RCB 2025: ಗೊಂದಲದಲ್ಲಿ ಆರ್​ಸಿಬಿ, ಕರ್ನಾಟಕ ಸರ್ಕಾರದ ಒತ್ತಡಕ್ಕೆ ಬದಲಾಯ್ತು ಆಟಗಾರರ ಖರೀದಿಗೆ ತಂತ್ರ!
ಕನ್ನಡ ಸುದ್ದಿ  /  ಕ್ರಿಕೆಟ್  /  Rcb 2025: ಗೊಂದಲದಲ್ಲಿ ಆರ್​ಸಿಬಿ, ಕರ್ನಾಟಕ ಸರ್ಕಾರದ ಒತ್ತಡಕ್ಕೆ ಬದಲಾಯ್ತು ಆಟಗಾರರ ಖರೀದಿಗೆ ತಂತ್ರ!

RCB 2025: ಗೊಂದಲದಲ್ಲಿ ಆರ್​ಸಿಬಿ, ಕರ್ನಾಟಕ ಸರ್ಕಾರದ ಒತ್ತಡಕ್ಕೆ ಬದಲಾಯ್ತು ಆಟಗಾರರ ಖರೀದಿಗೆ ತಂತ್ರ!

ಕಳೆದ ಹಲವು ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿ ಕರ್ನಾಟಕದ ದೇಶೀಯ ಆಟಗಾರರಿಗೆ ಸಿಕ್ಕ ಅವಕಾಶಗಳು ತೀರಾ ಕಡಿಮೆ. ದೇವದತ್ ಪಡಿಕ್ಕಲ್ ಈ ತಂಡದಿಂದ ಸತತ ಅವಕಾಶ ಪಡೆದ ಕರ್ನಾಟಕದ ಕೊನೆಯ ಆಟಗಾರ. ಕನ್ನಡಿಗರಿಗೆ ತಂಡದಲ್ಲಿ ಅವಕಾಶ ನೀಡಬೇಕೆಂಬ ಸಲುವಾಗಿ ಹೊಸ ಪ್ರಯತ್ನಗಳು ನಡದಿರುವಂತಿದೆ.

ಗೊಂದಲದಲ್ಲಿ ಆರ್​ಸಿಬಿ, ಕರ್ನಾಟಕ ಸರ್ಕಾರದ ಒತ್ತಡಕ್ಕೆ ಬದಲಾಯ್ತು ಆಟಗಾರರ ಖರೀದಿಗೆ ತಂತ್ರ!
ಗೊಂದಲದಲ್ಲಿ ಆರ್​ಸಿಬಿ, ಕರ್ನಾಟಕ ಸರ್ಕಾರದ ಒತ್ತಡಕ್ಕೆ ಬದಲಾಯ್ತು ಆಟಗಾರರ ಖರೀದಿಗೆ ತಂತ್ರ!

18ನೇ ಆವೃತ್ತಿಯ ಐಪಿಎಲ್​ ಟೂರ್ನಿಯ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ನವೆಂಬರ್​ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಆಕ್ಷನ್ ನಡೆಯಲಿದೆ. ಎಲ್ಲಾ 10 ತಂಡಗಳು ಯಾರನ್ನು ಖರೀದಿಸಬೇಕು ಎಂಬ ಲೆಕ್ಕಾಚಾರ ಹಾಕುತ್ತಿವೆ. ಅಂತಿಮ ಪಟ್ಟಿಯಲ್ಲಿ 574 ಆಟಗಾರರು ಅದೃಷ್ಟ ಪರೀಕ್ಷೆಗಿಳಿದಿದ್ದು, ಎಲ್ಲಾ ತಂಡಗಳು ಸೇರಿ 204 ಆಟಗಾರನ್ನು ಖರೀದಿಸಬೇಕಿದೆ. ಈ ಎಲ್ಲದರ ನಡುವೆ ರಾಯಲ್ ಚಾಲೆಂಚರ್ಸ್ ಬೆಂಗಳೂರು ತಂಡಕ್ಕೆ ಒತ್ತಡ ಹೆಚ್ಚಾಗಿದೆ. ಹೌದು, ಕರ್ನಾಟಕ ಸರ್ಕಾರ ಹೇರಿದ್ದ ಒತ್ತಡಕ್ಕೆ, ಯಾರನ್ನು ಖರೀದಿಸಬೇಕು ಎಂಬ ಗೊಂದಲಕ್ಕೆ ಒಳಗಾಗಿದೆ.

