Entertainment News in Kannada Live October 15, 2024: ಕಳೆದುಕೊಂಡಲ್ಲೇ ಹುಡುಕಬೇಕು! ಡೀಪ್ ಫೇಕ್ ವಿರುದ್ಧ ಹೋರಾಟಕ್ಕೆ ರಾಯಭಾರಿಯಾದ ನಟಿ ರಶ್ಮಿಕಾ ಮಂದಣ್ಣ
Oct 15, 2024 10:46 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
- Rashmika Mandanna: ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ದಾಳಕ್ಕೆ ಬಲಿಯಾಗಿದ್ದರು. ಆದರೆ ಈಗ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ನಟಿ ರಶ್ಮಿಕಾ ಮಂದಣ್ಣ ಅವರನ್ನು 'ಸೈಬರ್ ಸುರಕ್ಷತೆಯನ್ನು ಉತ್ತೇಜಿಸುವ ರಾಷ್ಟ್ರೀಯ ರಾಯಭಾರಿ' ಎಂದು ಹೆಸರಿಸಿದೆ.
OTT Updates: ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್ ಸೇರಿದಂತೆ ಒಟಿಟಿಯಲ್ಲಿ ಈ ವಾರ ಒಟ್ಟು 25 ಸಿನಿಮಾಗಳು, ವೆಬ್ ಸಿರೀಸ್‌ಗಳು ಸ್ಟ್ರೀಮಿಂಗ್ ಆಗಲಿವೆ. ಅದರಲ್ಲಿ ಕನ್ನಡದ ಲಾಫಿಂಗ್ ಬುದ್ಧ ಕೂಡಾ ಒಂದು. ಹಾರರ್, ಕ್ರೈಂ ಸಿನಿಮಾ, ಬೋಲ್ಡ್ ವೆಬ್ ಸಿರೀಸ್ ಸೇರಿದಂತೆ ಒಟ್ಟು 25 ಕಂಟೆಂಟ್‌ಗಳಲ್ಲಿ 8 ಬಹಳ ವಿಶೇಷವಾಗಿದೆ.
- ಬೆಸ್ಟ್ ರೇಟಿಂಗ್ ಪಡೆದುಕೊಂಡಿರುವ ಥ್ರಿಲ್ಲರ್ ಮೂವಿ ನೋಡಬೇಕು ಎಂದು ನೀವು ಸರ್ಚ್ ಮಾಡ್ತಾ ಇದ್ದೀರಿ ಎಂದಾದರೆ ಲೆವೆಲ್ ಕ್ರಾಸ್ ಸಿನಿಮಾ ನೋಡಿ. ನಿಮ್ಮ ಮನೆಯಲ್ಲೇ ಕುಳಿತು ನೀವೀಗ ಈ ಸಿನಿಮಾ ನೋಡಬಹುದು. ಓಟಿಟಿ ಸ್ಟ್ರೀಮಿಂಗ್ ಈಗಾಗಲೇ ಆರಂಭವಾಗಿದೆ.
- ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹಾಗೂ ಚೈತ್ರಾ ಕುಂದಾಪುರ ನಡುವೆ ಜಗಳ ಆರಂಭವಾಗಿದೆ. ಚೈತ್ರಾ ಕುಂದಾಪುರ ಆಡಿದ ಮಾತುಗಳನ್ನು ಕೇಳಿ ಜಗದೀಶ್ ಸುಮ್ಮನೆ ನಿಂತಿದ್ದಾರೆ. ಮನೆಯ ಹೊರಗಿನ ವಿಚಾರಗಳು ಇಲ್ಲಿ ಬರಬಾರದು ಎಂದು ವಾರ್ನ್ ಮಾಡಿದ್ದಾರೆ.
- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ
- ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿರುವ "ದಿ ಟೀಚರ್" ಎಂಬ ಸಿನಿಮಾದ ಕುರಿತು ಬರಹಗಾರ ಅರುಣ್ ಜೋಳದಕೂಡ್ಲಿಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಭಿಪ್ರಾಯ ಗಮನ ಸೆಳೆಯುತ್ತಿದೆ. ಒಂದಷ್ಟು ವೈರುಧ್ಯಗಳ ಮಧ್ಯೆ ಸಿನಿಮ್ಯಾಟಿಕ್ ಮಿತಿಗಳ ಮಧ್ಯೆ ನೋಡಬೇಕಾದ ಸಿನೆಮಾ ದ ಟೀಚರ್ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
- ಆಸಿಫ್ ಅಲಿ ಮತ್ತು ಅಮಲಾ ಪೌಲ್ ನಟಿಸಿರುವ ಈ ಲೆವೆಲ್ ಕ್ರಾಸ್ ಸಿನಿಮಾವನ್ನು ನೀವು ಈಗ ಮನೆಯಲ್ಲೇ ಕೂತು ವೀಕ್ಷಿಸಬಹುದು. ಮಲಯಾಳಂನ ಹಿಟ್ ಥ್ರಿಲ್ಲರ್ ಚಲನಚಿತ್ರ ಈಗ 5 ಭಾಷೆಗಳಲ್ಲಿ ಲಭ್ಯವಿದೆ. ವೀಕ್ಷಣೆ ಎಲ್ಲಿ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.
