ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ, ಆದರೆ..: ಟಿ20 ವಿಶ್ವಕಪ್​ಗೂ ಮುನ್ನ ಬಿಸಿಸಿಐ ಮಾಜಿ ಅಧ್ಯಕ್ಷ ಕಳವಳ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ, ಆದರೆ..: ಟಿ20 ವಿಶ್ವಕಪ್​ಗೂ ಮುನ್ನ ಬಿಸಿಸಿಐ ಮಾಜಿ ಅಧ್ಯಕ್ಷ ಕಳವಳ

ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ, ಆದರೆ..: ಟಿ20 ವಿಶ್ವಕಪ್​ಗೂ ಮುನ್ನ ಬಿಸಿಸಿಐ ಮಾಜಿ ಅಧ್ಯಕ್ಷ ಕಳವಳ

Virat Kohli: ಐಪಿಎಲ್​ನ ದ್ವಿತಿಯಾರ್ಧದಲ್ಲಿ ಬ್ಯಾಟಿಂಗ್​ನಲ್ಲಿ ರೌದ್ರಾವತಾರ ಬ್ಯಾಟಿಂಗ್ ನಡೆಸಿದ್ದ ವಿರಾಟ್ ಕೊಹ್ಲಿ, ಅದೇ ರೀತಿ ಟಿ20 ವಿಶ್ವಕಪ್​ನಲ್ಲೂ ಪ್ರದರ್ಶನ ನೀಡಬೇಕಿದೆ ಎಂದು ಸೌರವ್ ಗಂಗೂಲಿ ಪ್ರತಿಪಾದಿಸಿದ್ದಾರೆ.

ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ, ಆದರೆ..: ಟಿ20 ವಿಶ್ವಕಪ್​ಗೂ ಮುನ್ನ ಬಿಸಿಸಿಐ ಮಾಜಿ ಅಧ್ಯಕ್ಷ ಕಳವಳ
ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ, ಆದರೆ..: ಟಿ20 ವಿಶ್ವಕಪ್​ಗೂ ಮುನ್ನ ಬಿಸಿಸಿಐ ಮಾಜಿ ಅಧ್ಯಕ್ಷ ಕಳವಳ

Virat Kohli: ವಿರಾಟ್ ಕೊಹ್ಲಿ ಅವರು ಈ ವರ್ಷ ಐಪಿಎಲ್​​ನಲ್ಲಿ ಆಡಿದಂತೆಯೇ ಟಿ20 ವಿಶ್ವಕಪ್​​ನಲ್ಲೂ ಆಡಿದರೆ, ಅದು ಭಾರತ ತಂಡಕ್ಕೆ ನಿರ್ಣಾಯಕ ಪಾತ್ರವಹಿಸಿದಂತಾಗುತ್ತದೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಬೇಕು ಎಂದು ಸಲಹೆ ಕೂಡ ನೀಡಿದ್ದಾರೆ. 2024ರ ಐಪಿಎಲ್​ನಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಕೊಹ್ಲಿ, ಟೀಕಾಕಾರರ ಬಾಯಿ ಮುಚ್ಚಿಸಲೆಂದು ಮಧ್ಯಮ ಓವರ್​​ಗಳಲ್ಲಿ ಅಗ್ರೆಸ್ಸಿವ್ ಬ್ಯಾಟಿಂಗ್ ನಡೆಸಿದ್ದರು.

ಆರ್​​ಸಿಬಿ ಸ್ಟಾರ್ ಕಿಂಗ್ ಕೊಹ್ಲಿ 15 ಪಂದ್ಯಗಳಲ್ಲಿ 61.75ರ ಬ್ಯಾಟಿಂಗ್ ಸರಾಸರಿಯಲ್ಲಿ 741 ರನ್ ಗಳಿಸಿದ್ದಾರೆ. ಬ್ಯಾಟಿಂಗ್​ ಸ್ಟ್ರೈಕ್​ರೇಟ್ ಇದ್ದದ್ದು 154.70. ಇದು ಐಪಿಎಲ್ ಆವೃತ್ತಿಯೊಂದರಲ್ಲಿ ಅವರ ಅತ್ಯುತ್ತಮ ಸ್ಟ್ರೈಕ್​ರೇಟ್ ಆಗಿದೆ. ಸೀಸನ್​​ ಆರಂಭದಲ್ಲಿ ಸ್ಪಿನ್ನರ್​​ಗಳ ವಿರುದ್ಧ ಮಧ್ಯಮ ಓವರ್​​ಗಳಲ್ಲಿ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ಅನ್ನು ಟೀಕಿಸಲಾಗಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಅವರು ಸ್ಪಿನ್ನರ್ಸ್​ ವಿರುದ್ಧ ದಂಡಯಾತ್ರೆ ನಡೆಸಿದ ಕೊಹ್ಲಿ, ರನ್​ ಬೇಟೆಯಾಡಿದ್ದರು. ಇದು ಎಲ್ಲರನ್ನು ಅಚ್ಚರಿಗೊಳಿಸಿತ್ತು.

ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಾತ್ರ ಏನೆಂಬುದನ್ನು ತಿಳಿಸಿದ ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ, ಮೆಗಾ ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಬೇಕಾದರೆ, ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಸ್ವಾತಂತ್ರ್ಯದಿಂದ ಬ್ಯಾಟಿಂಗ್ ಮಾಡಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ. ವಿರಾಟ್, ರೋಹಿತ್ ಅವರೊಂದಿಗೆ ಆರಂಭಿಕನಾಗಿ ಕಣಕ್ಕಿಳಿಯಬೇಕು. ಐಪಿಎಲ್‌ ಸೆಕೆಂಡ್​ ಹಾಫ್​ನಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡಿದ ರೀತಿಯಲ್ಲಿಯೇ ಬ್ಯಾಟಿಂಗ್ ಮಾಡಬೇಕೆಂದು ಬಯಸುತ್ತೇನೆ ಎಂದಿದ್ದಾರೆ.

ವಿರಾಟ್ ಶ್ರೇಷ್ಠ ಆಟಗಾರ ಎಂದ ಗಂಗೂಲಿ

ಅದರಲ್ಲೂ ವಿರಾಟ್ ಮುಕ್ತವಾಗಿ ಬ್ಯಾಟಿಂಗ್ ಮಾಡಬೇಕು. ಕೊಹ್ಲಿ ಶ್ರೇಷ್ಠ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಟೀಮ್ ಇಂಡಿಯಾ ಪರ ಉತ್ತಮವಾಗಿ ಕಾರ್ಯನಿರ್ವಹಿಸಲು ವಿರಾಟ್ ಅವರು, ಐಪಿಎಲ್​ನಲ್ಲಿ ಪ್ರದರ್ಶನ ನೀಡಿದಂತೆ ಸ್ವಾತಂತ್ರ್ಯದಿಂದ ಬ್ಯಾಟ್ ಬೀಸಬೇಕು. ಅಗ್ರ ಕ್ರಮಾಂಕದಲ್ಲಿ ವಿರಾಟ್-ರೋಹಿತ್ ನನ್ನ ಆಯ್ಕೆಯಾಗಿರುತ್ತಾರೆ. ಈ ಜೋಡಿ ಆರಂಭಿಕರಾಗಿ ಬೌಲರ್​ಗಳ ಮೇಲೆ ಸವಾರಿ ಮಾಡಲಿದೆ ಎಂದು ಗಂಗೂಲಿ ರೆವ್​ಸ್ಪೋರ್ಟ್ಸ್​ಗೆ ಹೇಳಿದ್ದಾರೆ.

ಜೂನ್ 5 ರಂದು ನ್ಯೂಯಾರ್ಕ್​​ನಲ್ಲಿ ಹೊಸದಾಗಿ ನಿರ್ಮಿಸಲಾದ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿದೆ. ಜೂನ್ 9ರಂದು ಇದೇ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದ್ದು, ನಂತರ 'ಎ' ಗುಂಪಿನಲ್ಲೇ ಆತಿಥೇಯ ಅಮೆರಿಕ ಮತ್ತು ಕೆನಡಾ ವಿರುದ್ಧ ಸೆಣಸಲಿದೆ.

ಸ್ಪಿನ್ನರ್​​ಗಳಿಗೆ ನೆರವು ಎಂದ ಬಿಸಿಸಿಐ ಮಾಜಿ ಅಧ್ಯಕ್ಷ

ವಿಶ್ವಕಪ್​ಗೂ ಮುನ್ನ ರೋಹಿತ್ ಮತ್ತು ತಂಡವನ್ನು ಬೆಂಬಲಿಸಿದ ಗಂಗೂಲಿ, ತಂಡವು ಗುಣಮಟ್ಟ ಆಟಗಾರರನ್ನು ಹೊಂದಿದೆ ಎಂಬುದು ನನಗೆ ಗೊತ್ತಿದೆ. ನ್ಯೂಯಾರ್ಕ್​ ಟೀಮ್ ಇಂಡಿಯಾ ಸ್ಪಿನ್ನರ್​​ಗಳಿಗೆ ಅಧಿಕ ಸಹಾಯ ಮಾಡುತ್ತದೆ. ಗುಣಮಟ್ಟದ ಆಟಗಾರರು ತಂಡದಲ್ಲಿರುವ ಕಾರಣ ಅತ್ಯುತ್ತಮ ಪ್ರದರ್ಶನ ಹೊರಬರುವ ಸಾಧ್ಯತೆ ಇದೆ ಎಂದು ಗಂಗೂಲಿ ಹೇಳಿಕೆ ನೀಡಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner