ಕನ್ನಡ ಸುದ್ದಿ  /  Cricket  /  Test Records Of Team India At Jsca International Stadium Complex In Ranchi India Vs England 4th Test Virat Kohli Jra

ವಿರಾಟ್‌ ನಾಯಕತ್ವದಲ್ಲಿ ಸೋಲು-ಗೆಲುವಿನ ಮಿಶ್ರಣ; ರಾಂಚಿಯಲ್ಲಿ ಭಾರತದ ಟೆಸ್ಟ್ ರೆಕಾರ್ಡ್ಸ್‌ ಹೀಗಿವೆ

ಭಾರತ ಕ್ರಿಕೆಟ್ ತಂಡವು ಇದುವರೆಗೆ ರಾಂಚಿಯಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದೆ. ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಆಡಿದ ಎರಡರಲ್ಲಿ ಒಂದು ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಇದೀಗ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ನಾಲ್ಕನೇ ಟೆಸ್ಟ್‌ ಪಂದ್ಯ ಆಡುತ್ತಿವೆ.

ರಾಂಚಿಯಲ್ಲಿ ಭಾರತದ ಟೆಸ್ಟ್ ರೆಕಾರ್ಡ್ಸ್‌ ಹೀಗಿವೆ
ರಾಂಚಿಯಲ್ಲಿ ಭಾರತದ ಟೆಸ್ಟ್ ರೆಕಾರ್ಡ್ಸ್‌ ಹೀಗಿವೆ (PTI)

ಜಾರ್ಖಂಡ್‌ ರಾಜಧಾನಿ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ (JSCA International Stadium Complex in Ranchi) ಭಾರತ ಮತ್ತು ಇಂಗ್ಲೆಂಡ್‌ (India vs England) ತಂಡಗಳ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಆಂಗ್ಲರನ್ನು 434 ರನ್‌ಗಳ ಭರ್ಜರಿ ಅಂತರದಿಂದ ಸೋಲಿಸಿದ ರೋಹಿತ್‌ ಶರ್ಮಾ ಪಡೆ, ಇದೀಗ ನಾಲ್ಕನೇ ಟೆಸ್ಟ್‌ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ.

ಫೆಬ್ರವರಿ 23ರ ಶುಕ್ರವಾರ ಪಂದ್ಯ ಆರಂಭವಾಗುತ್ತಿದ್ದು, ಈಗಾಗಲೇ ಭಾರತವು ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆಯಲ್ಲಿದೆ. ರಾಂಚಿ ಟೆಸ್ಟ್‌ ಗೆದ್ದರೆ, ಸರಣಿಯು ಟೀಮ್‌ ಇಂಡಿಯಾ ಕೈವಶವಾಗಲಿದೆ. ಅಲ್ಲದೆ ಈ ಗೆಲುವು ಭಾರತದ ಹ್ಯಾಟ್ರಿಕ್ ಸಾಧನೆಗೂ ಕಾರಣವಾಗುತ್ತದೆ.

ಇದನ್ನೂ ಓದಿ | ಬುಮ್ರಾ, ರಾಹುಲ್ ಔಟ್-ಮತ್ತೊಬ್ಬ ಕನ್ನಡಿಗ, ಆರ್​ಸಿಬಿ ಆಟಗಾರ ಪದಾರ್ಪಣೆ; 4ನೇ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ

ಭಾರತ ತಂಡವು ಇದುವರೆಗೆ ರಾಂಚಿಯಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದೆ. ಇದರಲ್ಲಿ ಒಂದು ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎರಡೂ ಪಂದ್ಯಗಳನ್ನು ಭಾರತವು ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಆಡಿದ್ದು, ಇನ್ನೊಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ನಾಲ್ಕನೇ ಟೆಸ್ಟ್ ಆರಂಭಕ್ಕೂ ಮುನ್ನ, ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆದ ಈವರೆಗಿನ ಟೆಸ್ಟ್ ಪಂದ್ಯಗಳಲ್ಲಿ ಭಾರತ‌ ತಂಡ ಹೇಗೆ ಪ್ರದರ್ಶನ ನೀಡಿದೆ ಎಂಬುದನ್ನು ನೋಡೋಣ.

