logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನವರಾತ್ರಿಯ ಎರಡನೇ ದಿನ: ದೇವಿ ಬ್ರಹ್ಮಚಾರಿಣಿ ಪೂಜಿಸುವ ಸರಳ ವಿಧಾನ, ಜ್ಞಾನಕ್ಕಾಗಿ ಪಠಿಸಬೇಕಾದ ಮಂತ್ರಗಳಿವು

ನವರಾತ್ರಿಯ ಎರಡನೇ ದಿನ: ದೇವಿ ಬ್ರಹ್ಮಚಾರಿಣಿ ಪೂಜಿಸುವ ಸರಳ ವಿಧಾನ, ಜ್ಞಾನಕ್ಕಾಗಿ ಪಠಿಸಬೇಕಾದ ಮಂತ್ರಗಳಿವು

Raghavendra M Y HT Kannada

Oct 04, 2024 08:57 AM IST

google News

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ವಿಧಾನವನ್ನು ತಿಳಿಯಿರಿ

    • ಶರನ್ನವರಾತ್ರಿ 2024: ಶರನ್ನವರಾತ್ರಿಯ ಎರಡನೇ ದಿನದಂದು ದುರ್ಗಾ ದೇವಿಯ ಬ್ರಹ್ಮಚಾರಿಣಿ ರೂಪಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದರೊಂದಿಗೆ, ಬ್ರಹ್ಮಚಾರಿಣಿ ದೇವಿ ತನ್ನ ಭಕ್ತರಿಗೆ ಜ್ಞಾನ, ಬುದ್ಧಿವಂತಿಕೆ ಮತ್ತು ವಿವೇಚನೆಯ ವರವನ್ನು ನೀಡುತ್ತಾಳೆ ಎಂದು ನಂಬಲಾಗಿದೆ. ಪೂಜೆಯ ವಿಧಾನವನ್ನು ತಿಳಿಯಿರಿ.
ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ವಿಧಾನವನ್ನು ತಿಳಿಯಿರಿ
ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ವಿಧಾನವನ್ನು ತಿಳಿಯಿರಿ

ಶರನ್ನವರಾತ್ರಿ 2024: ಇಂದು (ಅಕ್ಟೋಬರ್ 4, ಶುಕ್ರವಾರ) ಶರನ್ನವರಾತ್ರಿಯ ಎರಡನೇ ದಿನ. ಈ ದಿನ ನವದುರ್ಗೆಯ ಬ್ರಹ್ಮಚಾರಿಣಿ ರೂಪವನ್ನು ಪೂಜಿಸಲಾಗುತ್ತದೆ. ಜ್ಞಾನ, ತಪಸ್ಸು ದೇವತೆಯಾದ ಬ್ರಹ್ಮಚಾರಿಣಿ ತನ್ನ ಕಠಿಣ ತಪಸ್ಸಿನಿಂದಾಗಿ ಮತ್ತು ಬ್ರಹ್ಮದಲ್ಲಿ ಲೀನಳಾಗಿರುವುದರಿಂದ ಬ್ರಹ್ಮಚಾರಿಣಿ ಎಂದು ಕರೆಯಲಾಗಿದೆ. ಬ್ರಹ್ಮಚಾರಿಣಿ ಮಾತೆಯನ್ನು ಪೂಜಿಸುವ ಮೂಲಕ, ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಪಡೆಯಲಾಗುತ್ತದೆ ಎಂದು ನಂಬಲಾಗಿದೆ. ಮನಸ್ಸು ಶಾಂತವಾಗಿರುತ್ತದೆ, ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ. ಬ್ರಹ್ಮಚಾರಿಣಿ ಮಾತೆಯನ್ನು ಪೂಜಿಸಿದರೆ ಇಂದ್ರಿಯಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ನವರಾತ್ರಿಯ ಎರಡನೇ ದಿನ (ಅಕ್ಟೋಬರ್ 4, ಶುಕ್ರವಾರ), ಬ್ರಹ್ಮಚಾರಿಣಿ ದೇವಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸಲಾಗುತ್ತದೆ, ಮಂತ್ರಗಳನ್ನು ಪಠಿಸಲಾಗುತ್ತದೆ ಹಾಗೂ ದೇವಿಯ ಪ್ರೀತಿಪಾತ್ರ ವಸ್ತುಗಳನ್ನು ಅರ್ಪಿಸಿ ತಾಯಿಯನ್ನು ಮೆಚ್ಚಿಸಲಾಗುತ್ತದೆ. ದೇವಿ ಪೂಜೆಯಿಂದ ಸಂತೃಪ್ತಿಯಾಗಿ ತನ್ನ ಭಕ್ತರಿಗೆ ಸಂಪತ್ತು, ಸಂತೋಷ ಹಾಗೂ ಸಮೃದ್ಧಿಯನ್ನು ಆಶೀರ್ವದಿಸುತ್ತಾಳೆ. ಬ್ರಹ್ಮಚಾರಿಣಿ ಮಾತೆಯ ಸರಳ ಪೂಜಾ ವಿಧಾನ, ಪೂಜಾ ಸಾಮಗ್ರಿಗಳ ಪಟ್ಟಿ ಹಾಗೂ ಬ್ರಹ್ಮಚಾರಿಣಿ ಸ್ತೋತ್ರವನ್ನು ತಿಳಿದುಕೊಳ್ಳೋಣ.

