ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; 8889 ಕೋಟಿ ರೂ ಅಕ್ರಮ ವಸ್ತು ವಶ, ಶೇ 45 ಡ್ರಗ್ಸ್‌, 6ನೇ ಸ್ಥಾನದಲ್ಲಿ ಕರ್ನಾಟಕ

ಲೋಕಸಭಾ ಚುನಾವಣೆ; 8889 ಕೋಟಿ ರೂ ಅಕ್ರಮ ವಸ್ತು ವಶ, ಶೇ 45 ಡ್ರಗ್ಸ್‌, 6ನೇ ಸ್ಥಾನದಲ್ಲಿ ಕರ್ನಾಟಕ

ಲೋಕಸಭಾ ಚುನಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ನಾಲ್ಕು ಹಂತಗಳ ಮತದಾನ ಪೂರ್ಣಗೊಂಡು, ಐದನೇ ಹಂತದ ಮತದಾನಕ್ಕೆ ಸಜ್ಜಾಗಿರುವ ಹೊತ್ತು. ಮೇ 18 ರ ತನಕ 8889 ಕೋಟಿ ರೂ ಅಕ್ರಮ ನಗ ನಗದು ಮದ್ಯ ಮಾದಕ ದ್ರವ್ಯ ಚಿನ್ನ ಬೆಳ್ಳಿ ಸಂಪತ್ತು ವಶ ಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಟಾಪ್ 10ರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ ಕರ್ನಾಟಕ.

ಲೋಕಸಭಾ ಚುನಾವಣೆ; 8889 ಕೋಟಿ ರೂ ಅಕ್ರಮ ನಗ ನಗದು ಮದ್ಯ ಮಾದಕ ದ್ರವ್ಯ ಚಿನ್ನ ಬೆಳ್ಳಿ ಸಂಪತ್ತು ವಶ ಪಡಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ; 8889 ಕೋಟಿ ರೂ ಅಕ್ರಮ ನಗ ನಗದು ಮದ್ಯ ಮಾದಕ ದ್ರವ್ಯ ಚಿನ್ನ ಬೆಳ್ಳಿ ಸಂಪತ್ತು ವಶ ಪಡಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಏಳು ಹಂತಗಳಲ್ಲಿ ನಡೆಯಿತ್ತಿದ್ದು ಈಗಾಗಲೇ 4 ಹಂತದ ಮತದಾನ ಮುಗಿದಿದೆ. 5ನೇ ಹಂತದ ಮತದಾನ ನಾಳೆ ನಡೆಯಲಿದೆ. ಈ ನಡುವೆ, ಮಾರ್ಚ್ 1 ರಿಂದ ಈ ವರೆಗಿನ ಅಂದರೆ ಮೇ 18 ರ ತನಕ ನಡೆದ ಚುನಾವಣಾ ಅಕ್ರಮಗಳ ವಿವರ ಮತ್ತು ವಶಪಡಿಸಿಕೊಂಡ ಅಕ್ರಮ ಸಂಪತ್ತಿನ ವಿವರವನ್ನು ಭಾರತದ ಚುನಾವಣಾ ಆಯೋಗ ಪ್ರಕಟಿಸಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಉದ್ದಗಲಕ್ಕೂ ವಶಪಡಿಸಿಕೊಂಡ ಒಟ್ಟು ಅಕ್ರಮ ಸಂಪತ್ತಿನ ಮೌಲ್ಯ 8,889 ಕೋಟಿ ರೂಪಾಯಿ. ಈ ಪೈಕಿ, ಗುಜರಾತ್‌ನಲ್ಲಿ 1461.73 ಕೋಟಿ ರೂಪಾಯಿ ಚುನಾವಣಾ ಉಡುಗೊರೆ, ನಗದು, ಮದ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದುವೇ ಗರಿಷ್ಠ ಪ್ರಮಾಣ. ಚುನಾವಣಾ ಅಕ್ರಮಗಳ ಪೈಕಿ ಗರಿಷ್ಠ 5 ಮತ್ತು ಕನಿಷ್ಠ 5 ರಾಜ್ಯಗಳ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆ 2024; ವಶಪಡಿಸಿಕೊಂಡ ನಗ ನಗದು ಮತ್ತಿತರ ವಸ್ತುಗಳ ಮೌಲ್ಯ

ಲೋಕಸಭಾ ಚುನಾವಣೆ 2024; ಚುನಾವಣಾ ಅಕ್ರಮ, ನಗದು, ಮದ್ಯ, ಮಾದಕ ವಸ್ತು ಮತ್ತಿತರೆ ಸಂಪತ್ತು (ಮೇ 18)

