Viral Video; ನಿಮಗೂ ಇದೆಯಾ IDIOT ಸಿಂಡ್ರೋಮ್‌, ತುಮಕೂರಿನ ಈ ಡಾಕ್ಟರ್ ಅದರ ಬಗ್ಗೇನೇ ವಿವರಿಸಿದ್ಧಾರೆ ನೋಡಿ-viral video do yo have idiot syndrome cyberchondria disease check this dets explained by dr bhanuprakash tumakuru uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Viral Video; ನಿಮಗೂ ಇದೆಯಾ Idiot ಸಿಂಡ್ರೋಮ್‌, ತುಮಕೂರಿನ ಈ ಡಾಕ್ಟರ್ ಅದರ ಬಗ್ಗೇನೇ ವಿವರಿಸಿದ್ಧಾರೆ ನೋಡಿ

Viral Video; ನಿಮಗೂ ಇದೆಯಾ IDIOT ಸಿಂಡ್ರೋಮ್‌, ತುಮಕೂರಿನ ಈ ಡಾಕ್ಟರ್ ಅದರ ಬಗ್ಗೇನೇ ವಿವರಿಸಿದ್ಧಾರೆ ನೋಡಿ

IDIOT Syndrome; ಗೂಗಲ್‌ ಸರ್ಚ್‌ ಮಾಡಿ ಆ ಗುಣಲಕ್ಷಣಗಳು ಯಾವ ಸಮಸ್ಯೆಯದ್ದು ಎಂದು ನೋಡುವ ಅಭ್ಯಾಸ ನಿಮಗಿದೆಯೇ? ಹಾಗೆ ನೋಡಿದ ಬಳಿಕ ಗಾಬರಿಗೊಳಗಾಗಿ ಇದೇ ರೋಗ ನನಗೂ ಇರಬಹುದಾ ಎಂಬ ಆತಂಕ ಕಾಡುತ್ತಿದೆಯೇ? ಒಟ್ಟಿನಲ್ಲಿ ನಿಮಗೂ ಇದೆಯಾ IDIOT ಸಿಂಡ್ರೋಮ್‌, ಹಾಗಾದರೆ ತುಮಕೂರಿನ ಈ ಡಾಕ್ಟರ್ ಅದರ ಬಗ್ಗೇನೇ ವಿವರಿಸಿದ್ಧಾರೆ ನೋಡಿ.

ಇಡಿಯಟ್ ಸಿಂಡ್ರೋಮ್ ಬಗ್ಗೆ ತುಮಕೂರಿನ ಡಾಕ್ಟರ್ ಭಾನುಪ್ರಕಾಶ್ ವಿವರಣೆ.
ಇಡಿಯಟ್ ಸಿಂಡ್ರೋಮ್ ಬಗ್ಗೆ ತುಮಕೂರಿನ ಡಾಕ್ಟರ್ ಭಾನುಪ್ರಕಾಶ್ ವಿವರಣೆ.

ಬೆಂಗಳೂರು: ನಿಮಗೂ ಇದೆಯಾ ಇಡಿಯಟ್‌ ಸಿಂಡ್ರೋಮ್‌ (IDIOT Syndrome) ಎಂದು ಯಾರಾದರೂ ಕೇಳಿದರೆ ಗಾಬರಿ ಬೀಳಬೇಡಿ. ಇಡಿಯಟ್ ಸಿಂಡ್ರೋಮ್ ಎಂದರೆ ಬೇರೇನೂ ಅಲ್ಲ, ಇಂಟರ್‌ನೆಟ್‌ ಡಿರವೈಡ್‌ ಇನ್‌ಫಾರ್ಮೇಶನ್‌ ಒಬ್‌ಸ್ಟ್ರಕ್ಷನ್ ಟ್ರೀಟ್‌ಮೆಂಟ್‌ (Internet Derived Information Obstruction Treatment) ಎಂಬುದರ ಸಂಕ್ಷಿಪ್ತ ರೂಪ ಅಷ್ಟೆ. ಆದರೆ ಇದರಿಂದ ಆಗುವ ಅನಾಹುತ ಬಹುದೊಡ್ಡದು ಎಂಬುದನ್ನು ಡಾಕ್ಟರ್‌ಗಳು ವಿವರಿಸುತ್ತಾರೆ. ಇದನ್ನೇ ಸೈಬರ್‌ಕೋಂಡ್ರಿಯಾ ಡಿಸೀಸ್‌ (Cyberchondria Disease) ಎಂದೂ ಹೇಳುತ್ತಾರೆ.

