ಮಾಜಿ ಪ್ರೇಯಸಿಯಿಂದ ಬೆದರಿಕೆ; ಪೊಲೀಸರ ಮೊರೆ ಹೋದ ಕ್ರಿಕೆಟಿಗ ಕೆಸಿ ಕಾರಿಯಪ್ಪ, ಮಹಿಳೆಗೆ ನೋಟಿಸ್
KC Cariappa: ಮಾಜಿ ಪ್ರೇಯಸಿಯು ತನ್ನ ಕ್ರಿಕೆಟ್ ಜೀವನವನ್ನು ಹಾಳು ಮಾಡುತ್ತಿದ್ದಾಳೆ ಎಂದು ಆರೋಪಿಸಿರುವ ಕ್ರಿಕೆಟಿಗ ಕೆಸಿ ಕಾರಿಯಪ್ಪ ಪೊಲೀಸರ ನೆರವು ಕೇಳಿದ್ದಾರೆ.
ಕರ್ನಾಟಕದ ಲೆಗ್‌ಸ್ಪಿನ್ನರ್ ಕೆಸಿ ಕಾರಿಯಪ್ಪ (kc cariappa) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಾಜಿ ಪ್ರೇಯಸಿಯು ತನ್ನ ಕ್ರಿಕೆಟ್ ವೃತ್ತಿಬದುಕನ್ನು ಹಾಳು ಮಾಡುತ್ತಿದ್ದಾಳೆ ಎಂದು ಆರೋಪಿಸಿರುವ ಅವರು ಪೊಲೀಸರ ನೆರವು ಕೇಳಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರಿನ ಆರ್‌ಟಿ ನಗರ ಪೊಲೀಸರು, ಮಹಿಳೆಗೆ ನೋಟಿಸ್ ನೀಡಿದ್ದಾರೆ ಎಂದು ವರದಿಯಾಗಿದೆ.
ಮಹಿಳೆ ತನಗೆ ಬೆದರಿಕೆ ಒಡ್ಡುತ್ತಿದ್ದಾಳೆ. ಅಲ್ಲದೆ ಕುಟುಂಬ ಸದಸ್ಯರಿಗೂ ಎಚ್ಚರಿಕೆ ನೀಡಿದ್ದಾಳೆ. ಮಾಜಿ ಪ್ರೇಯಸಿಯು ಮಾದಕ ವ್ಯಸನಿಯಾಗಿದ್ದು, ನನಗೆ ಅವಳೊಂದಿಗೆ ಸಂಬಂಧ ಬೆಳೆಸುವುದು ಇಷ್ಟವಿರಲಿಲ್ಲ ಎಂದು ಕಾರಿಯಪ್ಪ ಅವರು ಪೊಲೀಸರಿಗೆ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.
