ಮೈಸೂರು ದಸರಾ: ಉದ್ಘಾಟನೆ ಯಾವಾಗ, ವಿಜಯದಶಮಿ ನಂದಿಪೂಜೆ, ಪುಷ್ಪಾರ್ಚನೆ ಎಷ್ಟು ಹೊತ್ತಿಗೆ; 10 ದಿನದ ಧಾರ್ಮಿಕ ಚಟುವಟಿಕೆ ವಿವರ-mysore news mysore dasara 2024 inauguration vijayadashami nandi pooja jamboo savari starting timeline released kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ದಸರಾ: ಉದ್ಘಾಟನೆ ಯಾವಾಗ, ವಿಜಯದಶಮಿ ನಂದಿಪೂಜೆ, ಪುಷ್ಪಾರ್ಚನೆ ಎಷ್ಟು ಹೊತ್ತಿಗೆ; 10 ದಿನದ ಧಾರ್ಮಿಕ ಚಟುವಟಿಕೆ ವಿವರ

ಮೈಸೂರು ದಸರಾ: ಉದ್ಘಾಟನೆ ಯಾವಾಗ, ವಿಜಯದಶಮಿ ನಂದಿಪೂಜೆ, ಪುಷ್ಪಾರ್ಚನೆ ಎಷ್ಟು ಹೊತ್ತಿಗೆ; 10 ದಿನದ ಧಾರ್ಮಿಕ ಚಟುವಟಿಕೆ ವಿವರ

ವಿಶ್ವ ವಿಖ್ಯಾತ ಮೈಸೂರು ದಸರಾಗೆ ಧಾರ್ಮಿಕ ಮಹತ್ವವೂ ಉಂಟು. ದಸರಾ ಉದ್ಘಾಟನೆ, ವಿಜಯದಶಮಿ ಪೂಜೆಗಳು ಧಾರ್ಮಿಕ ಹಿನ್ನೆಲೆಯೊಂದಿಗೆ ನಡೆಯುತ್ತವೆ. ಈ ಬಾರಿಯ ಈ ಚಟುವಟಿಕೆಗಳ ವಿವರ ಇಲ್ಲಿದೆ.

ಮೈಸೂರು ದಸರಾದ ಧಾರ್ಮಿಕ ಚಟುವಟಿಕೆಗಳ ವಿವರಗಳನ್ನು ಬಿಡುಗಡೆ ಮಾಡಲಾಗಿದೆ.
ಮೈಸೂರು ದಸರಾದ ಧಾರ್ಮಿಕ ಚಟುವಟಿಕೆಗಳ ವಿವರಗಳನ್ನು ಬಿಡುಗಡೆ ಮಾಡಲಾಗಿದೆ.

ಮೈಸೂರು: ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಗಮನ ಸೆಳೆದಿರುವ ಮೈಸೂರು ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಯಲ್ಲಿ ಧಾರ್ಮಿಕ ಚಟುವಟಿಕೆಗಳಿಗೂ ಎಲ್ಲಿಲ್ಲದ ಮಹತ್ವ. ಮೈಸೂರಿನ ಮುಕುಟದಂತಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಕೆ, ಆನಂತರ ಚಾಮುಂಡೇಶ್ವರಿ ದೇವಿಯನ್ನು ಚಿನ್ನದ ಅಂಬಾರಿಯಲ್ಲಿ ಕೂರಿಸಿ ಜಂಬೂ ಸವಾರಿಯಲ್ಲಿ ಮೆರವಣಿಗೆ ಮಾಡುವ ವಿಜಯದಶಮಿಯ ಸಡಗರ ಎಲ್ಲದಕ್ಕೂ ಇತಿಹಾಸ, ಪರಂಪರೆಯ ಮಹತ್ವವಿದೆ. ಈ ಎಲ್ಲಾ ಚಟುವಟಿಕೆಗಳು, ಮುಖ್ಯವಾಗಿ ದಸರಾ ಉದ್ಘಾಟನೆ ಸಮಯ, ವಿಜಯದಶಮಿ ದಿನ ನಂದಿ ಧ್ವಜ ಪೂಜೆ ಹಾಗೂ ಚಾಮುಂಡೇಶ್ವರಿ ತಾಯಿಗೆ ಸಿಎಂ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಮಾಡುವ ಸಮಯವೂ ಸೇರಿದಂತೆ ಧಾರ್ಮಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಯಾವ ದಿನ ಏನೇನು

