ಕಿವೀಸ್ ವಿರುದ್ಧದ ಸೋಲಿನ ಬೆನ್ನಲ್ಲೇ ಮುಂಬೈನಲ್ಲಿ ಕೃಷ್ಣ ದಾಸ್ ಕೀರ್ತನೆಯಲ್ಲಿ ಭಾಗಿಯಾದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಕಿವೀಸ್ ವಿರುದ್ಧದ ಸೋಲಿನ ಬೆನ್ನಲ್ಲೇ ಮುಂಬೈನಲ್ಲಿ ಕೃಷ್ಣ ದಾಸ್ ಕೀರ್ತನೆಯಲ್ಲಿ ಭಾಗಿಯಾದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

ಕಿವೀಸ್ ವಿರುದ್ಧದ ಸೋಲಿನ ಬೆನ್ನಲ್ಲೇ ಮುಂಬೈನಲ್ಲಿ ಕೃಷ್ಣ ದಾಸ್ ಕೀರ್ತನೆಯಲ್ಲಿ ಭಾಗಿಯಾದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ನಲ್ಲಿ ಸೋಲಿನ ನಂತರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಕೀರ್ತನೆಯಲ್ಲಿ ಭಾಗಿಯಾಗಿದ್ದಾರೆ. ಕೃಷ್ಣ ದಾಸ್‌ ಅವರು ಮುಂಬೈನಲ್ಲಿ ನಡೆಸಿ ಕೊಟ್ಟ ಧಾರ್ಮಿಕ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗಿಯಾಗಿ ಖುಷಿಪಟ್ಟಿದ್ದಾರೆ.

ಕಿವೀಸ್ ವಿರುದ್ಧದ ಸೋಲಿನ ಬೆನ್ನಲ್ಲೇ ಮುಂಬೈನಲ್ಲಿ ಕೀರ್ತನೆಯಲ್ಲಿ ಭಾಗಿಯಾದ ವಿರಾಟ್- ಅನುಷ್ಕಾ
ಕಿವೀಸ್ ವಿರುದ್ಧದ ಸೋಲಿನ ಬೆನ್ನಲ್ಲೇ ಮುಂಬೈನಲ್ಲಿ ಕೀರ್ತನೆಯಲ್ಲಿ ಭಾಗಿಯಾದ ವಿರಾಟ್- ಅನುಷ್ಕಾ

ಬೆಂಗಳೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ, ನ್ಯೂಜಿಲೆಂಡ್ ವಿರುದ್ಧ ಭಾರತೀಯ ಕ್ರಿಕೆಟ್‌ ತಂಡ 8 ವಿಕೆಟ್‌ಗಳ ಸೋಲು ಕಂಡಿತು. ತವರು ನೆಲದಲ್ಲಿ ಕಿವೀಸ್ ವಿರುದ್ಧ ಅಪರೂಪದ ಸೋಲನ್ನು ಟೀಮ್‌ ಇಂಡಿಯಾ ಎದುರಿಸಬೇಕಾಯ್ತು. ಸೋಲಿನ ನಂತರ, ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹೆಚ್ಚಿನ ಭಾರತೀಯ ಆಟಗಾರರು ಪುಣೆಗೆ ತೆರಳಿದ್ದಾರೆ. ಪುಣೆ ನಗರದಲ್ಲಿ ಅಕ್ಟೋಬರ್ 24ರಿಂದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಪ್ರಾರಂಭವಾಗಲಿದೆ. ಆದರೆ, ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ನಿರ್ಧರಿಸಿ ಮುಂಬೈಗೆ ಹಾರಿದ್ದಾರೆ.

ಉದ್ಯಾನ ನಗರಿಯಿಂದ ವಾಣಿಜ್ಯ ನಗರಿಗೆ ಹಾರಿದ ವಿರಾಟ್‌, ನಂತರ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಕೃಷ್ಣ ಕೀರ್ತನೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆಯೂ ಹಲವು ಬಾರಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದ ವಿರುಷ್ಕಾ ಜೋಡಿ, ಮತ್ತೊಮ್ಮೆ ಟೀಮ್‌ ಇಂಡಿಯಾ ಸೋಲಿನ ಬೇಸರದಿಂದ ಹೊರಬರಲು ಧಾರ್ಮಿಕ ಕಾರ್ಯಕ್ರಮದ ಮೊರೆ ಹೋಗಿದ್ದಾರೆ.

