Ugadi Wishes 2024: ಯುಗಾದಿ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಏನು ವಿಶ್ ಮಾಡಬೇಕು ಎಂದುಕೊಂಡಿದ್ದೀರಿ? ಇಲ್ಲಿವೆ ಕೆಲವು ಐಡಿಯಾಗಳು
Ugadi Wishes 2024: ಹಬ್ಬ ಎಂದರೆ ಸಡಗರ, ಸಂಭ್ರಮ. ಪೂಜೆ ಪುನಸ್ಕಾರ ಹಬ್ಬದ ಅಡುಗೆಯ ಸಂತೋಷದ ನಡುವೆ ಪ್ರೀತಿ ಪಾತ್ರರಿಗೆ ಹಬ್ಬದ ಶುಭ ಕೋರುವುದು ಮತ್ತೊಂದು ಖುಷಿ. ಈ ಬಾರಿ ನಿಮ್ಮ ಪ್ರೀತಿಪಾತ್ರರಿಗೆ ಯುಗಾದಿ ಹಬ್ಬಕ್ಕೆ ಏನು ಶುಭ ಹಾರೈಸಬೇಕು ಎಂದು ಪ್ಲ್ಯಾನ್ ಮಾಡಿದ್ದೀರಿ? ನಿಮಗಾಗಿ ಒಂದಿಷ್ಟು ಐಡಿಯಾಗಳು ಇಲ್ಲಿವೆ ನೋಡಿ.
ಯುಗಾದಿ ಶುಭಾಶಯಗಳು: ಮತ್ತೆ ಯುಗಾದಿ ಬಂದೇಬಿಡ್ತು. ಈ ಬಾರಿ ಕ್ರೋಧಿನಾಮ ಸಂವತ್ಸರದ ಮೊದಲ ಹಬ್ಬ ಯುಗಾದಿಯನ್ನು ಆಚರಿಸಲು ಎಲ್ಲರೂ ಸಂಭ್ರಮದಿಂದ ಕಾಯುತ್ತಿದ್ದಾರೆ. ಯುಗಾದಿಯಿಂದಲೇ ಹಿಂದೂಗಳಿಗೆ ಹೊಸ ವರ್ಷ ಆರಂಭವಾಗುತ್ತದೆ. ಮನೆ ಮುಂದೆ ರಂಗೋಲಿ, ತಳಿರು ತೋರಣ, ಎಲ್ಲಿ ನೋಡಿದರೂ ಮಂತ್ರ ಘೋಷ, ಯುಗಾದಿ ಹಬ್ಬದ ಹಾಡು, ಅಡುಗೆಯ ಘಮ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡುತ್ತದೆ.
ಮೊದಲೆಲ್ಲಾ ಪತ್ರದ ಮೂಲಕ ದೂರದ ಊರಿನಲ್ಲಿ ನೆಲೆಸಿರುವ ಸ್ನೇಹಿತರಿಗೆ, ಸಂಬಂಧಿಕರಿಗೆ ಯುಗಾದಿ ಹಬ್ಬದ ಶುಭ ಕೋರಲಾಗುತ್ತಿತ್ತು. ಆದರೆ ಮೊಬೈಲ್ ಬಂದ ನಂತರ ಎಲ್ಲವೂ ಬದಲಾಗಿದೆ, ಸುಲಭವಾಗಿದೆ. ಒಂದೇ ಒಂದು ಮೆಸೇಜ್ ಮೂಲಕ ಆಪ್ತರಿಗೆ ಯುಗಾದಿ ಹಬ್ಬದ ಶುಭ ಕೋರಬಹುದಾಗಿದೆ. ವಾಟ್ಸಾಫ್, ಫೇಸ್‌ಬುಕ್ ಸೇರಿದಂತೆ ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಯುಗಾದಿ ಹಬ್ಬದ ಸಂದೇಶ ಹರಿದಾಡುತ್ತಿರುತ್ತದೆ. ನೀವೂ ಕೂಡಾ ನಿಮ್ಮ ಆತ್ಮೀಯರಿಗೆ ಯುಗಾದಿ ಶುಭ ಕೋರಬೇಕು ಎಂದುಕೊಂಡಿದ್ದರೆ ಇಲ್ಲಿದೆ ಕೆಲವೊಂದು ಸುಂದರ ವಿಶಸ್‌ಗಳು.
ಯುಗಾದಿ ಶುಭ ಹಾರೈಕೆಗಳು
- ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಚೈತನ್ಯ, ಹುರುಪು ನೀಡಲಿ. ನಿಮ್ಮ ಬಾಳಲ್ಲಿ ಸಂತೋಷವೇ ತುಂಬಿರಲಿ ಯುಗಾದಿ ಹಬ್ಬದ ಶುಭಾಶಯಗಳು.
