ಸ್ಟಾರ್ಕ್ 24.75 ಕೋಟಿ ದಾಖಲೆ ಮುರಿಯುತ್ತಾ ಡಂಕಿ ಮೊದಲ ದಿನದ ಕಲೆಕ್ಷನ್? ನೆಟ್ಟಿಗರು ಫುಲ್ ಟ್ರೋಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಟಾರ್ಕ್ 24.75 ಕೋಟಿ ದಾಖಲೆ ಮುರಿಯುತ್ತಾ ಡಂಕಿ ಮೊದಲ ದಿನದ ಕಲೆಕ್ಷನ್? ನೆಟ್ಟಿಗರು ಫುಲ್ ಟ್ರೋಲ್

ಸ್ಟಾರ್ಕ್ 24.75 ಕೋಟಿ ದಾಖಲೆ ಮುರಿಯುತ್ತಾ ಡಂಕಿ ಮೊದಲ ದಿನದ ಕಲೆಕ್ಷನ್? ನೆಟ್ಟಿಗರು ಫುಲ್ ಟ್ರೋಲ್

Mitchell Starc Or Shah Rukh Khan Dunki: ನಿಮ್ಮ ಡಂಕಿ ಚಿತ್ರ ಮೊದಲ ದಿನದ ಕಲೆಕ್ಷನ್ ಸ್ಟಾರ್ಕ್ ಅವರಿಗೆ‌ ನೀಡಿರುವ 24.75 ಕೋಟಿಯನ್ನು ಬ್ರೇಕ್ ಮಾಡುತ್ತಾ ಎಂದು ಶಾರೂಖ್​​ ಖಾನ್​ ಅವರಿಗೆ ನೆಟ್ಟಿಗನೊಬ್ಬ ಪ್ರಶ್ನೆ‌ ಕೇಳಿದ್ದಾರೆ.

ಡಂಕಿ ಚಿತ್ರದ ಪೋಸ್ಟರ್ ಮತ್ತು ಮಿಚೆಲ್ ಸ್ಟಾರ್ಕ್​.
ಡಂಕಿ ಚಿತ್ರದ ಪೋಸ್ಟರ್ ಮತ್ತು ಮಿಚೆಲ್ ಸ್ಟಾರ್ಕ್​.

ಇಂಡಿಯನ್ ಪ್ರೀಮಿಯರ್ ಲೀಗ್ 2024 ಮಿನಿ ಹರಾಜು (IPL Mini Auctio 2024) ಮುಕ್ತಾಯಗೊಂಡರೂ ಕೋಲ್ಕತ್ತಾ ನೈಟ್ ರೈಡರ್ಸ್ ‌ಸೇರಿರುವ ಮಿಚೆಲ್ ಸ್ಟಾರ್ಕ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ಖರೀದಿಸಿರುವ ಪ್ಯಾಟ್ ಕಮಿನ್ಸ್ (20.50) ಅವರಿಗೆ ಕೊಟ್ಟ ಮೊತ್ತದ ಬಗ್ಗೆ‌ ವ್ಯಾಪಕ ಚರ್ಚೆ ನಡೆಯುತ್ತಿದೆ. ಅದರಲ್ಲೂ ಸ್ಟಾರ್ಕ್​ಗೆ 24.75 ಕೋಟಿ ರೂಪಾಯಿ (Mitchell Starc) ನೀಡಿದ್ದಕ್ಕೆ ಭಾರತದ ಮಾಜಿ ಕ್ರಿಕೆಟರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಬಗೆಬಗೆಯ ಮೀಮ್ಸ್​​ಗಳೂ ವೈರಲ್ ಆಗುತ್ತಿವೆ.

ಇದೀಗ ಇಂದು ಡಿಸೆಂಬರ್ 21ರ ಗುರುವಾರ ಬಿಡುಗಡೆ ಆಗುತ್ತಿರುವ ಬಾಲಿವುಡ್ ನಟ ಶಾರೂಖ್ ಖಾನ್ (Shah Rukh Khan) ಬಹುನಿರೀಕ್ಷಿತ ಡಂಕಿ (Dunki) ಚಿತ್ರಕ್ಕೆ ಸಂಬಂಧಿಸಿ ಮೀಮ್ಸ್​​ ಸಖತ್ ವೈರಲ್ ಆಗುತ್ತಿವೆ. ರಾಜ್​ಕುಮಾರ್‌ ಹಿರಾನಿ ನಿರ್ದೇಶನದ‌ ಈ ಚಿತ್ರ ಇಂದು ಚಿತ್ರಮಂದಿರಗಳಲ್ಲಿ ತೆರೆಗೆ ಅಪ್ಪಳಿಸಿದೆ. ವಿಕ್ಕಿ ಕೌಶಾಲ್ ಮತ್ತು ತಾಪ್ಸಿ ಪನ್ನು ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಇದು ಶಾರೂಖ್ ಖಾನ್ ಅವರ ಈ ವರ್ಷದ‌ 3ನೇ‌ ಸಿನಿಮಾ.

ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ಶಾರೂಖ್

ಈಗಾಗಲೇ ಪಠಾಣ್ ಮತ್ತು ಜವಾನ್ ಚಿತ್ರಗಳು ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಕಿಂಗ್ ಖಾನ್. ಸದ್ಯ ಡಂಕಿ ಚಿತ್ರ ತೆರೆಗೆ ಬರುವುದಕ್ಕೂ ಮುನ್ನ ಶಾರೂಖ್, ಎಕ್ಸ್ ಖಾತೆಯಲ್ಲಿ ಅಭಿಮಾ‌ನಿಗಳೊಂದಿಗೆ ನಡೆಸಿದ ASK SRK ಸೆಷನ್‌ ನಡೆಸಿದರು. ಈ ಸಂವಾದದಲ್ಲಿ ಪ್ರಶ್ನೆಗಳನ್ನು‌ ಸ್ವೀಕರಿಸಿದರು. ಕೆಕೆಆರ್ ಖರೀದಿಸಿದ ಸ್ಟಾರ್ಕ್​​ಗೆ ಸಂಬಂಧಿಸಿ ಪ್ರಶ್ನೆ‌ಯನ್ನು ಶಾರೂಖ್​​ಗೆ ಪ್ರಶ್ನಿಸಿದ್ದಾರೆ.

