ಕನ್ನಡ ಸುದ್ದಿ  /  Cricket  /  Virat Kohlis Dance Moves Go Viral Ex Rcb Captain Grooves To Thalapathy Vijays Appadi Podu During Ipl 2024 Vs Csk Prs

ಪಂದ್ಯ ಸೋತರೂ ಸಖತ್ ಮನರಂಜನೆ ನೀಡಿದ ವಿರಾಟ್ ಕೊಹ್ಲಿ, ದಳಪತಿ ವಿಜಯ್ ಹಾಡಿಗೆ ಸ್ಟೆಪ್ಸ್ ಹಾಕಿದ ಕಿಂಗ್, ವಿಡಿಯೋ ವೈರಲ್

Virat Kohli : ಸಿಎಸ್​ಕೆ ವಿರುದ್ಧ ಆರ್​ಸಿಬಿ ಬ್ಯಾಟಿಂಗ್ ಮುಗಿಸಿ ಫೀಲ್ಡಿಂಗ್​ಗೆ ಬಂದ ಸಮಯದಲ್ಲಿ ವಿರಾಟ್ ಕೊಹ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದರು. ದಳಪತಿ ವಿಜಯ್ ಅವರ ಸಿನಿಮಾದ ‘ಅಪ್ಪಡಿ ಪೋಡು‘ ಹಾಡಿಗೆ ನೃತ್ಯ ಮಾಡಿದ್ದಾರೆ.

ದಳಪತಿ ವಿಜಯ್ ಅಪ್ಪಡಿ ಪೋಡು ಹಾಡಿಗೆ ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ
ದಳಪತಿ ವಿಜಯ್ ಅಪ್ಪಡಿ ಪೋಡು ಹಾಡಿಗೆ ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ

ಬ್ಯಾಟಿಂಗ್ ಸೂಪರ್​ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ವಿಶ್ವ ದರ್ಜೆಯ ಕ್ರಿಕೆಟಿಗ ಮಾತ್ರವಲ್ಲ, ಅವರೊಬ್ಬ ಮನರಂಜಕ ಕೂಡ. ಒಂದೆರಡು ಬಾರಿ ಅಲ್ಲ, ಹಲವು ಸಂದರ್ಭಗಳಲ್ಲಿ ಫನ್ನಿ-ಖುಷಿಯ ಕ್ಷಣಗಳೊಂದಿಗೆ ತನ್ನಲ್ಲಿರುವ ಮಗುವಿನ ಮನಸ್ಸನ್ನು ಹೊರ ತಂದಿದ್ದುಂಟು. ಅಂತಹ ಕ್ಷಣಕ್ಕೆ 17ನೇ ಆವೃತ್ತಿಯ ಐಪಿಎಲ್ (IPL) ಆರಂಭಿಕ ಪಂದ್ಯವೂ ಸಾಕ್ಷಿಯಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿರಾಟ್ ಕೊಹ್ಲಿ ಡ್ಯಾನ್ಸ್​ ಮೂಲಕ ಪ್ರೇಕ್ಷಕರನ್ನು ರಂಜಿಸಿ ಗಮನ ಸೆಳೆದಿದ್ದಾರೆ.

17ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) 6 ವಿಕೆಟ್​ಗಳಿಂದ ಶರಣಾಯಿತು. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಆರ್​​ಸಿಬಿ, ಯೆಲ್ಲೋ ಆರ್ಮಿ ವಿರುದ್ಧ ಸೋಲನುಭವಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ರೆಡ್​ ಆರ್ಮಿ, 20 ಓವರ್​​ಗಳಲ್ಲಿ 173 ರನ್ ಗಳಿಸಿತು. 174 ರನ್​ಗಳ ಗುರಿ ಬೆನ್ನಟ್ಟಿದ ಸಿಎಸ್​ಕೆ 18.4 ಓವರ್​​​ಗಳಲ್ಲಿ ಜಯದ ನಗೆ ಬೀರಿತು.

2 ತಿಂಗಳ ಅನುಪಸ್ಥಿತಿಯ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಕೊಹ್ಲಿ ಮೇಲೆ ನಿರೀಕ್ಷೆ ದುಪ್ಪಟ್ಟಾಗಿತ್ತು. ಆದರೆ ಅವರು ಆರ್​ಸಿಬಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದರು. ಬ್ಯಾಟಿಂಗ್​​ನಲ್ಲಿ ಭರ್ಜರಿ ಒಂದು ಸಿಕ್ಸರ್​ ಸಿಡಿಸಿದ ಕಿಂಗ್​ ಕೊಹ್ಲಿ, 20 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಮುಸ್ತಫಿಜುರ್​ ರೆಹಮಾನ್ ಬೌಲಿಂಗ್​ನಲ್ಲಿ ಅಜಿಂಕ್ಯ ರಹಾನೆ ಹಿಡಿದ ಅದ್ಭುತ ಕ್ಯಾಚ್​​ಗೆ ಬಲಿಯಾದರು. ಬ್ಯಾಟಿಂಗ್​ನಲ್ಲಿ ನಿರಾಸೆ ಮೂಡಿಸಿದರೂ ಫೀಲ್ಡಿಂಗ್​ ವೇಳೆ ಫ್ಯಾನ್ಸ್​ಗೆ ಮನರಂಜನೆ ನೀಡಿದರು.