ಆಧ್ಮಾತ್ಮದ ಬಗ್ಗೆ ವಿರುಷ್ಕಾ ಜೋಡಿಗೆ ಆಸಕ್ತಿ ಹೆಚ್ಚು. ಇತರ ಸೆಲೆಬ್ರಿಟಿಗಳಿಗೆ ಹೋಲಿಸಿದರೆ, ವಿರಾಟ್‌ ಹಾಗೂ ನಟಿ ಅನುಷ್ಕಾ ಈ ಹಿಂದೆಯೂ ಇಂಥಾ ಕಾರ್ಯಕ್ರಮಗಳಲ್ಲಿ ಹಲವು ಬಾರಿ ಭಾಗವಹಿಸಿದ್ದಾರೆ. ಕಾರ್ವಾಚೌತ್ ದಿನವಾದ ಭಾನುವಾರ ಮುಂಬೈನಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಇವರಿಬ್ಬರೂ ಭಾಗಿಯಾಗಿ ಖುಷಿಪಟ್ಟಿದ್ದಾರೆ. ಹಬ್ಬದ ಭಾಗವಾಗಿ ಆಯೋಜಸಲಾಗಿದ್ದ ಕೃಷ್ಣ ಸಂಕೀರ್ತನೆಯಲ್ಲಿ ಭಾಗಿಯಾಗಿ ಕೀರ್ತನೆಗಳಿಗೆ ತಲೆದೂಗಿದ್ದಾರೆ. ಕೃಷ್ಣದಾಸ್ ಅವರು ನಡೆಸಿಕೊಟ್ಟ ಕಾರ್ಯಕ್ರಮವನ್ನು ಸ್ಟಾರ್‌ ಜೋಡಿ ತಲೆದೂಗುತ್ತಾ ಕೇಳುತ್ತಿರುವ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಂಡನ್‌ನಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ

ಈ ಹಿಂದೆಯೂ ವಿರುಷ್ಕಾ ಜೋಡಿ ಇಂಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಳೆದ ಜೂನ್‌ ತಿಂಗಳಲ್ಲಿ ಭಾರತ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ನಂತರ ಕೊಹ್ಲಿ ಚುಟುಕು ಸ್ವರೂಪಕ್ಕೆ ವಿದಾಯ ಹೇಳಿದರು. ಆ ನಂತರ ಜುಲೈನಲ್ಲಿ ವಿರುಷ್ಕಾ ದಂಪತಿ ಲಂಡನ್‌ನಲ್ಲಿ ಇದೇ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸದ್ಯ, ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಮೊದಲ ಸೋಲು ಭಾರತಕ್ಕೆ ಭಾರಿ ಆಘಾತ ತಂಡಿದೆ. ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧ ಕ್ಲೀನ್ ಸ್ವೀಪ್ ಸೇರಿದಂತೆ ಆರು ಪಂದ್ಯಗಳ ಗೆಲುವಿನ ಹಾದಿಯಲ್ಲಿದ್ದ ರೋಹಿತ್ ಶರ್ಮಾ ಪಡೆ, ಕಿವೀಸ್‌ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್ ಆಗಿ ಹಲವು ಕಳಪೆ ದಾಖಲೆ ನಿರ್ಮಿಸಿತು.

ವಿರಾಟ್‌ ದಾಖಲೆ

ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಸರ್ಫರಾಜ್ ಖಾನ್ 136 ರನ್‌ಗಳ ಆಕರ್ಷಕ ಜೊತೆಯಾಟವಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಇವಬ್ಬರೂ ಡಕೌಟ್‌ ಆಗಿದ್ದರು ಎಂಬುವುದು ಗಮನಾರ್ಹ. ಕೊಹ್ಲಿ 70 ರನ್‌ ಗಳಿಸಿ ಮೂರನೇ ದಿನದಾಟದ ಕೊನೆಯ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದರು. ಆದರೆ ಅಷ್ಟರಲ್ಲೇ ಟೆಸ್ಟ್ ಕ್ರಿಕೆಟ್‌ನಲ್ಲಿ 9000 ರನ್ ಪೂರೈಸಿದ ಭಾರತದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Whats_app_banner