ಸರಳವಾಗಿ ಹೇಳಬೇಕು ಎಂದರೆ, ಏನಾದರೂ ಆರೋಗ್ಯ ಸಮಸ್ಯೆ ಕಂಡ ಕೂಡಲೇ ಗೂಗಲ್‌ ಸರ್ಚ್‌ ಮಾಡಿ ಆ ಗುಣಲಕ್ಷಣಗಳು ಯಾವ ಸಮಸ್ಯೆಯದ್ದು ಎಂದು ನೋಡುವ ಅಭ್ಯಾಸ ನಿಮಗಿದೆಯೇ? ಹಾಗೆ ನೋಡಿದ ಬಳಿಕ ಗಾಬರಿಗೊಳಗಾಗಿ ಇದೇ ರೋಗ ನನಗೂ ಇರಬಹುದಾ ಎಂಬ ಆತಂಕ ಕಾಡುತ್ತಿದೆಯೇ? ಹಾಗಾದರೆ ಸಂದೇಹವೇ ಬೇಡ ಅದುವೇ ಇಡಿಯಟ್ ಸಿಂಡ್ರೋಮ್.

ಈ ವಿಷಯ ಈಗ ಯಾಕೆ ಮುನ್ನೆಲೆಗೆ ಬಂತು ಅಂತೀರಾ, ಈಗ್ಗೆ ಕೆಲ ದಿನಗಳ ಹಿಂದೆ ಬಾಡು ಉಣ್ಣದ ಡಾಕ್ಟರ್ ಬಾಡೂಟದ ಬಗ್ಗೆ ವಿವರಣೆ ಕೊಟ್ಟ ವಿಡಿಯೋ ನೆನಪಿದೆಯಾ, ಅದೇ ಡಾಕ್ಟರ್ ಈ ವಿಚಾರ ಪಸ್ತಾಪಿಸಿದ್ದಾರೆ. ಅವರ ಹೊಸ ವಿಡಿಯೋ ಈಗ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಗಮನಸೆಳೆದಿದೆ.

ಏನಿದು ಇಡಿಯಟ್ ಸಿಂಡ್ರೋಮ್‌, ಯಾಕೆ ಆ ಹೆಸರು ಬಂತು- ತುಮಕೂರು ಡಾಕ್ಟರ್ ವಿವರಿಸಿದ್ದು ಹೀಗೆ

"ಇದು ಏನಾಗ್ತಾ ಇದೆ ಗೊತ್ತಾ ಒಂದು ಇಡಿಯಟ್‌ ಸಿಂಡ್ರೋಮ್‌ (idiot syndrome) ಅಂತ ಇದೆ. ಅದೇ ಐಡಿಐಒಟಿ (IDIOT) ಅಂತ ಆಯ್ತಾ. ಅದು ಬೇರೇನೂ ಅಲ್ಲ, ಇಂಟರ್‌ನೆಟ್‌ ಡಿರವೈಡ್‌ ಇನ್‌ಫಾರ್ಮೇಶನ್‌ ಒಬ್‌ಸ್ಟ್ರಕ್ಷನ್ ಟ್ರೀಟ್‌ಮೆಂಟ್‌ (Internet Derived Information Obstruction Treatment) ಅಂತ ಒಂದು ಇದೆ.

ಸಣ್ಣ ಸಣ್ಣ ಸಿಮ್‌ಟಮ್ಸ್‌ಗೂ ಹೋಗ್ಬಿಟ್ಟು ಗೂಗಲ್‌ (google) ಅಲ್ಲಿ ಚೆಕ್‌ ಮಾಡ್ಬಿಡೋದು. ಗೂಗಲ್‌ ಅಲ್ಲಿ ಚೆಕ್‌ ಮಾಡಿದ್ ತಕ್ಷಣ ಅದರಲ್ಲಿ ಇರೋ ಬರೋ ಕಾಯಿಲೆಗಳನೆಲ್ಲ ತೋರ್ಸ್ಬಿಡುತ್ತೆ. ಆವಾಗ ಪ್ರತಿಯೊಂದೂನು ನನಗಿದ್ಯೇನೋ ನನಗಿದ್ಯೇನೋ ಎಂಬ ಆತಂಕ ಶುರುವಾಗುತ್ತೆ.

ಆ ಮಾಹಿತಿ ತಗೊಂಡು ಡಾಕ್ಟರ್ ಹತ್ರ ಓಡಿಬರೋದು. ಹೇ ಡಾಕ್ಟರ್‌ ನನಗೆ ಆ ಕಾಯಿಲೆ ಇರ್ಬೋದು ನೋಡ್ರಿ, ಈ ಕಾಯಿಲೆ ಇರ್ಬೋದು ನೋಡ್ರಿ ಅಂತ ಹೇಳೋದು.

ಆವಾಗ ಏನಾಗುತ್ತೆ ಡಾಕ್ಟರ್‌ಗಳಿಗೂ ಅವರ ಆಲೋಚನೆಗಳು ದಾರಿ ತಪ್ಪುತ್ತವೆ. ಒಂದು ಸ್ವಲ್ಪ ಮಿಸ್‌ಇನ್‌ಫಾರ್ಮೇಶನ್. ಅವ್ರಿಗೂ ಇನ್ನೊಂದು ಬೇರೆಯದಿರಬಹುದೇನೋ ಅಂತ ಆಲೋಚನೆ ಮಾಡೋಕೆ ಶುರುಮಾಡ್ತಾರೆ. ಕೊನೆಗೆ ರೋಗಪತ್ತೆ ಕಷ್ಟವಾಗಿ, ಅದಿರಬಹುದು, ಇದಿರ್ಬೋದು ಅಂತ ಇಪ್ಪತ್ತೆಂಟು ಟೆಸ್ಟ್‌ ಮಾಡಿಸ್ತಾರೆ.

