IBSA ವಿಶ್ವ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡ
ಬ್ಲೈಂಡ್ ಸ್ಪೋರ್ಟ್ ಫೆಡರೇಶನ್ (IBSA) ವಿಶ್ವ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ.
ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡವು ಇಂಟರ್ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ ಫೆಡರೇಶನ್ (IBSA) ವಿಶ್ವ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ನ ಎಡ್ಜ್ಬಾಸ್ಟನ್ನಲ್ಲಿ ನಡೆದ ಈ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ. 9 ವಿಕೆಟ್‌ಗಳಿಂದ ಜಯಿಸಿದ ಭಾರತ ಮಹಿಳಾ ಅಂಧರ ತಂಡವು, ಐಬಿಎಸ್ಎ ವಿಶ್ವ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ VI ಮಹಿಳಾ ತಂಡವು ಬ್ಯಾಟಿಂಗ್ ನಡೆಸಿತು. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತು. ಆದರೆ, ಭಾರತ ತಂಡದ ಇನ್ನಿಂಗ್ಸ್ ಸಂದರ್ಭದಲ್ಲಿ ಮಳೆ ಅಡ್ಡಿಪಡಿಸಿತು. ಹಾಗಾಗಿ 2ನೇ ಇನ್ನಿಂಗ್ಸ್ಗೆ ಓವರ್ಗಳ ಕಡಿತ ಮಾಡಲಾಯಿತು. ಪರಿಣಾಮ ಭಾರತ ತಂಡಕ್ಕೆ 9 ಓವರ್ಗಳಿಗೆ ಸೀಮಿತ ಮಾಡಲಾಯಿತು. ಇದರಿಂದ ಭಾರತದ ವನಿತೆಯರಿಗೆ 9 ಓವರ್ಗಳಿಗೆ 43 ರನ್ಗಳ ಗುರಿ ನೀಡಲಾಗಿತ್ತು.
ಈ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತದ ಮಹಿಳಾ ಆಟಗಾರ್ತಿಯರು ಅಮೋಘ ಪ್ರದರ್ಶನ ನೀಡಿದರು. ಹಾಗಾಗಿ ಕೇವಲ 3.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 43 ರನ್ಗಳಿಸಿ, 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು. ಈ ಮೂಲಕ ಇಂಟರ್ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ ಫೆಡರೇಶನ್ (IBSA) ವಿಶ್ವ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟಕ್ಕೆ ಹಾರಿಸಿದ್ದಾರೆ.
ಸೆಮಿಫೈನಲ್ ಟಿಕೆಟ್ ಪಡೆದ ಮೈಸೂರು ವಾರಿಯರ್ಸ್
ಮೈಸೂರು ವಾರಿಯರ್ಸ್ (Mysore Warriors) ತಂಡವು ಎರಡನೇ ತಂಡವಾಗಿ ಮಹಾರಾಜ ಟ್ರೋಫಿ (Maharaja Trophy KSCA T20 2023) ಸೆಮಿಫೈಲ್‌ಗೆ ಲಗ್ಗೆ ಇಟ್ಟಿದೆ. ಗುಲ್ಬರ್ಗ ಮಿಸ್ಟಿಕ್ಸ್ (Gulbarga Mystics) ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದ ಕರುಣ್ ನಾಯರ್ ಪಡೆ, ಲೀಗ್ ಹಂತವನ್ನು ಯಶಸ್ವಿಯಾಗಿ ಮುಗಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಲ್ಬರ್ಗ, 7 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ 18 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 154 ರನ್ ಗಳಿಸುವ ಮೂಲಕ ಗೆಲವಿನ ದಡ ಸೇರಿತು. ಈ ಗೆಲುವಿನೊಂದಿಗೆ ಒಟ್ಟು 12 ಅಂಕ ಗಳಿಸಿದ ತಂಡವು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿ ಸೆಮಿ ಕದನಕ್ಕೆ ಲಗ್ಗೆ ಇಟ್ಟಿದೆ.