LIVE UPDATES
ಆನ್ಲೈನ್ ಮೂಲಕ ಪಡೆಯಿರಿ ದಸರಾ ಗೋಲ್ಡ್ ಕಾರ್ಡ್; ಈ ದಿನದಿಂದ ಟಿಕೆಟ್ ಖರೀದಿಗೆ ಅವಕಾಶ, ದರ ಎಷ್ಟು?
Karnataka News Live September 23, 2024 : ಆನ್ಲೈನ್ ಮೂಲಕ ಪಡೆಯಿರಿ ದಸರಾ ಗೋಲ್ಡ್ ಕಾರ್ಡ್; ಈ ದಿನದಿಂದ ಟಿಕೆಟ್ ಖರೀದಿಗೆ ಅವಕಾಶ, ದರ ಎಷ್ಟು?
Sep 23, 2024 07:40 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: ಆನ್ಲೈನ್ ಮೂಲಕ ಪಡೆಯಿರಿ ದಸರಾ ಗೋಲ್ಡ್ ಕಾರ್ಡ್; ಈ ದಿನದಿಂದ ಟಿಕೆಟ್ ಖರೀದಿಗೆ ಅವಕಾಶ, ದರ ಎಷ್ಟು?
- Mysore Dasara 2024: ಆನ್ಲೈನ್ ಮುಖಾಂತರ ಮೈಸೂರು ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರಿಗೂ ಸಿಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 5 ದಿನಗಳ ಕಾಲ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 26 ರಿಂದ 30 ರವರೆಗೂ ಮಾರಾಟಕ್ಕೆ ಅವಕಾಶ ಇರಲಿದೆ.
ಕರ್ನಾಟಕ News Live: Munirathna: ಸಿವಿಲ್ ಕಾಂಟ್ರ್ಯಾಕ್ಟರ್, ಸಿನಿಮಾ ಮತ್ತು ರಾಜಕೀಯ; ಬಂಧನದಲ್ಲಿರುವ ಮುನಿರತ್ನಗೆ ವಿವಾದಗಳು ಹೊಸದೇನಲ್ಲ!
- Munirathna Controversy: ಹಲವು ಪ್ರಕರಣಗಳಲ್ಲಿ ಬಿಜೆಪಿ ಶಾಸಕ ಮುನಿರತ್ನ ಬಂಧನದಲ್ಲಿದ್ದಾರೆ. ಆದರೆ ಅವರು ಒಂದರ ಮೇಲೊಂದು ವಿವಾದಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ತಾನು ರಾಜಕೀಯಕ್ಕೆ ಪ್ರವೇಶಿಸಿದ ದಿನದಿಂದ ಇಲ್ಲಿಯವರೆಗೂ ಒಂದಲ್ಲ, ಒಂದು ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಮುನಿರತ್ನ ಬೆಳೆದು ಬಂದ ವಿವಾದಗಳ ಹಾದಿ ಹೇಗಿದೆ ನೋಡಿ.
ಕರ್ನಾಟಕ News Live: ಬಾಗಲಕೋಟೆ-ವಿಜಯಪುರ ನಡುವೆ ಅಕ್ಟೋಬರ್ 2ರವರೆಗೂ ರೈಲು ಸಂಚಾರದಲ್ಲಿ ವ್ಯತ್ಯಯ ಮುಂದುವರಿಕೆ; ಬೆಂಗಳೂರು, ಮೈಸೂರು, ಮಂಗಳೂರು ರೈಲುಗಳ ಸೇವೆ ಕಡಿತ
ಭಾರತೀಯ ರೈಲ್ವೆ ಹುಬ್ಬಳ್ಳಿ ನೈರುತ್ಯ ವಲಯದ ವಿಜಯಪುರ-ಬಾಗಲಕೋಟೆ ರೈಲು ನಿಲ್ದಾಣ ನಡುವಿನ ಕೂಡಗಿ ಬಳಿ ಕಾಮಗಾರಿ ನಡೆದಿರುವುದರಿಂದ ಕೆಲವು ರೈಲುಗಳ ಭಾಗಶಃ ರದ್ದತಿ ಮುಂದುವರಿಯಲಿದೆ.
