Entertainment News in Kannada Live October 2, 2024: Bigg Boss Season 11: ಸ್ವರ್ಗವಾಸಿಗಳಿಗೆ ನರಕ ತೋರಿಸಿದ ಬಿಗ್‌ಬಾಸ್; ಮಾಡಿದ ಅಡುಗೆಗೂ ಬಿತ್ತು ಕನ್ನ
Oct 02, 2024 07:33 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
- Bigg Boss: ಬಿಗ್‌ಬಾಸ್ ಮನೆಯಲ್ಲಿ ಒಂದಲ್ಲ ಒಂದು ಕುತೂಹಲಕಾರಿ ಸಂಗತಿಗಳು ನಡೆಯುತ್ತಲೇ ಇರುತ್ತದೆ. ಅದರಂತೆ ಈ ಬಾರಿ ಬಿಗ್‌ಬಾಸ್ ಸ್ವರ್ಗ ನಿವಾಸಿಗಳಿಗೂ ನರಕ ತೋರಿಸಿದ್ದಾರೆ. ಇನ್ನು ನರಕದಲ್ಲಿರುವ ಕೆಲವರಿಗೆ ಇದು ಖುಷಿ ತಂದಂತಿದೆ. ಈ ರೀತಿ ಆಗಿದ್ಯಾಕೆ ನೋಡಿ.
ಕೊರಟಾಲ ಶಿವ ನಿರ್ದೇಶನದಲ್ಲಿ ಜ್ಯೂನಿಯರ್ ಎನ್‌ಟಿಆರ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ದೇವರ ಸಿನಿಮಾ ದಿನದಿಂದ ದಿನಕ್ಕೆ ಕಲೆಕ್ಷನ್‌ನಲ್ಲಿ ಕುಸಿತ ಕಂಡಿದೆ. 5 ದಿನಗಳವರೆಗೂ ಭಾರತದಲ್ಲಿ ಕಲೆಕ್ಷನ್ 200 ಕೋಟಿ ದಾಟಿಲ್ಲ ಎಂದು ವರದಿಯಾಗಿದೆ.
- ಪಾರು ತಾಯಂದಿರು ಅವಳಿಗೆ ಅರಿಶಿನ ಶಾಸ್ತ್ರ ಆರಂಭ ಮಾಡಿದ್ದಾರೆ. ಈ ವಿಚಾರ ಒಳಗಿರುವ ಸೋಮೇಗೌಡನಿಗೆ ಗೊತ್ತಾಗಿದೆ. ಆಗ ಅವನು ತಾನೂ ಹೋಗಿ ಪಾರುಗೆ ಅರಶಿನ ಹಚ್ಚಬೇಕು ಎಂದು ರೆಡಿ ಆಗಿದ್ದಾನೆ. ಆದರೆ ಇದನ್ನು ತಡೆಯಲು ಶಿವು ಏನ್ ಮಾಡ್ತಾನೆ? ಎಂದು ಕಾದು ನೋಡಬೇಕಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 1ರ ಎಪಿಸೋಡ್‌ನಲ್ಲಿ ಸತ್ಯ ತಿಳಿದುಕೊಳ್ಳಲು ಭಾಗ್ಯಾ ಗಂಡನನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಾಳೆ. ಶ್ರೇಷ್ಠಾ , ಭಾಗ್ಯಾಗೆ ನಿಜ ಹೇಳಲು ಫೋಟೋ ಹಿಡಿದುಕೊಂಡು ಮನೆಗೆ ಬರುತ್ತಾಳೆ.
- Amrithadhaare Kannada Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಬುಧವಾರದ (ಅಕ್ಟೋಬರ್ 02) ಸಂಚಿಕೆಯಲ್ಲಿ ಮಹತ್ವದ ವಿದ್ಯಮಾನಗಳು ನಡೆದಿದೆ. ಆನಂದ್ ಮತ್ತು ಅಪರ್ಣಾಗೆ ಜೈದೇವ್ ಮಾಡಿರುವ ಆಕ್ಸಿಡೆಂಟ್ ಬಗ್ಗೆ ಗೊತ್ತಾಗಿದೆ. ಇದೇ ಸಮಯದಲ್ಲಿ ಪಾರ್ಥನಿಗೆ ಜೈದೇವ್ ಮಾಡಿರುವ ಪಾಪಕಾರ್ಯಗಳ ಸಾಕ್ಷಿ ದೊರಕಿದ್ದು, ಭೂಮಿಕಾ ಜತೆ ಹಂಚಿಕೊಂಡಿದ್ದಾನೆ.
ಅಕ್ಟೋಬರ್ 3 , ರಚಿತಾ ರಾಮ್ ಹುಟ್ಟುಹಬ್ಬ, ಆಚರೆ ಈ ಬಾರಿ ಡಿಂಪಲ್ ಕ್ವೀನ್ ಬರ್ತ್‌ಡೇ ಆಚರಣೆ ಕ್ಯಾನ್ಸಲ್ ಮಾಡಿದ್ದಾರೆ. ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ , ಜೈಲಿನಲ್ಲಿ ಇರುವುದಕ್ಕೆ ರಚಿತಾ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ದರ್ಶನ್ ಅಭಿಮಾನಿಗಳು ರಚಿತಾ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ.
ತಮಿಳಿನ ಖ್ಯಾತ ನಟಿ ವನಿತಾ ವಿಜಯ್ ಕುಮಾರ್ ಅಕ್ಟೋಬರ್ 5 ರಂದು ಕೊರಿಯೋಗ್ರಾಫರ್ ರಾಬರ್ಟ್ ಜೊತೆ ನಾಲ್ಕನೇ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವನಿತಾ-ರಾಬರ್ಟ್ ಇರುವ ಫೋಟೋ ಹರಿದಾಡುತ್ತಿದ್ದು ಇವರಿಬ್ಬರೂ ಮದುವೆ ಆಗೋದು ಪಕ್ಕಾ ಎನ್ನಲಾಗುತ್ತಿದೆ.
ಈ ವಾರ ಒಟ್ಟು 10 ಮಂದಿ ನಾಮಿನೇಷನ್ ಆಗಿದ್ದಾರೆ. ಚೈತ್ರಾ ಕುಂದಾಪುರ ನೇರವಾಗಿ ನಾಮಿನೇಟ್ ಆಗಿದ್ಧಾರೆ. ಇದನ್ನು ಹೊರತುಪಡಿಸಿ ಮನೆಯಲ್ಲಿ 2ನೇ ದಿನ ಬಹಳ ಆಸಕ್ತಿಕರ ಘಟನೆಗಳು ನಡೆದವು. ಜ್ಯೋತಿಷಿಯಾಗಿ ಬದಲಾದ ಚೈತ್ರಾ, ಶಿಶಿರ್ ಶಾಸ್ತ್ರಿ ಕೈ ನೋಡಿ ಅವರ ಭವಿಷ್ಯ ನುಡಿದರು.