ಭಾರತಿ ಮದುವೆ ಆದ ನಂತರ ಚೆನ್ನೈನಲ್ಲಿ ಸೆಟಲ್ ಆಗಿದ್ದ ವಿಷ್ಣುವರ್ಧನ್ ಅವರಿಗೆ ಒಂದು ಸಮಯದಲ್ಲಿ ಅವಕಾಶಗಳು ಕಡಿಮೆ ಅದವು. ಆಗ ವಿಷ್ಣು, ಟ್ಯಾಕ್ಸಿ ಡ್ರೈವರ್ ಕೆಲಸ ಮಾಡಲು ಮುಂದಾಗಿದ್ದರು ಎಂದು ಅವರ ಅಳಿಯ ಅನಿರುದ್ಧ್, ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
- Laughing Buddha OTT release date: ಭರತ್‌ರಾಜ್ ಎಂ ನಿರ್ದೇಶನದ, ರಿಷಬ್ ಶೆಟ್ಟಿ ನಿರ್ಮಾಣದ, ಪ್ರಮೋದ್ ಶೆಟ್ಟಿ ದೊಡ್ಡಹೊಟ್ಟೆಯ ಪೊಲೀಸಪ್ಪನಾಗಿ ನಟಿಸಿರುವ ಲಾಫಿಂಗ್ ಬುದ್ಧ ಸಿನಿಮಾವು ಒಟಿಟಿಯತ್ತ ಮುಖ ಮಾಡುತ್ತಿದೆ. ಪೊಲೀಸರ ಬದುಕಿಗೆ ಕನ್ನಡಿ ಹಿಡಿದ ಈ ಹಾಸ್ಯ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ವಿವರ ಇಲ್ಲಿ ಪಡೆಯಿರಿ.
- ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಶಿವು ಹಾಗೂ ಪಾರು ಮದುವೆ ಈಗಷ್ಟೇ ಆಗಿದೆ. ಆದರೆ ಇದು ಇಬ್ಬರಿಗೂ ಇಷ್ಟವಿಲ್ಲದ ಮದುವೆ ಹಾಗಾಗಿ ಇಬ್ಬರೂ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಎಲ್ಲ ಸತ್ಯ ಗೊತ್ತಿದ್ದೂ ಪಾರುನ ಮದುವೆ ಆಗೋದು ಶಿವುಗೂ ತುಂಬಾ ಕಷ್ಟವಾಗಿದೆ.
- ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಯನ್ನು ಮುಂದಿನ ಸೀಸನ್‌ನಿಂದ ಮಾಡೋದಿಲ್ಲ ಎಂದು ಎಕ್ಸ್‌ನಲ್ಲಿ ಸ್ವತಃ ತಿಳಿಸಿದ್ದರು. ಹೀಗಿರುವಾಗ ಅವರು ಹನ್ನೊಂದು ಸೀಸನ್‌ವರೆಗೂ ನಿರೂಪಣೆ ಮಾಡಿ ಈಗ ಯಾಕೆ ನಿಲ್ಲಿಸುತ್ತಿದ್ದಾರೆ? ಅವರಿಗೆ ಅವಮಾನ ಆಗಿದೆ ಎಂದೆಲ್ಲ ಪೋಸ್ಟ್‌ಗಳು ಹರಿದಾಡುತ್ತಿತ್ತು.
ಕಳೆದ ಶುಕ್ರವಾರ ತೆರೆ ಕಂಡ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾ ನಾಲ್ಕು ದಿನಗಳಲ್ಲಿ ಒಟ್ಟು 16.90 ರೂ. ಕಲೆಕ್ಷನ್ ಮಾಡಿದೆ. ಮೊದಲ ಮೂರು ದಿನ ಸಿನಿಮಾ ತಕ್ಕ ಮಟ್ಟಿಗೆ ಕಲೆಕ್ಷನ್ ಮಾಡಿದರೂ 4ನೇ ದಿನ ಗಳಿಕೆಯಲ್ಲಿ ಇಳಿಮುಖ ಕಂಡಿದೆ.