ಕರ್ನಾಟಕ News Live: ಮೈಸೂರು ದಸರಾ ಆನೆಗಳೊಂದಿಗೆ ಫೋಟೋ ಶೂಟ್ಸ್, ರೀಲ್ಸ್‌ಗೆ ಬ್ರೇಕ್, ಧನಂಜಯ್- ಕಂಜನ್ ಆನೆ ಕಾಳಗ ಬಳಿಕ ಅರಣ್ಯ ಸಚಿವ ಕಟ್ಟಾಜ್ಞೆ
- ಮೈಸೂರು ಅರಮನೆ ಆವರಣದಲ್ಲಿ ಧನಂಜಯ ಹಾಗೂ ಕಂಜನ್ ಆನೆಗಳ ಗದ್ದಲದ ನಂತರ ದಸರಾ ಆನೆಗಳೊಂದಿಗೆ ಫೋಟೋ ಶೂಟ್ ಹಾಗೂ ವಿಡಿಯೋ ಮಾಡದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಕರ್ನಾಟಕ News Live: ಶ್ರೀರಂಗಪಟ್ಟಣದಲ್ಲಿ ಅಕ್ಟೋಬರ್ 4 ರಿಂದ 7 ವರೆಗೆ ದಸರಾ: ಅಂಬಾರಿ ಹೊರಲಿದ್ದಾನೆ ಮಹೇಂದ್ರ, ಈ ಬಾರಿ ಏನಿರಲಿದೆ ವಿಶೇಷ
- ಮೈಸೂರು ದಸರಾದ ಮೂಲ ಸ್ಥಳವಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಈ ಬಾರಿ ಅದ್ದೂರಿಯಾಗಿ ದಸರಾ ಆಚರಿಸಲು ಮಂಡ್ಯ ಜಿಲ್ಲಾಡಳಿತ ಅಣಿಯಾಗಿದೆ. ಅಕ್ಟೋಬರ್ 4 ರಿಂದ 7ರವರೆಗೆ ದಸರಾ ಇರಲಿದೆ.
ಕರ್ನಾಟಕ News Live: ಬೆಂಗಳೂರಿನಲ್ಲಿ ಆಟದ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಸಾವು; ಬಿಬಿಎಂಪಿ ವಿರುದ್ಧ ಆಕ್ರೋಶ
- ಬೆಂಗಳೂರಿನಲ್ಲಿ ಆಟದ ಮೈದಾನದ ಗೇಟ್ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆ ಬಳಿಕ ಬಿಬಿಎಂಪಿ ವಿರುದ್ಧ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಪ್ರಕರಣ ದಾಖಲಾಗಿದೆ.
ಕರ್ನಾಟಕ News Live: ದೆಹಲಿಯ ಶ್ರದ್ದಾ ಮಾದರಿಯಲ್ಲೇ ಬೆಂಗಳೂರಿನ ಮಹಾಲಕ್ಷ್ಮಿ ಕೊಲೆ, 50 ತುಂಡು ಪತ್ತೆ, ಅನೈತಿಕ ಸಂಬಂಧದ ಶಂಕೆ; ಭೀಕರ ಕೊಲೆಯ 10 ಅಂಶಗಳು
- ಬೆಂಗಳೂರಿನಲ್ಲಿ ಮಹಿಳೆ ಭೀಕರ ಕೊಲೆ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟ ಪ್ರಕರಣದಲ್ಲಿ ಯಾರ ಪಾತ್ರವಿದೆ ಎನ್ನುವ ಕುರಿತು ಪೊಲೀಸ್ ತನಿಖೆ ಚುರುಕುಗೊಂಡಿದೆ. ಪ್ರಕರಣದ ಕುರಿತ ಮಾಹಿತಿ ಇಲ್ಲಿದೆ.
ಕರ್ನಾಟಕ News Live: ಮೊದಲು ಬೆಂಗಳೂರು ಬಿಟ್ಟು ತೊಲಗಿ; ಉದ್ಯಾನ ನಗರಿ ಖಾಲಿ ಹೊಡೆಯುತ್ತೆ ಎಂದ ಉತ್ತರ ಭಾರತ ಮಹಿಳೆ ವಿರುದ್ಧ ಕನ್ನಡಿಗರ ಒಕ್ಕೊರಲ ಧ್ವನಿ
- ಟ್ರಾವೆಲ್ ವ್ಲಾಗರ್ ಎಂದು ಹೇಳಿಕೊಳ್ಳುವ ಸುಗಂಧ್ ಶರ್ಮಾ ಎಂಬ ಮಹಿಳೆ, ಉತ್ತರ ಭಾರತೀಯರು ಇಲ್ಲದಿದ್ದರೆ ಬೆಂಗಳೂರು ನಗರ ಖಾಲಿಯಾಗಿ ಕಾಣಲಿದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಕನ್ನಡ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ News Live: ಮೈಸೂರು ದಸರಾ ಯಾವಾಗ ಶರಣ ನವರಾತ್ರಿ ಆಯಿತು; ನಾಡಹಬ್ಬದ ವೆಬ್‌ಸೈಟ್ ಮಾತ್ರ ಮಾಹಿತಿ ಅಪೂರ್ಣ, ದೋಷಗಳೂ ನುಸುಳಿವೆ
ಮೈಸೂರು ದಸರಾ ವೆಬ್‌ಸೈಟ್ ಅಪೂರ್ಣದಿಂದ ಕೂಡಿದೆ. ಇದರಿಂದ ದಸರಾ ಕುರಿತು ಸೂಕ್ತ ಮಾಹಿತಿಯೇ ಸಿಗದೇ ಪ್ರವಾಸಿಗರು ನಿರಾಶೆ ಆಗುವುದಂತೂ ನಿಜ.
