Entertainment News in Kannada Live October 8, 2024: ಐಎಂಡಿಬಿಯಲ್ಲಿ 9.6 ರೇಟಿಂಗ್ ಪಡೆದ ಫ್ಯಾಮಿಲಿ ಥ್ರಿಲ್ಲರ್ ತಮಿಳು ಸಿನಿಮಾ ಓಟಿಟಿ ಎಂಟ್ರಿ; ಸ್ಟ್ರೀಮಿಂಗ್ ಯಾವಾಗ, ಎಲ್ಲಿ?
Oct 08, 2024 10:09 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
ಥ್ರಿಲ್ಲರ್ ಸಿನಿಮಾ ಪ್ರಿಯರಿಗಾಗಿ ತಮಿಳಿನ ಹೊಸ ಚಿತ್ರವೊಂದು ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಆಗಸ್ಟ್‌ನಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಂಡ ಸಿನಿಮಾ ಇದೇ ತಿಂಗಳಲ್ಲಿ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ ಈ ಸಿನಿಮಾಗೆ ಐಎಂಡಿಬಿಯಲ್ಲಿ ಟಾಪ್ ರೇಟಿಂಗ್ ಇರುವುದು ವಿಶೇಷ.
- ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯ ಬಂತು ಎಂದರೆ ಸಾಕು ಜಗಳ ಹೆಚ್ಚಾಗುತ್ತದೆ. ಯಾಕೆಂದರೆ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬುದನ್ನು ಬಿಟ್ಟು ಇನ್ನೇನೂ ಅಲ್ಲಿ ಮುಖ್ಯವಾಗಿರುವುದಿಲ್ಲ. ಹೀಗಿರುವಾಗ ಈ ದಿನ ಏನಾಗಿದೆ ನೋಡಿ.
- ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಹಿಂದೆ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ರಿಷಬ್ ಸ್ವೀಕರಿಸಿದ್ದಾರೆ.
- ಬಿಗ್‌ಬಾಸ್ ಮನೆಯ ರೀತಿಯೇ ದೊಡ್ಡ ಕಾಂಪೌಂಡ್ ಹಾಕಿಸಿ, ಅದೇ ರೀತಿ ಮುಂಭಾಗದಲ್ಲಿ ಸ್ವಿಮ್ಮಿಂಗ್ ಪೂಲ್ ಮಾಡಿಸಿ ಎಷ್ಟು ಸುಂದರವಾದ ಮನೆ ನಿರ್ಮಾಣ ಮಾಡಿದ್ದಾರೆ ನೋಡಿ. ಚಂದನ್ ಅವರ ಅಭಿರುಚಿ ಹೇಗಿದೆ ಎಂದು ಈ ಮನೆ ನೋಡಿದರೆ ತಿಳಿಯುತ್ತದೆ.
- ಗಿಚ್ಚಿ ಗಿಲಿಗಿಲಿ ಖ್ಯಾತಿಯ ಹುಲಿ ಕಾರ್ತಿಕ್ ವಿರುದ್ಧ ಜಾತಿ ನಿಂದನೆ ಆರೋಪ ಎದುರಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವಾರ್ಡ್ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಅವರು ಆಡಿದ ಒಂದು ಮಾತಿನಿಂದಾಗಿ ಇಷ್ಟೆಲ್ಲ ಆಗಿದೆ. ಹಾಗಾದ್ರೆ ಅವರು ಹೇಳಿದ್ದೇನು ನೋಡಿ.
- Martin Movie jeeva neene song lyrics: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ಜೀವ ನೀನೇ ಹಾಡು ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿನ ಕನ್ನಡ ಮತ್ತು ಇಂಗ್ಲಿಷ್ ಲಿರಿಕ್ಸ್ ಇಲ್ಲಿ ನೀಡಲಾಗಿದೆ. ಜತೆಗೆ ಕಿವಿತುಂಬಿಕೊಳ್ಳಲು ಹಾಡಿನ ಲಿರಿಕಲ್ ವಿಡಿಯೋ ಕೂಡ ನೀಡಲಾಗಿದೆ.