ಅಕ್ಟೊಬರ್‌ 3 -ಗುರುವಾರ

ಶರನ್ನವರಾತ್ರಿ ಪ್ರಾರಂಭ- ಶೈಲ ವ್ರತ, ಬೆಳಗ್ಗೆ 10:15 - 10:36 ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಪೂಜೆ (ಜಯಲಕ್ಷ್ಮಿವ್ರತ). ಉದ್ಘಾಟನೆ- ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರಿಂದ. ತಿಥಿ: ಪ್ರಥಮಾ ಸಂಜೆ 5:45 - 6:30 ಶುಭ ಮೇಷ ಲಗ್ನದಲ್ಲಿ ಅರಮನೆ ಪೂಜೆ ತಿಥಿ: ಪ್ರಥಮ

ಅಕ್ಟೊಬರ್‌ 4 -ಶುಕ್ರವಾರ

ಬ್ರಹ್ಮಚಾರಿಣೀ ತಿಥಿ: ದ್ವಿತೀಯ

ಅಕ್ಟೊಬರ್‌ 5 -ಶನಿವಾರ

ಚಂದ್ರಘಂಟಾ ತಿಥಿ: ತೃತೀಯ

ಅಕ್ಟೊಬರ್‌ 6- ಭಾನುವಾರ

ಕೂಷ್ಮಾಂಡ ತಿಥಿ: ಚತುರ್ಥಿ

ಅಕ್ಟೊಬರ್‌ 7 - ಸೋಮವಾರ

ಸ್ಕಂದ ಮಾತಾ ತಿಥಿ: ಪಂಚಮಿ

ಅಕ್ಟೊಬರ್‌ 8 - ಮಂಗಳವಾರ

ಕಾತ್ಯಾಯಿನಿ - ಸರಸ್ವತಿ ಪೂಜಾ (ಮೂಲಾ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಪ್ರಾರಂಭ ಮಾಡಿ ಶ್ರವಣ ನಕ್ಷತ್ರದ ದಿನ ಅಂದರೆ 24- 10-2023ರ ಮಂಗಳವಾರ ವಿಸರ್ಜನೆ ) ತಿಥಿ: ಷಷ್ಠಿ

ಅಕ್ಟೊಬರ್‌ 9- ಬುಧವಾರ

ಕಾಳರಾತ್ರಿ - ಮಹಿಷಾಸುರ ಸಂಹಾರ ತಿಥಿ: ಸಪ್ತಮಿ

ಅಕ್ಟೊಬರ್‌ 10 - ಗುರುವಾರ

ದುರ್ಗಾಷ್ಟಮಿ - ಸಿದ್ಧಿ ಧಾತ್ರಿ ತಿಥಿ: ಅಷ್ಟಮಿ

ಅಕ್ಟೊಬರ್‌ 11 - ಶುಕ್ರವಾರ

ಮಹಾನವಮಿ - ಆಯುಧ ಪೂಜೆ, ಹಯಗ್ರೀವ ಪೂಜೆ, ಗಜಾಶ್ವಾದಿ ಪೂಜೆ, ಅಮಲುದೇವತಾ ಪೂಜೆ, ಮಹಾಗೌರಿ ತಿಥಿ: ನವಮಿ

ಅಕ್ಟೊಬರ್‌ 12 - ಶನಿವಾರ

ಮಧ್ಯಾಹ್ನ 1:46 - 2:08 ವಿಜಯ ದಶಮಿ ಮಧ್ಯಾಹ್ನ ಮಕರ ಲಗ್ನದಲ್ಲಿ ಮಂಗಳವಾರ ನಂದೀ ಧ್ವಜ ಪೂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ. ತಿಥಿ: ದಶಮಿ ಸಂಜೆ 4:30 - 5:00 ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗಣ್ಯಾತಿಗಣ್ಯರಿಂದ ಪುಷ್ಪಾರ್ಚನೆ ನಂತರ ಜಂಬೂ ಸವಾರಿ ಪ್ರಾರಂಭ

ಅಕ್ಟೊಬರ್‌ 13 - ಭಾನುವಾರ

ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿದೇವಿ ರಥೋತ್ಸವ

mysore-dasara_Entry_Point