುತ್ತಾರೆ. 

ವಿದ್ಯಾರ್ಥಿಗಳು ಯಾವುದಾದರೂ ಒಂದು ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಎಲ್ಲರ ಮನೆ ಸೆಳೆಯುವಂತೆ ಕೆಲಸವನ್ನು ನಿರ್ವಹಿಸುತ್ತಾರೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಬದಲಾಯಿಸುವುದಿಲ್ಲ. ಕಷ್ಟನಷ್ಟದ ವೇಳೆಯಲ್ಲಿ ಧೈರ್ಯದಿಂದ ಮುನ್ನುಗ್ಗುತ್ತಾರೆ. ಇವರಲ್ಲಿ ಕ್ರೀಡಾಮನೋಭಾವನೆ ಇದ್ದು ಸೋಲಿಗೆ ಬೆದರುವುದಿಲ್ಲ. ಚಿಕ್ಕವಯಸ್ಸಿನಲ್ಲಿ ಸಮಾಜದ ಪ್ರತಿಷ್ಠಿತ ಸ್ಥಾನಮಾನವನ್ನು ಗಳಿಸುತ್ತಾರೆ. 

ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ಮನಸ್ಸಿಟ್ಟು ಸಮರ್ಪಣಾ ಭಾವನೆಯಿಂದ ಮಾಡುತ್ತಾರೆ. ಆತುರದಿಂದ ಕರ್ತವ್ಯವನ್ನು ಬೇಗನೆ ಪೂರೈಸಲು ಪ್ರಯತ್ನಿಸುತ್ತಾರೆ. ಅತಿಯಾದ ಸ್ವಾಭಿಮಾನವಿರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ಆಕರ್ಷಕವಾದಂತಹ ವಸ್ತುಗಳನ್ನು ಇಷ್ಟಪಡುತ್ತಾರೆ. ಪ್ರವಾಸ ಮಾಡುವುದೆಂದರೆ ಇವರಿಗೆ ಅತಿ ಪ್ರೀತಿ. ಸ್ವಂತ ಮನೆ ಮತ್ತು ಭೂಮಿ ಕೊಳ್ಳುವ ಯೋಗವಿರುತ್ತದೆ. ವ್ಯಾಪಾರದಲ್ಲಿ ಮಧ್ಯಮ ಗತಿಯ ಲಾಭವಿರುತ್ತದೆ. ವಿರೋಧಿಗಳು ಇವರ ಎದುರು ಮೌನವಹಿಸುತ್ತಾರೆ. ಇವರಿಗೆ ವಿಶೇಷವಾದ ತಾಂತ್ರಿಕ ಜ್ಞಾನವಿರುತ್ತದೆ.

ಸೇಬಿನ ಬಣ್ಣದ ತುಟಿ ಹೊಂದಿರುವವರ ವ್ಯಕ್ತಿತ್ವ 

ಕೆಲವರ ತುಟಿಯ ಬಣ್ಣವು ಕಿತ್ತಳೆ ಅಥವಾ ಸೇಬಿನ ಬಣ್ಣದಂತೆ ಕಾಣುತ್ತದೆ.ಇವರಿಗೆ ಕಷ್ಟ ನಷ್ಟದಲ್ಲಿ ಇರುವವರ ಬಗ್ಗೆ ಕರುಣೆ ಇರುತ್ತದೆ. ಯಾರೊಂದಿಗೂ ದ್ವೇಷ ಸಾಧಿಸದೆ ಸ್ನೇಹ ಮನೋಭಾವನೆಯಿಂದ ವರ್ತಿಸುತ್ತಾರೆ. ಸಮಾರಂಭಗಳಿಂದ ದೂರವಿರುತ್ತಾರೆ. ಏಕಾಂಗಿತನ ಎಂದರೆ ಇವರಿಗೆ ಬಲು ಇಷ್ಟ. ಮನದಲ್ಲಿರ ಇರುವ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಗ್ರಹಣ ಶಕ್ತಿ ಇರುತ್ತದೆ. ಯಾವುದೇ ಸಂದರ್ಭ ಎದುರಾದರೂ ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ. 