ಈವರೆಗಿನ ಫಲಿತಾಂಶ

 • ಭಾರತ ಆಡಿದ 2 ಟೆಸ್ಟ್‌ಗಳಲ್ಲಿ 1ರಲ್ಲಿ ಗೆಲುವು ಮತ್ತು 1 ಪಂದ್ಯ ಡ್ರಾ.
 • ಹೆಚ್ಚು ಪಂದ್ಯಗಳನ್ನು ಆಡಿದವರು: ರವೀಂದ್ರ ಜಡೇಜಾ, ಆರ್ ಅಶ್ವಿನ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ ಮತ್ತು ಉಮೇಶ್ ಯಾದವ್ -ತಲಾ 2.
 • ನಾಯಕನಾಗಿ ಹೆಚ್ಚು ಗೆಲುವು: ವಿರಾಟ್ ಕೊಹ್ಲಿ -ನಾಯಕನಾಗಿ ರಾಂಚಿಯಲ್ಲಿ 2 ಟೆಸ್ಟ್‌ಗಳಲ್ಲಿ 1ರಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.
 • ಬೃಹತ್‌ ಗೆಲುವು: 2019ರ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಹಾಗೂ 202 ರನ್‌ಗಳಿಂದ ಗೆಲುವು.
 • ಗರಿಷ್ಠ ಮೊತ್ತ: ಮಾರ್ಚ್ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ 210 ಓವರ್‌ಗಳಲ್ಲಿ 9 ವಿಕೆಟ್‌ಗೆ 603 (ಡಿಕ್ಲೇರ್).‌

ಇದನ್ನೂ ಓದಿ | ಕೊಹ್ಲಿ 2ನೇ ಮಗು, ಕಷ್ಟದ ದಿನಗಳು, ಯಶಸ್ಸು, ನಿವೃತ್ತಿ ಕುರಿತು 2016ರಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ; ವಿರಾಟ್ ಫ್ಯಾನ್ಸ್​ಗೆ ಆತಂಕ

 • ಅತಿ ಹೆಚ್ಚು ರನ್: ರೋಹಿತ್ ಶರ್ಮಾ 212 ರನ್ (ಒಂದು ಟೆಸ್ಟ್‌ನಲ್).
 • ಗರಿಷ್ಠ ಸ್ಕೋರ್: ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಶರ್ಮಾ 255 ಎಸೆತಗಳಲ್ಲಿ 212 ರನ್ (ಅಕ್ಟೋಬರ್ 19, 2019).
 • ಹೆಚ್ಚು ಶತಕ: ರೋಹಿತ್ ಶರ್ಮಾ, ವೃದ್ಧಿಮಾನ್ ಸಹಾ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ -ತಲಾ 1.
 • ಅತಿ ಹೆಚ್ಚು ಅರ್ಧಶತಕ: ರವೀಂದ್ರ ಜಡೇಜಾ -ಎರಡು ಟೆಸ್ಟ್‌ಗಳಲ್ಲಿ 2.
 • ಅತಿ ಹೆಚ್ಚು ಸಿಕ್ಸರ್‌ಗಳು: ರೋಹಿತ್ ಶರ್ಮಾ -ಒಂದು ಟೆಸ್ಟ್‌ನಲ್ಲಿ 6.
 • ಗರಿಷ್ಠ ಜೊತೆಯಾಟ: ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ನಡುವೆ 4ನೇ ವಿಕೆಟ್‌ಗೆ 267 ರನ್ (ಅಕ್ಟೋಬರ್ 19, 2019).
 • ಹೆಚ್ಚು ಡಕ್: ಚೇತೇಶ್ವರ ಪೂಜಾರ -ಎರಡು ಟೆಸ್ಟ್‌ಗಳಲ್ಲಿ 1 ಬಾರಿ.
 • ಅತಿ ಹೆಚ್ಚು ವಿಕೆಟ್: ರವೀಂದ್ರ ಜಡೇಜಾ -ಎರಡು ಟೆಸ್ಟ್‌ಗಳಲ್ಲಿ 12 ವಿಕೆಟ್.
 • ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು (ಇನಿಂಗ್ಸ್): ರವೀಂದ್ರ ಜಡೇಜಾ -49.3 ಓವರ್‌ಗಳಲ್ಲಿ 124 ರನ್‌ಗಳಿಗೆ 5 ವಿಕೆಟ್‌ (ಮಾರ್ಚ್ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ).
 • ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು (ಪಂದ್ಯ): ರವೀಂದ್ರ ಜಡೇಜಾ -93.3 ಓವರ್‌ಗಳಲ್ಲಿ 178 ರನ್‌ಗಳಿಗೆ 9 ವಿಕೆಟ್‌ (ಮಾರ್ಚ್ 2017, ಆಸ್ಟ್ರೇಲಿಯಾ ವಿರುದ್ಧ).

ಇದನ್ನೂ ಓದಿ | ಗೆಲ್ಲಲೇಬೇಕಾದ ಒತ್ತಡದಲ್ಲಿ ಇಂಗ್ಲೆಂಡ್; 4ನೇ ಟೆಸ್ಟ್​ ಪಂದ್ಯಕ್ಕೆ ಪ್ಲೇಯಿಂಗ್ XI ಪ್ರಕಟಿಸಿದ ಆಂಗ್ಲರು, ಎರಡು ಬದಲಾವಣೆ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point