ಕನ್ನಡ ಸುದ್ದಿ  /  Cricket  /  Aaron Finch Becomes First Cricketer To Play For Nine Ipl Teams As He Debuts For Kolkata Knight Riders Cricket News Prs

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ತಂಡಗಳನ್ನು ಪ್ರತಿನಿಧಿಸಿದ ಆಟಗಾರ ಯಾರು? ಸುಳಿವು- 2020ರಲ್ಲಿ ಆರ್​​ಸಿಬಿ ಪರ ಆಡಿದ್ರು!

IPL Record: ಐಪಿಎಲ್​ನಲ್ಲಿ ಹೆಚ್ಚು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ ಆಟಗಾರ ಯಾರು? ಕೆಕೆಆರ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಈ ಆಟಗಾರ, 2010 ರಿಂದ 2022 ರವರೆಗೂ ಹಲವು ತಂಡಗಳ ಪರ ಆಡಿದ್ದರು.

ಐಪಿಎಲ್​ನಲ್ಲಿ ಅತ್ಯಧಿಕ ತಂಡಗಳನ್ನು ಪ್ರತಿನಿಧಿಸಿದ ಆಸೀಸ್ ಆಟಗಾರ ಯಾರು?
ಐಪಿಎಲ್​ನಲ್ಲಿ ಅತ್ಯಧಿಕ ತಂಡಗಳನ್ನು ಪ್ರತಿನಿಧಿಸಿದ ಆಸೀಸ್ ಆಟಗಾರ ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಅತ್ಯಧಿಕ ತಂಡಗಳನ್ನು ಪ್ರತಿನಿಧಿಸಿದ ದಾಖಲೆ ಹೊಂದಿರುವ ಆಟಗಾರ ಯಾರು? ಅದು ಬೇರೆ ಯಾರೂ ಅಲ್ಲ, ಆ್ಯರೋನ್ ಫಿಂಚ್. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಐಪಿಎಲ್‌ನಲ್ಲಿ ಒಟ್ಟು 9 ತಂಡಗಳ ಪರ ಆಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 2023ರಲ್ಲಿ ನಿರ್ಮಾಣವಾದ ಈ ದಾಖಲೆ ಈಗಲೂ ಮುಂದುವರೆಯುತ್ತಿದೆ. ಆ್ಯರೋನ್ ಫಿಂಚ್ ಯಾವ ತಂಡಗಳ ಪರ ಆಡಿದ್ದಾರೆ? ಇಲ್ಲಿದೆ ವಿವರ.

ರಾಜಸ್ಥಾನ್ ರಾಯಲ್ಸ್ (2010): ಆ್ಯರೋನ್ ಫಿಂಚ್ 2010ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಆದರೆ, ಆ ಸೀಸನ್​ನಲ್ಲಿ ಅವರು 1 ಪಂದ್ಯವನ್ನಷ್ಟೇ ಆಡಿದ್ದರು.

ಡೆಲ್ಲಿ ಡೇರ್‌ಡೆವಿಲ್ಸ್ (2011-12): ಆರ್​ಆರ್​ ಪರ ಆಡಿದ ಒಂದು ವರ್ಷದ ನಂತರ 2011-12ರಲ್ಲಿ ಫಿಂಚ್, ಎರಡು ವರ್ಷಗಳ ಕಾಲ ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿ ಕಾಣಿಸಿಕೊಂಡರು. ಡೆಲ್ಲಿ ಪರ ಒಟ್ಟು 8 ಪಂದ್ಯಗಳನ್ನಾಡಿದ್ದರು.

ಪುಣೆ ವಾರಿಯರ್ಸ್ (2013): ಆರನ್ ಫಿಂಚ್ 4ನೇ ವರ್ಷದಲ್ಲಿ ಪುಣೆ ವಾರಿಯರ್ಸ್ ತಂಡಕ್ಕೆ ಸೆಲೆಕ್ಟ್ ಆದರು. ಆ ಫ್ರಾಂಚೈಸಿ ಪರ ಒಟ್ಟು 14 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕ್ಯಾಪ್ಟನ್​ ಕೂಡ ಆಗಿದ್ದರು.

ಸನ್​​ರೈಸರ್ಸ್ ಹೈದರಾಬಾದ್ (2014): 2013ರಲ್ಲಿ ಪುಣೆಗೆ ಆಡಿದ ಫಿಂಚ್ 2014ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ಒಟ್ಟು 13 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

ಮುಂಬೈ ಇಂಡಿಯನ್ಸ್ (2015): ಸನ್​ರೈಸರ್ಸ್ ಹೈದರಾಬಾದ್ ತಂಡದಿಂದ ಕೈಬಿಟ್ಟ ಬಳಿಕ 2015ರಲ್ಲಿ ಫಿಂಚ್ ಮುಂಬೈ ಇಂಡಿಯನ್ಸ್ ಸೇರಿದರು. ಎಂಐ ಪರ 3 ಪಂದ್ಯಗಳನ್ನು ಆಡಿದ್ದರು.

ಗುಜರಾತ್ ಲಯನ್ಸ್ (2016-17): ಆ್ಯರೋನ್ ಫಿಂಚ್ 2016 ಮತ್ತು 2017ರಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಒಟ್ಟು 16 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

ಕಿಂಗ್ಸ್ ಇಲೆವೆನ್ ಪಂಜಾಬ್ (2018): ಗುಜರಾತ್ ಲಯನ್ಸ್​ನಿಂದ ಹೊರಗುಳಿದ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಫಿಂಚ್‌ಗೆ ಅವಕಾಶ ನೀಡಿತ್ತು. ಅದರಂತೆ, ಅವರು 2018 ರಲ್ಲಿ ಪಂಜಾಬ್ ಪರ 10 ಪಂದ್ಯಗಳನ್ನು ಆಡಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (2020): 2019ರ ಐಪಿಎಲ್‌ನಿಂದ ಹೊರಗುಳಿದಿದ್ದ ಆಸೀಸ್ ಮಾಜಿ ನಾಯಕ, 2020ರ ಹರಾಜಿಗೆ ಮತ್ತೆ ತಮ್ಮ ಹೆಸರನ್ನು ಘೋಷಿಸಿದ್ದರು. ಆಗ ಅವರನ್ನು ಆರ್‌ಸಿಬಿ ಖರೀದಿಸಿತ್ತು. ಆರ್‌ಸಿಬಿ ಪರ 12 ಪಂದ್ಯಗಳನ್ನು ಆಡಿದ್ದರು.

ಕೋಲ್ಕತ್ತಾ ನೈಟ್ ರೈಡರ್ಸ್ (2022): ಐಪಿಎಲ್ 2021ರಲ್ಲಿ ಆರನ್ ಫಿಂಚ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲ್ಲ. ಆದಾಗ್ಯೂ, ಫಿಂಚ್ 2022ರಲ್ಲಿ ಬದಲಿ ಆಟಗಾರನಾಗಿ ಕೆಕೆಆರ್​ ತಂಡವನ್ನು ಪ್ರವೇಶಿಸಿದ್ದರು. ಅಲ್ಲದೆ, 5 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದರು.

ಆ್ಯರೋನ್ ಫಿಂಚ್ ಐಪಿಎಲ್‌ನ 9 ತಂಡಗಳಲ್ಲಿ ಆಡುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಫಿಂಚ್ ಕಾಮೆಂಟೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

IPL_Entry_Point