ಸೌತ್ ಆಫ್ರಿಕಾ vs ಅಫ್ಘಾನಿಸ್ತಾನ ಮೊದಲ ಸೆಮಿಫೈನಲ್; ಗೆಲ್ಲುವ ತಂಡ, ಪ್ಲೇಯಿಂಗ್ 11, ಪಿಚ್ ಹಾಗೂ ಹವಾಮಾನ ವರದಿ
South Africa vs Afghanistan: ಅಫ್ಘಾನಿಸ್ತಾನ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಸೆಮಿಫೈನಲ್ ಪಂದ್ಯವು ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಅಫ್ಘಾನಿಸ್ತಾನ ತಂಡವು ಟಿ20 ವಿಶ್ವಕಪ್ 2024 ಫೈನಲ್ ಪ್ರವೇಶಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದು, ಇದೇ ಮೊದಲ ಬಾರಿಗೆ ಸೆಮೀಸ್ ಪ್ರವೇಶಿಸಿದೆ. ಜೂನ್ 27ರ ಬೆಳಿಗ್ಗೆ 6 ಗಂಟೆಗೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಅಫ್ಘಾನಿಸ್ತಾನ-ಸೌತ್ ಆಫ್ರಿಕಾ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಮಹತ್ವದ ಪಂದ್ಯಕ್ಕೆ ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ಟಿ20 ವಿಶ್ವಕಪ್ನಲ್ಲಿ ಆಫ್ಘನ್ ಪ್ರಚಂಡ ಫಾರ್ಮ್ನಲ್ಲಿದ್ದು, ಸೌತ್ ಆಫ್ರಿಕಾ ವಿರುದ್ಧವೂ ಅದೇ ಲಯ ಮುಂದುವರೆಸಲು ಸಜ್ಜಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ರಶೀದ್ ಖಾನ್ ಪಡೆ, ಐಸಿಸಿ ಟೂರ್ನಿಗಳಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಲು ಸನ್ನದ್ಧಗೊಂಡಿವೆ. ಎಲ್ಲಾ ವಿಭಾಗಗಳನ್ನು ಬಲಿಷ್ಠವಾಗಿರುವ ಆಫ್ಘನ್ ತಂಡವನ್ನು ಕಟ್ಟಿ ಹಾಕಲು ಸೌತ್ ಆಫ್ರಿಕಾ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.
- ಸೌತ್ ಆಫ್ರಿಕಾ ಕಳೆದ ಐದು ಪಂದ್ಯಗಳಲ್ಲಿ ಗೆಲುವು
- ಅಫ್ಘಾನಿಸ್ತಾನ ಕಳೆದ ಐದು ಪಂದ್ಯಗಳಲ್ಲಿ ಮೂರು ಗೆಲುವು
ಅಫ್ಘಾನಿಸ್ತಾನ ಪ್ಲೇಯಿಂಗ್ XI
ಬ್ಯಾಟ್ಸ್ಮನ್ಗಳು - ಇಬ್ರಾಹಿಂ ಝದ್ರನ್, ಗುಲ್ಬಾದಿನ್ ನೈಬ್
ಆಲ್ರೌಂಡರ್ಗಳು - ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಕರೀಮ್ ಜನತ್, ನಂಗೇಯಾಲಿಯಾ ಖರೋಟೆ
ವಿಕೆಟ್ ಕೀಪರ್ - ರಹಮಾನುಲ್ಲಾ ಗುರ್ಬಾಜ್
ಬೌಲರ್ಸ್ - ರಶೀದ್ ಖಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.
ದಕ್ಷಿಣ ಆಫ್ರಿಕಾ ಸಂಭಾವ್ಯ ಇಲೆವೆನ್
ಬ್ಯಾಟ್ಸ್ಮನ್ಗಳು - ರೀಜಾ ಹೆಂಡ್ರಿಕ್ಸ್, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್
ಆಲ್ರೌಂಡರ್ಗಳು - ಏಡೆನ್ ಮಾರ್ಕ್ರಮ್, ಮಾರ್ಕೊ ಜಾನ್ಸೆನ್
ವಿಕೆಟ್ ಕೀಪರ್ - ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್
ಬೌಲರ್ಗಳು - ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಕ್ ನಾರ್ಟ್ಜೆ, ತಬ್ರೈಜ್ ಶಮ್ಸಿ.
ಅಂಕಿ-ಅಂಶಗಳು
1. ರಹಮಾನುಲ್ಲಾ ಗುರ್ಬಾಜ್: ರಹಮಾನುಲ್ಲಾ ಗುರ್ಬಾಜ್ ಈ ಟಿ20 ವಿಶ್ವಕಪ್ನ 7 ಇನ್ನಿಂಗ್ಸ್ಗಳಲ್ಲಿ 281 ರನ್ ಗಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ 55 ಎಸೆತಗಳಲ್ಲಿ 43 ರನ್ ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.
