Friday Movies: ಮಾರ್ಟಿನ್‌, ಬಘೀರ, ರಣಗಲ್‌ ಬಳಿಕ ಹೆಚ್ಚಿದ ಟ್ರಾಫಿಕ್! ಈ ವಾರ ಚಿತ್ರಮಂದಿರಗಳಲ್ಲಿ ಕನ್ನಡದ ಸಪ್ತ ಸಿನಿಮಾಗಳ ‘ದರ್ಶನ’
ಕನ್ನಡ ಸುದ್ದಿ  /  ಮನರಂಜನೆ  /  Friday Movies: ಮಾರ್ಟಿನ್‌, ಬಘೀರ, ರಣಗಲ್‌ ಬಳಿಕ ಹೆಚ್ಚಿದ ಟ್ರಾಫಿಕ್! ಈ ವಾರ ಚಿತ್ರಮಂದಿರಗಳಲ್ಲಿ ಕನ್ನಡದ ಸಪ್ತ ಸಿನಿಮಾಗಳ ‘ದರ್ಶನ’

Friday Movies: ಮಾರ್ಟಿನ್‌, ಬಘೀರ, ರಣಗಲ್‌ ಬಳಿಕ ಹೆಚ್ಚಿದ ಟ್ರಾಫಿಕ್! ಈ ವಾರ ಚಿತ್ರಮಂದಿರಗಳಲ್ಲಿ ಕನ್ನಡದ ಸಪ್ತ ಸಿನಿಮಾಗಳ ‘ದರ್ಶನ’

Movies in Theatres this Week: ಈ ವಾರ ಕನ್ನಡದಲ್ಲಿ ಒಟ್ಟು ಏಳು ಸಿನಿಮಾಗಳು ತೆರೆಗೆ ಬರುತ್ತಿವೆ. ಕಾಮಿಡಿ, ಸಸ್ಪೆನ್ಸ್‌, ಆಕ್ಷನ್‌ ಸಿನಿಮಾಗಳ ಜತೆಗೆ ನಟ ದರ್ಶನ್‌ ಅವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಮರು ಬಿಡುಗಡೆ ಆಗುತ್ತಿದೆ. ಹಾಗಾದರೆ, ಈ ವಾರ ಬಿಡುಗಡೆ ಆಗಲಿರುವ ಸಿನಿಮಾಗಳುಯ ಯಾವವು? ಇಲ್ಲಿದೆ ಪಟ್ಟಿ.

 ಈ ವಾರ ಚಿತ್ರಮಂದಿರಗಳಲ್ಲಿ ಕನ್ನಡದ ಸಪ್ತ ಸಿನಿಮಾಗಳ ‘ದರ್ಶನ’
ಈ ವಾರ ಚಿತ್ರಮಂದಿರಗಳಲ್ಲಿ ಕನ್ನಡದ ಸಪ್ತ ಸಿನಿಮಾಗಳ ‘ದರ್ಶನ’

Kannada Movies in Theatres this Week: ಸ್ಯಾಂಡಲ್‌ವುಡ್‌ನಲ್ಲಿ ಕಳೆದ ಮೂರು ವಾರಗಳಿಂದ ಸ್ಟಾರ್‌ ಹೀರೋಗಳ ಸಾಲು ಸಾಲು ಸಿನಿಮಾಗಳು ವಾರಕ್ಕೊಂದರಂತೆ ಆಗಮಿಸಿದ್ದವು. ಮಾರ್ಟಿನ್‌, ಬಘೀರ, ಭೈರತಿ ರಣಗಲ್‌ ಸಿನಿಮಾಗಳ ಬಳಿಕ, ಈ ವಾರ ಕನ್ನಡದಲ್ಲಿ ಒಟ್ಟು ಏಳು ಸಿನಿಮಾಗಳು ತೆರೆಗೆ ಬರುತ್ತಿವೆ. ಕಾಮಿಡಿ, ಸಸ್ಪೆನ್ಸ್‌, ಆಕ್ಷನ್‌ ಸಿನಿಮಾಗಳ ಜತೆಗೆ ನಟ ದರ್ಶನ್‌ ಅವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಮರು ಬಿಡುಗಡೆ ಆಗುತ್ತಿದೆ. ಹಾಗಾದರೆ, ಈ ವಾರ ಬಿಡುಗಡೆ ಆಗಲಿರುವ ಸಿನಿಮಾಗಳುಯ ಯಾವವು? ಇಲ್ಲಿದೆ ಪಟ್ಟಿ.