ಐಪಿಎಲ್ ಶುರುವಾದಾಗಿನಿಂದಲೂ ಬೆಂಗಳೂರು ತಂಡದಲ್ಲಿ ಸ್ಥಳೀಯ ಆಟಗಾರರಿಗೆ ಸಿಕ್ಕ ಅವಕಾಶಗಳು ತೀರಾ ಅಂದರೆ ತೀರಾ ಕಡಿಮೆ. ಒಂದು ವೇಳೆ ಖರೀದಿಸಿದರೂ ಅವರು ಒಂದೆರಡು ಪಂದ್ಯಗಳು ಆಡುತ್ತಾರೆ ಅಥವಾ ಬೆಂಚ್ ಕಾಯುತ್ತಾರೆ. ಇದು ಪ್ರತಿ ವರ್ಷವೂ ಆಕ್ರೋಶಕ್ಕೆ ಗುರಿಯಾಗಿಸುತ್ತದೆ. ಪ್ರತಿಭಾವಂತ ಸ್ಥಳೀಯ ಆಟಗಾರರನ್ನು ಖರೀದಿಸಿ ಅವಕಾಶ ನೀಡದೇ ಇರುವುದೇಕೆ ಎಂದು ಸಾಕಷ್ಟು ಕ್ರಿಕೆಟ್ ಫ್ಯಾನ್ಸ್, ಕರ್ನಾಟಕದ ಜನತೆ, ಆರ್​ಸಿಬಿ ಮ್ಯಾನೇಜ್​ಮೆಂಟ್ ವಿರುದ್ಧ ಗರಂ ಆಗಿದ್ದುಂಟು. ಕರ್ನಾಟಕದ ಮಾಜಿ ಕ್ರಿಕೆಟಿಗರೂ ನೇರವಾಗಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರೂ ಕ್ಯಾರೆ ಎನ್ನುತ್ತಿರಲಿಲ್ಲ.

ದೇವದತ್ ಪಡಿಕ್ಕಲ್ ಆರ್​ಸಿಬಿ ಪರ ಸತತ ಅವಕಾಶ ಪಡೆದ ಕರ್ನಾಟಕದ ಕೊನೆಯ ಆಟಗಾರ. ವಿಜಯ್ ಕುಮಾರ್ ವೈಶಾಕ್ 2 ಸೀಸನ್‌ಗಳಲ್ಲಿ ತಂಡದ ಭಾಗವಾಗಿದ್ದಾರೆ, ಆದರೆ ಇಲ್ಲಿಯವರೆಗೆ ಅವರು ಕೇವಲ 11 ಪಂದ್ಯಗಳನ್ನು ಆಡಿದ್ದಾರಷ್ಟೆ. ಮನೋಜ್ ಭಾಂಡಗೆ ಈ ಎರಡು ಸೀಸನ್​ಗಳಲ್ಲಿ ಅವಕಾಶವೇ ಸಿಕ್ಕಿಲ್ಲ. ಈ ಎಲ್ಲದರ ಕಾರಣ ಐಪಿಎಲ್ 2025 ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ತಂಡದ ಮೇಲೆ ಕರ್ನಾಟಕ ಸರ್ಕಾರ ಒತ್ತಡ ಹೇರಿದ್ದು, ಕರ್ನಾಟಕದ ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ ಸೂಚಿಸಿತ್ತು. ಈ ಬಗ್ಗೆ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. 

ಆರ್​​ಸಿಬಿ ಕಾರ್ಯತಂತ್ರ ಬದಲು

ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ, ಸ್ಥಳೀಯ ಪ್ರತಿಭೆಗಳನ್ನು ಗುರಿಯಾಗಿಸಿಕೊಳ್ಳುತ್ತಿಲ್ಲ ಎನ್ನುವ ಆರೋಪ ಹಲವು ವರ್ಷಗಳದ್ದು. ತವರಿನ ಫ್ರಾಂಚೈಸಿಯಲ್ಲಿ ರಾಜ್ಯದ ಆಟಗಾರರ ಕೊರತೆ ಎದ್ದು ಕಾಣುವ ಕಾರಣಕ್ಕೆ ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಿ ಖಡಕ್ ಸೂಚನೆ ನೀಡಿತ್ತು. ರಿಟೆನ್ಶನ್​ ಅಲ್ಲಿ ಕರ್ನಾಟಕದ ಆಟಗಾರರನ್ನು ಕೈಬಿಟ್ಟಿರುವ ಆರ್​ಸಿಬಿ, ಮೆಗಾ ಹರಾಜಿನಲ್ಲಿ ಕರ್ನಾಟಕದ ಆಟಗಾರರನ್ನು ಹೆಚ್ಚು ಖರೀದಿಸಲು ಚಿಂತಿಸಿದೆ ಎಂದು ವರದಿಯಾಗಿದೆ. ಅಲ್ಲದೆ, ಕನ್ನಡಿಗರ ಖರೀದಿಗೆ ಸಂಬಂಧಿಸಿ ಕೆಲವು ಕಾರ್ಯತಂತ್ರಗಳನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಹರಾಜಿಗೂ ಮುನ್ನ ತೀವ್ರ ಗೊಂದಲಕ್ಕೆ ಒಳಗಾಗಿದೆ.

ಹಿಂದೊಮ್ಮೆ ಆರ್​ಸಿಬಿ ಕನ್ನಡಿಗರನ್ನು ತೆಗೆದುಕೊಳ್ಳುವುದಿಲ್ಲ ಎಂದು ಅನಿಲ್ ಕುಂಬ್ಳೆ ಹೇಳಿದ್ದರು. ಅದಕ್ಕೆ ತಕ್ಕಂತೆ ಮಾಜಿ ಕ್ರಿಕೆಟಿಗರು ಆರೋಪಿಸಿದ್ದರು. ಆದರೂ ಆರ್​ಸಿಬಿ ಬುದ್ದಿ ಕಲಿತಿರಲಿಲ್ಲ. ಇದೀಗ ಸರ್ಕಾರ ಮಧ್ಯ ಪ್ರವೇಶಿಸಿದ ಬೆನ್ನಲ್ಲೇ ಮಹತ್ವದ ನಿರ್ಧಾರಕ್ಕೆ ಬಂದಿದೆ. ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಜ ಟ್ರೋಫಿ ಸಾಕಷ್ಟು ಉದಯೋನ್ಮುಖ ಆಟಗಾರರು ತಮ್ಮ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಈ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದವರನ್ನು ಖರೀದಿಸಲು ಆರ್​ಸಿಬಿ ಚಿಂತಿಸಿದೆ. ಈ ಬಾರಿ ಒಟ್ಟು 24 ಕನ್ನಡಿಗರು ಹರಾಜಿನಲ್ಲಿದ್ದು, ಯಾರಿಗೆಲ್ಲಾ ಮಣೆ ಹಾಕಬಹುದು ಎಂಬ ಕುತೂಹಲ ಹೆಚ್ಚಾಗಿದೆ.

ಸ್ಥಳೀಯ ಪ್ರತಿಭೆಗಳಿಗೆ ಸಂಬಂಧಿಸಿದಂತೆ ರಾಹುಲ್ ದ್ರಾವಿಡ್, ಕೆಎಲ್ ರಾಹುಲ್ ಅವರಂತಹ ಹಲವಾರು ಕರ್ನಾಟಕ ಮೂಲದ ಆಟಗಾರರು ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದಾರೆ. ಆದರೆ ಇವರು ಯಾರಿಗೂ ದೃಢವಾಗಿ ನಿಲ್ಲಲು ದೀರ್ಘ ಸಮಯ ನೀಡಲಾಗಿಲ್ಲ. ಪ್ರಸ್ತುತ ರಾಹುಲ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಮನೀಶ್ ಪಾಂಡೆ ಮತ್ತು ವಿಜಯ್‌ ಕುಮಾರ್ ರಾಜ್ಯದ ಕೆಲವು ಉನ್ನತ ಪ್ರತಿಭೆಗಳು ಅಥವಾ ಹಿರಿಯ ಆಟಗಾರರಾಗಿದ್ದಾರೆ.