ಕ್ರಮ ಸಂಖ್ಯೆರಾಜ್ಯ ನಗದು (ಕೋಟಿ ರೂ.)ಮದ್ಯ (ಲೀ)ಮದ್ಯದ ಮೌಲ್ಯ (ಕೋಟಿ ರೂ.)ಡ್ರಗ್ಸ್ ( ಕೋಟಿ ರೂ)ಚಿನ್ನ ಬೆಳ್ಳಿ ಇತ್ಯಾದಿ (ಕೋಟಿ ರೂ.)ಉಚಿತ ಉಡುಗೊರೆ (ಕೋಟಿ ರೂ.)ಒಟ್ಟು ಮೌಲ್ಯ
1ಗುಜರಾತ್8.611009108.7329.761187.80128.56107.001461.73
2ರಾಜಸ್ಥಾನ42.304484546.1148.29216.4270.04756.771133.82
3ಪಂಜಾಬ್15.453370446.7022.62665.6723.757.04734.54
4ಮಹಾರಾಷ್ಟ್ರ75.496219453.0349.17265.51188.18107.46685.81
5ಎನ್‌ಸಿಟಿ ದೆಹಲಿ90.79122804.472.64358.42195.016.46653.31
6ಕರ್ನಾಟಕ92.5514729899.23175.3629.8494.66162.01554.41
7ತಮಿಳುನಾಡು69.59814379.708.17330.9199.8535.21543.72
8ಉತ್ತರ ಪ್ರದೇಶ34.441727918.6353.62234.7922.9480.45426.24
9ಪಶ್ಚಿಮ ಬಂಗಾಳ31.273507825.9090.4239.6560.81149.53371.69
10ತೆಲಂಗಾಣ114.413001263.6276.2629.3177.2336.34333.55

ರಾಜಸ್ಥಾನದಲ್ಲಿ 1133.82 ಕೋಟಿ ರೂ., ಪಂಜಾಬ್ 734.54 ಕೋಟಿ ರೂ. ಅಕ್ರಮ ನಗ, ನಗದು ಮತ್ತು ಇತರೆ ವಸ್ತುಗಳನ್ನು ವಶಪಡಿಸಲಾಗಿದೆ. ಈ ರಾಜ್ಯಗಳು ಎರಡು ಮತ್ತು ಮೂರನೆ ಸ್ಥಾನದಲ್ಲಿವೆ.

ಟಾಪ್ 10ರ ಪೈಕಿ ಕರ್ನಾಟಕಕ್ಕೆ 6ನೇ ಸ್ಥಾನ, ಮದ್ಯ ವಿತರಣೆಗೇ ಹೆಚ್ಚಿನ ಆದ್ಯತೆ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಚುನಾವಣಾ ಆಕ್ರಮಗಳಿಗೆ ಕೊರತೆ ಇರಲಿಲ್ಲ. ಟಾಪ್ 10 ರಾಜ್ಯಗಳ ಪೈಕಿ 6ನೇ ಸ್ಥಾನದಲ್ಲಿ ಕರ್ನಾಟಕ. ಮತದಾರರನ್ನು ಓಲೈಸುವುದಕ್ಕೆ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮದ್ಯ ವಿತರಣೆಗೇ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬಂದಿದೆ. ಇನ್ನುಳಿದಂತೆ ನಗದು ಹಂಚಿಕೆ, ಚಿನ್ನ, ಬೆಳ್ಳಿ ಮತ್ತಿತರ ಉಡುಗೊರೆಯನ್ನೂ ಭರ್ಜರಿಯಾಗಿ ಹಂಚಲು ಪ್ರಯತ್ನಿಸಿದ್ದರು ಎಂಬುದು ವಶಪಡಿಸಿಕೊಂಡ ವಸ್ತು ವಿವರಗಳನ್ನು ಗಮನಿಸಿದರೆ ವೇದ್ಯವಾಗುತ್ತದೆ. ಕರ್ನಾಟಕದಲ್ಲಿ ಒಟ್ಟು 554 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತನ್ನು ಇದುವರೆಗೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕನಿಷ್ಠ ಪ್ರಮಾಣದ ಚುನಾವಣಾ ಅಕ್ರಮವನ್ನು ಗುರುತಿಸುವುದಾದರೆ ಅದು ಪುಟ್ಟ ರಾಜ್ಯಗಳದ್ದೇ ಆಗಿರುತ್ತದೆ. ಮತದಾರರ ಸಂಖ್ಯೆಯೂ ಕಡಿಮೆ. ಹಾಗಾಗಿ ಖರ್ಚು ಮಾಡುವ ಮೊತ್ತವೂ ಕಡಿಮೆ. ಲಡಾಖ್‌, ಲಕ್ಷದ್ವೀಪಗಳಲ್ಲಿ ಮದ್ಯ, ಮಾದಕ ದ್ರವ್ಯ ವಿತರಣೆ ಬಿಟ್ಟು ಬೇರಾವ ಪ್ರಕರಣವೂ ದಾಖಲಾಗಿಲ್ಲ. ಇಲ್ಲಿ ಅನುಕ್ರಮವಾಗಿ 0.11 ಕೋಟಿ ರೂಪಾಯಿ. 0.7 ಕೋಟಿ ರೂಪಾಯಿ ಅಕ್ರಮ ಮದ್ಯ, ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)