ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ವಿಶ್ವಕಪ್ ಗೆದ್ದ ಮೈದಾನದಲ್ಲೇ 3ನೇ ಟಿ20; ಅಂತಿಮ ಪಂದ್ಯಕ್ಕೂ ಇದೆಯೇ ಮಳೆಯ ಆತಂಕ? ಇಲ್ಲಿದೆ ಮಾಹಿತಿ

ಭಾರತ ವಿಶ್ವಕಪ್ ಗೆದ್ದ ಮೈದಾನದಲ್ಲೇ 3ನೇ ಟಿ20; ಅಂತಿಮ ಪಂದ್ಯಕ್ಕೂ ಇದೆಯೇ ಮಳೆಯ ಆತಂಕ? ಇಲ್ಲಿದೆ ಮಾಹಿತಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಇಂದು ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಮೈದಾನದಲ್ಲಿ ಜರುಗಲಿದೆ. ಮೊದಲೆರಡು ಪಂದ್ಯಗಳಿಗೆ ಅಡ್ಡಿಯಾಗಿದ್ದ ಮಳೆ ಇಂದು ಸಹ ಕಾಟ ಕೊಡುತ್ತಾ? ಪಿಚ್​ ರಿಪೋರ್ಟ್ ಹೇಗಿದೆ? ಸಂಭಾವ್ಯ ತಂಡ ಹೇಗಿದೆ? ಇಲ್ಲಿದೆ ವಿವರ.

ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಮೈದಾನ.
ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಮೈದಾನ.

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯಕ್ಕೆ (India vs South Africa 3rd T20I) ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಮೈದಾನ (Wanderers Stadium, Johannesburg) ಸಜ್ಜಾಗಿದೆ. 2007ರಲ್ಲಿ ಭಾರತ ಟಿ20 ವಿಶ್ವಕಪ್​ ಗೆದ್ದ ಮೈದಾನದಲ್ಲೇ ಪಂದ್ಯ ನಡೆಯುತ್ತಿದೆ. ಸೂರ್ಯ ಪಡೆ ಅಂತಿಮ ಟಿ20 ಗೆದ್ದು ಸರಣಿ ಸೋಲಿನಿಂದ ಪಾರಾಗಲು ಯೋಜನೆ ಹಾಕಿದ್ದರೆ, ದಕ್ಷಿಣ ಆಫ್ರಿಕಾ ಸರಣಿ ಕೈವಶಕ್ಕೆ ಸಿದ್ಧತೆ ನಡೆಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಹಾಗಾಗಿ, ಭಾರತ ತಂಡವು ಕೆಲ ಬದಲಾವಣೆಗೆ ಮುಂದಾಗಿದೆ. ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ಟೀಮ್ ಮ್ಯಾನೇಜ್ಮೆಂಟ್ ಸಾಕಷ್ಟು ಚರ್ಚೆ ನಡೆಸುತ್ತಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್ ದೃಷ್ಟಿಯಿಂದ ತಂಡ ಸಜ್ಜುಗೊಳಿಸಲು ಆಟಗಾರರನ್ನು ರೊಟೇಟ್ ಮಾಡುವ ಸಾಧ್ಯತೆ ಇದೆ. ಮೊದಲ ಪಂದ್ಯ ರದ್ದಾದರೆ, 2ನೇ ಪಂದ್ಯ ಭಾರತ ಸೋತಿತ್ತು.

ಈಗಾಗಲೇ ಸೌತ್ ಆಫ್ರಿಕಾ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಪಡೆದಿದೆ. ಹೀಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಹೆಚ್ಚು ಮಹತ್ವದ್ದಾಗಿದೆ. ಆದರೆ ಈ ಮಹತ್ವದ ಪಂದ್ಯಕ್ಕೂ ಮಳೆ ಕಾಟ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೊದಲ ಪಂದ್ಯಕ್ಕೂ ಮಳೆ ಅಡಚಣೆ ಕೊಟ್ಟಿತ್ತು. ಎರಡನೇ ಪಂದ್ಯಕ್ಕೂ ಅಡ್ಡಿ ಉಂಟು ಮಾಡಿತ್ತು.

