Karnataka News Live August 25, 2024 : Karnataka SSLC Exam 3 Result 2024: ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ?
Aug 25, 2024 10:18 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
- ಜುಲೈ 10ರಂದು ಎಸ್ಎಸ್ಎಲ್ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿತ್ತು. ಇದೀಗ ಆಗಸ್ಟ್ 25ರಂದು ಎಸ್ಎಸ್ಎಲ್ಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ.
Bengaluru Traffic Advisory; ಬೆಂಗಳೂರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಸಡಗರ. ಇಸ್ಕಾನ್ ಸೇರಿ ಪ್ರಮುಖ ಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುವ ಕಾರಣ ಆ ಭಾಗದ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಸಂಚಾರ ಪೊಲೀಸರು ಈ ಕುರಿತು ಸಂಚಾರ ಸಲಹೆ ನೀಡಿದ್ದು, ಗಮನಹರಿಸುವುದು ಒಳಿತು.
ಹುಬ್ಬಳ್ಳಿ - ಧಾರವಾಡ ನಗರ ಪೊಲೀಸರು ಶನಿವಾರ ವ್ಹೀಲಿಂಗ್ ಮಾಡುತ್ತಿದ್ದವರ ಮೇಲೆ ಕ್ರಮ ಜರುಗಿಸಿದ್ದಾರೆ. ಯುವತಿಯೊಬ್ಬಳು ವ್ಹೀಲಿಂಗ್ ಮಾಡುತ್ತಿದ್ದ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಅಲ್ಲಿ ಮತ್ತೊಬ್ಬ ಯುವಕ ಕೂಡ ವ್ಹೀಲಿಂಗ್ ಮಾಡುತ್ತಿದ್ದುದನ್ನು ಗುರುತಿಸಿ ಎರಡೂ ಬೈಕ್‌ಗಳನ್ನು ವಶಪಡಿಸಿಕೊಂಡರು. ವೈರಲ್ ವಿಡಿಯೋ ವರದಿ ಇಲ್ಲಿದೆ.
ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ, ಸಡಗರ ಊರನ್ನಾವರಿಸಿದೆ. ಈ ಸಂದರ್ಭ ಒಂದು ನಿಮಿತ್ತವೆಂಬಂತೆ ಬಾಲಕೃಷ್ಣನಾಗಿ ಯಕ್ಷ ಲೋಕ ಪ್ರವೇಶಿಸಿದ ನಾಲ್ಕೂವರೆ ವರ್ಷದ ‘ಯಕ್ಷಕಿನ್ನರಿ’ಯನ್ನು ಪರಿಚಯಿಸಲಾಗುತ್ತಿದೆ. ಈ ಪುಟ್ಟ ಬಾಲೆಯ ವಿಡಿಯೋ ವೈರಲ್ ಆಗಿತ್ತು. ಯಾರು ಈ ಬಾಲೆ ಎಂಬ ಕುತೂಹಲ ತಣಿಸುವ ಪ್ರಯತ್ನ ಇದು (ವಿಶೇಷ ವರದಿ- ಹರೀಶ ಮಾಂಬಾಡಿ, ಮಂಗಳೂರು)
Gazetted Probationers Exam; ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆ ಆಗಸ್ಟ್ 27 ರಂದು ನಡೆಯಲಿದೆ. ಆದರೆ, ಕೆಲವು ಕೆಎಎಸ್ ಆಕಾಂಕ್ಷಿಗಳು ಈ ಪರೀಕ್ಷೆ ಮುಂದೂಡಿಸುವ ಪ್ರಯತ್ನ ನಡೆಸಿದ್ದು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಮೇಲೆ ಒತ್ತಡ ಹೇರುತ್ತಿರುವುದು ಬಹಿರಂಗವಾಗಿದೆ.
- Hassan Crime News: ಇನ್ಸೂರೆನ್ಸ್ನ ಹಣಕ್ಕಾಗಿ ತನ್ನನ್ನೇ ಹೋಲುವ ಅಮಾಯಕ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಹಾಸನದ ಅರಸೀಕೆರೆ ತಾಲೂಕಿ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳನ್ನು ಬಂಧಿಸಲಾಗಿದೆ.
IDIOT Syndrome; ಗೂಗಲ್ ಸರ್ಚ್ ಮಾಡಿ ಆ ಗುಣಲಕ್ಷಣಗಳು ಯಾವ ಸಮಸ್ಯೆಯದ್ದು ಎಂದು ನೋಡುವ ಅಭ್ಯಾಸ ನಿಮಗಿದೆಯೇ? ಹಾಗೆ ನೋಡಿದ ಬಳಿಕ ಗಾಬರಿಗೊಳಗಾಗಿ ಇದೇ ರೋಗ ನನಗೂ ಇರಬಹುದಾ ಎಂಬ ಆತಂಕ ಕಾಡುತ್ತಿದೆಯೇ? ಒಟ್ಟಿನಲ್ಲಿ ನಿಮಗೂ ಇದೆಯಾ IDIOT ಸಿಂಡ್ರೋಮ್, ಹಾಗಾದರೆ ತುಮಕೂರಿನ ಈ ಡಾಕ್ಟರ್ ಅದರ ಬಗ್ಗೇನೇ ವಿವರಿಸಿದ್ಧಾರೆ ನೋಡಿ.
