ಕನ್ನಡ ಸುದ್ದಿ  /  Cricket  /  Ranchi Weather Update Will Rain Help Indian Cricket Team Steal A Draw In Ind Vs Eng 4th Test Rohit Sharma Ben Stokes Prs

ರಾಂಚಿ ಹವಾಮಾನ ಅಪ್ಡೇಟ್: 4ನೇ ಟೆಸ್ಟ್​ನಲ್ಲಿ ಸಂಕಷ್ಟದಲ್ಲಿರುವ ಭಾರತಕ್ಕೆ ಮಳೆ ಸಹಾಯ ಮಾಡುತ್ತದೆಯೇ?

Ranchi weather update : ಸಂಕಷ್ಟಕ್ಕೆ ಸಿಲುಕಿರುವ ಭಾರತ ತಂಡವನ್ನು ಕಾಪಾಡಲು ಎರಡು ಅವಕಾಶಗಳಿವೆ. 1. ಧ್ರುವ್ ಜುರೆಲ್. 2. ಮಳೆ. ಹೌದು, ಈ ಎರಡೂ ಅವಕಾಶಗಳು ಟೀಮ್ ಇಂಡಿಯಾವನ್ನು ರಕ್ಷಿಸಬೇಕಿದೆ.

4ನೇ ಟೆಸ್ಟ್​ನಲ್ಲಿ ಸಂಕಷ್ಟದಲ್ಲಿರುವ ಭಾರತಕ್ಕೆ ಮಳೆ ಸಹಾಯ ಮಾಡುತ್ತದೆಯೇ?
4ನೇ ಟೆಸ್ಟ್​ನಲ್ಲಿ ಸಂಕಷ್ಟದಲ್ಲಿರುವ ಭಾರತಕ್ಕೆ ಮಳೆ ಸಹಾಯ ಮಾಡುತ್ತದೆಯೇ?

ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್​​ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೀಗ ಜೋ ರೂಟ್ ಅವರ ಅದ್ಭುತ ಶತಕ ಮತ್ತು ಯುವ ಸ್ಪಿನ್ನರ್​ ಶೋಯೆಬ್ ಬಶೀರ್ ಅವರ ಸ್ಪಿನ್​ ಮ್ಯಾಜಿಕ್​​ನಿಂದ ಆತಿಥೇಯರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಎರಡನೇ ದಿನದ ನಂತರ ಭಾರತ 134 ರನ್‌ಗಳ ಹಿನ್ನಡೆಯಲ್ಲಿದೆ.

ಸಂಕಷ್ಟದಲ್ಲಿರುವ ಭಾರತ ತಂಡ ಹಳಿಗೆ ಮರಳುವುದು ಸುಲಭವಲ್ಲ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 73 ರನ್​ ಗಳಿಸಿದರೆ, ಉಳಿದ ಬ್ಯಾಟರ್​​ಗಳು ನಿರಾಸೆ ಮೂಡಿಸಿದರು. ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿರುವ ಧ್ರುವ್ ಜುರೆಲ್ ಮೇಲೆ ನಿರೀಕ್ಷೆ ಇಡಲಾಗಿದೆ. ಸದ್ಯ 7 ವಿಕೆಟ್​ ಕಳೆದುಕೊಂಡ ಭಾರತಕ್ಕೆ ನಂಬಿಕಸ್ಥ ಬ್ಯಾಟರ್​​ಗಳ ಬಲ ಇಲ್ಲ. ಬಾಲಂಗೋಚಿ ಬ್ಯಾಟ್ಸ್​​ಮನ್​ಗಳು ಮಾತ್ರ ನೆರವಾಗಬೇಕಿದೆ.

ಈಗಾಗಲೇ ಬಹುತೇಕರು ಭಾರತ ಸೋಲು ಕಾಣುತ್ತದೆ ಎಂದು ನಿರ್ಧರಿಸಿದ್ದಾರೆ. ಧ್ರುವ್ ಜುರೆಲ್ ಒಬ್ಬ ಬೇಗನೇ ಔಟಾದರೆ ಭಾರತ 100+ ರನ್​ಗೂ ಹೆಚ್ಚು ಹಿನ್ನಡೆ ಅನುಭವಿಸಬೇಕಾಗುತ್ತದೆ. ಅಲ್ಲದೆ, ಪಂದ್ಯದ ಮೇಲೆ ಇಂಗ್ಲೆಂಡ್ ಹಿಡಿತ ಸಾಧಿಸುವುದರ ಜೊತೆಗೆ ಎರಡನೇ ಇನ್ನಿಂಗ್ಸ್​​ನಲ್ಲೂ ಬೃಹತ್ ಮೊತ್ತ ಪೇರಿಸಿದರೆ ಆತಿಥೇಯರು ಗೆಲುವು ಸಾಧಿಸಲು ಕಷ್ಟದ ಮೆಟ್ಟಿಲನ್ನು ಹತ್ತಬೇಕಿದೆ ಎಂದರೆ ಅನುಮಾನ ಇಲ್ಲ.