ಬ್ರೇಕ್ ಮಾಡುತ್ತಾ ಡಂಕಿ?

ಶಾರೂಖ್ ಒಡೆತನದ ಕೋಲ್ಕತ್ತಾ ತಂಡ ಸ್ಟಾರ್ಕ್ ಅವರಿಗೆ 24.75 ಕೋಟಿ ಸುರಿದಿದೆ. ಈ ಮೊತ್ತವನ್ನುಇಂದು ಬಿಡುಗಡೆ ಆಗುತ್ತಿರುವ ಶಾರೂಖ್ ಅವರ ಡಂಕಿ ಚಿತ್ರಕ್ಕೆ ಸೇರಿಸಿ‌ ಪ್ರಶ್ನೆ ಕೇಳಿದ್ದಾರೆ. ನಿಮ್ಮ ಡಂಕಿ ಚಿತ್ರ ಮೊದಲ ದಿನದ ಕಲೆಕ್ಷನ್ ಸ್ಟಾರ್ಕ್ ಅವರಿಗೆ‌ ನೀಡಿರುವ 24.75 ಕೋಟಿಯನ್ನು ಬ್ರೇಕ್ ಮಾಡುತ್ತಾ ಎಂದು ನೆಟ್ಟಿಗನೊಬ್ಬ ಪ್ರಶ್ನೆ‌ ಕೇಳಿದ್ದಾರೆ. ಸ್ಟಾರ್ಕ್‌ಗೆ ನೀಡಿರುವ ಹಣಕ್ಕೂ ಡಂಕಿ ಚಿತ್ರದ ಮೊದಲ ದಿನದ ಕಲೆಕ್ಷನ್ ಗೂ ಇರುವ ವ್ಯತ್ಯಾಸ ಎಷ್ಟಿರಲಿದೆ ಎಂದು ಕೇಳಿದ್ದಾರೆ‌.

ಶಾರೂಖ್ ಉತ್ತರ ಹೀಗಿತ್ತು

ಇದಕ್ಕೆ‌ ಶಾರೂಖ್ ಖಾನ್, ಎಪಿಕ್ ಉತ್ತರ ನೀಡಿದ್ದಾರೆ. ಇದೇನು ಪ್ರಶ್ನೆ ಸಹೋದರ? ತಿಳಿದುಕೊಳ್ಳಲು ನಿಮಗೆ ಅಷ್ಟೊಂದು‌ ಕುತೂಹಲವೇ ಎಂದು ಕಿಂಗ್ ಖಾನ್ ಮರು ಪ್ರಶ್ನೆ ಹಾಕಿದ್ದಾರೆ. ಇನ್ನೂ ಕೆಲವರು ಸ್ಟಾರ್ಕ್​ಗೆ ಕೊಟ್ಟಿರುವ ದಾಖಲೆಯ ಮೊತ್ತವನ್ನು ಬ್ರೇಕ್ ಮಾಡುವುದು ಕಷ್ಟ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕೆಕೆಆರ್ ಅಭಿಮಾನಿಗಳು ಸಹ ತರಾಟೆ ತೆಗದುಕೊಂಡಿದ್ದಾರೆ. ಒಬ್ಬ ಆಟಗಾರನಿಗೆ ಅಷ್ಟೊಂದು ಹಣ‌ಕೊಡುವ ಅಗತ್ಯ ಏನಿತ್ತು ಎಂದು ಕಿಡಿಕಾರಿದ್ದಾರೆ.

ಐಪಿಎಲ್ 2024 ಹರಾಜಿನಲ್ಲಿ ಕೆಕೆಆರ್ ಖರೀದಿಸಿದ ಆಟಗಾರರು: ಕೆಎಸ್ ಭರತ್ (50 ಲಕ್ಷ ರೂ.), ಚೇತನ್ ಸಕರಿಯಾ (ರೂ. 50 ಲಕ್ಷ), ಮಿಚೆಲ್ ಸ್ಟಾರ್ಕ್ (24.75 ಕೋಟಿ ರೂ.), ರಘುವಂಶಿ (ರೂ. 20 ಲಕ್ಷ), ರಮಣದೀಪ್ ಸಿಂಗ್ (ರೂ. 20 ಲಕ್ಷ), ಶೆರ್ಫಾನೆ ರುದರ್‌ಫೋರ್ಡ್ (1.5 ಕೋಟಿ), ಮನೀಶ್ ಪಾಂಡೆ (50 ಲಕ್ಷ), ಮುಜೀಬ್ ರೆಹಮಾನ್ (2 ಕೋಟಿ), ಗಸ್ ಅಟ್ಕಿನ್ಸನ್ (1 ಕೋಟಿ).

ಉಳಿಸಿಕೊಂಡಿದ್ದ ಆಟಗಾರರು: ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಶ್ರೇಯಸ್ ಅಯ್ಯರ್ (ನಾಯಕ), ಜೇಸನ್ ರಾಯ್, ಸುನಿಲ್ ನರೈನ್, ಸುಯಾಶ್ ಶರ್ಮಾ, ಅನುಕೂಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.

Whats_app_banner