ಹವಾಮಾನ ವರದಿ

ಡಿಸೆಂಬರ್ 14ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಆಗಾಗ್ಗೆ ಕಾಣಿಸಿಕೊಳ್ಳುವ ಬಿಸಿಲಿನ ಜೊತೆಗೆ ತಂಪಾದ ಗಾಳಿಯೂ ಬೀಸಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯದ ಸಮಯದಲ್ಲೂ ಸಂಜೆ ಶೇ 40 ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ತಾಪಮಾನವು ಸುಮಾರು 28 ಡಿಗ್ರಿ ಸೆಲ್ಸಿಯಸ್‌ನಿಂದ 15 ಡಿಗ್ರಿ ಸೆಲ್ಸಿಯಸ್ ಇರಬಹುದು. ಆದರೆ ತೇವಾಂಶ (ಆರ್ದ್ರತೆ) ಶೇಕಡಾ 71 ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. 33 ಕಿಲೋ ಮೀಟರ್​ ವೇಗದಲ್ಲಿ ಗಾಳಿ ಬೀಸಲಿದೆ. ಆದರೆ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೂ, ಫಲಿತಾಂಶ ಕಂಡು ಬರುವ ಸಾಧ್ಯತೆ ಇದೆ.

ಪಿಚ್​ ರಿಪೋರ್ಟ್

ಜೋಹಾನ್ಸ್‌ಬರ್ಗ್‌ನ ದಿ ವಾಂಡರರ್ಸ್ ಸ್ಟೇಡಿಯಂನಲ್ಲಿ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮಾನವಾದ ಪೈಪೋಟಿ ನಿರೀಕ್ಷಿಸಲಾಗಿದೆ. ಚೇಸಿಂಗ್​ಗೆ ಹೆಚ್ಚು ಅನುಕೂಲವಾಗಿರುವ ಈ ಪಿಚ್​​ನಲ್ಲಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ. ಇಲ್ಲಿ ಕೊನೆಯ ಬಾರಿಗೆ ನಡೆದ ಪಂದ್ಯದಲ್ಲಿ ಎರಡು ತಂಡಗಳು 200+ ರನ್ ಗಳಿಸಿದ್ದವು.

ಒಟ್ಟು 10 ಪಂದ್ಯಗಳು ಈ ಮೈದಾನದಲ್ಲಿ ನಡೆದಿವೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳು 3 ಬಾರಿ, ಚೇಸಿಂಗ್ ನಡೆಸಿದ ತಂಡಗಳು 7 ಬಾರಿ ಗೆಲುವು ಸಾಧಿಸಿವೆ. ಮೊದಲ ಇನ್ನಿಂಗ್ಸ್ ಸರಾಸರಿ 158 ರನ್, ಎರಡನೇ ಇನ್ನಿಂಗ್ಸ್ ಸರಾಸರಿ 143 ಇದೆ. ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ 236 ರನ್. ಕನಿಷ್ಠ ಮೊತ್ತ 98/10.

ಪಂದ್ಯದ ವಿವರ

ಪಂದ್ಯದ ಆರಂಭ - ರಾತ್ರಿ 8.30ಕ್ಕೆ (ಭಾರತೀಯ ಕಾಲಮಾನ)

ಸ್ಥಳ- ವಾಂಡರರ್ಸ್ ಮೈದಾನ​, ಜೋಹಾನ್ಸ್​ಬರ್ಗ್.

ನೇರ ಪ್ರಸಾರ - ಸ್ಟಾರ್ ಸ್ಪೋರ್ಟ್ಸ್​ ನೆಟ್ವರ್ಕ್, ಡಿಸ್ನಿ + ಹಾಟ್​ಸ್ಟಾರ್​.

ಉಭಯ ತಂಡಗಳ ಮುಖಾಮುಖಿ

ಒಟ್ಟು ಪಂದ್ಯಗಳು - 25

ದಕ್ಷಿಣ ಆಫ್ರಿಕಾ ಗೆಲುವು - 11

ಟೀಮ್ ಇಂಡಿಯಾ ಗೆಲುವು - 13

ಫಲಿತಾಂಶ ಇಲ್ಲದೆ ಅಂತ್ಯ - 01

3ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ/ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್/ಜಿತೇಶ್ ಶರ್ಮಾ, ರಿಂಕು ಸಿಂಗ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್/ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಅರ್ಷ್​ದೀಪ್ ಸಿಂಗ್.

3ನೇ ಟಿ20 ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ

ರೀಜಾ ಹೆಂಡ್ರಿಕ್ಸ್, ಮ್ಯಾಥ್ಯೂ ಬ್ರೀಟ್ಜ್ಕೆ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಆಂಡಿಲ್ ಫೆಹ್ಲುಕ್ವಾಯೊ, ನಾಂಡ್ರೆ ಬರ್ಗರ್, ಲಿಜಾಡ್ ವಿಲಿಯಮ್ಸ್, ತ್ರಬೈಜ್ ಶಂಸಿ, ಒಟ್ನಿಯಲ್ ಬಾರ್ಟ್ಮನ್.

IPL_Entry_Point