Vastu Tips: ಯಾವ ದಿಕ್ಕಿಗೆ ತಲೆ ಹಾಕಿ ಮಲಗುವುದು ಒಳ್ಳೆಯದು..? ನಿದ್ರೆಗೂ ಇದೆ ವಾಸ್ತು ನಿಯಮ
Feb 05, 2024 06:00 PM IST
ನಿದ್ರೆಗೂ ಇದೆ ವಾಸ್ತು ನಿಯಮ
Vastu Tips: ಪ್ರತಿಯೊಬ್ಬರಿಗೂ ನಿದ್ರೆ ಅವಶ್ಯಕ. ಆದರೆ ವಾಸ್ತುಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ನಿದ್ರೆ ಮಾಡಬೇಕು ಅನ್ನೋದು ಬಹಳ ಅವಶ್ಯಕ. ವಾಸ್ತು ನಿಯಮದ ಪ್ರಕಾರ ಕೆಲವೊಂದು ದಿಕ್ಕುಗಳಲ್ಲಿ ತಲೆ ಹಾಕಿ ಮಲಗುವುದನ್ನು ನಿಷಿದ್ಧ ಎಂದು ಪರಿಗಣಿಸಲಾಗಿದೆ.
Vastu Tips: ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಎಂದರೆ ವಾಸ್ತುವಿನ ಕೃಪೆ ಕೂಡ ಇರಬೇಕು. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ತುಂಬಾನೇ ಮಹತ್ವವಿದ್ದು ವಾಸ್ತು ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿದರೆ ಅವರ ಬದುಕು ಸುಖ ಸಂತೋಷದಿಂದ ಕೂಡಿರುತ್ತದೆ. ನಾವು ನಮ್ಮ ದಿನನಿತ್ಯದ ಕೆಲಸಗಳನ್ನು ಮಾಡುವಾಗ ಯಾವ ದಿಕ್ಕಿನಲ್ಲಿ ಮುಖ ಮಾಡಿರುತ್ತೇವೆ ಎಂಬುದೂ ಸಹ ಬಹಳ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ . ವಾಸ್ತು ಶಾಸ್ತ್ರದ ಪ್ರಕಾರ ತಪ್ಪಾದ ದಿಕ್ಕಿನಲ್ಲಿ ತಲೆಮಾಡಿ ಮಲಗುವುದರಿಂದಲೂ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಹಾಗೂ ವ್ಯಕ್ತಿಯ ಜೀವನದ ಅವನತಿಗೆ ಕೂಡ ಕಾರಣವಾಗುತ್ತದೆ. ಹೀಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ತಲೆ ಮಲಗಿದರೆ ಒಳ್ಳೆಯದು..? ಎಂಬುದನ್ನು ತಿಳಿದುಕೊಳ್ಳೋಣ.
ತಾಜಾ ಫೋಟೊಗಳು
ಪೂರ್ವ ದಿಕ್ಕು
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದನ್ನು ಶುಭ ಎಂದು ಕರೆಯಲಾಗುತ್ತದೆ. ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ನೆನಪಿನ ಶಕ್ತಿ, ಏಕಾಗ್ರತೆ ಹಾಗೂ ದೇಹದ ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ವಿಶೇಷವಾಗಿ ವಿದ್ಯಾರ್ಥಿಗಳು ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ಲಾಭಕಾರಿ ಫಲ ಸಿಗಲಿದೆ ಎಂದು ವಾಸ್ತುಶಾಸ್ತ್ರ ಹೇಳು್ತ್ತದೆ. ಆದರೆ ಪೂರ್ವ ದಿಕ್ಕಿಗೆ ಕಾಲು ಹಾಕಿ ಮಲಗುವುದನ್ನು ಅಶುಭ ಎಂದು ನಂಬಲಾಗಿದೆ.
ಪಶ್ಚಿಮ ದಿಕ್ಕು
ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗುವುದು ಯೋಗ್ಯವಲ್ಲ ಎಂದು ಪರಿಗಣಿಸಲಾಗಿದೆ. ಪಶ್ಚಿಮ ದಿಕ್ಕಿನಲ್ಲಿ ತಲೆ ಹಾಕಿ ಮಲಗುವವರು ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ಆರೋಗ್ಯದಲ್ಲಿಯೂ ಪದೇ ಪದೇ ಏರುಪೇರು ಉಂಟಾಗುತ್ತಿರುತ್ತದೆ. ಅಲ್ಲದೇ ಯಾವ ದಂಪತಿ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗುತ್ತಿದ್ದಾರೋ ಅವರ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಿರುತ್ತವೆ ಎನ್ನಲಾಗಿದೆ.
ಉತ್ತರ ದಿಕ್ಕು
ವಾಸ್ತು ಶಾಸ್ತದ ಪ್ರಕಾರ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದನ್ನು ನಿಷಿದ್ಧ ಎಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಗಣೇಶನ ತಲೆಯನ್ನು ಶಿವ ಕತ್ತರಿಸಿದ್ದ ಕತೆ ನಿಮಗೆ ನೆನಪಿದ್ದಿರಬಹುದು. ಹಿಂದೂ ಸಂಸ್ಕೃತಿಯಲ್ಲಿ ಕೇವಲ ಮೃತ ಶರೀರದ ತಲೆಯನ್ನು ಮಾತ್ರ ಉತ್ತರ ದಿಕ್ಕಿಗೆ ಇಡಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣ ಕೂಡ ಇದೆ. ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದಾಗ ನಮ್ಮ ದೇಹದ ಉತ್ತರ ಧ್ರುವ ಹಾಗೂ ಭೂಮಿಯ ಉತ್ತರ ಧ್ರುವದ ನಡುವೆ ಸಂಘರ್ಷ ನಡೆಯಲಿದ್ದು ಇದರಿಂದ ಅನಾರೋಗ್ಯಗಳು ಉಂಟಾಗುತ್ತದೆ.