ಕೆಮ್ಮು-ಶೀತವೆಂದು ಡಾಕ್ಟರ್ ಬಳಿ ಓಡ್ಬೇಡಿ; ಅಡುಗೆಮನೆಯಲ್ಲೇ ಇದೆ ಹತ್ತಾರು ಔಷಧಿ, ಮನೆಮದ್ದೇ ರಾಮಬಾಣ
Oct 14, 2024 03:22 PM IST
ಮನೆಮದ್ದು: ಕೆಮ್ಮು- ಶೀತವೆಂದು ಡಾಕ್ಟರ್ ಬಳಿ ಓಡ್ಬೇಡಿ; ಅಡುಗೆಮನೆಯಲ್ಲೇ ಇದೆ ಹತ್ತಾರು ಔಷಧಿ
- ಕೆಮ್ಮು ಮತ್ತು ಶೀತ ಹೇಳಲು ಸಣ್ಣ ಸಮಸ್ಯೆಯಾದರೂ, ಅದು ಕೊಡು ಉಪಟಳ ಅಷ್ಟಿಷ್ಟಲ್ಲ. ನಿದ್ದೆಯನ್ನೇ ಕಸಿದುಕೊಳ್ಳುವ ಸಾಮರ್ಥ್ಯ ಇದಕ್ಕಿದೆ. ಕೆಮ್ಮು ಮತ್ತು ಶೀತ ತಡೆಗಟ್ಟಲು ಮನೆಮದ್ದು ನಿಮಗೆ ಸಹಾಯ ಮಾಡುತ್ತೆ. ಅಡುಗೆಮನೆಯ ಪದಾರ್ಥಗಳೇ ಇದಕ್ಕೆ ಸಾಕು.
ಮಳೆಗಾಲದಲ್ಲಿ ಶೀತ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಈ ಸಮಯದಲ್ಲಿ ವೈದ್ಯರು ಅದಕ್ಕೆ ಔಷಧ ಕೊಡುತ್ತಾರೆ. ನ್ಯುಮೋನಿಯಾದಂತಹ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪ್ರತಿಜೀವಕಗಳು ಅಥವಾ ಆಂಟಿಬಯೋಟಿಕ್‌ಗಳನ್ನು ಬಳಸಲಾಗುತ್ತದೆ. ಆದರೆ, ಇದು ಶೀತ, ಜ್ವರ ಮತ್ತು ನೋಯುತ್ತಿರುವ ಗಂಟಲುಗಳಂತಹ ವೈರಲ್ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಲ್ಲ. ಭಾರತೀಯ ಔಷಧಗಳಲ್ಲಿ ಅಡುಗೆ ಮನೆಯೇ ಮೊದಲ ಔಷಧಾಲಯ. ಹಲವು ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ಆಯುರ್ವೇದದಲ್ಲಿದೆ. ಹೀಗಾಗಿ ಕೆಮ್ಮು ಮತ್ತು ಶೀತವನ್ನು ತಡೆಗಟ್ಟಲು ಕೂಡಾ ನಮ್ಮ ಅಡುಗೆಮನೆಯ ಆಹಾರಗಳೇ ದಿವ್ಯ ಔಷಧ.
ಶೀತ, ನೆಗಡಿ ಮತತ್ತು ಕೆಮ್ಮಿನಂಥಾ ಸಮಸ್ಯೆಗಳಿಗೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. ಅಡುಗೆ ಮನೆಯ ಪದಾರ್ಥಗಳಲ್ಲೇ ಔಷಧ ಗುಣಗಳಿವೆ. ಹಾಗಿದ್ರೆ ಕೆಮ್ಮು ಮತ್ತು ಶೀತಕ್ಕೆ ಮದ್ದು ಏನು ಎಂಬುದನ್ನು ನೋಡೋಣ.
ಕಾಡುವ ಕೆಮ್ಮಿಗೆ ಪರಿಹಾರಗಳು
- ಜೇನುತುಪ್ಪ ಮತ್ತು ನಿಂಬೆರಸ: ಕಾಡುವ ಕೆಮ್ಮು ಶಮನಗೊಳಿಸಲು ಜೇನುತುಪ್ಪ ಮತ್ತು ನಿಂಬೆ ರಸವನ್ನು ಒಂದು ಚಮಚದಲ್ಲಿ ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಸೇವಿಸಿ.
- ಈರುಳ್ಳಿ ಮತ್ತು ಜೇನುತುಪ್ಪ: ಕೆಮ್ಮು ಕಡಿಮೆಯಾಗಲು ಈರುಳ್ಳಿ ಕೂಡಾ ಒಳ್ಳೆಯದು. ಈರುಳ್ಳಿಯನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಸೇವಿಸಿ.