2. ಫಜಲ್ಹಕ್ ಫಾರೂಕಿ: ಫಜಲ್ಹಕ್ ಫಾರೂಕಿ ವಿಶ್ವಕಪ್ನಲ್ಲಿ 16 ವಿಕೆಟ್ಗಳೊಂದಿಗೆ ಪ್ರಮುಖ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಪವರ್ಪ್ಲೇ ಓವರ್ಗಳಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ.
1. ಕ್ವಿಂಟನ್ ಡಿ ಕಾಕ್: ಸೌತ್ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರು ತಮ್ಮ ತಂಡದ ಪರ ಅತ್ಯಧಿಕ ರನ್ ಗಳಿಸಿದ್ದಾರೆ. ಅವರು 7 ಪಂದ್ಯಗಳಲ್ಲಿ 28.43ರ ಬ್ಯಾಟಿಂಗ್ ಸರಾಸರಿಯಲ್ಲಿ 199 ರನ್ ಗಳಿಸಿದ್ದಾರೆ.
2. ಆನ್ರಿಚ್ ನೋಕಿಯಾ: ದಕ್ಷಿಣ ಆಫ್ರಿಕಾ ಪರ ಆನ್ರಿಚ್ ನೋಕಿಯಾ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. 7 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.
ಪಿಚ್ ರಿಪೋರ್ಟ್
ಬ್ರಿಯಾನ್ ಲಾರಾ ಕ್ರೀಡಾಂಗಣವು ಟಿ20 ವಿಶ್ವಕಪ್ 2024ರ ಆವೃತ್ತಿಯಲ್ಲಿ 4 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಈ ಪೈಕಿ ಮೂರು ತಂಡಗಳು ಟಾಸ್ ಗೆದ್ದವರೇ ಗೆದ್ದಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಚೇಸಿಂಗ್ ನಡೆಸಿದ ತಂಡ ಗೆದ್ದಿದೆ. ಟಿ20 ವಿಶ್ವಕಪ್ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 90 ಮತ್ತು 2ನೇ ಇನ್ನಿಂಗ್ಸ್ಗೆ 89 ಆಗಿದೆ. ಈ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗಲಿದೆ. ಹಾಗಾಗಿ ಬ್ಯಾಟರ್ಗಳು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಬೇಕಿದೆ.
ಯಾರು ಗೆಲ್ಲುವ ಸಾಧ್ಯತೆ ಇದೆ?
ಸೆಮಿಫೈನಲ್ಗೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ 'ಚೋಕರ್ಸ್' ಟ್ಯಾಗ್ ಹೆಚ್ಚುವರಿ ಒತ್ತಡವಿದೆ. ಉಭಯ ತಂಡಗಳಲ್ಲೂ ಬೌಲಿಂಗ್ ಮತ್ತು ಬ್ಯಾಟಿಂಗ್ ಚೆನ್ನಾಗಿದೆ. ಆದರೆ ಗುರ್ಬಾಜ್ ಭರ್ಜರಿ ಫಾರ್ಮ್ನಲ್ಲಿರುವುದು ಆಫ್ಘನ್ ಬಲ ಮತ್ತಷ್ಟು ಹೆಚ್ಚಿಸಿದೆ. ಅಲ್ಲದೆ, ಆಫ್ರಿಕಾ ಸ್ಪಿನ್ನರ್ಗಳಿಗೆ ಹೋಲಿಸಿದರೆ ಆಫ್ಘಾನಿ ಸ್ಪಿನ್ನರ್ಗಳು ದೊಡ್ಡ ಪಾತ್ರವಹಿಸುವ ಸಾಧ್ಯತೆ ಇದೆ. ಉಭಯ ತಂಡಗಳಿಗೂ ಗೆಲುವಿನ ಶೇಕಡವಾರು 50-50 ಇದೆ.
ಹವಾಮಾನ ವರದಿ
ಪಂದ್ಯದ ದಿನದಂದು ಟ್ರಿನಿಡಾಡ್‌ನಲ್ಲಿ ಹೆಚ್ಚು ಮಳೆ ಆಗುವ ಸಾಧ್ಯತೆಗಳಿವೆ. ಈ ಪಂದ್ಯ ಆರಂಭವಾಗುವುದು ಮಧ್ಯಾಹ್ನದ ವೇಳೆಗೆ. ಅಂದರೆ ಸ್ಥಳೀಯ ಕಾಲಮಾನ ರಾತ್ರಿ 8.30ಕ್ಕೆ ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 1-3 ಗಂಟೆಯ ನಡುವೆ ಮಳೆ ಆಗುವ ಸಾಧ್ಯತೆ ದಟ್ಟವಾಗಿದೆ. ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ, ಮೀಸಲು ದಿನದಂದು ಪ್ರಾರಂಭವಾಗಲಿದೆ.