ಹಣದ ವ್ಯವಹಾರದಲ್ಲಿ ವಿಶೇಷವಾದ ಜ್ಞಾನ ಇವರಿಗಿರುತ್ತದೆ. ಯಾವುದೇ ವಚ್ಚಳಕ್ಕೆ ಒಳಗಾಗದೆ ಒಮ್ಮೆ ತೆಗೆದುಕೊಂಡ ತೀರ್ಮಾನಗಳಿಗೆ ಬದ್ಧರಾಗುತ್ತಾರೆ. ಶಾಂತಿ ಸಂಯಮದಿಂದ ವರ್ತಿಸಿ ಜನಮನ ಗೆಲ್ಲುತ್ತಾರೆ. ಪ್ರಭಾವಿ ವ್ಯಕ್ತಿಗಳಾಗಿ ಹತ್ತಾರು ಜನಕ್ಕೆ ಸಹಾಯ ಮಾಡುತ್ತಾರೆ. ತಮ್ಮ ಗೌರವಕ್ಕೆ ಪೆಟ್ಟು ನೀಡುವ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಉಪಕಾರ ಮಾಡುವಲ್ಲಿ ಮೊದಲಿಗರು. ಬೇರೆಯವರಿಗೆ ಆದರ್ಶ ಜೀವಿಯಾಗಿ ಬಾಳುತ್ತಾರೆ. ಮಿತಿಮೀರಿದ ಕೆಲಸವಿದ್ದರೂ ಇವರಿಗೆ ಬೇಸರ ಮೂಡುವುದಿಲ್ಲ. ಚಿಕ್ಕ ವಯಸ್ಸಿನಿಂದಲೇ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಸಾಮಾಜಿಕ ಜೀವನದಲ್ಲಿ ಉನ್ನತ ಕೀರ್ತಿ ಪ್ರತಿಷ್ಠೆ ಗಳಿಸುತ್ತಾರೆ. 

ಉತ್ತಮ ಭವಿಷ್ಯದ ಗುರಿಯಿಂದ ಜಾಗರೂಕತೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕೋಪ ಬೇಗನೆ ಬಂದರೂ ಶಾಂತವಾಗುತ್ತಾರೆ. ತನ್ನನ್ನು ನಂಬಿದ ಜನರ ಒಳಿತಿಗಾಗಿ ಯಾವುದೇ ತ್ಯಾಗ ಮಾಡಲು ಸಿದ್ದರಾಗುತ್ತಾರೆ. ಸ್ವತಂತ್ರ ಜೀವನ ನಡೆಸಲು ಬಯಸುತ್ತಾರೆ. ಸೋದರ ಮಾವನೊಂದಿಗೆ ವೀರಸವಿರುತ್ತದೆ. ಬುದ್ಧಿವಂತಿಕೆಯಿಂದ ವಿರೋಧಿಗಳ ಸ್ನೇಹವನ್ನು ಮಾಡುತ್ತಾರೆ. ಇವರಿಗೆ ಆತ್ಮೀಯರೊಬ್ಬರಿಂದ ತೊಂದರೆ ಉಂಟಾಗುತ್ತದೆ. ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಉತ್ತಮ ಆರೋಗ್ಯವಿರುತ್ತದೆ. ಹೊಗಳಿಕೆಗೆ ಮರುಳಾಗಿ ಸುಲಭವಾಗಿ ಬೇರೆಯವರಿಂದ ಮೋಸ ಹೋಗುತ್ತಾರೆ. ಅನಗತ್ಯ ಖರ್ಚು ವೆಚ್ಚಗಳು ಬೇಸರ ಮೂಡಿಸುತ್ತದೆ. ಬೇರೆಯವರಿಗೆ ಕಷ್ಟಕ್ಕೆ ಸ್ಪಂದಿಸಿ ನೀಡಿದ ಹಣವು ಮರಳಿಬಾರದು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