ಕನ್ನಡ ಸುದ್ದಿ  /  Photo Gallery  /  Bjp May Nominate Star Cricketer Mohammed Shami To Contest Lok Sabha Polls From West Bengal Basirhat Constituency Prs

ಮೊಹಮ್ಮದ್ ಶಮಿ ರಾಜಕೀಯಕ್ಕೆ, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?

  • Mohammed Shami : ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಕ್ರಿಕೆಟ್ ಸೇವೆಯಿಂದ ದೂರ ಉಳಿದಿರುವ ವೇಗಿ ಮೊಹಮ್ಮದ್ ಶಮಿ ಅವರನ್ನು ಬಿಜೆಪಿ ಪಶ್ಚಿಮ ಬಂಗಾಳದ ಈ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಬೇಟೆಯಾಡುವ ಮೂಲಕ ಬಿರುಗಾಳಿ ಎಬ್ಬಿಸಿದ್ದ ವೇಗಿ ಮೊಹಮ್ಮದ್ ಶಮಿ, ಇದೀಗ ಲೋಕಸಭೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ವೇಗದ ಬೌಲರ್​​ನನ್ನು ಕಣಕ್ಕಿಳಿಸಲು ಬಿಜೆಪಿ ಚಿಂತಿಸಿದೆ ಎಂದು ವರದಿಯಾಗಿದೆ.
icon

(1 / 9)

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಬೇಟೆಯಾಡುವ ಮೂಲಕ ಬಿರುಗಾಳಿ ಎಬ್ಬಿಸಿದ್ದ ವೇಗಿ ಮೊಹಮ್ಮದ್ ಶಮಿ, ಇದೀಗ ಲೋಕಸಭೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ವೇಗದ ಬೌಲರ್​​ನನ್ನು ಕಣಕ್ಕಿಳಿಸಲು ಬಿಜೆಪಿ ಚಿಂತಿಸಿದೆ ಎಂದು ವರದಿಯಾಗಿದೆ.(PTI)

ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ಗೆ ಆಘಾತ ನೀಡಲು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಯೋಜನೆ ಹಾಕಿದೆ. ಆ ಮೂಲಕ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ಗೆ ಸೆಡ್ಡುಹೊಡೆಯಲು ನಿರ್ಧರಿಸಿದೆ.
icon

(2 / 9)

ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ಗೆ ಆಘಾತ ನೀಡಲು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಯೋಜನೆ ಹಾಕಿದೆ. ಆ ಮೂಲಕ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ಗೆ ಸೆಡ್ಡುಹೊಡೆಯಲು ನಿರ್ಧರಿಸಿದೆ.(ANI)

ಪಶ್ಚಿಮ ಬಂಗಾಳ ಪರ ರಣಜಿ ಕ್ರಿಕೆಟ್​ ಆಡಿದ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಶಮಿ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಒಂದು ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಇಂಡಿಯಾ ಟುಡೆ ವರದಿಯಲ್ಲಿ ಉಲ್ಲೇಖಿಸಿದೆ.
icon

(3 / 9)

ಪಶ್ಚಿಮ ಬಂಗಾಳ ಪರ ರಣಜಿ ಕ್ರಿಕೆಟ್​ ಆಡಿದ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಶಮಿ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಒಂದು ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಇಂಡಿಯಾ ಟುಡೆ ವರದಿಯಲ್ಲಿ ಉಲ್ಲೇಖಿಸಿದೆ.(ANI)

ಶಮಿ ಅವರನ್ನು ಬಂಗಾಳದ ಬಸಿರ್ಹಾತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಚಿಂತಿಸಿದೆ. ಈಗಾಗಲೇ ಬಿಜೆಪಿ ಶಮಿ ಅವರನ್ನು ಸಂಪರ್ಕಿಸಿದೆ. ಆದರೆ ಶಮಿ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದಾಗಿಯೂ ವರದಿ ತಿಳಿಸಿದೆ.
icon

(4 / 9)

ಶಮಿ ಅವರನ್ನು ಬಂಗಾಳದ ಬಸಿರ್ಹಾತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಚಿಂತಿಸಿದೆ. ಈಗಾಗಲೇ ಬಿಜೆಪಿ ಶಮಿ ಅವರನ್ನು ಸಂಪರ್ಕಿಸಿದೆ. ಆದರೆ ಶಮಿ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದಾಗಿಯೂ ವರದಿ ತಿಳಿಸಿದೆ.(Hindustan Times)

ಬಸಿರ್ಹಾತ್ ಕ್ಷೇತ್ರದಲ್ಲಿ ಸಂಸದ ಸಂದೇಶ್‌ಖಾಲಿ ಅವರ ದೌರ್ಜನ್ಯ ಪ್ರಕರಣ ಕಾರಣ ಈ ಕ್ಷೇತ್ರದ ರಾಜಕೀಯ ಹೊಸ ತಲ್ಲಣ ಸೃಷ್ಟಿಸಿದೆ. ಹಾಗಾಗಿ ಶಮಿ ಬಿಜೆಪಿ ಸೇರಿದ್ದೇ ಆದರೆ ಇಲ್ಲಿನ ಟಿಎಂಸಿ ವಿರೋಧಿ ಅಲೆಯ ಜೊತೆಗೆ ಅಲ್ಪಸಂಖ್ಯಾತರ ಓಟುಗಳನ್ನೂ ಪಡೆಯಲಿದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರ.
icon

(5 / 9)