- Martin movie OTT release date: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದೇ ಸಮಯದಲ್ಲಿ ಮಾರ್ಟಿನ್ ಮೂವಿ ಓಟಿಟಿಯಲ್ಲಿ ಯಾವಾಗ ಬಿಡುಗಡೆಯಾಗುತ್ತದೆ? ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಕಾಣಲಿದೆ ಎಂಬ ಕುತೂಹಲ ಓಟಿಟಿ ವೀಕ್ಷಕರಲ್ಲಿ ಕಾಡುತ್ತಿದೆ.
ಶನಿವಾರ, ಮುಂಬೈನಲ್ಲಿ ಮಾಜಿ ಸಚಿವ, ಬಾಬಾ ಸಿದ್ದಿಕ್ ಅವರನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹತ್ಯೆ ಮಾಡಿದ ನಂತರ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಿಸಲಾಗಿದೆ. ನಟನಿಗೆ Y+ ಭದ್ರತೆಯನ್ನು ಹೆಚ್ಚಿಸಲಾಗಿದೆ.
- ಶಾಸಕ ಪ್ರದೀಪ್ ಈಶ್ವರ್ ನಿನ್ನೆ (ಅಕ್ಟೋಬರ್ 14) ಮೆಗಾಸ್ಟಾರ್ ಚಿರಂಜೀವಿಯನ್ನು ಭೇಟಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಇವರು ಮಾಡಿದ ಮಹಾದಾನವೊಂದು ಎಲ್ಲರ ಗಮನ ಸೆಳೆದಿದೆ. ರಕ್ತದಾನ ಮಹಾದಾನ ಎಂಬ ಮಾತಿನಂತೆ ಚಿರಂಜೀವಿ ಬ್ಲಡ್‌ಬ್ಯಾಂಕ್‌ನಲ್ಲಿ ರಕ್ತದಾನ ಮಾಡಿದ್ದಾರೆ.
- ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ತುತ್ತಾ.. ಮುತ್ತಾ.. ಇಕ್ಕಟ್ಟಿನಲ್ಲಿದ್ದಾರೆ ಗೌತಮ್. ದಿವಾನ್ ಕಂಪನಿಯ ಸಿಎಫ್‌ಒ ಹುದ್ದೆಗೆ ಪಾರ್ಥ ಮತ್ತು ಜೈದೇವ್ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಸಂದಿಗ್ಧತೆ ಗೌತಮ್‌ಗೆ ಬಂದಿದೆ. ಪಾರ್ಥನನ್ನು ಭೂಮಿಕಾ, ಜೈದೇವ್‌ನನ್ನು ಶಕುಂತಲಾ ಶಿಫಾರಸು ಮಾಡಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 14ರ ಎಪಿಸೋಡ್‌ನಲ್ಲಿ ಸುಂದ್ರಿಯಿಂದ ಸತ್ಯ ಗೊತ್ತಾಗದ ಕಾರಣ ಭಾಗ್ಯಾ, ಮಹೇಶನನ್ನು ಹುಡುಕಿಕೊಂಡು ಬಾರ್‌ಗೆ ಹೋಗುತ್ತಾಳೆ. ಅವನಿಗೆ ಕಿವಿ ಓಲೆ, ಬಳೆ ತೆಗೆದುಕೊಟ್ಟು ನಿಜ ಹೇಳುವಂತೆ ಮನವಿ ಮಾಡುತ್ತಾಳೆ.
ಅನಾರೋಗ್ಯದಿಂದ ಬಳಲುತ್ತಿದ್ದ ದಿ ಕಪಿಲ್ ಶರ್ಮಾ ಸೋ ಖ್ಯಾತಿಯ ನಟ ಅತುಲ್ ಪರ್ಚುರೆ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಅತುಲ್ ಅವರ ಸಾವು ಬಾಲಿವುಡ್ ಹಾಗೂ ಹಿಂದಿ ಕಿರುತೆರೆಗೆ ಆಘಾತ ನೀಡಿದೆ.
ಕಿಚ್ಚ ಸುದೀಪ್ ಬಿಗ್‌ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. 11ನೇ ಬಿಗ್‌ಬಾಸ್ ಕಾರ್ಯಕ್ರಮದ ನಂತರ ಇನ್ಮುಂದೆ ವೇದಿಕೆಯಲ್ಲಿ ಮೆಚ್ಚಿನ ನಟನನ್ನು ನೋಡಲಾಗುವುದಿಲ್ಲ ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ಕೂಡಾ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಂದೆ ನಿರ್ಧಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.