ಭಾರತದ ಮುಂದಿವೆ ಎರಡು ಅವಕಾಶಗಳ

ಸಂಕಷ್ಟಕ್ಕೆ ಸಿಲುಕಿರುವ ತಂಡವನ್ನು ಕಾಪಾಡಲು ರೋಹಿತ್​​ ತಂಡದ ಮುಂದೆ ಎರಡು ಅವಕಾಶಗಳಿವೆ. 1. ಧ್ರುವ್ ಜುರೆಲ್. 2 ಮಳೆ. ಹೌದು, ಈ ಎರಡೂ ಅವಕಾಶಗಳು ಭಾರತ ತಂಡವನ್ನು ರಕ್ಷಿಸಬೇಕಿದೆ. ಸದ್ಯ ರಾಂಚಿಯಲ್ಲಿ ಹವಾಮಾನದ ಮುನ್ಸೂಚನೆ ನೀಡಿದೆ. ಇದು ಭಾರತಕ್ಕೆ ಈ ಎರಡು ಭರವಸೆ ಅವರನ್ನು ಉಳಿಸುವ ನಿರೀಕ್ಷೆ ಇದೆ.

ಧ್ರುವ್ ಜುರೆಲ್ ಮೇಲೆ ನಿರೀಕ್ಷೆ

ಇನ್ನುಳಿದ ಕೆಳ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ಧ್ರುವ್ ಜುರೆಲ್ ನಾಟಕೀಯ ಬ್ಯಾಟಿಂಗ್ ಪ್ರಯತ್ನ ನಡೆಸಿದರೆ ಅದು ಭಾರತವನ್ನು ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ ಮೊತ್ತವಾದ 353ರ ಹತ್ತಿರಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಧ್ರುವ್ ಜುರೆಲ್ ಏಕಾಂಗಿ ಹೋರಾಟ ನಡೆಸಿ ಶತಕ ಸಿಡಿಸಿದರೆ ರೋಹಿತ್ ಪಡೆಗೆ ಆಪದ್ಬಾಂಧವನಾಗಬೇಕಿದೆ. ಅಲ್ಲದೆ, ಅಜೇಯರಾಗಿ ಉಳಿದುಕೊಳ್ಳಬೇಕಿದೆ. ಆಗ ಮಾತ್ರ ಇಂಗ್ಲೆಂಡ್ ಮೇಲೆ ಹಿಡಿತ ಸಾಧಿಸಲು ಸಾಧ್ಯ.

ಮಳೆಯ ನಿರೀಕ್ಷೆ ಇದೆ

ಭಾನುವಾರದಂದು ಅಕ್ಯುವೆದರ್ ಅಪ್ಲಿಕೇಶನ್ ಪ್ರಕಾರ, ಮಧ್ಯಾಹ್ನದ ನಂತರ ಮಳೆಯ ನಿರೀಕ್ಷೆ ಇದೆ. ಅಂತಿಮ ದಿನದಲ್ಲಿ ಮೋಡ ಕವಿದ ದಿನ ಮತ್ತು ಮಧ್ಯಾಹ್ನ ತುಂತುರು ಮಳೆಯಾಗುವ ನಿರೀಕ್ಷೆಯಿದೆ. 4ನೇ ದಿನದಂದು ಸಹ ಮಳೆಯ ಮುನ್ಸೂಚನೆ ಇದೆ. ಆದರೆ ಅದು ರಾಂಚಿ ನಗರದ ಕೆಲವು ಪ್ರದೇಶಗಳಲ್ಲಿ ಮಾತ್ರ ಇರಬಹುದೆಂದು ಅಪ್ಲಿಕೇಶನ್ ಸೂಚಿಸುತ್ತದೆ. ವರದಿಯಂತೆ ಮಳೆ ಬಂದರೆ ಈ ಪಂದ್ಯವನ್ನು ಡ್ರಾ ಸಾಧಿಸುವ ಅವಕಾಶ ಪಡೆದುಕೊಳ್ಳಲಿದೆ.

ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ 28 ರನ್‌ಗಳಿಂದ ಭಾರತವನ್ನು ಸೋಲಿಸಿದ ನಂತರ ನಡೆದ ಎರಡು ಟೆಸ್ಟ್​​ಗಳಲ್ಲಿ ಸೋತಿದೆ. ಸದ್ಯ ಇಂಗ್ಲೆಂಡ್ ಪಾಲಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಹಾಗಾಗಿ ಭಾರತ ತಂಡಕ್ಕೆ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ ಇಂಗ್ಲೆಂಡ್.