ಹರಾಜಿನಲ್ಲಿರುವ ಕರ್ನಾಟಕದ 24 ಆಟಗಾರರು

ಕೆಎಲ್ ರಾಹುಲ್ - ಮೂಲ ಬೆಲೆ 2 ಕೋಟಿ

ದೇವದತ್ ಪಡಿಕ್ಕಲ್ - ಮೂಲ ಬೆಲೆ 2 ಕೋಟಿ

ಪ್ರಸಿದ್ಧ್‌ ಕೃಷ್ಣ - ಮೂಲ ಬೆಲೆ 2 ಕೋಟಿ

ಮಯಾಂಕ್‌ ಅಗರ್‌ವಾಲ್‌ - ಮೂಲ ಬೆಲೆ 1 ಕೋಟಿ

ಕೆ ಗೌತಮ್‌ - ಮೂಲ ಬೆಲೆ 1 ಕೋಟಿ

ಮನೀಶ್‌ ಪಾಂಡೆ - ಮೂಲ ಬೆಲೆ 75 ಲಕ್ಷ

ಲುವ್ನಿತ್‌ ಸಿಸೋಡಿಯಾ - ಮೂಲ ಬೆಲೆ 30 ಲಕ್ಷ

ಸ್ಮರಣ್ ರವಿಚಂದ್ರನ್ - ಮೂಲ ಬೆಲೆ 30 ಲಕ್ಷ

ಎಲ್​ಆರ್‌ ಚೇತನ್‌ - ಮೂಲ ಬೆಲೆ 30 ಲಕ್ಷ

ಮನೋಜ್‌ ಭಾಂಡಗೆ - ಮೂಲ ಬೆಲೆ 30 ಲಕ್ಷ

ಅಭಿಲಾಷ್ ಶೆಟ್ಟಿ - ಮೂಲ ಬೆಲೆ 30 ಲಕ್ಷ

ವೈಶಾಖ್‌ ವಿಜಯ್‌ ಕುಮಾರ್‌ - ಮೂಲ ಬೆಲೆ 30 ಲಕ್ಷ

ಪ್ರವೀಣ್‌ ದುಬೆ - ಮೂಲ ಬೆಲೆ 30 ಲಕ್ಷ

ಮನ್ವಂತ್‌ ಕುಮಾರ್‌ - ಮೂಲ ಬೆಲೆ 30 ಲಕ್ಷ

ಶ್ರೇಯಸ್‌ ಗೋಪಾಲ್‌ - ಮೂಲ ಬೆಲೆ 30 ಲಕ್ಷ

ಹಾರ್ದಿಕ್‌ ರಾಜ್‌ - ಮೂಲ ಬೆಲೆ 30 ಲಕ್ಷ

ಅಭಿನವ್‌ ಮಹೋಹರ್‌ - ಮೂಲ ಬೆಲೆ 30 ಲಕ್ಷ

ಬಿಆರ್‌ ಶರತ್‌ - ಮೂಲ ಬೆಲೆ 30 ಲಕ್ಷ

ಶ್ರೀಜಿತ್‌ ಕೃಷ್ಣನ್‌ - ಮೂಲ ಬೆಲೆ 30 ಲಕ್ಷ

ವಿದ್ವತ್‌ ಕಾವೇರಪ್ಪ - ಮೂಲ ಬೆಲೆ 30 ಲಕ್ಷ

ದೀಪಕ್‌ ದೇವಾಡಿಗ - ಮೂಲ ಬೆಲೆ 30 ಲಕ್ಷ

ವಿದ್ಯಾಧರ್‌ ಪಾಟೀಲ್‌ - ಮೂಲ ಬೆಲೆ 30 ಲಕ್ಷ

ಶುಭಾಂಗ್‌ ಹೆಗಡೆ - ಮೂಲ ಬೆಲೆ 30 ಲಕ್ಷ

ಸಮರ್ಥ್‌ ನಾಗರಾಜ್‌ - ಮೂಲ ಬೆಲೆ 30 ಲಕ್ಷ

Whats_app_banner