ಮತದಾನ ಜಾಗೃತಿಯ ಪ್ರಭುತ್ವ

ಮತದಾನದ ಮಹತ್ವ ತಿಳಿಸುವ ಪ್ರಭುತ್ವ ಸಿನಿಮಾ ಈ ವಾರ (ನವೆಂಬರ್ 22) ತೆರೆ ಕಾಣುತ್ತಿದೆ. ಚೇತನ್ ಚಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ರವಿರಾಜ್ ಎಸ್ ಕುಮಾರ್ ನಿರ್ಮಿಸಿದ್ದಾರೆ. ಮೇಘಡಹಳ್ಳಿ ಶಿವಕುಮಾರ್ ಕಥೆ ಬರೆದಿದ್ದಾರೆ. ರಾಜ್ಯದ 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಟ ನಾಸರ್, ಶರತ್ ಲೋಹಿತಾಶ್ವ,ಅಂಬಿಕಾ, ಆದಿ ಲೋಕೇಶ್, ವಿಜಯ್ ಚೆಂಡೂರ್, ಡ್ಯಾನಿ, ರೂಪಾದೇವಿ, ರಾಜೇಶ್ ನಟರಂಗ, ಅವಿನಾಶ್ ನಟಿಸಿದ್ದಾರೆ. ಪಾವನಾ ನಾಯಕಿಯಾಗಿದ್ದಾರೆ. ವಿನಯ್‌ ಮೂರ್ತಿ ಚಿತ್ರಕಥೆ, ಸಂಭಾಷಣೆ ಜೊತೆಗೆ ಸಹ ನಿರ್ದೇಶನ ಮಾಡಿದರೆ, ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಾಹಕ ಚಿತ್ರಕ್ಕಿದೆ. ಎಮಿಲ್ ಸಂಗೀತ ನೀಡಿದ್ದಾರೆ.

'ಮರ್ಯಾದೆ ಪ್ರಶ್ನೆ'

ಸುನೀಲ್ ರಾವ್, ಶೈನ್ ಶೆಟ್ಟಿ , ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು ಸೇರಿ ನುರಿತ ಕಲಾವಿದರ ದಂಡು ಹಾಗೂ ಪ್ರತಿಭಾವಂತ ತಂತ್ರಜ್ಞರ, ಮರ್ಯಾದೆ ಪ್ರಶ್ನೆ ಸಿನಿಮಾ ಈ ವಾರ (ನ. 22) ತೆರೆಗೆ ಬರುತ್ತಿದೆ. ದಿ ಬೆಸ್ಟ್ ಆಕ್ಟರ್ ಹಾಗೂ ಮೈಕೋ ಕಿರುಚಿತ್ರ ಮಾಡಿ ಸೈ ಎನಿಸಿಕೊಂಡಿರುವ ನಾಗರಾಜ್ ಸೋಮಯಾಜಿ ಫೋಕೋಸ್ ಫೋಟೋಗ್ರಫಿ ಮೂಲಕ ಹೆಚ್ಚು ಖ್ಯಾತಿ ಪಡೆದವರು. ಸಂಚಾರಿ ವಿಜಯ್ ನಟನೆಯ ಪುಕ್ಸಟ್ಟೆ ಲೈಫು ಸಿನಿಮಾ ನಿರ್ಮಾಣ ಮಾಡಿ ಈಗ ಮರ್ಯಾದೆ ಪ್ರಶ್ನೆ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅವರ ಮೊದಲ ಪ್ರಯತ್ನಕ್ಕೆ ಸಕ್ಕತ್ ಸ್ಟುಡಿಯೋ ಸಾಥ್ ಕೊಟ್ಟಿದೆ. ಕಥೆ ಒದಗಿಸಿ ಚಿತ್ರತಂಡದ ಜೊತೆ ಸಾಗಿರುವ ಆರ್ ಜೆ ಪ್ರದೀಪ್ ಕ್ರಿಯೇಟಿವ್ ಹೆಡ್ ಆಗಿಯೂ ಬೆಂಬಲ ನೀಡಿದ್ದಾರೆ.

ಕನ್ನಡದಲ್ಲೂ ಬರ್ತಿದೆ ಜೀಬ್ರಾ

ಡಾಲಿ ಧನಂಜಯ್ ಹಾಗೂ ಟಾಲಿವುಡ್‌ನ ಸತ್ಯದೇವ್ ನಟನೆಯ ಜೀಬ್ರಾ ಇದೇ 22ಕ್ಕೆ ತೆರೆಗೆ ಬರುತ್ತಿದೆ. ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ಜೀಬ್ರಾ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅನಿಲ್ ಕ್ರಿಶ್ ಸಂಕಲನ, ಮೀರಾಖ್ ಸಂಭಾಷಣೆ ಸಿನಿಮಾಗಿದೆ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದರೆ, ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಜೀಬ್ರಾ ಸಿನಿಮಾಗೆ ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ನಟ ದರ್ಶನ್‌ ನಟನೆಯ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾವನ್ನು ಉತ್ತರ ಕರ್ನಾಟಕದ ಆನಂದ್ ಬಿ. ಅಪ್ಪುಗೋಳ್ ನಿರ್ಮಾಣ ಮಾಡಿದ್ದರು. 2012ರಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾ ಇದೀಗ, ಆಧುನಿಕ‌ ತಂತ್ರಜ್ಞಾನ ಸ್ಪರ್ಷದೊಂದಿಗೆ ನವೆಂಬರ್ 22 ರಂದು ಮರು ಬಿಡುಗಡೆಯಾಗುತ್ತಿದೆ. ನಿರ್ದೇಶಕ ನಾಗಣ್ಣ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ಜಯಪ್ರದಾ, ನಿಖಿತಾ ತುಕ್ರಾಲ್‌, ಶಶಿಕುಮಾರ್, ಮಾಳವಿಕ ಅವಿನಾಶ್, ರಮೇಶ್ ಭಟ್, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಮೇಶ್ ಬಾಬು ಅವರ ಛಾಯಾಗ್ರಹಣ, ಯಶೋವರ್ಧನ್, ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ಕೇಶವಾದಿತ್ಯ ಅವರ ಚಿತ್ರಕಥೆ ಹಾಗೂ ಸಂಭಾಷಣೆ, ದೀಪು ಅವರ ಸಂಕಲನ, ರವಿವರ್ಮ, ಪಳನಿರಾಜ್ ಅವರ ಸಾಹಸ ಈ ಚಿತ್ರಕ್ಕಿದೆ.

