ಅಮರನ್ ಸಿನಿಮಾವನ್ನು ಕಥೆಯೆಂದು ಮಾಡಲಿಲ್ಲ, ಕರ್ತವ್ಯವೆಂದು ಮಾಡಿದೆವು; ನಟ ಕಮಲ್ ಹಾಸನ್ ಮನದ ಮಾತು
Amaran Movie: ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಅಮರನ್ ಸಿನಿಮಾದ ಕುರಿತು ನಟ ಕಮಲ್ ಹಾಸನ್ ಮುಕ್ತವಾಗಿ ಮಾತನಾಡಿದ್ದಾರೆ. ನಾವು ಈ ಕಥೆಯನ್ನು ಆಯ್ಕೆ ಮಾಡಿಲ್ಲ. ಈ ಕಥೆಯನ್ನು ಹೇಳುವ ನಮ್ಮ ಕರ್ತವ್ಯವನ್ನು ಪೂರೈಸಿದ್ದೇವೆ ಎಂದು ಅವರು ಹೇಳಿದ್ದಾರೆ.
Amaran Movie: ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಅಮರನ್ ಸಿನಿಮಾದ ಕುರಿತು ನಟ ಕಮಲ್ ಹಾಸನ್ ಮುಕ್ತವಾಗಿ ಮಾತನಾಡಿದ್ದಾರೆ. ಅಕ್ಟೋಬರ್ 31 ಅಂದರೆ ಇಂದು ಬಿಡುಗಡೆಯಾದ ಈ ಸಿನಿಮಾದ ಕುರಿತು ಎಲ್ಲೆಡೆ ಸಕಾರಾತ್ಮಕ ಮಾತುಗಳು ಕೇಳಿಬರುತ್ತಿವೆ. ಈ ಸಿನಿಮಾದಲ್ಲಿ ಶಿವಕಾರ್ತಿಕೇಯನ್‌ಮತ್ತು ಸಾಯಿ ಪಲ್ಲವಿ ಪ್ರಮು ಪಾತ್ರದಲ್ಲಿ ನಟಿಸಿದ್ದಾರೆ. ಇದು ಮೇಜರ್ ಮುಕುಂದ್ ವರದರಾಜನ್ ಜೀವನಕಥೆಯನ್ನು ಹೊಂದಿದೆ. ಇದು ಕಾಶ್ಮಿರಾದಲ್ಲಿ ಎನ್‌ಕೌಂಟರ್‌ಗೆ ಈಡಾದ ಭಾರತೀಯ ಸೇನಾನಿಯ ಕಥೆಯಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಈ ಸಿನಿಮಾದ ಕುರಿತು ಕಮಲ್ ಹಾಸನ್ ಮಾತನಾಡಿದ್ದಾರೆ.
ಹುತಾತ್ಮ ಮುಕುಂದ್ ವರದರಾಜನ್‌ಗೆ ಭಾರತ ಸರಕಾರವು ಅಶೋಕ ಚಕ್ರ ನೀಡಿದೆ. ಇದೀಗ ಮುಕುಂದ್ ಪಾತ್ರದಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದಾರೆ. ಈ ಸಿನಿಮಾದ ಪ್ರೊಡ್ಯುಸರ್ ಪ್ರಕಾರ "ಸಾಕಷ್ಟು ಕಾಲ್ಪನಿಕ ಕಥೆಯ ಸಿನಿಮಾಗಳನ್ನು ಮಾಡಿದ್ದೇನೆ. ಆದರೆ, ಒಂದು ಸತ್ಯ ಕಥೆಯನ್ನು ತೆರೆಗೆ ತಂದಿರುವುದು ಖುಷಿ ತಂದಿದೆ" ಎಂದು ಕಮಲ್ ಹಾಸನ್ ಹೇಳಿದ್ದಾರೆ.
“ನಾವು ಮೇಜರ್ ಮುಕುಂದ್ ಅವರಿಗೆ ಪದಕವನ್ನು ನೀಡಿರಬಹುದು, ಮರಣಾನಂತರ ಅವರನ್ನು ಗೌರವಿಸಿದ್ದೇವೆ. ಆದರೆ, ಕಥೆಯು ಕೊನೆಗೊಂಡ ರೀತಿಯನ್ನು ಕೇಳಿದ ಮೊದಲ ವ್ಯಕ್ತಿ ಸಿಂಧು ಎಂಬುದನ್ನು ನಾವು ಮರೆಯಬಾರದು. ಅವರ ಅಪ್ರತಿಮ ಶೌರ್ಯಕ್ಕೆ ಮನೆಯವರ ಧೈರ್ಯ ಕೂಡ ಕಾರಣವಾಗಿತ್ತು. ಆ ಧೈರ್ಯದ ಬಗ್ಗೆಯೂ ಅಮರನ್ ಮಾತನಾಡಿದೆ. ನಾವು ಈ ಕಥೆಯನ್ನು ಆಯ್ಕೆ ಮಾಡಿಲ್ಲ. ಈ ಕಥೆಯನ್ನು ಹೇಳುವ ನಮ್ಮ ಕರ್ತವ್ಯವನ್ನು ಪೂರೈಸಿದ್ದೇವೆ" ಎಂದು ಕಮಲ್ ಹಾಸನ್ ಹೇಳಿದ್ದಾರೆ.
ದಿವಂಗತ ಮೇಜರ್ ಮುಕುಂದ್ ವ್ರದಾಹರಾಜನ್ 2014 ರಲ್ಲಿ ಕಾಶ್ಮೀರದ ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದರು. ಅವರ ಶೌರ್ಯಕ್ಕಾಗಿ ಅಶೋಕ ಚಕ್ರವನ್ನು ನೀಡಲಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ನಟನೆಯ ಈ ಸಿನಿಮಾದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಪಾಸಿಟೀವ್ ಟಾಕ್ ಕೇಳಿಬಂದಿದೆ.
ಶಿವಕಾರ್ತಿಕೇಯನ್ ಅವರು ನಟಿಸಿದ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ 'ಅಮರನ್' ಭಾರತ ಮತ್ತು ವಿದೇಶದಲ್ಲಿ ಉತ್ತಮ ಪ್ರಚಾರವನ್ನು ಪಡೆದಿದೆ. ಹೀಗಾಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುವ ಸೂಚನೆಯಿದೆ. ತಮಿಳಿನ ಹೊರತಾಗಿ ಈ ಚಲನಚಿತ್ರವು ಹಿಂದಿಯಲ್ಲೂ ಉತ್ತಮವಾಗಿ ಗಳಿಕೆ ಮಾಡುವ ಸೂಚನೆಯಿದೆ. ದೆಹಲಿ ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಹಿನ್ನೆಲೆಯಲ್ಲಿ ಶೂಟಿಂಗ್ ಮಾಡಲಾಗಿದೆ.