ದುಲ್ಕರ್ ಸಲ್ಮಾನ್ ಅಭಿಮಾನಿಗಳಿಗೆ ಸಿಹಿಸುದ್ದಿ; 'ಕಾಂಥಾ' ಸಿನಿಮಾದಲ್ಲಿ ಮಿಂಚಲಿದ್ದಾರೆ ಲಕ್ಕಿ ಬಾಸ್ಕರ್ ಹೀರೋ
ದುಲ್ಕರ್ ಸಲ್ಮಾನ್ ಪ್ರಸ್ತುತ ಲಕ್ಕಿ ಬಾಸ್ಕರ್ ಸಿನಿಮಾದ ಮೂಲಕ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಅವರ ಮುಂದಿನ ಸಿನಿಮಾ ಯಾವುದು ಎಂಬುದರ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆ ಬಗ್ಗೆ ಇಲ್ಲೇ ಇದೆ ನೋಡಿ ಮಾಹಿತಿ.
ದುಲ್ಕರ್ ಸಲ್ಮಾನ್ ಪ್ರಸ್ತುತ ಲಕ್ಕಿ ಬಾಸ್ಕರ್ ಸಿನಿಮಾದ ಮೂಲಕ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಅವರ ಅಭಿನಯ ಹಾಗೂ ನಟನೆಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಕೂಡ ಹೆಚ್ಚಿದೆ. ದುಲ್ಕರ್ ಸಲ್ಮಾನ್ ಅವರು ಮುಂದಿನ ದಿನಗಳಲ್ಲಿ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಅನುಮಾನವಂತು ಅಭಿಮಾನಿಗಳಿರುತ್ತದೆ. ಆ ಎಲ್ಲ ಅಭಿಮಾನಿಗಳಿಗೆ ಸಂತಸ ತರುವ ವಿಚಾರವೊಂದು ಇಲ್ಲಿದೆ. ದುಲ್ಕರ್ ಸಲ್ಮಾನ್ 'ಕಾಂಥಾ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿಜ ಜೀವನದ ಸೂಪರ್ಸ್ಟಾರ್ ಎಂದು ಅಭಿಮಾನಿಗಳು ರಜನಿಕಾಂತ್ ಅವರನ್ನು ಕರೆದರೆ, ಅದಕ್ಕೂ ಮೊದಲು ಒಬ್ಬ ಸೂಪರ್ ಸ್ಟಾರ್ ಇದ್ದರು. ಅವರ ಜೀವನವನ್ನು ಈಗ ಸಿನಿಮಾ ಮಾಡುತ್ತಿದ್ದಾರೆ. ದುಲ್ಕರ್ ಸಲ್ಮಾನ್ ಮಹಾನಟಿ ಸಿನಿಮಾದಲ್ಲಿ ಅಭಿನಯಿಸಿ ಜನರ ಮನ ಗೆದ್ದಿದ್ದರು. ಪ್ಯಾನ್-ಇಂಡಿಯನ್ ತಾರೆಯಾಗಿ ಇವರು ತುಂಬಾ ಹೆಸರು ಮಾಡಿದ್ದಾರೆ. ಅಭಿಮಾನಿಗಳಂತು ಇವರ ಮುಂದಿನ ಸಿನಿಮಾ ಯಾವುದು ಎಂದು ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರನಿರ್ಮಾಪಕ ಸೆಲ್ವಮಣಿ ಸೆಲ್ವರಾಜ್ ಅವರ ಮುಂದಿನ ಸಿನಿಮಾ ಕಾಂತದಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ.
ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಅವರೂ ಸಹ ಈ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ. ಮತ್ತೊಬ್ಬ ರಿಯಲ್ ಲೈಫ್ ಸೂಪರ್ ಸ್ಟಾರ್ ಆಗಿ ದುಲ್ಕರ್ ಕಾಣಿಸಿಕೊಳ್ಳಲಿದ್ದಾರೆ. ದುಲ್ಕರ್ ಸಲ್ಮಾನ್ ಅವರ ಪಾತ್ರವು ತಮಿಳು ಚಿತ್ರರಂಗದ ಮೊದಲ ಸೂಪರ್ಸ್ಟಾರ್ ಎಂದು ಪರಿಗಣಿಸಲ್ಪಟ್ಟಿರುವ ಎಂಕೆ ತ್ಯಾಗರಾಜ್ ಭಗವತಾರ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಥಾ ಸಿನಿಮಾದಲ್ಲಿ ತ್ಯಾಗರಾಜ್ ಅವರ ಆರಂಭಿಕ ಜೀವನ, ಸಂಗೀತ ಮತ್ತು ಚಲನಚಿತ್ರ ವೃತ್ತಿಜೀವನದ ಸುತ್ತ ಚಿತ್ರಕಥೆ ಹೆಣೆದುಕೊಂಡಿರಲಿದೆ.
ಸುರೇಶ್ ಪ್ರೊಡಕ್ಷನ್ಸ್ನ ಒಂದು ಅಂಗವಾದ ರಾಣಾ ದಗ್ಗುಬಾಟಿ ಅವರ ಸ್ಪಿರಿಟ್ ಮೀಡಿಯಾ ಮತ್ತು ದುಲ್ಕರ್ ಅವರ ವೇಫೇರರ್ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರವು ಮಾನವ ಸಂಬಂಧಗಳು ಮತ್ತು ಸಾಮಾಜಿಕ ಬದಲಾವಣೆಯ ಸಂಕೀರ್ಣತೆಗಳನ್ನು ತಿಳಿಸುತ್ತಾ ಸಾಗುತ್ತದೆ. ಕಾಂತ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.
ಈ ಸಿನಿಮಾವನ್ನು ಪ್ರಶಾಂತ್ ಪೊಟ್ಲೂರಿ ಮತ್ತು ಜೋಮ್ ವರ್ಗೀಸ್ ಚಿತ್ರವನ್ನು ನಿರ್ಮಿಸಿದ್ದು, ಡ್ಯಾನಿ ಸ್ಯಾಂಚೆಜ್ ಲೋಪೆಜ್ ಅವರ ಛಾಯಾಗ್ರಹಣ, ಜಾನು ಅವರ ಸಂಗೀತ, ರಾಮಲಿಂಗಂ ಅವರ ಕಲಾ ನಿರ್ದೇಶನ, ತಮಿಜ್ ಪ್ರಭಾ ಅವರ ಸಾಹಿತ್ಯ ಮತ್ತು ಲೆವೆಲ್ಲಿನ್ ಆಂಥೋನಿ ಗೊನ್ಸಾಲ್ವಿಸ್ ಸಂಕಲನವಿದೆ. ಚಿತ್ರದಲ್ಲಿ ರಾಣಾ ದಗ್ಗುಬಾಟಿ ನಿರ್ವಹಿಸಿದ ಪಾತ್ರವನ್ನು ಇನ್ನೂ ಮುಚ್ಚಿಡಲಾಗಿದೆ.
ವಿಭಾಗ