ಕನ್ನಡ ಸುದ್ದಿ  /  Cricket  /  Murali Vijay Wanted To Go On A Dinner Date With Ellyse Perry Check Rcb Women Stars Epic Reply Dinesh Karthik Video Prs

ಡಿಕೆ ಪತ್ನಿಯನ್ನು ವಿವಾಹವಾದ ಮುರಳಿ ವಿಜಯ್​ಗೆ ಎಲ್ಲಿಸ್ ಪೆರ್ರಿ ಜೊತೆ ಡಿನ್ನರ್​ ಡೇಟ್​ಗೆ ಹೋಗುವ ಆಸೆಯಂತೆ; ಪೆರ್ರಿ ಕೊಟ್ರು ಎಪಿಕ್ ರಿಪ್ಲೆ

Murali Vijay - Ellyse Perry : ಆರ್​​ಸಿಬಿ ಸ್ಟಾರ್​ ಆಲ್​ರೌಂಡರ್ ಎಲ್ಲಿಸ್ ಪೆರ್ರಿ ಅವರೊಂದಿಗೆ ಡಿನ್ನರ್​ ಡೇಟ್​ಗೆ ಹೋಗುವಾಸೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮುರಳಿ ವಿಜಯ್ ಹೇಳಿದ್ದಾರೆ. ಅದಕ್ಕೆ ಪೆರ್ರಿ ಎಪಿಕ್ ರಿಪ್ಲೆ ಕೊಟ್ಟಿದ್ದಾರೆ.

ಡಿಕೆ ಪತ್ನಿಯನ್ನು ವಿವಾಹವಾದ ಮುರಳಿ ವಿಜಯ್​ಗೆ ಎಲ್ಲಿಸ್ ಪೆರ್ರಿ ಜೊತೆ ಡಿನ್ನರ್​ ಡೇಟ್​ಗೆ ಹೋಗುವ ಆಸೆಯಂತೆ
ಡಿಕೆ ಪತ್ನಿಯನ್ನು ವಿವಾಹವಾದ ಮುರಳಿ ವಿಜಯ್​ಗೆ ಎಲ್ಲಿಸ್ ಪೆರ್ರಿ ಜೊತೆ ಡಿನ್ನರ್​ ಡೇಟ್​ಗೆ ಹೋಗುವ ಆಸೆಯಂತೆ

2024ರ ಮಹಿಳಾ ಪ್ರೀಮಿಯರ್​ ಲೀಗ್​​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ. ಆ ಮೂಲಕ 16 ವರ್ಷಗಳ ನಂತರ ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗಿದೆ. ಚಾಂಪಿಯನ್​ ಆಗುವ ಕನಸು ನನಸು ಮಾಡಿದ್ದು, ಆಸ್ಟ್ರೇಲಿಯಾದ ಶ್ರೇಷ್ಠ ಆಲ್​ರೌಂಡರ್​ ಎಲ್ಲಿಸ್ ಪೆರ್ರಿ. ಇಂಟರ್​ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿರುವ ಪೆರ್ರಿ, ಭಾರತದ ಅದೆಷ್ಟೋ ಅಭಿಮಾನಿಗಳ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಟೂರ್ನಿಯಲ್ಲಿ ಕಣಕ್ಕಿಳಿದ ಪ್ರತಿ ಪಂದ್ಯದಲ್ಲೂ ಸಿಡಿದೆದ್ದು ಅದ್ಭುತ ಪ್ರದರ್ಶನ ನೀಡಿದ ಎಲ್ಲಿಸ್ ಪೆರ್ರಿ, ಮೋಸ್ಟ್​ ಬ್ಯೂಟಿಫುಲ್​ ಕ್ರಿಕೆಟ್ ಆಟಗಾರ್ತಿ ಎಂಬ ಪಟ್ಟವನ್ನೂ ದಕ್ಕಿಸಿಕೊಂಡಿದ್ದಾರೆ. ಚೆಂದದ ಗೊಂಬೆ ಪೆರ್ರಿ ಅವರೊಂದಿಗೆ ಭಾರತ ತಂಡದ ಮಾಜಿ ಆಟಗಾರ ಮುರಳಿ ವಿಜಯ್​​ ಅವರು ಡಿನ್ನರ್​ ಡೇಟ್​ ಹೋಗುವ ಆಸೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸ್ನೇಹಿತ ದಿನೇಶ್ ಕಾರ್ತಿಕ್ ಪತ್ನಿಯನ್ನೇ ಪಟಾಯಿಸಿ ಮದುವೆ ಆಗಿದ್ದ ಮುರಳಿ ವಿಜಯ್ ವಿರುದ್ಧ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಪತ್ನಿಯನ್ನು ಮುರಳಿ ವಿಜಯ್ ಪ್ರೀತಿಸಿ ಮದುವೆಯಾಗಿದ್ದರು. ಪ್ರಸ್ತುತ ಆರ್​ಸಿಬಿ ತಂಡದ ಆಟಗಾರನಾದ ಕಾರ್ತಿಕ್, ಐಪಿಎಲ್​ಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಮುರುಳಿ ವಿಜಯ್‌ ಆವರು ಆರ್‌ಸಿಬಿ ಸ್ಟಾರ್ ಆಲ್​ರೌಂಡರ್​ ಎಲ್ಲಿಸ್ ಪೆರ್ರಿ ಅವರೊಂದಿಗೆ ಡಿನ್ನರ್​ ಡೇಟ್ ಹೋಗಬೇಕು ಎಂದು ತನ್ನ ಮಹದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಆಸೆ ಇತ್ತೀಚಿನದ್ದಲ್ಲ. ಲಾಕ್​​ಡೌನ್ ಸಂದರ್ಭದಲ್ಲಿ ಹೇಳಿದ್ದು.

