ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತ ಪ್ಲೇಯಿಂಗ್-XI ರೆಡಿ; ಕ್ಯಾಪ್ಟನ್-ಕೋಚ್ರಿಂದ ಬಲಿಷ್ಠ ತಂಡ ಆಯ್ಕೆ
India playing XI: ಕಳೆದ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ, ಈಗ ಮತ್ತೊಂದು ಜಯದ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಸ್ಟ್ರಾಂಗ್ ಪ್ಲೇಯಿಂಗ್ ಇಲೆವೆನ್ನೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ.
ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಸಿದ್ಧವಾಗಿದೆ. ಆದರೆ ಟೂರ್ನಿಯ ಬ್ಲಾಕ್ ಬಸ್ಟರ್ ಪಂದ್ಯಕ್ಕೆ ಕಣಕ್ಕಿಳಿಯಲಿರುವ ಕದನ ಕಲಿಗಳು ಯಾರು ಎಂಬುದು ಪಂದ್ಯದ ದಿನವೇ ಬಹಿರಂಗಗೊಳ್ಳಲಿದೆ. ಹಾಗಾದರೆ, ಪ್ಲೇಯಿಂಗ್ XIನಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ? ಇಲ್ಲಿದೆ ನೋಡಿ ವಿವರ.
ಪಾಕಿಸ್ತಾನ ವಿರುದ್ಧದ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮತ್ತು ಪಾಕ್ ನಡುವಿನ ನಡುವಿನ ರೋಚಕ ಕಾದಾಟವನ್ನು ಕಣ್ತುಂಬಿಕೊಳ್ಳಲು ವಿಶ್ವದ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕಳೆದ ವಿಶ್ವಕಪ್ನಲ್ಲಿ ರೋಚಕ ಗೆಲುವು ಸಾಧಿಸಿದ್ದ ಭಾರತ, ಈಗ ಮತ್ತೊಂದು ಜಯದ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಸ್ಟ್ರಾಂಗ್ ಪ್ಲೇಯಿಂಗ್ ಇಲೆವೆನ್ನೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ.
ಇನ್ನಿಂಗ್ಸ್ ಆರಂಭಿಸಲಿದ್ದಾರೆ ನಾಯಕ - ಮಾಜಿ ನಾಯಕ
ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಇದೇ ಜೋಡಿ ಕಣಕ್ಕಿಳಿದಿತ್ತು. ಆದರೆ ವಿರಾಟ್ ನಿರಾಸೆ ಮೂಡಿಸಿದರು. ಹೀಗಾಗಿ, ಯಶಸ್ವಿ ಜೈಸ್ವಾಲ್ ತಂಡದಲ್ಲಿ ಸ್ಥಾನ ಪಡೆದು ಇನ್ನಿಂಗ್ಸ್ ಆರಂಭಿಸುತ್ತಾರೆ. ಈ ಸುದ್ದಿಯನ್ನು ಈಗ ತಳ್ಳಿ ಹಾಕಲಾಗಿದ್ದು, ಕ್ಯಾಪ್ಟನ್-ಎಕ್ಸ್ಕ್ಯಾಪ್ಟನ್ ಕಣಕ್ಕಿಳಿಯೋದು ಖಚಿತವಾಗಿದೆ.
ಪಂತ್ ಒನ್ಡೌನ್, 4ನೇ ಕ್ರಮಾಂಕದಲ್ಲಿ ಸೂರ್ಯ
ಐರ್ಲೆಂಡ್ ವಿರುದ್ಧ ಸೊಗಸಾದ ಬ್ಯಾಟಿಂಗ್ ನಡೆಸಿದ ಮೂರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಕಣಕ್ಕಿಳಿಯುವುದು ಖಚಿತವಾಗಿದೆ. ಕಳೆದ ಪಂದ್ಯದಲ್ಲಿ ಪಂತ್ ಅಜೇಯ 36 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಂಬರ್ 4 ಸ್ಲಾಟ್ನಲ್ಲಿ ಸೂರ್ಯಕುಮಾರ್ ಯಾದವ್ ಬಲ ತುಂಬಲಿದ್ದಾರೆ. ರೆಡ್ ಹಾಟ್ ಫಾರ್ಮ್ನಲ್ಲಿರುವ ಇಬ್ಬರೂ ಪಾಕ್ ಮೇಲೆ ಸವಾರಿಗೆ ಸಜ್ಜಾಗಿದ್ದಾರೆ.
ಹಾರ್ದಿಕ್ ಪಾಂಡ್ಯ - ಶಿವಂ ದುಬೆ ಫಿನಿಷರ್ಸ್.!
ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಫಿನಿಷರ್ಗಳಾಗಿ ಅಬ್ಬರಿಸುವುದು ಕನ್ಫರ್ಮ್. ಇದರ ಜೊತೆಗೆ ವೇಗದ ಬೌಲಿಂಗ್ ಆಲ್ರೌಂಡರ್ಗಳಾಗಿಯೂ ಸೇವೆ ಸಲ್ಲಿಸಲಿದ್ದಾರೆ. ಐರ್ಲೆಂಡ್ ವಿರುದ್ಧ ಹಾರ್ದಿಕ್ ಬೌಲಿಂಗ್ ಮಾಡಿ 3 ವಿಕೆಟ್ ಉರುಳಿಸಿ ಮಿಂಚಿದರು. ಆದರೆ, ಶಿವಂ ದುಬೆಗೆ ಬ್ಯಾಟಿಂಗ್-ಬೌಲಿಂಗ್ ಎರಡಲ್ಲೂ ಅವಕಾಶ ಸಿಗಲಿಲ್ಲ.
ಇಬ್ಬರು ಸ್ಪಿನ್ ಆಲ್ರೌಂಡರ್ಗಳಿಗೆ ಅವಕಾಶ
ಲೆಫ್ಟ್ ಆರ್ಮ್ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಇಬ್ಬರಿಗೂ ಮತ್ತೆ ಸ್ಥಾನ ಸಿಗುವುದು ಖಚಿತ. ಬೌಲಿಂಗ್-ಬ್ಯಾಟಿಂಗ್ ಎರಡರಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಸ್ಪೆಷಲಿಸ್ಟ್ ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಲ್ ಮತ್ತೆ ಬೆಂಚ್ ಕಾಯಬೇಕಾಗುತ್ತದೆ. ಅಕ್ಷರ್-ಜಡೇಜಾ ಕಳೆದ ಪಂದ್ಯದಲ್ಲಿ ಮಿಂಚಿದ್ದಾರೆ.
ವೇಗದ ವಿಭಾಗಕ್ಕೆ ಅನುಭವಿಗಳ ಬಲ.!
ಟೀಮ್ ಇಂಡಿಯಾ ಅನುಭವಿ ವೇಗಿಗಳನ್ನೇ ಕಣಕ್ಕಿಳಿಸಲು ಚಿಂತಿಸಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಮೂವರು ಸಹ ಎದುರಾಳಿಗಳಿಗೆ ಕಂಟಕವಾಗಲಿದ್ದಾರೆ. ಕಳೆದ ಪಂದ್ಯದಲ್ಲಿ ಮೂವರು ಅತ್ಯುತ್ತಮ ನಿರ್ವಹಣೆ ತೋರಿದ್ದರು. ಪವರ್ಪ್ಲೇನಲ್ಲೇ ವಿಕೆಟ್ ಬೇಟೆಯಾಡುವ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅವರನ್ನೇ ಕಣಕ್ಕಿಳಿಸಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