ರಾತ್ರಿ ಮಲಗುವ ಮುನ್ನ ಈ ತಪ್ಪನ್ನು ಎಂದಿಗೂ ಮಾಡಬೇಡಿ: ಇವು ನಿದ್ರಾಹೀನತೆ ಸಮಸ್ಯೆಗೆ ಕಾರಣವಾಗಬಹುದು
ರಾತ್ರಿ ನಿದ್ದೆ ಬಾರದಿರುವುದಕ್ಕೆ ಹಲವು ಕಾರಣಗಳಿರಬಹುದು. ಕೆಲವರು ತಿಳಿದೋ ತಿಳಿಯದೆಯೋ ಇಂತಹ ತಪ್ಪುಗಳನ್ನು ಮಾಡುವುದರಿಂದ ಅವರ ನಿದ್ರೆಯ ಚಕ್ರಕ್ಕೆ ತೊಂದರೆಯಾಗುತ್ತದೆ. ನಿದ್ದೆ ತಡವಾಗಲು ಅಥವಾ ನಿದ್ರಾಹೀನತೆ ಸಮಸ್ಯೆಗೆ ಏನು ಕಾರಣವಿರಬಹುದು ಎಂಬುದು ಇಲ್ಲಿದೆ:
ಪ್ರತಿಯೊಬ್ಬರೂ ರಾತ್ರಿಯಲ್ಲಿ ಶಾಂತಿಯುತವಾಗಿ ನಿದ್ದೆ ಮಾಡಲು ಬಯಸುತ್ತಾರೆ. ಮಲಗುವ ಮುನ್ನ ತುಂಬಾ ನಿದ್ದೆ ಬರುತ್ತಿದ್ದರೂ ಮಲಗಲು ಆಗದೆ, ಎಲ್ಲಾ ಕೆಲಸವನ್ನು ಮುಗಿಸಿ ದಿಂಬಿಗೆ ತಲೆಯಿಟ್ಟು ಮಲಗಿದಾಗ ನಿದ್ದೆ ಕಣ್ಣಿಗೆ ಹತ್ತುವುದೇ ಇಲ್ಲ. ಎಷ್ಟೇ ಹೊರಳಾಡಿದ್ರೂ ನಿದ್ದೆ ಬರುವುದಿಲ್ಲ. ಇಂದು ಬಹಳಷ್ಟು ಮಂದಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಂಜೆ 6 ಗಂಟೆ ಅಥವಾ 7 ಗಂಟೆಗೆಲ್ಲಾ ಕಣ್ಣು ತೂಕಡಿಸುತ್ತಿರುತ್ತದೆ. ಆದರೆ, ಇನ್ನೇನು ಮಲಗುವ ಸಮಯದಲ್ಲಿ ನಿದ್ದೆಯೇ ಬರುವುದಿಲ್ಲ. ಇದಕ್ಕೆ ಏನು ಕಾರಣವಿರಬಹುದು ಎಂದು ಬಹುತೇಕ ಮಂದಿ ಚಿಂತಿಸುತ್ತಾರೆ. ಪ್ರತಿದಿನ ಈ ರೀತಿ ಸರಿಯಾಗಿ ನಿದ್ದೆ ಬರದಿದ್ದರೆ ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸಬಹುದು. ರಾತ್ರಿ ನಿದ್ದೆ ಬಾರದಿರುವುದಕ್ಕೆ ಹಲವು ಕಾರಣಗಳಿರಬಹುದು. ಕೆಲವರು ತಿಳಿದೋ ತಿಳಿಯದೆಯೋ ಇಂತಹ ತಪ್ಪುಗಳನ್ನು ಮಾಡುವುದರಿಂದ ಅವರ ನಿದ್ರೆಯ ಚಕ್ರಕ್ಕೆ ತೊಂದರೆಯಾಗುತ್ತದೆ. ನಿದ್ದೆ ತಡವಾಗಲು ಅಥವಾ ನಿದ್ರಾಹೀನತೆ ಸಮಸ್ಯೆಗೆ ಏನು ಕಾರಣವಿರಬಹುದು ಎಂಬುದು ಇಲ್ಲಿದೆ:
ನಿದ್ರಾಹೀನತೆ ಸಮಸ್ಯೆಗೆ ಏನು ಕಾರಣ
ಚಹಾ ಅಥವಾ ಕಾಫಿ ಕುಡಿಯುವುದು: ಕೆಲವರಿಗೆ ರಾತ್ರಿ ಮಲಗುವ ಮುನ್ನ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಈ ಅಭ್ಯಾಸದಿಂದಾಗಿ, ರಾತ್ರಿಯಲ್ಲಿ ನಿದ್ರಾಹೀನತೆಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಚಹಾ ಅಥವಾ ಕಾಫಿ ಕುಡಿಯಲು ಬಯಸಿದರೆ, ಮಲಗುವ ಕನಿಷ್ಠ 4 ರಿಂದ 6 ಗಂಟೆಗಳ ಮೊದಲು ಚಹಾ ಅಥವಾ ಕಾಫಿಯನ್ನು ಸೇವಿಸಿ. ರಾತ್ರಿ ಊಟದ ನಂತರ ಟೀ ಅಥವಾ ಕಾಫಿ ಕುಡಿಯದಿರಿ. ಅದರ ಬದಲು ಹಾಲು ಕುಡಿಯಬಹುದು. ನಿದ್ದೆಯೂ ಚೆನ್ನಾಗಿ ಬರುತ್ತದೆ.
