ಅಕ್ಷರ್, ಬಿಷ್ಣೋಯ್ ಔಟ್, ಸುಂದರ್, ದುಬೆ ಇನ್; ಬೆಂಗಳೂರು ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಕ್ಷರ್, ಬಿಷ್ಣೋಯ್ ಔಟ್, ಸುಂದರ್, ದುಬೆ ಇನ್; ಬೆಂಗಳೂರು ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

ಅಕ್ಷರ್, ಬಿಷ್ಣೋಯ್ ಔಟ್, ಸುಂದರ್, ದುಬೆ ಇನ್; ಬೆಂಗಳೂರು ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

India vs Australia 5th T20: ಆಸ್ಟ್ರೇಲಿಯಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ಎರಡು ಬದಲಾವಣೆಯಾಗುವ ಸಾಧ್ಯತೆ ಇದೆ. ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಅವರು ಪ್ಲೇಯಿಂಗ್​ ಇಲೆವೆನ್​​​ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ.
ಬೆಂಗಳೂರು ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ.

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ 5 ಪಂದ್ಯಗಳ ಸರಣಿಯ ಐದನೇ ಮತ್ತು ಅಂತಿಮ ಟಿ20 ಭಾನುವಾರ (ಡಿಸೆಂಬರ್ 3) ನಡೆಯಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ಜರುಗಲಿದೆ. ಭಾರತ ಈಗಾಗಲೇ ಆಡಿರುವ 4 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದೆ.

ದ್ವಿಪಕ್ಷೀಯ ಸರಣಿಯ ಅಂತಿಮ ಪಂದ್ಯಕ್ಕೆ ಭಾರತ ಆಡುವ 11ರ ಬಳಗದಲ್ಲಿ ಒಂದೆರಡು ಬದಲಾವಣೆ ಮಾಡುವ ಸಾಧ್ಯತೆ ಇದೆ. ಸರಣಿ ಗೆದ್ದಿರುವ ಕಾರಣ ಬೆಂಚ್​​ನಲ್ಲಿದ್ದ ಆಟಗಾರರಿಗೆ ಅವಕಾಶ ನೀಡಲು ಟೀಮ್ ಮ್ಯಾನೇಜ್​ಮೆಂಟ್ ನಿರ್ಧರಿಸಿದೆ. ಹೀಗಾಗಿ ಸ್ಟಾರ್​ ಆಲ್​ರೌಂಡರ್ಸ್ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.

ಎರಡು ಬದಲಾವಣೆ ಸಾಧ್ಯತೆ

ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ 4 ಪಂದ್ಯಗಳಿಂದ ಬೆಂಚ್ ಕಾದಿದ್ದು, ಕೊನೆಯ ಪಂದ್ಯದಲ್ಲಾದರೂ ಅವಕಾಶ ನೀಡಲು ಮ್ಯಾನೇಜ್​ಮೆಂಟ್​ ಚಿಂತನೆ ನಡೆಸಿದೆ. ರವಿ ಬಿಷ್ಣೋಯ್​ ಮತ್ತು ಅಕ್ಷರ್​ ಪಟೇಲ್​ಗೆ ವಿಶ್ರಾಂತಿ ನೀಡಿ ಸುಂದರ್​ ಮತ್ತು ದುಬೆ ಅವರನ್ನು ಪ್ಲೇಯಿಂಗ್​ ಇಲೆವೆನ್​ ಕರೆ ತರುವ ಸಾಧ್ಯತೆ ಇದೆ.

ಶುಕ್ರವಾರ (ಡಿಸೆಂಬರ್ 1) ರಾಯ್‌ಪುರದಲ್ಲಿ ನಡೆದ 4ನೇ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 4 ಬದಲಾವಣೆ ಮಾಡಿತ್ತು. ಜಿತೇಶ್ ಶರ್ಮಾ, ಶ್ರೇಯಸ್ ಅಯ್ಯರ್, ಮುಕೇಶ್ ಕುಮಾರ್ ಮತ್ತು ದೀಪಕ್ ಚಹರ್ ಅವರಿಗೆ ಇಶಾನ್ ಕಿಶನ್, ಅರ್ಷದೀಪ್ ಸಿಂಗ್, ತಿಲಕ್ ವರ್ಮಾ ಮತ್ತು ಪ್ರಸಿದ್ಧ್ ಕೃಷ್ಣ ದಾರಿ ಮಾಡಿಕೊಟ್ಟಿದ್ದರು.