ಬಸಿರ್ಹಾತ್ ಕ್ಷೇತ್ರದಲ್ಲಿ ಸಂಸದ ಸಂದೇಶ್‌ಖಾಲಿ ಅವರ ದೌರ್ಜನ್ಯ ಪ್ರಕರಣ ಕಾರಣ ಈ ಕ್ಷೇತ್ರದ ರಾಜಕೀಯ ಹೊಸ ತಲ್ಲಣ ಸೃಷ್ಟಿಸಿದೆ. ಹಾಗಾಗಿ ಶಮಿ ಬಿಜೆಪಿ ಸೇರಿದ್ದೇ ಆದರೆ ಇಲ್ಲಿನ ಟಿಎಂಸಿ ವಿರೋಧಿ ಅಲೆಯ ಜೊತೆಗೆ ಅಲ್ಪಸಂಖ್ಯಾತರ ಓಟುಗಳನ್ನೂ ಪಡೆಯಲಿದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರ.(PTI)

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಬಿಜೆಪಿ ಪ್ರಮುಖ ಎದುರಾಳಿ. 2019ರ ಲೋಕಸಭೆ ಚುನಾವಣೆಗಿಂತಲೂ ಹೆಚ್ಚಿನ ಸೀಟ್​​ಗಳಲ್ಲಿ ಗೆಲ್ಲುವ ಗುರಿ ಹೊಂದಿದೆ. ಹಾಗಾಗಿ ವಿವಿಧ ರಂಗಗಳ ಪ್ರಸಿದ್ಧ ಹಾಗೂ ಜನಪ್ರಿಯ  ವ್ಯಕ್ತಿಗಳನ್ನು ಬಿಜೆಪಿ ಸೆಳೆಯುತ್ತಿದೆ. ಅದರಂತೆ ಶಮಿಯನ್ನು ಕಣಕ್ಕಿಳಿಸಿ ಅಲ್ಪ ಸಂಖ್ಯಾತ ಮತಗಳನ್ನು ಸೆಳೆಯುವ ಗುರಿಯನ್ನಿಟ್ಟುಕೊಂಡಿದೆ.
icon

(6 / 9)

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಬಿಜೆಪಿ ಪ್ರಮುಖ ಎದುರಾಳಿ. 2019ರ ಲೋಕಸಭೆ ಚುನಾವಣೆಗಿಂತಲೂ ಹೆಚ್ಚಿನ ಸೀಟ್​​ಗಳಲ್ಲಿ ಗೆಲ್ಲುವ ಗುರಿ ಹೊಂದಿದೆ. ಹಾಗಾಗಿ ವಿವಿಧ ರಂಗಗಳ ಪ್ರಸಿದ್ಧ ಹಾಗೂ ಜನಪ್ರಿಯ  ವ್ಯಕ್ತಿಗಳನ್ನು ಬಿಜೆಪಿ ಸೆಳೆಯುತ್ತಿದೆ. ಅದರಂತೆ ಶಮಿಯನ್ನು ಕಣಕ್ಕಿಳಿಸಿ ಅಲ್ಪ ಸಂಖ್ಯಾತ ಮತಗಳನ್ನು ಸೆಳೆಯುವ ಗುರಿಯನ್ನಿಟ್ಟುಕೊಂಡಿದೆ.(PTI)

2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​​ನಲ್ಲಿ ಮೊಹಮ್ಮದ್ ಶಮಿ ಅವರ ಅತ್ಯದ್ಭುತ ಪ್ರದರ್ಶನ ಭಾರತ ತಂಡ ಫೈನಲ್‌ವರೆಗೆ ಕೊಂಡೊಯ್ದಿತ್ತು. ಆದರೆ ಟೂರ್ನಿ ಅವಧಿಯಲ್ಲಿ ಗಾಯಗೊಂಡಿದ್ದ ಶಮಿ ಇನ್ನೂ ರಿಕವರ್ ಆಗಿಲ್ಲ. ಹಾಗಾಗಿ ಅಂದಿನಿಂದ ಅವರು ಒಂದು ಪಂದ್ಯವನ್ನೂ ಆಡಿಲ್ಲ.
icon

(7 / 9)

2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​​ನಲ್ಲಿ ಮೊಹಮ್ಮದ್ ಶಮಿ ಅವರ ಅತ್ಯದ್ಭುತ ಪ್ರದರ್ಶನ ಭಾರತ ತಂಡ ಫೈನಲ್‌ವರೆಗೆ ಕೊಂಡೊಯ್ದಿತ್ತು. ಆದರೆ ಟೂರ್ನಿ ಅವಧಿಯಲ್ಲಿ ಗಾಯಗೊಂಡಿದ್ದ ಶಮಿ ಇನ್ನೂ ರಿಕವರ್ ಆಗಿಲ್ಲ. ಹಾಗಾಗಿ ಅಂದಿನಿಂದ ಅವರು ಒಂದು ಪಂದ್ಯವನ್ನೂ ಆಡಿಲ್ಲ.(Hindustan Times)

ಮಾರ್ಚ್ 22ರಿಂದ ಪ್ರಾರಂಭಗೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಟಿ20 ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುವುದು ಅನುಮಾನವಾಗಿದೆ. ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಶಮಿ, ಬಿಜೆಪಿಯಿಂದ ಕಣಕ್ಕಿಳಿಯುವ ಕುರಿತು ಸುದ್ದಿ ಹರಿದಾಡುತ್ತಿದೆ.
icon

(8 / 9)

ಮಾರ್ಚ್ 22ರಿಂದ ಪ್ರಾರಂಭಗೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಟಿ20 ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುವುದು ಅನುಮಾನವಾಗಿದೆ. ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಶಮಿ, ಬಿಜೆಪಿಯಿಂದ ಕಣಕ್ಕಿಳಿಯುವ ಕುರಿತು ಸುದ್ದಿ ಹರಿದಾಡುತ್ತಿದೆ.(ICC-X)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(9 / 9)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.


IPL_Entry_Point

ಇತರ ಗ್ಯಾಲರಿಗಳು