- ಕ್ರೋಧಿನಾಮ ಸಂವತ್ಸರದ ಮೊದಲ ಹಬ್ಬ ನಿಮ್ಮ ಬದುಕಲ್ಲಿ ಸಕಲ ಐಶ್ವರ್ಯ, ಸುಖ, ಸಂತೋಷ ತರಲಿ ನಿಮಗೂ, ನಿಮ್ಮ ಕುಟುಂಬದವರಿಗೂ ಯುಗಾದಿಯ ಶುಭ ಕಾಮನೆಗಳು.
- ಯುಗಾದಿ ಅಥವಾ ಯುಗದ ಆದಿ ಎಂದರೆ ಹೊಸ ಯುಗದ ಆರಂಭವೆಂದೇ ಅರ್ಥ. ಹೊಸ ಭರವಸೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ, ಯುಗಾದಿಯ ಶುಭ ಹಾರೈಕೆಗಳು.
- ಸೃಷ್ಟಿಯ ಮೊದಲ ದಿನ, ಸೂರ್ಯನ ಕಿರಣದ ಮೊದಲ ದಿನ, ಮರ ಗಿಡಗಳು ಚಿಗುರಾಗುವ ದಿನ, ಹಿಂದೂ ವರ್ಷದ ಆರಂಭದ ದಿನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಯುಗಾದಿ ಹಬ್ಬದ ಶುಭಾಶಯಗಳು, ಬೇವು ಬೆಲ್ಲ ಸವಿಯೋಣ, ನಿಮ್ಮ ಬಾಳಿನಲ್ಲಿ ಬೇವಿಗಿಂತ ಬೆಲ್ಲವೇ ಹೆಚ್ಚಾಗಿರಲಿ ಎಂದು ಶುಭ ಹಾರೈಸುತ್ತೇನೆ.
ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಜೊತೆಯಾಗಲಿವೆ 3 ರಾಜಯೋಗಗಳು; ಹಿಂದೂಗಳ ಹೊಸ ವರ್ಷ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ತರಲಿದೆ ನೋಡಿ
- ಬದುಕಿನಲ್ಲಿ ಸಿಹಿ ಕಹಿ ಸಹಜ. ದು:ಖ ಬಂದಾಗ ಹೆದರದೆ, ಸುಖ ಬಂದಾಗ ಹಿಗ್ಗದೆ ಎರಡೂ ಸಮಾನವಾಗಿ ಸ್ವೀಕರಿಸಿ,ಈ ಯುಗಾದಿಯು ನಿಮ್ಮ ಬಾಳಲ್ಲಿನ ಕಹಿಯನ್ನು ತೊಡೆದು ಹೆಚ್ಚು ಸಿಹಿಯನ್ನೇ ತುಂಬಲಿ.
- ಬೇವಿನ ಕಹಿ ಕಡಿಮೆಯಾಗಿ, ಬೆಲ್ಲದ ಸಿಹಿ ಹೆಚ್ಚಾಗಲಿ , ದ್ವೇಷ ಅಸೂಯೆ ಮರೆಯಾಗಿ, ಮನೆ ಮನದಲ್ಲಿ ಪ್ರೀತಿಯೇ ತುಂಬಿರಲಿ, ಯುಗಾದಿ ಹಬ್ಬದ ಶುಭ ಹಾರೈಕೆಗಳು.
- ಯುಗ ಯಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷದ ಹೊಸತು ಹೊಸತು ತರುತಿದೆ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
- ಹೊಸ ಚಿಗುರಿನಂತೆ ನಿಮ್ಮ ಬಾಳಲ್ಲಿ ದುಃಖದ ದಿನಗಳು ಕಳೆದು ಹೊಸ ಸಂತೋಷ ಚಿಗುರಲಿ. ಕತ್ತಲೆ ಕಳೆದು ಹೊಸ ಬಾಳಿಗೆ ನಾಂದಿಯಾಗಲಿ ಹೊಸ ಯುಗದ ಆರಂಭ ನಿಮ್ಮ ಬದುಕಿನಲ್ಲಿ ಸಂತೋಷವನ್ನೇ ತರಲಿ ಯುಗಾದಿಯ ಶುಭ ಹಾರೈಕೆಗಳು.
ಇದನ್ನೂ ಓದಿ: ಯುಗಾದಿ ಹಬ್ಬದಂದು ನೈವೇದ್ಯಕ್ಕೆ ಪುಳಿಯೋಗರೆ ಮಾಡಬೇಕು ಅಂತಿದ್ದೀರಾ? ಇಲ್ಲಿದೆ ಸ್ಪೆಷಲ್ ಪುಳಿಯೋಗರೆ ರೆಸಿಪಿ