ಅಂಶು

ಅಂಶು ಶೀರ್ಷಿಕೆಯ ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಅಣ್ಣಯ್ಯ ಸೀರಿಯಲ್ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ.‌ ಎಂ.ಸಿ ಚನ್ನಕೇಶವ ನಿರ್ದೇಶನದ ಈ ಚೊಚ್ಚಲ ಚಿತ್ರವನ್ನು, ಗ್ರಹಣ ಎಲ್ಎಲ್ ಪಿ ಬ್ಯಾನರ್‌ ಅಡಿಯಲ್ಲಿ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ನಿರ್ಮಾಣ ಮಾಡಿದ್ದಾರೆ. ಸುನೀಲ್ ನರಸಿಂಹಮೂರ್ತಿ ಛಾಯಾಗ್ರಾಹಣ, ಆಶಾ ಎಂ ಥಾಮಸ್ ವಸ್ತ್ರವಿನ್ಯಾಸ, ನವ ಪ್ರತಿಭೆ ವಿಘ್ನೇಶ್ ಶಂಕರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ಆರಾಮ್ ಅರವಿಂದ್ ಸ್ವಾಮಿ‌

ಆರಾಮ್ ಅರವಿಂದ್ ಸ್ವಾಮಿ ಚಿತ್ರ ಇದೇ ತಿಂಗಳು 22 ರಂದು ರಿಲೀಸ್ ಆಗುತ್ತಿದೆ. ನಿರ್ದೇಶಕ ಅಭಿಷೇಕ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಅನೀಶ್‌ ತೇಜೇಶ್ವರ್‌ ನಾಯಕನಾಗಿ ನಟಿಸಿದ್ದಾರೆ. ಇದೇ 22 ರಂದು ರಾಜ್ಯಾದ್ಯಂತ ರಿಲೀಸ್‌ ಆಗಲಿರುವ ಈ ಚಿತ್ರದ ಟಿಕೆಟ್ ಕೇವಲ 99 ರೂಪಾಯಿ. ಆದರೆ ಸಿನಿಮಾ ರಿಲೀಸ್ ಆದ ಮೂರು ದಿನ ಮಾತ್ರ ಈ ಒಂದು ಆಫರ್ ಇರುತ್ತದೆ. ಆ ಮೇಲೆ ಎಂದಿನಂತೆ ಟಿಕೆಟ್ ಬೆಲೆ ಇರಲಿದೆ. ಆರಾಮ್ ಅರವಿಂದ್ ಸ್ವಾಮಿ ಚಿತ್ರಕ್ಕೆ ಅರ್ಜುನ್ ಜನ್ಯ ಟ್ಯೂನ್ ಹಾಕುತ್ತಿದ್ದಾರೆ. ವೈವಿಬಿ ಶಿವಸಾಗರ್ ಕ್ಯಾಮರಾವರ್ಕ್ ಚಿತ್ರಕ್ಕಿದೆ. 'ಅಕಿರ' ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ 'ಗುಳ್ಟು' ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಟೆನಂಟ್‌

ಬಿಗ್ ಬಾಸ್ ಮನೆಯೊಳಗೆ ಇರುವ ನಟ ಧರ್ಮ ಕೀರ್ತಿರಾಜ್ ಮತ್ತು ಉಗ್ರಂ ಮಂಜು ಸೇರಿದಂತೆ ನಟ ತಿಲಕ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ಟೆನಂಟ್‌ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಶ್ರೀಧರ್ ಶಾಸ್ತ್ರಿ ಆಕ್ಷನ್ ಕಟ್ ಹೇಳಿದ್ದಾರೆ. ಗಿರೀಶ್ ಹೊತೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಜ್ವಲ್ ಸಂಕಲನ, ಮನೋಹರ್ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯ ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿರುವ ಟೆನೆಂಟ್ ನವೆಂಬರ್ 22ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

Whats_app_banner