1982ರಲ್ಲಿ ತೆರೆ ಕಂಡ ಸಾಹಸಸಿಂಹ ಸಿನಿಮಾ ಯಶಸ್ಸಿನ ನಂತರ ಡಾ ವಿಷ್ಣುವರ್ಧನ್ ಅವರಿಗೆ ಸಾಹಸಸಿಂಹ ಎಂಬ ಹೆಸರು ಬಂತು. ಸಿನಿಮಾ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಸಿನಿಮಾ ನಂತರ ವಿಷ್ಣು ಅವರ ಸ್ಟಾರ್‌ಡಮ್ ಕೂಡಾ ಹೆಚ್ಚಾಯ್ತು.
- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರೂ ಸುತ್ತಾಡಲು ಹೊರಟಿದ್ದಾರೆ. ಆದರೆ ಸ್ವಂತ ಸೊಸೆಯನ್ನೇ ಕೊಲ್ಲಲು ಕಾವೇರಿ ರೆಡಿಯಾಗಿದ್ದಾಳೆ.
ಸೋಮವಾರದ ಎಪಿಸೋಡ್‌ನಲ್ಲಿ ಹಾವು ಮುಂಗುಸಿಯಂತೆ ಜಗಳವಾಡಿದ್ದ ಹಂಸ ಹಾಗೂ ಜಗದೀಶ್ ಮಂಗಳವಾರದ ಎಪಿಸೋಡ್‌ನಲ್ಲಿ ಫ್ರೆಂಡ್ಸ್ ಆಗಿದ್ದಾರೆ. ಜಗದೀಶ್ ಒಂದು ಹೆಜ್ಜೆ ಮುಂದೆ ಹೋಗಿ ಹಂಸಾಗೆ ಪ್ರಮೋಸ್ ಮಾಡಿದ್ದಾರೆ. ದೊಡ್ಮನೆಯಲ್ಲಿ ಮುಂಗಾರು ಮಳೆ ಎಪಿಸೋಡ್ ರೀ ಕ್ರಿಯೇಟ್ ಆಗಿದೆ.
- ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮದುವೆ ಮನೆಯಿಂದ ಓಡಿ ಹೋಗಿದ್ದಾಳೆ. ಮನೆಯಲ್ಲಿ ಎಲ್ಲರಿಗೂ ಗಾಬರಿ ಆಗಿದೆ. ಜೊತೆಗೆ ಶಿವು ಕೂಡ ಹೋಗಿದ್ದಾನೆ. ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು ಕಾಣಿಸಿದೆ. ಇನ್ನಷ್ಟು ಕುತೂಹಲಕಾರಿಯಾಗಿ ಧಾರಾವಾಹಿ ಸಾಗಿದೆ.
ಲಿಂಗ ಸಿನಿಮಾ ತೆರೆ ಕಂಡು 10 ವರ್ಷಗಳ ನಂತರ ನಿರ್ದೇಶಕ ಕೆ.ಎಸ್.ರವಿಕುಮಾರ್ ರಜನಿಕಾಂತ್ ವಿರುದ್ಧ ಆರೋಪ ಮಾಡಿದ್ದಾರೆ. ಈ ಸಿನಿಮಾ ಸೋಲಿಗೆ ರಜನಿಕಾಂತ್ ಅವರೇ ಕಾರಣ. ಅನಾವಶ್ಯಕವಾಗಿ ಸಿನಿಮಾ ಸ್ಕ್ರಿಪ್ಟ್‌ನಲ್ಲಿ ತಲೆ ಹಾಕಿದ್ದರಿಂದಲೇ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು ಎಂದು ರವಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
- ಅಮೃತಧಾರೆ ಧಾರಾವಾಹಿ ಅಕ್ಟೋಬರ್ 08ರ ಸಂಚಿಕೆ: ಅಮೃತಧಾರೆ ಸೀರಿಯಲ್‌ನ ಇಂದಿನ ಎಪಿಸೋಡ್ ರೋಚಕ ಸಿನಿಮಾದಂತೆ ಭಾಸವಾಗಿದೆ. ಗೌತಮ್ ಜೈದೇವ್‌ನ ಪಾಪಕೃತ್ಯಗಳನ್ನು ಸಾಕ್ಷಿ ಸಮೇತ ಬಿಚ್ಚಿಟ್ಟಿದ್ದಾರೆ. ಮನೆಯಿಂದ ಹೊರದಬ್ಬಿಸಿಕೊಂಡ ಜೈದೇವ್ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ಶಕುಂತಲಾದೇವಿ ಕುಸಿದುಬಿದ್ದಿದ್ದಾರೆ. ಇಬ್ಬರೂ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ.
- ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ನ ಪಾಪಕೃತ್ಯಗಳನ್ನು ವಿಷಯ ಕೇಳಿದ ಶಕುಂತಲಾದೇವಿ ಆತನನ್ನು ಮನೆಯಿಂದ ಹೊರದಬ್ಬಿದ್ದಾರೆ. ಗೌತಮ್ ಪ್ರತಿಯೊಂದು ವಿಷಯವನ್ನೂ ಸಾಕ್ಷ್ಯ ಸಮೇತ ಎಲ್ಲರ ಮುಂದೆ ತಿಳಿಸಿದ್ದಾರೆ. ಇಂದಿನ ಸಂಚಿಕೆಯನ್ನು ನೋಡಿದ ಪ್ರೇಕ್ಷಕರು ವಾಹ್ ಎಂದಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 7ರ ಎಪಿಸೋಡ್. ಶ್ರೇಷ್ಠಾ ಮನೆಗೆ ಬಂದಾ ತಾಂಡವ್‌ನನ್ನು ಭಾಗ್ಯಾ ಪ್ರಶ್ನಿಸುತ್ತಾಳೆ. ಆದರೆ ತಾಂಡವ್ ಏನೂ ಉತ್ತರ ಹೇಳದೆ ಅಲ್ಲಿಂದ ಹೊರಡುತ್ತಾನೆ. ಶ್ರೇಷ್ಠಾ ಜೊತೆ ಓಡಾಡುತ್ತಿದ್ದ ಹುಡುಗ ಇವನೇ ಅಂತ ಓನರ್ ಹೇಳಿದಾಗ ಭಾಗ್ಯಾ ಅನುಮಾನ ಇನ್ನಷ್ಟು ಹೆಚ್ಚಾಗುತ್ತದೆ.
ಬಿಲ್ಲ ರಂಗ ಬಾಷ ಚಿತ್ರಕ್ಕಾಗಿ ಕಿಚ್ಚ ಸುದೀಪ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗುರಿ ತಲುಪಲು ಕೆಲವೇ ಹೆಜ್ಜೆಗಳು ಸಾಕು ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಲೈಂಗಿಕ ದೌರ್ಜನ್ಯ ಕೇಸ್ ಅಡಿ ನ್ಯಾಯಾಂಗ ಬಂಧನದಲ್ಲಿರುವ ಜಾನಿ ಮಾಸ್ಟರ್ ತಮಗೆ ಅನೌನ್ಸ್ ಆಗಿದ್ದ ರಾಷ್ಟ್ರಪ್ರಶಸ್ತಿ ಪಡೆಯಲು ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ ಇದೀಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಜಾನಿಗೆ ಒಲಿದು ಬಂದಿದ್ದ ರಾಷ್ಟ್ರಪ್ರಶಸ್ತಿಯನ್ನು ಕ್ಯಾನ್ಸಲ್ ಮಾಡಿದೆ.
ಎರಡನೇ ವಾರದ ನಾಮಿನೇಷನ್ ಟಾಸ್ಕ್‌ನಲ್ಲಿ ನರಕವಾಸಿಗಳು ಜಯ ಗಳಿಸಿದ್ದಾರೆ. ಒಂದು ವಾರದಿಂದ ಗಂಜಿ ಸೇವಿಸುತ್ತಿದ್ದ ನರಕದವರು ಟಾಸ್ಕ್ ಗೆದ್ದು ಚಪಾತಿ, ಅನ್ನ ಸವಿದಿದ್ದಾರೆ. ಮೊದಲ ಸುತ್ತಿನ ಟಾಸ್ಕ್‌ನಲ್ಲಿ ನಾಲ್ವರು ನಾಮಿನೇಷನ್ ಆಗಿದ್ದು ಮಂಗಳವಾರ ಮತ್ತೊಂದು ಟಾಸ್ಕ್ ನಡೆಯಲಿದೆ. ಸ್ಪರ್ಧಿ ಜಗದೀಶ್, ಕ್ಯಾಪ್ಟನ್ ಹಂಸ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.