ತಾಜಾ ಫೋಟೊಗಳು

2025ರ ಹೊಸ ವರ್ಷದ ಮೊದಲ ವಾರದಿಂದಲೇ ಈ ರಾಶಿಯವರಿಗೆ ಬಂಪರ್; ಧನ ಯೋಗ, ಇತರರಿಂದ ಬೆಂಬಲ ಸೇರಿ ಹಲವು ಪ್ರಯೋಜನ

Dec 22, 2024 08:14 AM

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

ಪೂಜಾ ಸಾಮಗ್ರಿಗಳ ಪಟ್ಟಿ: ನವದುರ್ಗಾ ವಿಗ್ರಹ, ಕೆಂಪು ಅಥವಾ ಹಳದಿ ಬಟ್ಟೆ, ಅಗರಬತ್ತಿ, ದೀಪ, ತುಪ್ಪ ಅಥವಾ ಎಣ್ಣೆ, ಬಿಳಿ ಅಥವಾ ಹಳದಿ ಹೂವುಗಳು, ಸಿಹಿ ತಿಂಡಿಗಳು, ಅಕ್ಷತೆ ಕಾಳು, ಶ್ರೀಗಂಧ, ನೀರು ತುಂಬಿದ ಪಾತ್ರೆ, ತೆಂಗಿನಕಾಯಿ, ಪೂಜಾ ಥಾಲಿ ಸೇರಿದಂತೆ ಎಲ್ಲಾ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳಿ. ಆ ನಂತರ ಪೂಜೆಗೆ ಸಿದ್ಧರಾಗಿ.

ಬ್ರಹ್ಮಚಾರಿಣಿಯ ಸರಳ ಪೂಜಾ ವಿಧಿ:

  • ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದೇಳಿ. ಸ್ನಾನದ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
  • ನವದುರ್ಗೆಯರನ್ನು ಧ್ಯಾನಿಸಿ ಮತ್ತು ಭಗವತಿ ದೇವಿಯನ್ನು ಪಂಚಾಮೃತದಿಂದ ಸ್ನಾನ ಮಾಡಿ.
  • ಹಣ್ಣುಗಳು, ಬಿಳಿ ಹೂವುಗಳು, ಧೂಪದ್ರವ್ಯ ದೀಪಗಳು ಹಾಗೂ ನೈವೇದ್ಯವನ್ನು ತಾಯಿಗೆ ಅರ್ಪಿಸಿ.

ಇದನ್ನೂ ಓದಿ: ಭಾರತದಲ್ಲಷ್ಟೇ ಅಲ್ಲ ಈ 5 ದೇಶಗಳಲ್ಲೂ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸ್ತಾರೆ, ದುರ್ಗಾ ಪೂಜೆ ಮಾಡ್ತಾರೆ ಜನ

  • ಇದರ ನಂತರ, ತಾಯಿಗೆ ಸಕ್ಕರೆಯನ್ನು ಅರ್ಪಿಸಿ.
  • ತುಪ್ಪದಲ್ಲಿ ಕರ್ಪೂರವನ್ನು ಬೆರೆಸಿ ದೇವಿಗೆ ಆರತಿಯನ್ನು ಮಾಡಿ.
  • ಸರಳ ಶ್ಲೋಕಗಳು ಮತ್ತು ಸ್ತೋತ್ರಗಳನ್ನು ಪಠಿಸಿ.
  • ಇದರ ನಂತರ, ಮನೆಯ ಸದಸ್ಯರಿಗೆ ಪ್ರಸಾದವನ್ನು ವಿತರಿಸಿ

ಇದನ್ನೂ ಓದಿ: ನವರಾತ್ರಿಯ ಮೊದಲ ದಿನ ಯಾವಾಗ? ದಿನಾಂಕ, ಕಳಶ ಸ್ಥಾಪನೆಗೆ ಶುಭ ಮುಹೂರ್ತ, ಪೂಜೆ ವಿಧಾನ ತಿಳಿಯಿರಿ

ಬ್ರಹ್ಮಚಾರಿಣಿ ಸ್ತೋತ್ರ: ಬ್ರಹ್ಮಚಾರಿಣಿ ಮಾತೆಯ ಪೂಜೆಯ ಸಮಯದಲ್ಲಿ ಸ್ತೋತ್ರವನ್ನು ಪಠಿಸುವುದು ಶುಭವೆಂದು ಪರಿಗಣಿಸಲಾಗಿದೆ. ಬ್ರಹ್ಮಚಾರಿಣಿ ದೇವಿಯ ಸ್ತೋತ್ರವನ್ನು ಪಠಿಸಬೇಕು. ಹೀಗೆ ಮಾಡಿದರೆ ದೇವಿ ಎಲ್ಲಾ ರೀತಿಯ ತೊಂದರೆಗಳನ್ನು ತೊಡೆದುಹಾಕಿ ಮನಸ್ಸಿಗೆ ಶಾಂತಿ, ಜ್ಞಾನವನ್ನು ನೀಡುತ್ತಾಳೆ ಎಂದು ನಂಬಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳಿಂದ ದೇವಿ ಹೆಚ್ಚಿನ ಅಶೀರ್ವಾದ ನೀಡುತ್ತಾಳೆ ಎಂಬುದು ಭಕ್ತರ ನಂಬಿಕೆಯಾಗಿದೆ.

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಪೂಜೆ ವೇಳೆ ಪಠಿಸಬೇಕಾದ ಮಂತ್ರಗಳು

ತಪಶ್ಚಾರಿಣಿ ತ್ವಂಹೀ ತಪತ್ರಾಯ ನಿವಾರಾನಿಮ್
ಬ್ರಹ್ಮರುಪಧಾರ ಬ್ರಹ್ಮಚಾರಿಣಿ ಪ್ರಾಣಾಯಾಮ|

ಶಂಕರಪ್ರಿಯ ವೀ ಭುಕ್ತಿ-ಮುಕ್ತಿ ದಾಯಿನಿ
ಶಾಂತಿದಾ ಜ್ಞಾನದಾ ಬ್ರಹ್ಮಚಾರಿಣೀ ಪ್ರಣಮಾಮ್ಯಹಂ|

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