ಫೋನ್, ಲ್ಯಾಪ್‍ಟಾಪ್ ಬಳಕೆ: ಮಲಗುವಾಗ ಫೋನ್, ಲ್ಯಾಪ್‍ಟಾಪ್ ಬಳಕೆ ಮಾಡುತ್ತಿದ್ದರೆ ಇದು ನಿದ್ದೆಯ ಮೇಲೆ ಭಾರಿ ಪರಿಣಾಮ ಬೀರುತ್ತೆ. ಇದು ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಮಲಗುವ ಮುನ್ನ ಕನಿಷ್ಠ 1 ರಿಂದ 2 ಗಂಟೆಗಳ ಮೊದಲು ಮೊಬೈಲ್, ಲ್ಯಾಪ್‍ಟಾಪ್ ಬಳಕೆಯನ್ನು ನಿಲ್ಲಿಸಬೇಕು. ರಾತ್ರಿ ಮಲಗುವಾಗ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಬಳಸುವುದರಿಂದ ನಿದ್ರಾಹೀನತೆಗೆ ಕಾರಣವಾಗಬಹುದು.
ತಡರಾತ್ರಿ ಊಟ ಮಾಡುವುದು: ತಡರಾತ್ರಿ ಊಟ ಮಾಡುತ್ತಿರುವ ಅಭ್ಯಾಸ ಇದ್ದರೂ ಕೂಡ ನಿದ್ದೆ ಬೇಗ ಬರುವುದಿಲ್ಲ. ರಾತ್ರಿ ತಡವಾಗಿ ಊಟ ಮಾಡುವುದರಿಂದ ಶಾಂತಿಯುತವಾಗಿ ಮಲಗಲು ಸಾಧ್ಯವಾಗುವುದಿಲ್ಲ. ರಾತ್ರಿ ಮಲಗುವ ಕನಿಷ್ಠ ಎರಡು ಗಂಟೆಗಳ ಮೊದಲು ಆಹಾರವನ್ನು ಸೇವಿಸಬೇಕು. ಇದರಿಂದ ನಿಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ತಡವಾಗಿ ಊಟ ಮಾಡುವುದರಿಂದ ಆಹಾರ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಕೆಲವೊಮ್ಮೆ ಅಜೀರ್ಣ, ವಾಂತಿ ಇತ್ಯಾದಿ ಸಮಸ್ಯೆ ಎದುರಾಗಬಹುದು. ಇದಲ್ಲದೆ ರಾತ್ರಿ ಮಲಗುವ ಮುನ್ನ ಹೆಚ್ಚು ನೀರು ಕುಡಿಯಬಾರದು.
ಮೇಲೆ ತಿಳಿಸಿದಂತೆ ಇಂತಹ ತಪ್ಪುಗಳನ್ನು ಮಾಡುವುದರಿಂದ ಶಾಂತಿಯುತ ನಿದ್ದೆ ಪಡೆಯಲು ಅಡೆತಡೆಗಳನ್ನು ಉಂಟುಮಾಡಬಹುದು. ಪ್ರತಿದಿನ 7 ಗಂಟೆಗಳ ಉತ್ತಮ ನಿದ್ದೆ ಪಡೆಯಲು ಬಯಸಿದರೆ, ತಕ್ಷಣವೇ ಈ ಅಭ್ಯಾಸಗಳನ್ನು ಸುಧಾರಿಸಲು ಪ್ರಯತ್ನಿಸಲು ಪ್ರಾರಂಭಿಸಿ. ಕೆಲವೇ ವಾರಗಳಲ್ಲಿ ಧನಾತ್ಮಕ ಫಲಿತಾಂಶವನ್ನು ಪಡೆಯುವಿರಿ.
ವಿಭಾಗ