- ಶುಂಠಿ ಚಹಾ: ಹಸಿ ಶುಂಠಿಯನ್ನು ಜಜ್ಜಿ ಬಿಸಿ ನೀರಿಗೆ ಬೆರೆಸಿ ಸೋಸಿ ಕುಡಿಯಿರಿ. ನಿತ್ಯ ಕುಡಿಯುವ ಚಹಾಗೂ ಹಸಿ ಶುಂಠಿ ಜಜ್ಜಿ ಹಾಕಿ ಕುಡಿದರೆ ಉತ್ತಮ.
- ಥೈಮ್ ಎಲೆ ಟೀ: ಚಿಕ್ಕ ಗಾತ್ರದ ಥೈಮ್ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿಯಿರಿ.
- ಹಬೆ ತೆಗೆದುಕೊಳ್ಳಿ: ಯೂಕಲಿಪ್ಟಸ್ ಎಣ್ಣೆಯನ್ನು ಕುದಿಸಿದಿ ನೀರಿಗೆ ಸ್ವಲ್ಪ ಬೆರೆಸಿ ಅದರ ಹಬೆಯನ್ನು ತೆಗೆದುಕೊಳ್ಳಿ.
ಶೀತದಿಂದ ಮುಕ್ತಿ ಪಡೆಯಲು ಸುಲಭ ಪರಿಹಾರಗಳು
- ಚಿಕನ್ ಸೂಪ್: ಬಿಸಿಬಿಸಿ ಸೂಪ್ ಶೀತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು.
- ಶುಂಠಿ ಮತ್ತು ಬೆಳ್ಳುಳ್ಳಿ: ರೋಗನಿರೋಧಕ ಶಕ್ತಿ ಹೆಚ್ಚಿಸಲು ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಜಜ್ಜಿ ಮಿಶ್ರಣ ಮಾಡಿ ಸೇವಿಸಿ.
- ಯೂಕಲಿಪ್ಟಸ್ ಎಣ್ಣೆ: ಸ್ನಾನ ಮಾಡುವ ಬಿಸಿ ನೀರಿಗೆ ಸೇರಿಸಿ ಅಥವಾ ಹಬೆ ಇನ್ಹೇಲ್ ಮಾಡಿ.
ಇದನ್ನೂ ಓದಿ | ನೇರಳೆ ಹಣ್ಣಿನಿಂದ ಆರೋಗ್ಯಕರ ಡಯೆಟ್ ಪ್ಲಾನ್; ಬರೀ ಹಣ್ಣು ತಿನ್ನೋ ಬದಲು ಈ ವಿಧಾನದಲ್ಲೂ ಹೊಟ್ಟೆಗಿಳಿಸಬಹುದು
ಇದರೊಂದಿಗೆ ಇನ್ನೂ ಕೆಲವು ಪರಿಹಾರ ವಿಧಾನಗಳಿವೆ. ಈ ವಿಧಾನವು ಶೀತ ಮತ್ತು ಕೆಮ್ಮು ಎರಡಕ್ಕೂ ಪರಿಹಾರ ಕೊಡುತ್ತೆ.
- ಅರಿಶಿನ ಹಾಲು: ಬಿಸಿ ಹಾಲಿಗೆ ಸ್ವಲ್ಪ ಅರಿಶಿನ ಪುಡಿ ಮಿಶ್ರಣ ಮಾಡಿ ಕುಡಿಯಿರಿ.
- ಶುಂಠಿ ಮತ್ತು ದಾಲ್ಚಿನ್ನಿ ಟೀ: ಬಿಸಿ ನೀರಿಗೆ ಜಜ್ಜಿದ ಶುಂಠಿ ಮತ್ತು ದಾಲ್ಚಿನ್ನಿ ಹಾಕಿ ಬಿಸಿಬಿಸಿಯಾಗಿ ಕುರಿಯಿರಿ.
- ತರಕಾರಿ ಸೂಪ್: ಜ್ವರ ಬಂದಾಗ, ಶುಂಠಿ, ಬೆಳ್ಳುಳ್ಳಿ, ಅರಿಶಿನ ಮತ್ತು ಕರಿಮೆಣಸಿನ ಪರಿಮಳಯುಕ್ತ ತರಕಾರಿ ಸೂಪ್ ಕುಡಿಯಿರಿ. ಇದರಿಂದ ಬರುವ ಉಗಿಯು ಮೂಗಿನ ಕೆಳಗೆ ಲೋಳೆಯ ಹರಿವನ್ನು ಸರಾಗಗೊಳಿಸುತ್ತದೆ.
- ಪೌಷ್ಟಿಕಾಂಶಯುತ ಸೂಪ್ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಿಸಿ ಸೂಪ್ ಕುಡಿಯುವುದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೆ ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಇನ್ನಷ್ಟು ಆರೋಗ್ಯ ಸಲಹೆಗಳಿಗೆ ಇಲ್ಲಿ ಕ್ಲಿಕ್ ಮಾಡಿ