ಕರ್ನಾಟಕ News Live: ಮಳೆ ಕಡಿಮೆ, ಆಹ್ಲಾದಕರ ವಾತಾವರಣ; ದಸರಾ ಸಂಭ್ರಮ-ಪ್ರವಾಸ ಯೋಜನೆಗೆ ಅಕ್ಟೋಬರ್ ಸೂಕ್ತ; ಕರ್ನಾಟಕ ಹವಾಮಾನ ಮುನ್ಸೂಚನೆ
- Karnataka Weather: ಪ್ರವಾಸ ಯೋಜನೆಗೆ ಅಕ್ಟೋಬರ್ ಸೂಕ್ತ ಎನಿಸುವ ತಿಂಗಳು. ಸಾಧಾರಣ ಬಿಸಿಲು, ಆಹ್ಲಾದಕರ ವಾತಾವರಣ ಹಾಗೂ ಕಡಿಮೆ ಮಳೆಯಿಂದಾಗಿ ರಾಜ್ಯದಾದ್ಯಂತ ಪ್ರವಾಸ ಹೋಗುವುದು ಸುಲಭ. ಹಾಗಿದ್ದರೆ ಮುಂದಿನ ತಿಂಗಳು ಕರ್ನಾಟಕದ ಹವಾಮಾನ ಮುನ್ಸೂಚನೆ ಹೇಗಿದೆ ಎಂದು ನೋಡೋಣ.
ಕರ್ನಾಟಕ News Live: ಮೈಸೂರು ದಸರಾ: ಉದ್ಘಾಟನೆ ಯಾವಾಗ, ವಿಜಯದಶಮಿ ನಂದಿಪೂಜೆ, ಪುಷ್ಪಾರ್ಚನೆ ಎಷ್ಟು ಹೊತ್ತಿಗೆ; 10 ದಿನದ ಧಾರ್ಮಿಕ ಚಟುವಟಿಕೆ ವಿವರ
- ವಿಶ್ವ ವಿಖ್ಯಾತ ಮೈಸೂರು ದಸರಾಗೆ ಧಾರ್ಮಿಕ ಮಹತ್ವವೂ ಉಂಟು. ದಸರಾ ಉದ್ಘಾಟನೆ, ವಿಜಯದಶಮಿ ಪೂಜೆಗಳು ಧಾರ್ಮಿಕ ಹಿನ್ನೆಲೆಯೊಂದಿಗೆ ನಡೆಯುತ್ತವೆ. ಈ ಬಾರಿಯ ಈ ಚಟುವಟಿಕೆಗಳ ವಿವರ ಇಲ್ಲಿದೆ.
ಕರ್ನಾಟಕ News Live: ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಕಲಬುರಗಿ, ತುಮಕೂರು ಸಹಿತ 16 ಜಿಲ್ಲೆಗಳಲ್ಲಿ ಭಾರೀ ಮಳೆ ಅಲರ್ಟ್, ಧಾರವಾಡ, ಮಡಿಕೇರಿಯಲ್ಲಿ ಉಷ್ಣಾಂಶ ಕುಸಿತ
- ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸೋಮವಾರದಂದು ಮಳೆಯಾಗಬಹುದು ಎನ್ನುವ ಮುನ್ಸೂಚನೆಯನ್ನು ನೀಡಲಾಗಿದೆ. ಕರಾವಳಿ ಭಾಗದಲ್ಲಿ ಕೊಂಚ ಹೆಚ್ಚೇ ಮಳೆಯಾಗಬಹುದು.