Annayya Serial: ದಿನವೂ ಸಿದ್ದಾರ್ಥ್‌ ಜಪ ಮಾಡುತ್ತಿರುವ ಪಾರು; ಸತ್ಯ ಗೊತ್ತಿದ್ದರೂ ಹೇಳಲಾಗದ ಶಿವು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ದಿನವೂ ಸಿದ್ದಾರ್ಥ್‌ ಜಪ ಮಾಡುತ್ತಿರುವ ಪಾರು; ಸತ್ಯ ಗೊತ್ತಿದ್ದರೂ ಹೇಳಲಾಗದ ಶಿವು

Annayya Serial: ದಿನವೂ ಸಿದ್ದಾರ್ಥ್‌ ಜಪ ಮಾಡುತ್ತಿರುವ ಪಾರು; ಸತ್ಯ ಗೊತ್ತಿದ್ದರೂ ಹೇಳಲಾಗದ ಶಿವು

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರೂ ತಮ್ಮ ಜೀವನದ ಬಗ್ಗೆ ಮಾತನಾಡಿಕೊಳ್ಳುತ್ತಾ ಇದ್ದಾರೆ. ಶಿವುಗೆ ತುಂಬಾ ಭಯ ಆಗುತ್ತಿದೆ. ಅವನ ಮನಸಿನಲ್ಲಿ ಸಿದ್ದಾರ್ಥ್‌ ಬಗ್ಗೆ ನೂರಾರು ಆಲೋಚನೆ ಬರುತ್ತಿದೆ. ಆದರೆ ಯಾವುದನ್ನೂ ಹೇಳಿಕೊಳ್ಳುವ ಹಾಗಿಲ್ಲ.

ದಿನವೂ ಸಿದ್ದಾರ್ಥ್‌ ಜಪ ಮಾಡುತ್ತಿರುವ ಪಾರು
ದಿನವೂ ಸಿದ್ದಾರ್ಥ್‌ ಜಪ ಮಾಡುತ್ತಿರುವ ಪಾರು

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಅವನ ಪರಿವಾರ ಎಲ್ಲ ರಾತ್ರಿ ಊಟಕ್ಕೆಂದು ತೋಟಕ್ಕೆ ಹೋಗಿದೆ. ಅಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಮೋಜು ಮಾಡುತ್ತಿದ್ದಾರೆ. ದಿನವೂ ಮನೆಯಲ್ಲೇ ಊಟ ಮಾಡ್ತೀವಿ ಇಂದು ಒಂದು ರೀತಿ ಬದಲಾವಣೆ ಇರಲಿ ಎಂದು ಅಂದುಕೊಂಡು ಅವರೆಲ್ಲ ಹೊರಗಡೆ ಕುಳಿತು ಊಟ ಮಾಡಲು ಬಯಸುತ್ತಾರೆ. ಹೀಗೆ ಹೊರಗಡೆ ಕೂತು ಊಟ ಮಾಡಿ ಎಂದೂ ರೂಢಿ ಇರದ ಪಾರು ಮೊದಲು ಭಯಪಟ್ಟುಕೊಂಡೇ ಬರುತ್ತಾಳೆ. ಆದರೆ ಬಂದ ನಂತರ ಅವಳಿಗೆ ಎಲ್ಲವೂ ಇಷ್ಟವಾಗುತ್ತದೆ. ರಾತ್ರಿಯಾದ ಕಾರಣ ಬರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಂತಾಗುತ್ತಾಳೆ.

ಆಗ ಶಿವು ಅವಳನ್ನು ಹಿಡಿದು ಎತ್ತುತ್ತಾನೆ. ಆಗ ತಂಗಿಯರೆಲ್ಲ ಅವರ ಜೋಡಿ ನೋಡಿಕೊಂಡು ಹಾಡು ಹೇಳುತ್ತಾರೆ. ಇನ್ನು ಶಿವು ಪಾರುವನ್ನು ಕರೆದುಕೊಂಡು ಮಿಂಚು ಹುಳುಗಳನ್ನು ತೋರಿಸಲು ಹೋಗುತ್ತಾನೆ. ಅವುಗಳನ್ನು ನೋಡಿ ಪಾರುಗೆ ತನ್ನ ಬಾಲ್ಯದ ನೆನಪಾಗುತ್ತದೆ. ಅವಳು ಎಲ್ಲವನ್ನೂ ನೆನಪು ಮಾಡಿಕೊಂಡು ಹಾಗೇ ಮಾತಿನಲ್ಲಿ ಜಾರುತ್ತಾಳೆ. ಅಣ್ಣಯ್ಯನ ಜೊತೆ ಹೀಗೆ ಬಾಲ್ಯದಲ್ಲಿ ಏನೆಲ್ಲ ಮಾಡಿದ್ದೆ ಎಂಬುದನ್ನು ನೆನಪಿಸಿಕೊಳ್ಳುತ್ತಾಳೆ.

ನಿನ್ನಂತ ಗಂಡ, ಈ ನಾದಿನಿಯರು ಇವೆಲ್ಲವನ್ನು ಪಡೆಯಲು ಪುಣ್ಯ ಮಾಡಿರಬೇಕು ಎಂದು ಅವಳು ಹೇಳುತ್ತಾಳೆ. ಅದಾದ ನಂತರದಲ್ಲಿ ನಾನು ಈ ಭಾಗ್ಯವನ್ನು ಪಡೆದುಕೊಂಡು ಬಂದಿಲ್ಲ. ಸಿದ್ಧಾರ್ಥ್‌ ಬಂದ ತಕ್ಷಣ ನಾನು ಇಲ್ಲಿಂದ ಹೊರಟು ಹೋಗ್ತೀನಿ ಎಂದು ಹೇಳುತ್ತಾಳೆ. ಅದನ್ನು ಕೇಳಿ ಸತ್ಯದ ನೆನಪಾಗಿ ಸಿದ್ದಾರ್ಥ್‌ ಮೋಸಗಾರ ಎಂದು ತಿಳಿದಿದ್ದರೂ ಹೇಳಲಾಗದೆ ಅಣ್ಣಯ್ಯ ಕೊರಗುತ್ತಾನೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

ನಿಜ ಹೇಳಪ್ಪ ಸುಮ್ಮನೆ ಏಳಿದಡಬೇಡ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಪಾರು ಪ್ರೀತಿಗೆ ಮೋಸ ಆಗಿದೆ ಎನ್ನುವ ವಿಚಾರವನ್ನು ಶಿವು ಹೇಳದೆ ತುಂಬಾ ದಿನ ಹೀಗೆ ಕಳೆಯುವುದು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಲೂ ಇಲ್ಲ, ದ್ವೇಷಿಸುತ್ತಲೂ ಇಲ್ಲ.

Whats_app_banner