ಹಾಗಾಗಿಯೇ ಇದನ್ನ ನಾವು ಇಡಿಯಟ್‌ ಸಿಂಡ್ರೋಮ್ ಅಂತ ಕರೀತೀವಿ. ನಮ್ಗೆ ಸರಿಯಾದ ದಾರಿನಲ್ಲಿ ಹೋಗೋದಕ್ಕೆ ಅಡ್ಡಿ ಉಂಟು ಮಾಡುತ್ತೆ ಅದು. ನಮ್ಮ ಆಲೋಚನಾ ಪ್ರಕ್ರಿಯೆ (thought process)ನೆಲ್ಲ ಹಾಳ್ ಮಾಡ್ಬಿಡುತ್ತೆ.

ಅದು ಒಳ್ಳೆದಲ್ಲರಿ, ಅದು ಬಹಳ ಡೇಂಜರ್‌ ಗೊತ್ತಾಯ್ತಾ, ಶರೀರದಲ್ಲಿ ಬರುವಂತಹ ಸೂಚನೆಗಳೆಲ್ಲವೂ ಕಾಯಿಲೆಗಳದ್ದಾಗಿರಲ್ಲ. ನಾವು ಒಂದು ರೌಂಡ್‌ ಕಾಯಿಲೆ ಇರ್ಬೋದಾ ಇಲ್ವಾ ಅಂತ ಚೆಕ್‌ ಮಾಡ್ಬೇಕು,

ಕಾಯಿಲೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅದಾದ್ಮೇಲೆ ಬಿಟ್ಬಿಡ್ಬೇಕ್ರಿ. ಎಲ್ಲವನ್ನೂ ಶರೀರ ಪ್ರಕೃತಿಯೇ ನೋಡಿಕೊಳ್ಳುತ್ತೆ. ನೀವು ಎಲ್ಲಾದಕ್ಕುನುನು ಅದನ್ನ ತಗೊಂಡೆ ಇದನ್ನ ತಗೊಂಡೆ ಅಂತ ಮಾಡಕ್ಕಾಗೋದಿಲ್ಲ, ಮಾಡ್ಬಾರದು ಕೂಡ. ಅದರ ಅವಶ್ಯಕತೆ ಇಲ್ಲ.

ಆಮೇಲೆ ಈಗ ಎಲ್ಲ ಗೂಗಲ್‌ ಅಲ್ಲೇ ನಿಮ್ಗೆ ತಿಳ್ಕೊಳೋ ತಿಳಿವಳಿಕೆ ಇದ್ದಿದ್ದಿದ್ರೆ, ಈ ಡಾಕ್ಟರ್‌ಗಳಿಗೆ ಆಸ್ಪತ್ರೆಗಳು ಯಾಕ್ರೀ ಬೇಕಿತ್ತು, ಸೈನ್ಸ್‌ ಯಾಕ್ರೀ ಬೇಕಿತ್ತು?

ಅರ್ಥ ಆಯ್ತಲ್ಲ, ಇಲ್ಲಿ ಲೆಕ್ಕಾಚಾರ ಬರೋದಿಲ್ಲ. ಇದು ಬೇರೆ ತರ ಇರ್ತದೆ. ಅನಾಲಿಸಿಸ್‌ ಅಸೆಸ್ಮೆಂಟ್ ಮೆಡಿಕಲ್ ಫೀಲ್ಡ್‌ ಅದು. ಅಲ್ಲಿ ಬೇರೆ ತರ ಇರುತ್ತೆ. ನಾವು ಪ್ರೊಬಬಲಿಟೀಸ್‌ ಅಂತ ಮಾತಾಡ್ತೀವಿ. ಅರ್ಥ ಆಯ್ತಲ್ಲ ನಾನ್ ಹೇಳಿದ್ದು, ಅದು ಬೇರೆ" ಎಂದು ಡಾಕ್ಟರ್ ಭಾನುಪ್ರಕಾಶ್‌ ವಿಡಿಯೋದಲ್ಲಿ ಮಾತು ಮುಗಿಸಿದ್ದಾರೆ.

ಈ ವಿಡಿಯೋವನ್ನು ಸನಾತನ ಎಂಬ ಎಕ್ಸ್‌ ಖಾತೆಯಲ್ಲಿ ನಿನ್ನೆ ರಾತ್ರಿ ಶೇರ್ ಮಾಡಲಾಗಿದೆ. ಆಗಲೇ 24 ಸಾವಿರಕ್ಕೂ ಹೆಚ್ಚು ವೀಕ್ಷಣೆ 600ಕ್ಕೂ ಹೆಚ್ಚು ಲೈಕ್ಸ್, 100ಕ್ಕೂ ಹೆಚ್ಚು ಕಾಮೆಂಟ್ಸ್ ಪಡೆದುಕೊಂಡಿದೆ.