No Power Supply; ಬೆಂಗಳೂರು ಜಾಲಹಳ್ಳಿ ಡಿವಿಷನ್‌ನಲ್ಲಿ 6000ಕ್ಕೂ ಹೆಚ್ಚು ಅಂಗಡಿ ಮುಂಗಟ್ಟು, ಮನೆಗಳಿಗೆ ವಿದ್ಯುತ್ ಇಲ್ಲ. ಅದಕ್ಕೆ ಕಾರಣವಾಗಿರುವುದು ರಾತ್ರಿ ನಡೆದ ಅವಾಂತರ. 35ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಸಮಸ್ಯೆ ಉಂಟಾಯಿತು.
Karnataka High Court; ಅಮೆರಿಕಕ್ಕೆ ಹೊರಟ ಪತಿಯ ವಿರುದ್ಧ ಪತ್ನಿ ಕ್ರೌರ್ಯ, ವರದಕ್ಷಿಣೆಯ ಕೇಸ್ ದಾಖಲಿಸಿದರು. ಫ್ರೆಂಚ್ ಫ್ರೈಸ್ ತಿನ್ನೋಕೆ ಬಿಡ್ತಾ ಇಲ್ಲ ಎಂದು ಆರೋಪಿಸಿದರು. ಬೆಂಗಳೂರು ಪೊಲೀಸರು ಪತಿಯ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದರು. ಮೊಕ್ಕದ್ದಮೆ ಕುರಿತು ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, ಕೇಸ್‌ನ ವಿಚಾರಣೆಯನ್ನು ಮುಂದೂಡಿದೆ.
- ಶ್ರೀಕೃಷ್ಣನ ಸನ್ನಿಧಾನ ಉಡುಪಿ ಕೃಷ್ಣ ದೇವಾಲಯದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಕಳೆಗಟ್ಟಿದೆ. ಈಗಾಗಲೇ ವಿವಿಧ ಸಾಂಸ್ಕೃತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ನಾಡಿನಾದ್ಯಂತ ಹಲವಾರು ಭಕ್ತು ಅಷ್ಟಮಿಯಂದು ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಿ 1.5ಲಕ್ಷ ಚಕ್ಕಲಿ ಹಾಗೂ 3 ಲಕ್ಷ ಉಂಡೆಗಳನ್ನು ತಯಾರಿಸಲಾಗುತ್ತಿದೆ.
Viral Video; ಬೆಂಗಳೂರಲ್ಲಿ ಈಗ ಪಿಜ್ಜಾ, ಫುಡ್ ಐಟಮ್ಸ್ ಅಷ್ಟೇ ಅಲ್ಲ, ಲ್ಯಾಪ್‌ಟಾಪ್ ಕೂಡ 13 ನಿಮಿಷಕ್ಕೆ ಡೆಲಿವರಿ ಸಿಗುತ್ತೆ, ಯಾವ ಏರಿಯಾದಲ್ಲಿ, ಏನಿದು ಹೊಸ ಸೇವೆ ಎಂಬ ಕುತೂಹಲವೇ? ಎಕ್ಸ್‌ನಲ್ಲಿ ಇದರ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಆ ವಿವರ ಈ ವರದಿಯಲ್ಲಿದೆ.
- Mangaluru Crime News: ಆಸ್ತಿ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ವತಃ ಅಳಿಯ, ಮೊಮ್ಮಗನೇ ನಿವೃತ್ತ ಶಿಕ್ಷಕನನ್ನು ಅಟ್ಟಾಡಿಸಿ ಕೊಂದಿದ್ದಾರೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲುವಿನಲ್ಲಿ ನಡೆದಿದೆ.
- Heavy Rainfall Alert in Karnataka: ಆಗಸ್ಟ್ 25 ಭಾನುವಾರವಾದ ಇಂದು ಕರ್ನಾಟಕದ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ. ಅದರಲ್ಲೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚು.
- Parappana Agrahara Prison: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರ ದಾಳಿ ನಡೆಸಿದ್ದಾರೆ. ದರ್ಶನ್ ಬ್ಯಾರಕ್ನಲ್ಲಿಯೂ ಹುಡುಕಾಟ ನಡೆಸಿದ್ದು, ಮಾದಕ ವಸ್ತು, ಮೊಬೈಲ್, ಮಾರಕಾಸ್ತ್ರಗಳಿಗಾಗಿ ಶೋಧ ಮಾಡಿದ್ದಾರೆ. (ವರದಿ-ಎಚ್.ಮಾರುತಿ)