ಹಾಗಾಗಿ 4ನೇ ಟಿ20ಯಲ್ಲಿ ಬೆಂಚ್​ ಕಾದಿದ್ದ ಆಟಗಾರರು ಕೊನೆಯ ಪಂದ್ಯಕ್ಕೆ ಮರಳುವರೇ ಎಂಬ ಕುತೂಹಲ ಮೂಡಿಸಿದೆ. ಮೊದಲ 2ಪಂದ್ಯಗಳಲ್ಲಿ ಜಯಿಸಿದ್ದ ಭಾರತ, 3ನೇ ಟಿ20ಯಲ್ಲಿ ಸೋಲು ಕಂಡಿತ್ತು. ನಂತರ ಪುಟಿದೆದ್ದ ಯಂಗ್ ಇಂಡಿಯಾ, ಆಸೀಸ್​ಗೆ ಮಣ್ಣು ಮುಕ್ಕಿಸಿ ಪಂದ್ಯ ಬಾಕಿ ಇರುವಂತೆ ಸರಣಿ ವಶಪಡಿಸಿಕೊಂಡಿತು.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮುಕ್ತಾಯದ ನಂತರ, ಭಾರತ 3 ಪಂದ್ಯಗಳ ಚುಟುಕು ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದೆ. ಮೊದಲ ಟಿ20 ಡಿಸೆಂಬರ್ 10 ರಂದು ಡರ್ಬನ್‌ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸುಂದರ್, ಆಫ್ರಿಕಾ ಚುಟುಕು ಸಿರೀಸ್​ಗೆ ಆಯ್ಕೆಯಾಗಿದ್ದಾರೆ. ಆದರೆ ತಂಡದಲ್ಲಿ ಅಕ್ಷರ್‌ ಸ್ಥಾನ ಪಡೆದಿಲ್ಲ. ಹಾಗಾಗಿ ಸುಂದರ್​ಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

ಆಸ್ಟ್ರೇಲಿಯ ವಿರುದ್ಧದ 5ನೇ ಟಿ20ಗೆ ಭಾರತದ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್ (ನಾಯಕ), ಜಿತೇಶ್‌ ಕುಮಾರ್‌ (ವಿಕೆಟ್ ಕೀಪರ್), ರಿಂಕು ಸಿಂಗ್‌, ಅಕ್ಷರ್‌ ಪಟೇಲ್/ಶಿವಂ ದುಬೆ, ದೀಪಕ್‌ ಚಹರ್‌, ರವಿ ಬಿಷ್ಣೋಯ್/ವಾಷಿಂಗ್ಟನ್‌ ಸುಂದರ್‌, ಮುಕೇಶ್‌ ಕುಮಾರ್‌, ಆವೇಶ್‌ ಖಾನ್‌.

5ನೇ ಟಿ20 ಪಂದ್ಯಕ್ಕೆ ಆಸ್ಟ್ರೇಲಿಯಾ ಸಂಭಾವ್ಯ ತಂಡ

ಟ್ರಾವಿಸ್ ಹೆಡ್, ಜೋಶ್‌ ಫಿಲಿಪ್‌, ಬೆನ್ ಮೆಕ್‌ಡರ್ಮಾಟ್, ಆರೋನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ವೇಡ್ (ನಾಯಕ, ವಿಕೆಟ್ ಕೀಪರ್), ಬೆನ್ ದ್ವಾರ್ಶುಯಿಸ್, ಜೇಸನ್ ಬೆಹ್ರೆನ್‌ಡಾರ್ಫ್, ತನ್ವೀರ್ ಸಂಘ, ಕ್ರಿಸ್ ಗ್ರೀನ್.

Whats_app_banner