ನಟ ವಿಜಯ್ ಹಾಡಿಗೆ ಭರ್ಜರಿ ಸ್ಟೆಪ್ಸ್

ಆರ್​ಸಿಬಿ ಬ್ಯಾಟಿಂಗ್ ಮುಗಿಸಿ ಫೀಲ್ಡಿಂಗ್​ಗೆ ಬಂದ ಸಮಯದಲ್ಲಿ ವಿರಾಟ್ ಕೊಹ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದರು. ಫೀಲ್ಡ್​ನಲ್ಲಿ ಸಖತ್ ಆ್ಯಕ್ಟೀವ್ ಇರುವ ಕೊಹ್ಲಿ, ದಳಪತಿ ವಿಜಯ್ ಅವರ ಸಿನಿಮಾದ ‘ಅಪ್ಪಡಿ ಪೋಡು‘ ಹಾಡಿಗೆ ಚಮತ್ಕಾರಿ ನೃತ್ಯ ಮಾಡಿದ್ದಾರೆ. ಇನಿಂಗ್ಸ್ ವಿರಾಮದ ಸಮಯದಲ್ಲಿ ಕೊಹ್ಲಿ ಮೈದಾನದೊಳಗೆ ಎಂಟ್ರಿ ಆಗುತ್ತಿದ್ದಂತೆ ಇದು ಸಂಭವಿಸಿತು.

ಚೆಪಾಕ್ ಮೈದಾನದಲ್ಲಿ ಡಿಜೆಯಿಂದ ಸಾಂಗ್​ ಪ್ಲೇ ಮಾಡುತ್ತಿದ್ದಂತೆ ಕೊಹ್ಲಿ ಇದ್ದಲ್ಲಿಯೇ ಸ್ಟೆಪ್ಸ್ ಹಾಕತೊಡಗಿದರು. ಎಂಟರ್​ಟೈನ್​ಮೆಂಟ್​ ಮೋಡ್​ ಆನ್ ಮಾಡಿಕೊಂಡ ಕಿಂಗ್, ನೃತ್ಯಕ್ಕೆ ಸ್ವಲ್ಪ ಭಾಂಗ್ರಾ ಡ್ಯಾನ್ಸ್ ಜೊತೆಗೆ ತಮ್ಮದೇ ಆದ ಪಂಜಾಬಿ ನೃತ್ಯವನ್ನೂ ಸೇರಿಸಿದರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮತ್ತೊಂದೆಡೆ ಅಭಿಮಾನಿಗಳು ಸಹ ಖುಷಿಪಟ್ಟಿದ್ದಾರೆ.

ಕೊಹ್ಲಿ ಡ್ಯಾನ್ಸ್ ಮಾಡುತ್ತಿರುವುದು ಇದೇ ಮೊದಲಲ್ಲ. ಎರಡು ತಿಂಗಳ ಹಿಂದೆ ಮುಗಿದ ಅಫ್ಘಾನಿಸ್ತಾನ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಮೊಯೆ ಮೊಯೆ ಹಾಡಿಗೂ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದರು. ಮೈದಾನದಲ್ಲಿ ಸಾಕಷ್ಟು ಫನ್ನಿಯಾಗಿರುವ ಕೊಹ್ಲಿ ಸೌತ್ ಆಫ್ರಿಕಾ ಸರಣಿಯಲ್ಲೂ ರಾಮ್​ ಸಿಯಾ ರಾಮ್ ಹಾಡಿಗೆ ರಾಮನಂತೆ ಬಿಲ್ಲು ಬಾಣ ಹಿಡಿದಂತೆ ಪೋಸ್ ಕೊಟ್ಟಿದ್ದರು. ಅದೇ ಸರಣಿಯಲ್ಲಿ ಗ್ರೂಪ್ ಫೋಟೋಗೆ ಫನ್ನಿಯಾಗಿ ಫೋಸ್ ಕೊಟ್ಟಿದ್ದರು. ಈ ಹಿಂದೆ ಹಲವು ಬಾರಿ ಡ್ಯಾನ್ಸ್​ ಮಾಡಿದ್ದಾರೆ ಕೊಹ್ಲಿ.

ಇಂಗ್ಲೆಂಡ್ ಸರಣಿಯಿಂದ ಹಿಂದೆ ಸರಿದಿದ್ದ ಕೊಹ್ಲಿ

ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯ ನಂತರ ವಿರಾಟ್ ಕೊಹ್ಲಿ ಇಂಗ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು. ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಗಂಡು ಮಗುವಿಗೆ ಜನ್ಮ ನೀಡಿದ ಹಿನ್ನೆಲೆ ಅವರು ಸರಣಿಯಿಂದ ಹಿಂದೆ ಸರಿಯಲು ಕಾರಣವಾಗಿತ್ತು. ಮಗನ ಹೆಸರು ಅಕಾಯ್. 2 ತಿಂಗಳ ಕ್ರಿಕೆಟ್​ ಸೇವೆಯಿಂದ ದೂರವಿದ್ದ ಕೊಹ್ಲಿ, ಈಗ ನೇರವಾಗಿ ಐಪಿಎಲ್​ ಆಡ್ತಿದ್ದಾರೆ.

IPL_Entry_Point