ಇಬ್ಬರ ವಿರುದ್ಧವೂ ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿದೆ ಎಂದು ಆರ್‌ಟಿ ನಗರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | ಎನ್ಒಸಿ ಹಿಂಪಡೆದ ಎಸಿಬಿ; ನವೀನ್, ಫಾರೂಕಿ, ಮುಜೀಬ್ 2024ರ ಐಪಿಎಲ್ ಆಡೋದು ಕಷ್ಟ ಕಷ್ಟ
ಒಂದು ವರ್ಷದ ಹಿಂದೆ ರಾಜ್ಯದ ಕ್ರಿಕೆಟಿಗ ಕಾರಿಯಪ್ಪ ಮತ್ತು ಮಹಿಳೆಯೊಬ್ಬರಿಗೆ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕ್ರಮೇಣ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ದೂರವಾಗಿದ್ದಾರೆ. ಒಂದು ವರ್ಷದ ಹಿಂದೆಯೂ ಕ್ರಿಕೆಟಿಗನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದರು. ಈ ಹಿಂದೆ ಮಹಿಳೆ ತನ್ನ ವಿರುದ್ಧ ಕೇಸು ದಾಖಲಿಸಿದ ಒಂದು ವರ್ಷದ ನಂತರ ಕರಿಯಪ್ಪ ದೂರು ನೀಡಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯ ಕಾರಿಯಪ್ಪ ಅವರು, ಹಿಂದೆ ತಾನು ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಕುರಿತಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಮದ್ಯದ ಚಟದಿಂದಾಗಿ ಸಂಬಂಧ ಮುಂದುವರೆಸಲು ಸಾಧ್ಯವಾಗಲಿಲ್ಲ. ಈಗ ನನ್ನ ಮೇಲೆ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಸದ್ಯ ಕ್ರಿಕೆಟಿಗನ ಆರೋಪದ ಮೇಲೆ ಪ್ರಕರಣದ ತನಿಖೆ ಮಾಡುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಮಹಿಳೆ ಪರಿಚಯವಾಗಿತ್ತು. ಇಬ್ಬರೂ ಹಲವೆಡೆ ಸುತ್ತಾಡಿದ್ದೇವೆ. ಮದ್ಯವ್ಯಸನಿಯಾದ ಆಕೆಯ ನಡತೆ ಸರಿಯಿರಲಿಲ್ಲ. ಎಷ್ಟೇ ಬುದ್ದಿ ಹೇಳಿದರೂ ಕೇಳುತ್ತಿರಲಿಲ್ಲ. ಹೀಗಾಗಿ ನೊಂದು ಆಕೆಯಿಂದ ದೂರವಾಗಿದ್ದೆ. ನನ್ನ ವಿರುದ್ಧ ಆಕೆ ಸುಳ್ಳು ಆರೋಪ ಮಾಡಿ ದೂರು ನೀಡಿದ್ದಾಳೆ. ಈಗ ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆ. ಕ್ರಿಕೆಟ್ ಬದುಕನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾಳೆ ಎಂದು ಕಾರಿಯಪ್ಪ ಆರೋಪಿಸಿದ್ದಾರೆ.
ಇದನ್ನೂ ಓದಿ | ಬಾಕ್ಸಿಂಗ್ ಡೇ ಟೆಸ್ಟ್ ಇತಿಹಾಸದಲ್ಲಿ ಭಾರತದ್ದು ಕಳಪೆ ದಾಖಲೆ; ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು!
ಅತ್ತ ಮಹಿಳೆಯ ಆರೋಪ ಹೀಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದೂವರೆ ವರ್ಷದ ಹಿಂದೆಯಷ್ಟೇ ಕಾರಿಯಪ್ಪ ಅವರ ಪರಿಚಯವಾಗಿತ್ತು. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದರು. ಆ ಬಳಿಕ ಒತ್ತಾಯದಿಂದ ಗರ್ಭಪಾತ ಮಾಡಿಸಿದ್ದರು. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆ. ಆದರೆ, ಮದುವೆಯಾಗುವುದಾಗಿ ಭರವಸೆ ಕೊಟ್ಟ ಬಳಿಕ ದೂರು ಹಿಂಪಡೆದಿದ್ದೆ. ಅಲ್ಲದೆ ತನ್ನಿಂದ ಹಂತ ಹಂತವಾಗಿ 2 ಲಕ್ಷ ರೂಪಾಯಿ ಹಣ ಕೂಡಾ ಪಡೆದಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾರಿಯಪ್ಪ ಅವರು ಐಪಿಎಲ್‌ನಲ್ಲಿ ಆಡಿದ್ದಾರೆ. 2015ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಅಭಿಯಾನ ಆರಂಭಿಸಿದ ಅವರು, 2016ರಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೇರಿಕೊಂಡರು. 2019ರಲ್ಲಿ ಮತ್ತೆ ಕೆಕೆಆರ್‌ಗೆ ಮರಳಿದ ಅವರು, 2021ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿಸಿಕೊಂಡರು.
ವಿಭಾಗ