ಕೊರೊನಾ ಅವಧಿಯಲ್ಲಿ ಮಾಡಲಾಗಿದ್ದ ಸಂದರ್ಶನದಲ್ಲಿ ಮುರಳಿ ವಿಜಯ್ ಅವರು ಪೆರ್ರಿ ಸೌಂದರ್ಯವನ್ನು ಕೊಂಡಾಡಿದ್ದರು. ಆಕೆ ಅತ್ಯಂತ ಸಂದರವಾಗಿದ್ದಾರೆ. ವಿಶ್ವ ಶ್ರೇಷ್ಠ ಆಟಗಾರ್ತಿಯಾಗಿರುವ ಪೆರ್ರಿ ಅವರೊಂದಿಗೆ ಡಿನ್ನರ್ ಡೇಟ್ ಮಾಡಬೇಕೆಂಬ ಆಸೆ ಇದೆ ಎಂದು ವಿಜಯ್ ಹೇಳಿದ್ದರು. ಅಂದು ಮುರಳಿ ಮಾತು ಸಖತ್ ಸುದ್ದಿಯಾಗಿತ್ತು. ಆ ವಿಡಿಯೋ ಇದೀಗ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಮಿತ್ರದ್ರೋಹಿ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಇನ್ನು ಎಲ್ಲಿಸ್ ಪೆರ್ರಿ ಕೂಡ ಮುರಳಿ ವಿಜಯ್ ಹೇಳಿಕೆಗೆ ಉತ್ತರ ನೀಡಿದ್ದರು. ಪೆರ್ರಿ ನೀಡಿದ ಸಂದರ್ಶನದ ವೇಳೆ ಭಾರತದ ಮಾಜಿ ಆಟಗಾರ ಮುರಳಿ ವಿಜಯ್ ಡಿನ್ನರ್ ಡೇಟ್​ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ನೀವು ಕೊಡುವ ಉತ್ತರ ಏನು ಎಂದು ಕೇಳಲಾಗಿತ್ತು. ಉತ್ತರಿಸಿದ್ದ ಪೆರ್ರಿ, ತಿಂದ ಬಿಲ್ ಅವರು ಕಟ್ಟುವುದಾದರೆ ನನಗೆ ಅಭ್ಯಂತರ ಇಲ್ಲ ಎಂದು ಹೇಳಿದ್ದರು. ಹಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಆತನೊಂದಿಗೆ ಡಿನ್ನರ್​ಗೆ ಹೋಗಬೇಡಿ ಎಂದು ಫ್ಯಾನ್ಸ್​ ಪೆರ್ರಿಗೆ ಆಗ್ರಹಿಸುತ್ತಿದ್ದಾರೆ.

ಡಿಕೆ ಪತ್ನಿಯನ್ನು ಮದುವೆಯಾಗಿದ್ದೇಕೆ ವಿಜಯ್?

ಮುರಳಿ ವಿಜಯ್-ದಿನೇಶ್ ಕಾರ್ತಿಕ್ ಇಬ್ಬರು ಆಪ್ತ ಸ್ನೇಹಿತರು. ಇಬ್ಬರು ಆಪ್ತರಾಗಿದ್ದ ಕಾರಣ ಡಿಕೆ ತನ್ನ ಮೊದಲ ಪತ್ನಿ ನಿಕಿತಾ ವಂಜಾರಾಗೆ ವಿಜಯ್​ರನ್ನು ಪರಿಚಯ ಮಾಡಿಕೊಟ್ಟಿದ್ದರು. ಆಗಾಗ್ಗೆ ಮನೆಗೆ ಸಹ ಬರುತ್ತಿದ್ದರು. ಆದರೆ, ಈ ವೇಳೆ ನಿಕಿತಾ ಅವರನ್ನು ತನ್ನ ಬುಟ್ಟಿಗೆ ಹಾಕಿಕೊಂಡ ವಿಜಯ್​, ಮದುವೆಯಾಗಲು ನಿರ್ಧರಿಸಿದರು. ಬಳಿಕ ನಿಕಿತಾ, ಡಿಕೆಗೆ ಡಿವೋರ್ಸ್ ಕೊಟ್ಟರು. ಇದರಿಂದ ಕಾರ್ತಿಕ್ ಮಾನಸಿಕವಾಗಿ ಕುಗ್ಗಿದರು. ಕ್ರಿಕೆಟ್​ ಮೇಲೂ ಹಿಡಿತ ಕಳೆದುಕೊಂಡರು.

ಈ ಆಘಾತದಿಂದ ಚೇತರಿಸಿಕೊಳ್ಳಲು​ ಕಾರ್ತಿಕ್​ಗೆ ಎರಡು ಮೂರು ವರ್ಷಗಳೇ ಬೇಕಾಯಿತು. ಆ ಬಳಿಕ ಭಾರತ ತಂಡಕ್ಕೆ ಮರಳಿದ ಕಾರ್ತಿಕ್ ಅವರಿಗೆ ಭಾರತದ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರು ಪರಿಚಯವಾದರು. ಸ್ನೇಹ, ಪ್ರೀತಿಗೆ ತಿರುಗಿತು. ಬಳಿಕ ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಐಪಿಎಲ್​ನಲ್ಲಿ ಬ್ಯುಸಿಯಾಗಿರುವ ಡಿಕೆ, ಆರ್​ಸಿಬಿಗೆ ಕಪ್ ಗೆದ್ದುಕೊಡಲು ಸಜ್ಜಾಗಿದ್ದಾರೆ.

IPL_Entry_Point