ಕೆಲವೇ ನಿಮಿಷಗಳಲ್ಲಿ ಕಮಿನ್ಸ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್; 24.75 ಕೋಟಿ ಸುರಿದ ಈ ಫ್ರಾಂಚೈಸಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಲವೇ ನಿಮಿಷಗಳಲ್ಲಿ ಕಮಿನ್ಸ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್; 24.75 ಕೋಟಿ ಸುರಿದ ಈ ಫ್ರಾಂಚೈಸಿ

ಕೆಲವೇ ನಿಮಿಷಗಳಲ್ಲಿ ಕಮಿನ್ಸ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್; 24.75 ಕೋಟಿ ಸುರಿದ ಈ ಫ್ರಾಂಚೈಸಿ

Mitchell starc: ಆಸ್ಟ್ರೇಲಿಯಾದ ವೇಗದ ಬೌಲರ್​ ಮಿಚೆಲ್ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 24.70 ಕೋಟಿಗೆ ಕೆಕೆಆರ್​​ ಪಾಲಾಗಿದ್ದಾರೆ.

ಆಸ್ಟ್ರೇಲಿಯಾದ ವೇಗದ ಬೌಲರ್​ ಮಿಚೆಲ್ ಸ್ಟಾರ್ಕ್.
ಆಸ್ಟ್ರೇಲಿಯಾದ ವೇಗದ ಬೌಲರ್​ ಮಿಚೆಲ್ ಸ್ಟಾರ್ಕ್.

8 ವರ್ಷಗಳ ನಂತರ ಮರಳಿದ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್​ ಮಿಚೆಲ್ ಸ್ಟಾರ್ಕ್ (Mitchell Starc)​, ಇಂಡಿಯನ್ ಪ್ರೀಮಿಯರ್ ಲೀಗ್​ ಹರಾಜು ಇತಿಹಾಸದಲ್ಲಿ 24.70 ಕೋಟಿಗೆ ಖರೀದಿಯಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಗುಜರಾತ್ ಜೈಂಟ್ಸ್ ಜೊತೆಗಿನ ಬಿಡ್ಡಿಂಗ್​ ವಾರ್​ನಲ್ಲಿ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್ (Kolkata Knigh Riders), ಡೆಡ್ಲಿ ಬೌಲರ್​ ಅನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಐಪಿಎಲ್ 2024 ಹರಾಜಿನಲ್ಲಿ (IPL Auction 2024) 24.75 ಕೋಟಿ ರೂಪಾಯಿ ಪಡೆಯುವ ಮೂಲಕ ಮಿಚೆಲ್ ಸ್ಟಾರ್ಕ್, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. ಅಲ್ಲದೆ ಕೆಲವೇ ನಿಮಿಷಗಳಲ್ಲಿ 20.50 ಕೋಟಿ ರೂಪಾಯಿಗೆ ಸನ್​ರೈಸರ್ಸ್ ಹೈದರಾಬಾದ್ ಪಾಲಾಗಿದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕಿ ಹೊಸ ಚರಿತ್ರೆ ಸೃಷ್ಟಿಸಿದರು.

2024ರಲ್ಲಿ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿ ತಯಾರಿಯಾಗಿ ಐಪಿಎಲ್ ಬಳಸಿಕೊಳ್ಳುವ ಉದ್ದೇಶದಿಂದ ಸ್ಟಾರ್ಕ್​ ಎಂಟು ವರ್ಷಗಳ ನಂತರ ಮರಳಿದ್ದಾರೆ. 2 ಕೋಟಿ ಮೂಲ ಬೆಲೆಯನ್ನು ಸ್ಟಾರ್ಕ್​ ಹೊಂದಿದ್ದ ಈ ವೇಗಿ, ನಾಲ್ಕು ತಂಡಗಳು ಭಾರಿ ಪೈಪೋಟಿ ನಡೆಸಿದವು. ಆದರೆ ಕೊನೆಗೆ ಕೆಕೆಆರ್​ ಮತ್ತು ಗುಜರಾತ್ ಫ್ರಾಂಚೈಸಿಗಳು ರೇಸ್​​ನಲ್ಲಿ ಉಳಿದವು. ಅಂತಿಮವಾಗಿ ಕೆಕೆಆರ್​​ ಗೆದ್ದಿತು.

4 ತಂಡಗಳ ನಡುವೆ ಪೈಪೋಟಿ

ಸ್ಟಾರ್ಕ್​ ಬಿಡ್ಡಿಂಗ್​ಗೆ ಬಂದ ನಂತರ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಗಳು ಬಿಡ್ಡಿಂಗ್ ವಾರ್ ನಡೆಸಿದವು. ಈ ಎರಡು ತಂಡಗಳ ನಡುವೆ ಗುಜರಾತ್ ಟೈಟಾನ್ಸ್ ಮತ್ತು ಕೆಕೆಆರ್​ ಫ್ರಾಂಚೈಸಿಗಳು ಮಧ್ಯೆ ಪ್ರವೇಶಿಸಿದವು. ಇದರಿಂದ 9.6 ಕೋಟಿ ವೇಳೆ ಡೆಲ್ಲಿ ಬಿಡ್ಡಿಂಗ್​ನಿಂದ ಹಿಂದೆ ಸರಿಯಿತು. ಇದರ ಬೆನ್ನಲ್ಲೇ ಮುಂಬೈ 9.80 ಕೋಟಿ ವೇಳೆ ರೇಸ್​​ನಿಂದ ಹೊರ ಬಿತ್ತು. ಆಗ ಶುರುವಾಗಿದ್ದು ಕೋಲ್ಕತ್ತಾ ಮತ್ತು ಗುಜರಾತ್ ಅಸಲಿ ಆಟ.

ಈ ಉಭಯ ಫ್ರಾಂಚೈಸಿ ಪೈಪೋಟಿ ಕಂಡು ಹರಾಜು ಕೊಠಡಿಯಲ್ಲಿದ್ದ ಎಲ್ಲರನ್ನು ದಂಗುಬಡಿಸಿತು. ಜಿಟಿ ಮತ್ತು ಕೆಕೆಆರ್, ಎರಡೂ ತೀವ್ರ ಬಿಡ್ಡಿಂಗ್ ಯುದ್ಧದಲ್ಲಿ ಮುಳುಗಿಬಿಟ್ಟವು. ರೋಚಕ ಫೈಟ್​ನಲ್ಲಿ ಅಂತಿಮವಾಗಿ ಕೆಕೆಆರ್ ಸ್ಟಾರ್ಕ್​ರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ಸು ಕಂಡಿತ್ತು. 24.75 ಕೋಟಿ ಪಡೆದ ಸ್ಟಾರ್ಕ್​ ತಮ್ಮ ದೇಶದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕಿದರು.

ಸ್ಟಾರ್ಕ್ ಐಪಿಎಲ್ ಪ್ರದರ್ಶನ

ಸ್ಟಾರ್ಕ್ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಿದ್ದರು. ಅವರು ಆ ವರ್ಷ 13 ಪಂದ್ಯಗಳಲ್ಲಿ 20 ವಿಕೆಟ್‌ ಪಡೆದು ಮಿಂಚಿದ್ದರು. ಬೌಲಿಂಗ್ ಸರಾಸರಿ 14.55 ಮತ್ತು ಪ್ರತಿ ಓವರ್​​ಗೆ ಎಕಾನಮಿ ದರ 6.76 ಇದೆ. ಆದರೆ 2015ರ ನಂತರ ಗಾಯ ಸೇರಿದಂತೆ ವಿವಿಧ ಕಾರಣಗಳಿಂದ ಎಡಗೈ ವೇಗಿ ಟೂರ್ನಿಯ ಭಾಗವಾಗಿರಲಿಲ್ಲ.

ಒಟ್ಟು 27 ಐಪಿಎಲ್ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಪರವಾಗಿ ಸ್ಟಾರ್ಕ್ 58 ಟಿ20 ಪಂದ್ಯಗಳಲ್ಲಿ 22.91ರ ಬೌಲಿಂಗ್ ಸರಾಸರಿಯಲ್ಲಿ 73 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ 20.5 ಕೋಟಿ ರೂ.ಗೆ ಸಹಿ ಮಾಡಿ ಹರಾಜು ಇತಿಹಾಸದಲ್ಲೇ ಅತ್ಯಂತ ದುಬಾರಿ ಖರೀದಿಯ ದಾಖಲೆಯನ್ನು ಮುರಿದಿತ್ತು. ಮತ್ತೊಬ್ಬ ಆಸೀಸ್ ವೇಗಿ ಜೋಶ್ ಹೇಜಲ್​ವುಡ್ ಮಾರಾಟವಾಗಲಿಲ್ಲ.

 

Whats_app_banner